ಬಿಗ್ ಬಾಸ್ ಸೀಸನ್ 8 ರಲ್ಲಿ ಕನ್ನಡದ ಖ್ಯಾತ ಹಾಸ್ಯ ನಟ.. ಇವರೇ ನೋಡಿ..

ಈ ಬಾರಿಯ ಬಿಗ್ ಬಾಸ್ ಶೋ ಸಂಪೂರ್ಣ ಸೆಲಿಬ್ರೆಟಿಗಳಿಂದಲೇ ತುಂಬಿರಲಿದ್ದು ಮನರಂಜನೆ ಹೆಚ್ಚಿಸಲು ಹೊಸ ಹೊಸ ಯೋಜನೆಗಳನ್ನು ರೂಪುಗೊಳಿಸಲಾಗುತ್ತಿದೆ.. ಇನ್ನು ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಎಂದೇ ಖ್ಯಾತವಾಗಿರುವ ಬಿಗ್ ಬಾಸ್ ನ ಈ ಹೊಸ ಸೀಸನ್ 8 ಬಹಳಷ್ಟು ನಿರೀಕ್ಷೆ ಹಾಗೂ ಕಾತುರವನ್ನು ಹೆಚ್ಚಿಸಿದೆ ಎನ್ನಬಹುದು.. ಇದಕ್ಕೆ ಕಾರಣ ಕಳೆದ ವರ್ಷವೇ ಶುರುವಾಗಬೇಕಿದ್ದ ಬಿಗ್ ಬಾಸ್..

ಹೌದು ಕಳೆದ ಅಕ್ಟೋಬರ್ ತಿಂಗಳಿನಲ್ಲಿಯೇ ಶುರುವಾಗಬೇಕಿದ್ದ ಕನ್ನಡದ ಬಿಗ್ ಬಾಸ್ ಕೊರೊನಾ ಕಾರಣದಿಂದಾಗಿ ಒಂದೆಜ್ಜೆ ಹಿಂದೆ ಇಟ್ಟಿತು.. ಬೇರೆ ಭಾಷೆಗಳಲ್ಲಿ ಬಿಗ್ ಬಾಸ್ ಸೀಸನ್ ಗಳು ತಿಂಗಳು ತಡವಾಗಿ ಶುರುವಾಗಿ ಯಶಸ್ವಿಯಾಗಿ ಸಂಪೂರ್ಣವೂ ಆಯಿತು.. ಆದರೆ ಕನ್ನಡದಲ್ಲಿ ಮಾತ್ರ ಕಳೆದ ವರ್ಷ ಬಿಗ್ ಬಾಸ್ ಶೋ ನಡೆಸುವ ನಿರ್ಧಾರದಿಂದ ಹಿಂದೆ ಸರಿದು ಈ ವರ್ಷ ಹೊಸತನದೊಂದಿಗೆ ಪ್ರಾರಂಭಿಸುವ ನಿರ್ಧಾರ ಮಾಡಿದರು.. ಇನ್ನು ಬಿಡದಿಯಲ್ಲಿನ ಬಿಗ್ ಬಾಸ್ ಮನೆಯನ್ನು ಸಂಪೂರ್ಣವಾಗಿ ಬದಲಿಸಿ.. ಹೊಸ ರೂಪ ನೀಡಿದ್ದು ಸಂಪೂರ್ಣ ಹೊಸ ಲುಕ್ ನಲ್ಲಿ ಕಂಗೊಳಿಸುತ್ತಿದೆ..

ಇನ್ನೂ ಕಿಚ್ಚ ಸುದೀಪ್ ಕೂಡ ಬಿಗ್ ಬಾಸ್ ಗಾಗಿ ತಮ್ಮ ಸಿನಿಮಾ ಕೆಲಸಗಳನ್ನು ಮುಗಿಸಿಕೊಂಡಿದ್ದು ಮುಂದಿನ ಚಿತ್ರಕ್ಕಿಂತ ಮೊದಲು ಕೊಂಚ ಬ್ರೇಕ್ ಪಡೆದಿದ್ದಾರೆ.. ಇನ್ನು ಈ ಹೊಸ ಸೀಸನ್ ನ ಪ್ರೋಮೋ ಕೂಡ ಚಿತ್ರೀಕರಣಗೊಂಡು ಪ್ರಸಾರವಾಗುತ್ತಿದ್ದು ಒಳ್ಳೆಯ ರೆಸ್ಪಾನ್ಸ್ ಕೂಡ ಪಡೆಯುತ್ತಿದೆ.. ಇನ್ನು ಇದೇ ತಿಂಗಳು ಫೆಬ್ರವರಿ 28 ರಂದು ಆರಂಭವಾಗಲಿದೆ ಎನ್ನಲಾಗುತ್ತಿರುವ ಬಿಗ್ ಬಾಸ್ ಸೀಸನ್ ಎಂಟರ ಸ್ಪರ್ಧಿಗಳ ಆಯ್ಕೆಯೂ ಸಹ ಸಂಪೂರ್ಣ ಗೊಂಡಿದೆ.. ಸ್ಯಾಂಡಲ್ವುಡ್ ನ‌ ದೊಡ್ಡ ದೊಡ್ಡ ಕಲಾವಿದರು ನಿರ್ದೇಶಕ ಕೂಡ ಈ ಬಾರಿಯ ಬಿಗ್ ಬಾಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ..

ಇತ್ತ ಕಿರುತೆರೆಯಲ್ಲಿ ಮಿಂಚಿದ ನಟ ನಟಿಯರು ಸಹ ಬಿಗ್ ಬಾಸ್ ನ ಹೊಸ ಸೀಸನ್ ನಲ್ಲಿ ಇರಲಿದ್ದು ಎಂದಿನಂತೆ ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಸುದ್ದಿಯಾದ ಪಾರ್ಟಿಯೊಬ್ಬ ಕೂಡ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆ ಸೇರಲಿದ್ದಾನೆ.. ಇನ್ನು ಇದೆಲ್ಲದರ ಜೊತೆ ಬಿಗ್ ಬಾಸ್ ಮನೆಯೊಳಗೆ ಕನ್ನಡದ ಖ್ಯಾತ ನಟ ಹಾಗೂ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಕಲಾವಿದರೊಬ್ಬರು ಬಿಗ್ ಬಾಸ್ ಮನೆ ಸೇರುತ್ತಿದ್ದಾರೆ..

ಹೌದು ಅವರು ಮತ್ಯಾರೂ ಅಲ್ಲ… ನಟ ರಘುರಾಮ್ ಡಿ ಪಿ.. ಜೋಗಿ ಸಿನಿಮಾದಲ್ಲಿ ಶಿವಣ್ಣನ ಸ್ನೇಹಿತನಾಗಿ ಅಭಿನಯಿಸಿರುವ ರಘುರಾಮ್ ಅವರು ಹೆಚ್ಚು ಯಶಸ್ಸು ಪಡೆದಿದ್ದರು.. ಬಹಳಷ್ಟು ವರ್ಷಗಳಿಂದ ಸಿನಿಮಾರಂಗದಲ್ಲಿರುವ ರಘುರಾಮ್ ಅವರು ಅನೇಕ ಸಿನಿಮಾಗಳಲ್ಲಿ ನಟಿಸಿದ್ದಷ್ಟೇ ಅಲ್ಲದೇ ನಿರ್ದೇಶನದ ಕ್ಯಾಪ್ ಕೂಡ ತೊಟ್ಟು ಶಿವಣ್ಣನ ಚೆಲುವೆಯೇ ನಿನ್ನೆ ನೋಡಲು.. ಮಿಸ್ಸಿಂಗ್ ಬಾಯ್ ಸಿನಿಮಾವನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದರು.

ಸದ್ಯ ಬಿಗ್ ಬಾಸ್ ನ ಹೊಸ ಮನೆಯೊಳಗೆ ರಘುರಾಮ್ ಅವರು ಕಾಣಿಸಿಕೊಳ್ಳೋದು ಖಚಿತ ಎನ್ನಲಾಗುತ್ತಿದ್ದು ತೆರೆ ಮೇಲೆ ಜನರನ್ನು ಮನರಂಜಿಸುವ ರಘುರಾಮ್ ಅವರು ಬಿಗ್ ಬಾಸ್ ಮನೆಯೊಳಗೆ ಯಾವ ರೀತಿ ಇರುವರು‌.. ಮನರಂಜನೆ ಯಾವ ರೀತಿ ನೀಡುವರೋ ಕಾದು ನೋಡಬೇಕಿದೆ..