ಈ ವಾರದ ಎಲಿಮಿನೇಷನ್ ಮುಕ್ತಾಯ.. ಬಿಗ್ ಬಾಸ್ ಮನೆಯಿಂದ ಹೊರ ಬಂದ ಸ್ಪರ್ಧಿ ಇವರೇ ನೋಡಿ..

ಬಿಗ್ ಬಾಸ್ ಸೀಸನ್ ಎಂಟು ಶುರುವಾಗಿ ಅದಾಗಲೇ ನೋಡುನೋಡುತ್ತಿದ್ದಂತೆ ಒಂದು ತಿಂಗಳು ಕಳೆದೇ ಹೋಗಿದ್ದು.. ನಾಲ್ಕನೇ ವಾರದ ಎಲಿಮಿನೇಷನ್ ಕೂಡ ಮುಕ್ತಾಯಗೊಂಡಿದೆ.. ಹೌದು ಈ ವಾರವೂ ಒಬ್ಬ ಮಹಿಳಾ ಸ್ಪರ್ಧಿ ಮನೆಯಿಂದ ಹೊರ ನಡೆದಿದ್ದು ಬಿಗ್ ಬಾಸ್ ನಲ್ಲಿ ಇನ್ನು ಹದಿಮೂರು ಮಂದಿ ತಮ್ಮ ಜರ್ನಿಯನ್ನು ಮುಂದುವರೆಸಿದ್ದಾರೆ.. ಇನ್ನು ಬಿಗ್ ಬಾಸ್ ಮನೆಯಲ್ಲಿ ಈ ವಾರ ಎಲಿಮಿನೇಟ್ ಆದ ಸ್ಪರ್ಧಿ ಇವರೇ ನೋಡಿ..

ಹೌದು ಬಿಗ್ ಬಾಸ್ ಸೀಸನ್ ಎಂಟರಲ್ಲಿ ಬರೋಬ್ಬರಿ ಹದಿನೆಂಟು ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದು ಕಿರುತೆರೆ ಬೆಳ್ಳಿತೆರೆ ಕಲಾವಿದರಷ್ಟೇ ಅಲ್ಲದೇ ಬೈಕ್ ರೈಡರ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆದ ಕೆಲವರು ಸಹ ಬಿಗ್ ಬಾಸ್ ಮನೆಗೆ ಹೋಗುವ ಅವಕಾಶ ಪಡೆದಿದ್ದರು.. ಆದರೆ ಬಿಗ್ ಬಾಸ್ ಶುರುವಾಗುತ್ತಿದ್ದಂತೆ ಮೊದಲ ವಾರವೇ ಟಿಕ್ ಟಾಕ್ ಸ್ಟಾರ್ ಧನುಶ್ರೀ ಮನೆಯಿಂದ ಹೊರ ನಡೆದರೆ ಎರಡನೇ ವಾರ ನಟಿ ಹಾಗೂ ಕಿರುತೆರೆಯ ನಿರ್ಮಾಪಕಿ ನಿರ್ಮಲಾ ಚೆನ್ನಪ್ಪ ಅವರು ಎಲಿಮಿನೇಟ್ ಆದರು.. ಇನ್ನು ಮೂರನೇ ವಾರದಲ್ಲಿ ಬ್ರಹ್ಮಗಂಟು ಧಾರಾವಾಹಿ ಖ್ಯಾತಿಯ ಗೀತಾ ಭಾರತಿ ಭಟ್ ತಮ್ಮ ಬಿಗ್ ಬಾಸ್ ಜರ್ನಿ ಮುಗಿಸಿ ಮನೆಯಿಂದ ಹೊರ ನಡೆದರು.. ಇದೀಗ ನಾಲ್ಕನೇ ವಾರವೂ ಮನೆಯಿಂದ ಹೊರ ಹೋದ ಸ್ಪರ್ಧಿಯೂ ಕೂಡ ಮಹಿಳಾ ಸ್ಪರ್ಧಿಯೇ ಆಗಿದ್ದು ವಿಶೇಷ.‌ ಹೌದು ಈ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದವರು ಮತ್ಯಾರೂ ಅಲ್ಲ ನಟಿ ಚಂದ್ರಕಲಾ..

ಹೌದು ಪುಟ್ಟ ಗೌರಿ ಧಾರಾವಾಹಿ ಮೂಲಕ ಅಜ್ಜಮ್ಮನ ಪಾತ್ರಧಾರಿಯಾಗಿ ಫೇಮಸ್ ಆಗಿದ್ದ ಚಂದ್ರಕಲಾ ಅವರು ನಂತರ ಅನೇಕ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದರು.. ಇದೀಗ ಬಿಗ್ ಬಾಸ್ ಮನೆಗೆ ಹೋಗುವ ಅವಕಾಶ ಪಡೆದು ಒಂದು ತಿಂಗಳ ಕಾಲ ಅಲ್ಲಿಯೇ ಇರುವಲ್ಲಿ ಯಶಸ್ವಿಯಾಗಿ ಇದೀಗ ಮರಳಿದ್ದಾರೆ.. ಇಂದು ಕಿಚ್ಚ ಸುದೀಪ್ ಅವರ ಭಾನುವಾರದ ವಿಶೇಷ ಕಾರ್ಯಕ್ರಮದಲ್ಲಿ ಸುದೀಪ್ ಅವರೊಟ್ಟಿಗೆ ವೇದಿಕೆ ಹಂಚಿಕೊಳ್ಳಲಿದ್ದು ಬಿಗ್ ಬಾಸ್ ಮನೆಯೊಳಗೆ ನಡೆಯುವ ಅಸಲಿ ಕತೆಗಳನ್ನು ಬಿಚ್ಚಿಡಲಿದ್ದಾರೆ..

ಇನ್ನುಳಿದಂತೆ ಕಳೆದ ವಾರ ಸಂಪೂರ್ಣ ಮನೆಯೇ ನೇರವಾಗಿ ನಾಮಿನೇಟ್ ಆಗಿದ್ದು ಚಂದ್ರಕಲಾ ಅವರು ಮನೆಯಿಂದ ಹೊರ ನಡೆದಿದ್ದರೆ ಇತ್ತ ಮಂಜು ಪಾವಗಡ.. ದಿವ್ಯಾ ಉರುಡುಗ.. ದಿವ್ಯಾ ಸುರೇಶ್.‌. ರಾಜೀವ್.. ಶುಭಾ ಪೂಂಜಾ.. ನಿಧಿ ಸುಬ್ಬಯ್ಯ.. ವೈಷ್ಣವಿ.. ರಘು.. ಶಮಂತ್.. ಪ್ರಶಾಂತ್ ಸಂಬರ್ಗಿ.. ವಿಶ್ವನಾಥ್.. ಶಂಕರ್ ಅಶ್ವತ್ಥ್.. ಸೇಫ್ ಆಗಿದ್ದು ತಮ್ಮ ಬಿಗ್ ಬಾಸ್ ಮನೆಯ ವಾಸವನ್ನು ಮುಂದುವರೆಸಿದ್ದಾರೆ..