ಇದ್ದಕಿದ್ದ ಹಾಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಕನ್ನಡತಿ ಧಾರಾವಾಹಿಯ ಹರ್ಷ ಭುವಿ..

ಕನ್ನಡ ಕಿರುತೆರೆಯ ಖ್ಯಾತ ಧಾರಾವಾಹಿ ಕನ್ನಡತಿ ಧಾರಾವಾಹಿಯಲ್ಲಿ ಸಧ್ಯ ದಿನಕ್ಕೊಂದು ತಿರುವು ಪಡೆಯುತ್ತಿದ್ದು ರೋಚಕತೆಯಿಂದ ಕೂಡಿದ ಸಂಚಿಕೆಗಳು ಪ್ರಸಾರವಾಗುತ್ತಿದೆ ಎನ್ನಬಹುದು‌.‌. ಆದರೆ ಈ ನಡುವೆ ಹೊಸ ವಿಚಾರವೊಂದು ಕೇಳಿಬಂದಿದ್ದು ಕನ್ನಡ ಕಿರುತೆರೆಯ ಖ್ಯಾತ ಜೋಡಿ ಎನಿಸಿಕೊಂಡಿರುವ ಹರ್ಷ ಹಾಗೂ ಭುವಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಇಬ್ಬರ ಮುದ್ದಾದ ಫೋಟೋಗಳು ವೈರಲ್ ಆಗಿವೆ.. ಹೌದು ಕಿರುತೆರೆಯಲ್ಲಿ ಧಾರಾವಾಹಿಯಲ್ಲಿನ ಜೋಡಿಗಳು ನಿಜ ಜೀವನದಲ್ಲಿಯೂ ಜೊತೆಯಾಗೋದು ಹೊಸ ವಿಚಾರವೇನೂ ಅಲ್ಲ..

ಅದೇ ರೀತಿ ಧಾರಾವಾಹಿಯಲ್ಲಿ ಹಿಟ್ ಆದ ಸಾಕಷ್ಟು ಜೋಡಿಗಳು ನಿಜ ಜೀವನದಲ್ಲಿಯೂ ಒಂದಾಗಿದ್ದಾರೆ.. ಇದರ ಜೊತೆಗೆ ಅಭಿಮಾನಿಗಳು ಸಹ ತಮ್ಮ ನೆಚ್ಚಿನ ಜೋಡಿಯನ್ನು‌ ನಿಜ ಜೀವನದಲ್ಲಿಯೂ ಮದುವೆಯಾಗಿ ಎಂದು ಕೇಳಿಕೊಳ್ಳೋದು ಹೊಸ ವಿಚಾರವೇನೂ ಅಲ್ಲ.. ಅದೇ ರೀತಿ ಕನ್ನಡತಿ ಧಾರಾವಾಹಿಯ ಖ್ಯಾತ ಜೋಡಿ ಹರ್ಷ ಹಾಗೂ ಭುವಿಯನ್ನೂ ಸಹ ನಿಜ ಜೀವನದಲ್ಲಿಯೂ ಜೋಡಿಯಾಗಿ ಎಂದು ಸಾಕಷ್ಟು ಅಭಿಮಾನಿಗಳು ಕೇಳಿದ್ದುಂಟು.. ಈಗಲೂ ಧಾರಾವಾಹಿಯ ಪ್ರೋಮೋಗಳಲ್ಲಿ ಅವರ ಫೋಟೋಗಳ ಕೆಳಗೆ ಕೇಳಿಕೊಳ್ಳೋದುಂಟು..

ಆದರೆ ಅದಕ್ಕೂ ಮೀರಿ ಕಳೆದ ಎರಡು ವರ್ಷದಿಂದ ಧಾರಾವಾಹಿ ಪ್ರಸಾರ ಆಗ್ತಾ ಇದೆ ಕನಿಷ್ಟಪಕ್ಷ ಕನ್ನಡತಿ ಧಾರಾವಾಹಿಯಲ್ಲಾದರೂ ಆದಷ್ಟು ಬೇಗ ಮದುವೆಯಾಗಿ ಎಂದು ಕೇಳಿಕೊಂಡಿದ್ದರು.. ಇದೀಗ ಅಭಿಮಾನಿಗಳ ಆಸೆಯನ್ನು ಈಡೇರಿಸುತ್ತಿರುವ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.. ಹೌದು ಸಧ್ಯದಲ್ಲಿಯೇ ನಡೆಯಲಿದೆ ಹರ್ಷ ಭುವಿಯ ಕಲ್ಯಾಣ..

ಆದರೆ ನಿಜ ಜೀವನದಲಲ್ಲ ಬದಲಿಗೆ ಅಭಿಮಾನಿಗಳ ಆಸೆಯಂತೆ ಧಾರಾವಾಹಿಯಲ್ಲಿ ಒಂದಾಗುತ್ತಿದೆ ಈ ಜೋಡಿ.. ಹೌದು ಧಾರಾವಾಹಿಯಲ್ಲಿ ಅದಾಗಲೇ ನಿಶ್ಚಿತಾರ್ಥ ಮಾಡಿಕೊಳ್ಳಲು ಭುವಿ ಮನೆ ಬಾಗಿಲಿಗೆ ಬಂದಿರುವ ಹರ್ಷ ಹಾಗೂ ಅಮ್ಮಮ್ಮನನ್ನು ಮಂಗಳಮ್ಮ ಮನೆಯಿಂದ ಹೊರ ಕಳುಹಿಸಿದ್ದು ಅಕ್ಕಿ ಮಿಲ್ ಸಾಹುಕಾರನಿಗೆ ಭುವಿ ಕೊಟ್ಟು ಮದುವೆ ಮಾಡುವ ನಿರ್ಧಾರ ಮಾಡಿದ್ದಾರೆ..

ಆದರೆ ಇನ್ನೂ ಸಹ ಸುಮ್ಮನಿರೋದು ಒಳ್ಳೆಯದಲ್ಲವೆಂದು ಭುವಿ ಮಂಗಳಮ್ಮನ ವಿರುದ್ಧ ತಿರುಗಿ ಬಿದ್ದಿದ್ದು ಹರ್ಷ ಹಾಗೂ ಅಮ್ಮಮ್ಮನನ್ನು ಮನೆಯೊಳಗೆ ಕರೆಸಿ ಕೂರಿಸಿದ್ದು.. ಇತ್ತ ಅಕ್ಕಿ‌ ಮಿಲ್ ಸಾಹುಕಾರನ ಮುಂದೆಯೇ ಹರ್ಷನನ್ನು ಮದುವೆಯಾಗುವ ನಿರ್ಧಾರವನ್ನು ತಿಳಿಸಬಹುದಾಗಿದೆ.. ಇತ್ತ ವರೂಧಿನಿಗೂ ಎಲ್ಲಾ ವಿಚಾರ ತಿಳಿದಿದ್ದು ಅದಕ್ಕೂ ಕಾಯಬೇಕಾಗಿಲ್ಲ ಎನ್ನುವಂತಾಗಿದೆ.. ಹರ್ಷ ಹಾಗೂ ಭುವಿಯ ಪ್ರೀತಿಯ ಸಂಚಿಕೆಗಳು ಪ್ರಸಾರವಾಗುತ್ತಿದ್ದ ಸಮಯದಲ್ಲಿಯೇ ಇದ್ದಕಿದ್ದ ಹಾಗೆ ಹರ್ಷ ಹಾಗೂ ಭುವಿಯ ಕಲ್ಯಾಣ ನಡೆಯುತ್ತಿರುವುದು ಧಾರಾವಾಹಿ ಪ್ರಿಯರಿಗೆ ರಸದೌತಣವೆನ್ನಬಹುದು..

ಇನ್ನು ಧಾರಾವಾಹಿಯಲ್ಲಿ ಅದಾಗಲೇ ಹರ್ಷ ಹಾಗೂ ಭುವಿಯ ಮದುವೆಯ ಚಿತ್ರೀಕರಣ ವಾಗಿದ್ದು ಹಸಿರುಪೇಟೆಯ ಮನೆಯ ಮುಂದೆಯೇ ಚಪ್ಪರದ ಮಂಟಪದಲ್ಲಿ‌ ಮದುವೆ ನೆರವೇರಿದ್ದು ಹರ್ಷ ಹಾಗೂ ಭುವಿಯ ವೀಡಿಯೋವೊಂದು ವೈರಲ್ ಆಗಿದೆ.. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೀಡಿಯೋ ನೋಡಿರುವ ಅಭಿಮಾನಿಗಳು ಆ ಸಂಚಿಕೆಗಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.. ಅಷ್ಟೇ ಅಲ್ಲದೇ ಎಂದಿನಂತೆ ಈ ಜೋಡಿಯನ್ನು ನಿಜ ಜೀವನದಲ್ಲಿಯೂ ಒಂದಾಗಿ ಎಂದು ಕಮೆಂಟ್ ಮೂಲಕ ಕೇಳಿಕೊಂಡಿದ್ದು ಹರ್ಷ ಹಾಗೂ ಭುವಿ ಜೋಡಿಗೆ ಜನರು ಫಿದಾ ಆಗಿದ್ದಾರೆನ್ನಬಹುದು‌.