ಶುರುವಾಯ್ತು ಬಿಗ್ ಬಾಸ್ ಕನ್ನಡ ಹೊಸ ಸೀಸನ್.. ಪ್ರೇಕ್ಷಕರಿಗೆ ಸಿಹಿ ಸುದ್ದಿ.. ಸ್ಪರ್ಧಿಗಳು ಯಾರ್ಯಾರು ಗೊತ್ತಾ..

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಎಂದೇ ಹೆಸರುವಾಸಿಯಾಗುರುವ ಬಿಗ್ ಬಾಸ್ ಕನ್ನಡದ ಸೀಸನ್ ಒಂಭತ್ತು ಶುರುವಾಗುತ್ತಿದೆ.. ಹೌದು ಬಿಗ್ ಬಾಸ್ ಶೋ ಆರಂಭವಾಗಲು ಎಲ್ಲ ತಯಾರಿ ನಡೆಯುತ್ತಿದ್ದು ಈ ಬಗ್ಗೆ ಅಧಿಕೃತ ಮಾಹಿತಿ ಹೊರ ಬಿದ್ದಿದೆ.. ಬಿಗ್ ಬಾಸ್ ಸೀಸನ್ ಒಂಭತ್ತಕ್ಕಾಗಿ ಬಿಗ್ ಬಾಸ್ ಮನೆಯ ಮರು ನಿರ್ಮಾಣ ಮಾಡಲಾಗುತ್ತಿದ್ದು ಆ ಕೆಲಸ ಭರದಿಂದ ಸಾಗುತ್ತಿದೆ.. ಹೌದು ಹೊಸ ಸೀಸನ್ ಗಾಗಿ ದೊಡ್ಮನೆಯು ಹೊಸ ರೀತಿಯಲ್ಲಿ ನಿರ್ಮಾಣವಾಗುತ್ತಿದೆ ಎಂದು ಕಲರ್ಸ್ ಕನ್ನಡ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು… ಸಧ್ಯ ಇದೀಗ ಶೋ ನ ಸಾರಥಿ ಕಿಚ್ಚ ಸುದೀಪ್ ಅವರ ಪ್ರೋಮೋ ಚಿತ್ರೀಕರಣ ಕೂಡ ಮುಗಿದಿರುವ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಪ್ರೋಮೋಗಾಗಿ ಕಿಚ್ಚ ಸುದೀಪ್ ವಿಶೇಷ ಗೆಟಪ್ ಹಾಕಿಕೊಂಡಿದ್ದು ಎಂದಿನಂತೆ ಹೊಸ ಸೀಸನ್ ನಲ್ಲಿ ಹೊಸತನವನ್ನು ತರಲಿದ್ದಾರೆ.. ಈಗಾಗಲೇ ಕನ್ನಡದಲ್ಲಿ ಎಂಟು ಬಿಗ್ ಬಾಸ್ ಸೀಸನ್‌ಗಳು ಮೂಡಿ ಬಂದಿದ್ದವು.. ಪ್ರತಿ ಸೀಸನ್ ಪ್ರೋಮೋ ಕೂಡ ತುಂಬ ವಿಭಿನ್ನವಾಗಿದ್ದವು.. ಅಂತೆಯೇ ಈ ಬಾರಿ ಯಾವ ರೀತಿಯಲ್ಲಿ ಪ್ರೋಮೋ ಮೂಡಿ ಬರಲಿದೆ ಎಂದು ಕಾದು ನೋಡಬೇಕಿದೆ. ಈ ಪ್ರೋಮೋ ಚಿತ್ರೀಕರಣಕ್ಕಾಗಿ ಕಿಚ್ಚ ಸುದೀಪ್ ಈ ಹಿಂದೆ ವಿಭಿನ್ನವಾದ ಗೆಟಪ್ ಹಾಕಿದ್ದರು.. ಈ ಬಾರಿ ಯಾವ ರೀತಿಯ ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಕಾದು ನೋಡಬೇಕಿದೆ‌..

ಇನ್ನು ಬಿಗ್ ಬಾಸ್‌ ನ ಒಂಭತ್ತನೇ ಸೀಸನ್ ನಲ್ಲಿ ಯಾವ ಯಾವ ಸ್ಪರ್ಧಿಗಳು ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಇದ್ದೇ ಇದೆ.. ಈ ಬಾರಿಯ ಬಿಗ್ ಬಾಸ್ ಕನ್ನಡ ಶೋನಲ್ಲಿ ಯಾರು ಯಾರು ಇರಲಿದ್ದಾರೆ ಎಂಬ ಕುತೂಹಲ ಶುರುವಾಗಿದೆ. ಇಷ್ಟು ಸೀಸನ್‌ಗಳಲ್ಲಿ ವಿಧ ವಿಧದ ರಂಗದ ಸೆಲೆಬ್ರಿಟಿಗಳು, ಸಾಮಾನ್ಯ ಜನರು ಕೂಡ ಭಾಗವಹಿಸಿದ್ದರು. ಈ ಬಾರಿ ಕಾಮನ್ ಆಡಿಯನ್ಸ್‌ಗೆ ಅವಕಾಶ ಇದೆಯೇ ಎಂದು ವಾಹಿನಿ ಹೇಳಿಲ್ಲ. ಸಾಕಷ್ಟು ಜನರು ಬಿಗ್ ಬಾಸ್ ಶುರುವಾಗುತ್ತಿದೆ ಎಂಬ ಮಾತು ಕೇಳಿ ಭಾರೀ ಖುಷಿಯಲ್ಲಿದ್ದಾರೆ, ಅಷ್ಟೇ ಅಲ್ಲದೆ ಯಾರು ಯಾರು ಇದ್ದರೆ ಚೆನ್ನ ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ಹಿಂದಿಯಂತೆ ಎರಡು ಬಿಗ್ ಬಾಸ್.. ಓಟಿಟಿಯಲ್ಲಿ ಒಂದು ಬಿಗ್ ಬಾಸ್ ಶೋ, ಕಲರ್ಸ್ ವಾಹಿನಿಯಲ್ಲಿ 100 ದಿನಗಳ ಬಿಗ್ ಬಾಸ್ ಶೋ ನಡೆಯುತ್ತಿರುವುದು ವೀಕ್ಷಕರಿಗೆ ದೊಡ್ಡ ಹಬ್ಬದ ವಿಷಯವಾಗಿದೆ. ಈ ಹಿಂದೆ ಹಿಂದಿಯಲ್ಲಿಯೂ ಕೂಡ ಇದೇ ರೀತಿ ಓಟಿಟಿಯಲ್ಲಿ ಒಂದು ಸೀಸನ್ ನಡೆಸಿಕೊಡಲಾಗಿತ್ತು, ಕರಣ್ ಜೋಹರ್ ಓಟಿಟಿ ಶೋ ನಡೆಸಿಕೊಟ್ಟಿದ್ದರು. ತದನಂತರದಲ್ಲಿ ಸಲ್ಮಾನ್ ಖಾನ್ ಅವರು ಬಿಗ್ ಬಾಸ್ 15 ಶೋ ನಿರೂಪಣೆ ಮಾಡಿದ್ದರು.

ಎರಡೂ ಕಡೆ ಕಿಚ್ಚ ಸುದೀಪ್ ನಿರೂಪಣೆ.. ಓಟಿಟಿಯಾಗಲೀ, ಕಲರ್ಸ್ ವಾಹಿನಿಯಲ್ಲಾಗಲೀ ಕನ್ನಡದಲ್ಲಿ ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡುತ್ತಿರುವುದು ಬಿಗ್ ಬಾಸ್ ಪ್ರಿಯರಿಗೆ ಖುಷಿ ತಂದಿದೆ. ‘ವಿಕ್ರಾಂತ್ ರೋಣ’ ಸಿನಿಮಾ ರಿಲೀಸ್ ಮಧ್ಯೆ ಸುದೀಪ್ ಬಿಡುವು ಮಾಡಿಕೊಂಡು ಬಿಗ್ ಬಾಸ್ ಶೋನಲ್ಲಿ ಕೂಡ ಭಾಗವಹಿಸುತ್ತಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್‌ 8 ಟ್ರೋಫಿಯನ್ನು ಮಂಜು ಪಾವಗಡ ಪಡೆದಿದ್ದರು. ಈ ಬಾರಿ ಎರಡು ಸೀಸನ್ ನಡೆಯುತ್ತಿರುವುದಕ್ಕೆ ಈ ಶೋನಲ್ಲಿ ಭಾಗವಹಿಸಲು ಹೆಚ್ಚು ಅವಕಾಶಗಳಿವೆ.. ಈ ಬಾರಿ ಯಾರು ಯಾರು ಬಿಗ್ ಬಾಸ್ ಶೋಗೆ ಬರುವರೋ ಕಾದು ನೋಡಬೇಕಿದೆ..

ಪ್ರಖ್ಯಾತ ಜ್ಯೋತಿಷಿ.. ದೈವಜ್ಞಾ ಪ್ರಧಾನ ತಾಂತ್ರಿಕ್ ಸಂತೋಷ್ ಕುಮಾರ್.. 98808 68514 ನೂರಕ್ಕೆ ನೂರು ಪರಿಹಾರ‌.. ವಿದ್ಯೆ ಉದ್ಯೋಗ ಕುಟುಂಬ ಸಮಸ್ಯೆ ಸಂತಾನ ದಾಂಪತ್ಯದಲ್ಲಿ ತೊಂದರೆ ಸಾಲದ ಬಾಧೆ ಕೋರ್ಟ್ ಕೇಸ್ ಜಾಗದ ವಿಚಾರ.. ಅರೋಗ್ಯ ಬಿಸಿನೆಸ್.. ಹಾಗೂ ಇನ್ನಿತರ ಎಲ್ಲಾ ಸಮಸ್ಯೆಗಳಿಗೆ ಫೋನ್ ಅಥವಾ ವಾಟ್ಸಪ್ ಮೂಲಕ ಶಾಶ್ವತ ಪರಿಹಾರ.. ನಿಮ್ಮ ಒಂದು ಕರೆ ನಿಮ್ಮ ಭವಿಷ್ಯ ಬದಲಿಸಬಹುದು.. ಕರೆ ಮಾಡಿ.. 98808 68514