ಕನ್ನಡತಿ ಧಾರಾವಾಹಿಯ ಭುವಿ ತಂಗಿ ಬಿಂದು ನಿಜಕ್ಕೂ ಯಾರು ಗೊತ್ತಾ..

ಕನ್ನಡತಿ ಧಾರಾವಾಹಿ ಒಂದು ರೀತಿ ಜನರು ಪ್ರತಿ ದಿನ ವೀಕ್ಷಿಸುವ ಒಂದು ವಿಷಯ ಆಗಿದೆ. ಯಾರಿಗೂ ಅದೊಂದು ಕಥೆ ಎಂದು ಅನ್ನಿಸುವುದಿಲ್ಲ. ಬದಲಾಗಿ ನಮ್ಮ ಮನೆಯಲ್ಲಿ ಅಥವಾ ನಮ್ಮ ಅಕ್ಕಪಕ್ಕದ ಮನೆಯಲ್ಲಿ ನಡೆಯುತ್ತಿರುವ ಕಥೆಯೇ ಇರಬಹುದು ಎಂದು ಅನ್ನಿಸುವಷ್ಟರ ಮಟ್ಟಿಗೆ ಜನರು ಕನ್ನಡತಿ ಧಾರಾವಾಹಿಗೆ ಹತ್ತಿರವಾಗಿದ್ದಾರೆ. ಈ ಧಾರಾವಾಹಿಯಲ್ಲಿ ಹರ್ಷ ಭುವಿ ಪಾತ್ರವಷ್ಟೇ ಅಲ್ಲ, ಇನ್ನುಳಿದ ಪಾತ್ರಗಳು ಸಹ ಜನರ ಮನಸ್ಸಿಗೆ ತುಂಬಾ ಹತ್ತಿರವಾಗಿರುವ ಪಾತ್ರಗಳು. ಹರ್ಷನ ತಾಯಿ ಅಮ್ಮಮ್ಮ, ಹರ್ಷನ ತಂಗಿ ಸುಚಿ, ಭುವಿ ತಂಗಿ ಬಿಂದು, ವರುಧಿನಿ, ಸಾನಿಯಾ ಈ ಎಲ್ಲಾ ಪಾತ್ರಗಳು ಜನರಿಗೆ ಇಷ್ಟವಾಗಿದೆ. ಕನ್ನಡತಿ ಧಾರಾವಾಹಿಯಲ್ಲಿ ಈ ತಂಗಿಯರ ಪಾತ್ರ ಒಂಥರ ಸ್ಪೆಶಲ್, ಹರ್ಷನ ತಂಗಿ ಸುಚಿ ಮತ್ತು ಭುವಿ ತಂಗಿ ಬಿಂದು ಇಬ್ಬರು ಈ ಧಾರಾವಾಹಿಯ ಮುದ್ದಿನ ತಂಗಿಯರು. ತಂಗಿಯರು ಅಂದ್ರೆ ಹೀಗಿರಬೇಕು ಎನ್ನುವ ಭಾವನೆ ಬರುವ ಹಾಗೆ ಮಾಡಿದ್ದಾರೆ. ಭುವಿ ತಂಗಿ ಪಾತ್ರದಲ್ಲಿ ಅಭಿನಯಿಸಿರುವ ಬಿಂದು ನಿಜಕ್ಕೂ ಯಾರು? ಅವರು ಹೇಗಿದ್ದಾರೆ ಗೊತ್ತಾ..

ಕನ್ನಡತಿ ಧಾರಾವಾಹಿ ಶುರುವಾಗಿ ಇನ್ನೇನು ಎರಡು ವರ್ಷ ತುಂಬಲಿದೆ. ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಜನತೆ ಮೆಚ್ಚಿಕೊಂಡಿರುವ ಧಾರಾವಾಹಿ ಇದು. ಈ ಧಾರಾವಾಹಿಯಲ್ಲಿ ಎಲ್ಲರೂ ಹೆಚ್ಚಾಗಿ ಇಷ್ಟಪಡುವುದು, ಒಂದೇ ರೀತಿ ಇಲ್ಲದ ಕಥೆ, ಹಾಗೂ ಅಪ್ಪಟ ಕನ್ನಡ ಸಂಭಾಷಣೆ ಹಾಗೂ ಪಾತ್ರಗಳು. ಯಾವ ಪಾತ್ರವು ಕೂಡ ಬೇಡವಾಗಿತ್ತೇನೋ ಎಂದು ಅನ್ನಿಸುವ ಹಾಗಿರದೆ ಎಲ್ಲಾ ಪಾತ್ರವೂ ಅಚ್ಚುಕಟ್ಟಾಗಿ ಮೂಡಿ ಬರುತ್ತಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಎಲ್ಲಾ ಧಾರಾವಾಹಿಗಳ ಪೈಕಿ ಜನರು ಅತಿ ಹೆಚ್ಚಾಗಿ ಇಷ್ಟಪಡುವ ಧಾರಾವಾಹಿ ಕನ್ನಡತಿ, ಅನುಬಂಧ ಅವಾರ್ಡ್ಸ್ ನಲ್ಲಿ ಕೂಡ ಇದು ಗೊತ್ತಾಯಿತು.

ಕರ್ನಾಟಕದ ಎಲ್ಲ ಭಾಗದ ಜನತೆ ಕನ್ನಡತಿ ಧಾರಾವಾಹಿಯನ್ನು ಬಹಳ ಪ್ರೀತಿಯಿಂದ ನೋಡುತ್ತಿದ್ದಾರೆ. ಮಧ್ಯದಲ್ಲಿ ಕೆಲವು ದಿನಗಳ ಕಾಲ ಕನ್ನಡತಿ ಧಾರಾವಾಹಿ ತನ್ನ ಚಾರ್ಮ್ ಅನ್ನು ಕಳೆದುಕೊಂಡಿತ್ತು, ಇದೀಗ ಮತ್ತೆ ಫಾರ್ಮ್ ಗೆ ಬಂದಿದೆ ಕನ್ನಡತಿ. ಹರ್ಷ ಭುವಿ ಮತ್ತೆ ಜನರನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತೀಚೆಗೆ ಪ್ರಸಾರವಾದ ಸ್ಪೆಷಲ್ ಎಪಿಸೋಡ್ ಅನ್ನು ಜನರು ತುಂಬಾ ಇಷ್ಟಪಟ್ಟರು. ಕನ್ನಡತಿ ಧಾರಾವಾಹಿಯಲ್ಲಿ ಎಲ್ಲರೂ ಇಷ್ಟಪಟ್ಟಿರುವ ಪಾತ್ರಗಳಲ್ಲಿ ಒಂದು ಭುವಿ ತಂಗಿ ಬಿಂದು ಪಾತ್ರ. ಅಕ್ಕ ಬಹಳ ಸೈಲೆಂಟ್ ಆದರೆ ಬಿಂದು ಹಾಗಲ್ಲ, ಎಲ್ಲರ ಜೊತೆ ಚೆನ್ನಾಗಿ ಬೆರೆತು, ಪಟಪಟ ಎಂದು ಮಾತನಾಡುತ್ತಾಳೆ.

ಈ ಬಿಂದು ಪಾತ್ರದಲ್ಲಿ ಅಭಿನಯಿಸುತ್ತಿರುವ ನಟಿಯ ಹೆಸರು ಮೋಹಿರಾ ಆಚಾರ್ಯ. ಬಿಂದು ಪಾತ್ರದಲ್ಲಿ ಈ ಹಿಂದೆ ಮತ್ತೊಬ್ಬ ನಟಿ ಅಭಿನಯಿಸುತ್ತಿದ್ದರು, ಕಾರಣಾಂತರಗಳಿಂದ ಅವರು ಧಾರಾವಾಹಿಯಿಂದ ಹೊರಬಂದ ನಂತರ ಬಿಂದು ಪಾತ್ರಕ್ಕೆ ಎಂಟ್ರಿ ಕೊಟ್ಟರು ಮೋಹಿರಾ ಆಚಾರ್ಯ. ಈಗಾಗಲೇ ಮತ್ತೊಬ್ಬರು ನಿರ್ವಹಿಸುತ್ತಿದ್ದ ಪಾತ್ರಕ್ಕೆ ಬಂದರು ಕೂಡ, ತಮ್ಮ ಅಭಿನಯದ ಮೂಲಕ ಬಿಂದು ಪಾತ್ರಕ್ಕೆ ತಾವೇ ಸೂಕ್ತ ಎಂದು ಪ್ರೂವ್ ಮಾಡಿದ್ದಾರೆ ಮೋಹಿರಾ. ಹರ್ಷ ಭುವಿ ಪ್ರೀತಿ ವಿಚಾರದಲ್ಲಿ ಬಿಂದು ತುಂಬಾ ಹೆಲ್ಪ್ ಮಾಡಿದ್ದಾಳೆ. ಹರ್ಷನ ವಿಚಾರದಲ್ಲಿ ಭುವಿಗೆ ಹಲವು ಟಿಪ್ಸ್ ಕೊಡುತ್ತಿದ್ದು ಬಿಂದು..

ಅಷ್ಟಲ್ಲದೆ ಅಕ್ಕನ ಬಗ್ಗೆ ಕೂಡ ಹರ್ಷನಿಗೆ ಸಹಾಯ ಮಾಡುತ್ತಿದ್ದಳು. ಹರ್ಷನ ಜೊತೆ ಅಕ್ಕ ಸಂತೋಷವಾಗಿರಲಿ ಎನ್ನುವುದು ಬಿಂದು ಆಸೆ. ಭುವಿ ಮತ್ತು ಬಿಂದು ಇಬ್ಬರೂ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಹುಡುಗಿಯರು. ಭುವಿ ತುಂಬಾ ಮುಗ್ಧ ಸ್ವಭಾವದ ಹುಡುಗಿಯಾದರು ಬಿಂದು ಹಾಗಲ್ಲ. ಎಲ್ಲಾ ವಿಚಾರಗಳಲ್ಲು ಲೆಕ್ಕಾಚಾರ ಹಾಕಿ ಯೋಚನೆ ಮಾಡುವ ಸ್ವಭಾವ ಬಿಂದುವಿನದ್ದು, ಅಕ್ಕ ಅಂದ್ರೆ ಬಿಂದುಗೆ ವಿಶೇಷ ಪ್ರೀತಿ. ಹರ್ಷನ ವಿಚಾರದಲ್ಲಿ ಅಕ್ಕನನ್ನು ರೇಗಿಸುತ್ತಾ, ಸದಾ ಖುಷಿ ಖುಷಿಯಾಗಿ ಇರುತ್ತಾಳೆ ಬಿಂದು. ಈ ಬಿಂದು ಪಾತ್ರ ನೋಡಿ ತಂಗಿಯರು ಹೀಗಿದ್ರೆ ಎಷ್ಟು ಚಂದ ಎಂದು ಅನ್ನಿಸುತ್ತದೆ..

ಕನ್ನಡತಿ ಧಾರಾವಾಹಿಯಿಂದ ನಟಿ ಮೋಹಿರಾ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇವರು ಅಷ್ಟಾಗಿ ಆಕ್ಟಿವ್ ಇಲ್ಲ. ಆಗೊಮ್ಮೆ ಈಗೊಮ್ಮೆ, ಕೆಲವು ಫೋಟೋಗಳನ್ನು ಶೇರ್ ಮಾಡುತ್ತಾರೆ. ಇನ್ಸ್ಟಾಗ್ರಾಮ್ ನಲ್ಲಿ ಇವರಿಗೆ 15 ಸಾವಿರ ಫಾಲೋವರ್ಸ್ ಗಳಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಇವರು ಮಾಡಿರುವುದು 20 ಪೋಸ್ಟ್ ಗಳು ಮಾತ್ರ. ಸೋಷಿಯಲ್ ಮೀಡಿಯಾ ಇಂದ ದೂರ ಇರುವ ಮೋಹಿರಾ, ಚಿತ್ರೀಕರಣ ಇಲ್ಲದ ಸಮಯದಲ್ಲಿ ಕುಟುಂಬ ಮತ್ತು ಸ್ನೇಹಿತರ ಜೊತೆಗೆ ಸಮಯ ಕಳೆಯುತ್ತಾರೆ. ನಟನೆಯ ಕ್ಷೇತ್ರದಲ್ಲಿ ಇನ್ನು ಹೆಚ್ಚು ಸಾಧನೆ ಮಾಡಬೇಕು ಎಂದು ಕನಸು ಕಟ್ಟಿಕೊಂಡಿದ್ದಾರೆ ಮೋಹಿರಾ. ಈ ಕನಸುಗಳು ನೆರವೇರಲಿ ಎಂದು ಹಾರೈಸೋಣ.