ಬಿಗ್ ಬಾಸ್ ಹೊಸ ಸೀಸನ್ ಸ್ಪರ್ಧಿಗಳ ಪಟ್ಟಿ.. ಇಲ್ಲಿದೆ ನೋಡಿ.. ಪರಮೇಶ್ವರ್ ಗುಂಡ್ಕಲ್ ರಿಂದ ಹೊಸ ಮಾಹಿತಿ..

ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಎಂದೇ ಖ್ಯಾತವಾಗಿರುವ ಬಿಗ್ ಬಾಸ್ ಕನ್ನಡದ ಹೊಸ ಸೀಸನ್ 8 ಶುರುವಾಗಲು ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು ಇದೇ ಫೆಬ್ರವರಿ 28 ರಂದು ಭರ್ಜರಿ ಓಪನಿಂಗ್ ಪಡೆದುಕೊಳ್ಳುತ್ತಿದೆ..

ಇನ್ನು ಸ್ಪರ್ಧಿಗಳ ವಿಚರಕ್ಕೆ ಬಂದರೆ ಅದಾಗಲೇ ಬಹಳಷ್ಟು ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಹರಿದಾಡುತ್ತಿದ್ದು ಸಿಲ್ಲಿ ಲಲ್ಲಿ ಧಾರಾವಾಹಿಯ ನಟ ರವಿಶಂಕರ್.. ಬ್ರಹ್ಮಗಂಟು ಧಾರಾವಾಹಿಯ ನಟಿ ಗೀತಾ.. ಎಕ್ಸ್ ಕ್ಯೂಸ್ ಮಿ ಸಿನಿಮಾ ನಟ ಸುನೀಲ್ ರಾವ್.. ಹೀಗೆ ಸಾಕಷ್ಟು ಕಲಾವಿದರ ಹೆಸರುಗಳು ಕೇಳಿ ಬರುತ್ತಿದೆ.. ಅಷ್ಟೇ ಅಲ್ಲದೇ ಈ ಎಲ್ಲಾ ಕಲಾವಿದರು ಬಿಗ್ ಬಾಸ್ ಮನೆಗೆ ಹೋಗುತ್ತಿರುವುದು ಖಚಿತ ಎನ್ನಲಾಗುತ್ತಿದೆ..

ಆದರೆ ಇದೆಲ್ಲದರ ನಡುವೆ ಕಲರ್ಸ್ ಕನ್ನಡ ಮುಖ್ಯಸ್ಥರಾದ ಪರಮೇಶ್ವರ್ ಗುಂಡ್ಕಲ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ಕುತೂಹಲ ಮೂಡಿಸಿದೆ.. ಹೌದು “ಗೆಲ್ಲಬೇಕು ಅಂದುಕೊಂಡಿರುವ ಕೋಚ್ ಯಾವಾಗಲೂ ತಂಡದ ಬಗ್ಗೆ ಯೋಚನೆ ಮಾಡುತ್ತಾನೆ. ತನಗೆ ಇಷ್ಟ ಅಂತ ಯಾರನ್ನಾದರೂ ತಂಡಕ್ಕೆ ಸೇರಿಸಿಕೊಳ್ಳುವ ಅವಕಾಶ ಪಂದ್ಯ ಗೆಲ್ಲಲೇಬೇಕಾದ ಒತ್ತಡ ಇರುವ ಕೋಚ್ ಗೆ ಇಲ್ಲ. ಐದು ಜನ ಬ್ಯಾಟ್ಸಮನ್ ಗಳು, ಒಬ್ಬ ವಿಕೆಟ್ ಕೀಪರ್‍ ಬ್ಯಾಟ್ಸಮನ್, ಮೂರು ಜನ ವೇಗದ ಬೌಲರುಗಳು. ಇಬ್ಬರು ಸ್ಪಿನ್ನರುಗಳು. ಒಟ್ಟೂ ಹನ್ನೊಂದು ಜನ. ಈ ಕಾಂಬಿನೇಷನ್ ಸನ್ನಿವೇಶಕ್ಕೆ ತಕ್ಕಂತೆ, ಆಡೋ ಜಾಗಕ್ಕೆ ತಕ್ಕಂತೆ, ಎದುರಾಳಿಯ ಸಾಮರ್ಥ್ಯಕ್ಕೆ ತಕ್ಕಂತೆ ಬದಲಾಗಬಹುದು.

ಆಡುವ ಹನ್ನೊಂದರಲ್ಲಿ ಇಲ್ಲದ ಹನ್ನೆರಡನೆಯವನಿಗೆ ತಂಡದಲ್ಲಿ ಇರಲು ನನಗೆ ಹೆಚ್ಚು ಅರ್ಹತೆ ಇತ್ತು ಅಂತ ಅನಿಸುವುದು ಸಹಜ. ಅದು ಜೀವನ. ಮನೇಲಿ ಕೂತು ಆರಾಮಾಗಿ ಮ್ಯಾಚ್ ನೋಡುವ ನಮಗೆ ಕೋಚ್ ಮಾಡಿದ್ದೆಲ್ಲಾ ತಪ್ಪು ಅನಿಸುವುದೂ ಇದೆ. ಟಾಸ್ ಗೆದ್ದರೆ ಬ್ಯಾಟಿಂಗ್ ಮಾಡಬೇಕೋ ಅಥವಾ ಬೌಲಿಂಗ್ ಮಾಡಬೇಕೋ ಅನ್ನುವ ತೀರ್ಮಾನ ತೆಗೆದುಕೊಳ್ಳುವ ಅರ್ಹತೆ ಸೋಫಾದಲ್ಲಿ ಕುಳಿತು ನೋಡುವ ನಮಗಿಂತ (ಅಂಥವರಲ್ಲಿ ನನ್ನಂಥ ಎಷ್ಟೋ ಜನ ಹೆಚ್ಚೆಂದರೆ ಟೆನಿಸ್ ಬಾಲಿನಲ್ಲಿ ಬೀದಿಯಲ್ಲಿ ಕ್ರಿಕೆಟ್ ಆಡಿ ಅನುಭವ ಇದ್ದವರು) ಬಹುಶಃ ಫೀಲ್ಡಿನಲ್ಲಿ ಇಳಿದು ಆಡುವ ಕ್ಯಾಪ್ಟನ್ನಿಗೆ ಅಥವಾ ಅವನನ್ನು ರೂಪಿಸುವ ಕೋಚ್ ಗೆ ಹೆಚ್ಚಿರುತ್ತದೆ.

ಆಯ್ಕೆಯನ್ನು ಕೆಟ್ಟ ಶಬ್ದ ಬಳಸಿ ನಿಂದಿಸುವವರು ಆಟವನ್ನು ಸಿಕ್ಕಾಪಟ್ಟೆ ಪ್ರೀತಿಸುತ್ತಾರೆ ಅಂದುಕೊಳ್ಳೋಣ. ಕೆಟ್ಟ ಶಬ್ದ ಬಳಸುವುದು ಅವರ ವ್ಯಕ್ತಿತ್ವ. ಸುತ್ತಲೂ ನಿಂದಕರು ಇರಬೇಕು ಅನ್ನುವುದು ಎಲ್ಲರೂ ರೂಢಿಸಿಕೊಳ್ಳಲೇಬೇಕಾದ ಸಂಸ್ಕಾರ.

ಪಂದ್ಯಕ್ಕೆ ಮೊದಲಿನ ತಳಮಳ ಆಡುವವರಿಗೆ ಹೆಚ್ಚೋ ನೋಡುವವರಿಗೆ ಹೆಚ್ಚೋ? ಹಿಂಜರಿಕೆ ಅನ್ನೋದು ಸಂಕೋಚದಿಂದ ಬರುತ್ತಾ, ಆತ್ಮವಿಶ್ವಾಸದ ಕೊರತೆಯಿಂದ ಬರುತ್ತಾ ಅಥವಾ ಆಟ ಎಷ್ಟು ದೊಡ್ಡದು ಎಂಬ ಗೌರವದಿಂದ ಬರುತ್ತಾ? ಗೊತ್ತಿಲ್ಲ. ಪ್ರಿಪೇರಿಂಗ್ ವಿತ್ ನರ್ವಸ್ನೆಸ್..‌ ಕೆಲವೇ ದಿನಗಳಲ್ಲಿ..” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.. ಬಹುಶಃ ಆಟದ ಸಕ್ಸಸ್ ಗಾಗಿ ನಾವು ಊಹಿಸಿರದ ಕಲಾವಿದರು ಸಹ ಬಿಗ್ ಬಾಸ್ ಸೀಸನ್ ನಲ್ಲಿ ಇರಬಹುದು ಎಂದುಕೊಳ್ಳಬಹುದಾಗಿದೆ..