ನಡೆದದ್ದ ನೆನೆದು ಕಣ್ಣೀರಿಟ್ಟ ಶೈನ್ ಶೆಟ್ಟಿ.. ಕಿಚ್ಚ ಹೇಳಿದ್ದೇನು ಗೊತ್ತಾ?

ಬಿಗ್ ಬಾಸ್ ಕನ್ನಡ ಸೀಸನ್ 7ರ ಈ ವಾರ ಬಿಗ್ ಬಾಸ್ ಮನೆಯಲ್ಲಿ ಲಕ್ಸುರಿ ಬಜೆಟ್ ಗಾಗಿ ನೀಡಿದ್ದ ಕಳ್ಳ ಪೊಲೀಸ್ ಟಾಸ್ಕ್ ಗಲಾಟೆ ಸಮಾಧಾನ ಇವೆಲ್ಲದರ ನಡುವೆ ಹೇಗೋ ಸಾಗಿತು.

ಆದರೆ ಇಲ್ಲಿ ಗಮನಿಸಬೇಕಾದದ್ದು ಶೈನ್ ಶೆಟ್ಟಿ ಅವರ ಕ್ಯಾಪ್ಟನ್ಸಿ.. ಇಲ್ಲಿ ಕ್ಯಾಪ್ಟನ್ಸಿಗಿಂತ ಹೆಚ್ಚಾಗಿ ಈ ವಾರ ಶೈನ್ ಶೆಟ್ಟಿ ಅವರೂ ಕೂಡ ಟಾಸ್ಕ್ ನಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು..

ಬಿಗ್ ಬಾಸ್ ನೀಡಿದ್ದ ಟಾಸ್ಕ್ ನಲ್ಲಿ ಇನ್ಸ್ಪೆಕ್ಟರ್ ಆಗಿದ್ದ ಶೈನ್ ಅಚ್ಚುಕಟ್ಟಾಗಿ ತಮ್ಮ ಜವಬ್ದಾರಿಯನ್ನು ನಿಭಾಯಿಸಿದರು ಎನ್ನಬಹುದು..

ಆದರೆ ಎರಡನೇ ದಿನ ಮನೆಯಲ್ಲಿ ನಡೆದ ಕಿತ್ತಾಟಗಳನ್ನು ನೆನೆದು ಅಂದು ಬಾತ್ ರೂಮಿನಲ್ಲಿ ಶೈನ್ ಶೆಟ್ಟಿ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದರು..

ಇಂದು ವಾರದ ಕತೆಯಲ್ಲಿ ಕಿಚ್ಚ ಸುದೀಪ್ ಅವರು ಈ ವಿಷಯವನ್ನು ತೆಗೆದಾಗ ಮತ್ತೆ ಅಂದು ನಡೆದ ಜಗಳವನ್ನು ನೆನೆದು.. ಇಷ್ಟು ದಿನ ಮನೆಯಲ್ಲಿ ಜೊತೆ ಇದ್ದದ್ದು ಇವರುಗಳೆನಾ ಎಂದೆನಿಸಿ ಕಣ್ಣೀರು ಬಂತು ಎಂದು ಮತ್ತೆ ಭಾವುಕರಾದರು..

ಕೊನೆಗೆ ಸುದೀಪ್ ಅವರ ಸಾಂತ್ವಾನದ ಮಾತುಗಳನ್ನು ಕೇಳಿ ಶೈನ್ ಅವರು ಸಮಾಧಾನಗೊಂಡರು..

Latest from News

Go to Top