ಸಿಹಿ ಸುದ್ದಿ ನೀಡಿದ ಬಿಗ್‌ ಬಾಸ್‌ ಖ್ಯಾತಿಯ ಭೂಮಿ ಶೆಟ್ಟಿ.

ಕಿನ್ನರಿ ಧಾರಾವಾಹಿಯಿಂದ ಮನೆ ಮಾತಾದ ಭೂಮಿ ಶೆಟ್ಟಿ ಎಲ್ಲರಿಗೂ ಅಚ್ಚುಮೆಚ್ಚಿನ ಹುಡುಗಿ. ಕಿರುತೆರೆಯಲ್ಲಿ ಕಿನ್ನರಿಯಾಗಿ ಮೊದಲ ಬಾರಿಗೆ ಬಣ್ಣ ಹಚ್ಚಿದ ಕೃಷ್ಣ ಸುಂದರಿ ಭೂಮಿ ಶೆಟ್ಟಿ ತೆಲುಗು ಕಿರುತೆರೆಯಲ್ಲೂ ಜನಪ್ರಿಯತೆಯನ್ನು ಪಡೆದಿದ್ದಾರೆ. ಅಲ್ಲದೇ, ನಿರೂಪಕಿಯಾಗಿಯೂ ಬಣ್ಣ ಹಚ್ಚಿದ್ದ ಭೂಮಿ ಶೆಟ್ಟಿ, ಮಜಾಭಾರತ ಕಾಮಿಡಿ ರಿಯಾಲಿಟಿ ಶೋನಲ್ಲಿ ಆಂಕರ್ ಆಗಿ ಕಾಣಿಸಿಕೊಂಡಿದ್ದರು. ಇಷ್ಟೇ ಅಲ್ಲದೇ ಬಿಗ್ ಬಾಸ್ ಸೀಸನ್ 7ರಲ್ಲೂ ಭೂಮಿ ಶೆಟ್ಟಿ ಭಾಗವಹಿಸಿದ್ದರು. ಟಾಪ್ 5 ಹಂತದವರೆಗೂ ಸ್ಪರ್ಧಿಸಿದ್ದ ಭೂಮಿ ಶೆಟ್ಟಿ ಅವರನ್ನು ಜನ ಮೆಚ್ಚಿದ್ದರು.

ಸರಳ ಗುಣದಿಂದಲೇ ಎಲ್ಲರ ಮನ ಗೆದ್ದಿದ್ದ ಭೂಮಿ ಶೆಟ್ಟಿ, ಲಾಕ್ ಡೌನ್ ಸಂದರ್ಭವನ್ನು ತೋರಿಸುವ ಇಕ್ಕಟ್ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಇಕ್ಕಟ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣಡ ಮಾಡಿದ ಕೃಷ್ಣ ಸುಂದರಿ ಭೂಮಿ ಶೆಟ್ಟಿ, ಈಗ ಮತ್ತೊಂದು ಸಿನಿಮಾಗೆ ಬಣ್ಣ ಹಚ್ಚಲು ಮುಂದಾಗಿದ್ದಾರೆ. ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಆದರೆ, ಭೂಮಿ ಶೆಟ್ಟಿ ಅವರ ಪಾತ್ರವನ್ನು ಮಾತ್ರ ಚಿತ್ರ ತಂಡ ರಿವೀಲ್ ಮಾಡಿದೆ. ಚಿತ್ರದಲ್ಲಿ ಭೂಮಿ ಶೆಟ್ಟಿ ಟ್ರೈಬಲ್ ರಾಣಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಕರಾವಳಿ ಬೆಡಗಿ ಭೂಮಿ ಶೆಟ್ಟಿ ಅವರು ನಟಿಸುತ್ತಿರುವ ಚಿತ್ರಕ್ಕೆ ಉದಯೋನ್ಮುಖ ನಟ ಹಾಗೂ ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ಈ ನೂತನ ಪ್ರಾಜೆಕ್ಟ್ ಗೆ ಕೈ ಹಾಕಿದ್ದಾರಂತೆ. 2018ರಲ್ಲಿ ಕತ್ತಲ ಕೋಣೆ ಎಂಬ ಚಿತ್ರವನ್ನು ನಿರ್ದೇಶಿಸಿ ನಟಿಸಿದ್ದ ಸಂದೇಶ್ ಶೆಟ್ಟಿ ಆಜ್ರಿ ಈ ಗ ಮತ್ತೊಂದು ಚಿತ್ರಕ್ಕೆ ಕೈ ಹಾಕಿದ್ದಾರೆ. ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲವಂತೆ. ಭೂಮಿ ಶೆಟ್ಟಿ ಟ್ರೈಬಲ್ ಯುವರಾಣಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಳ್ಳಲಿರುವ ಭೂಮಿ ಶೆಟ್ಟಿ ಚಿತ್ರಕ್ಕೆ ಬಣ್ಣ ಹಚ್ಚಲು ಕಾತುರರಾಗಿದ್ದಾರಂತೆ. ಇನ್ನು ಈ ಚಿತ್ರಕ್ಕೆ ಹೊಸ ನಟ ನಾಯಕನ ಪಾತ್ರದಲ್ಲಿ ಕಾಣಿಸಲಿದ್ದಾರೆ. ರಂಜನ್ ಛತ್ರಪತಿ ಎಂಬ ಯುವ ನಟ ಟ್ರೈಬಲ್ ಕಥೆಯ ನಾಯಕರಾಗಿ ಮಿಂಚಲಿದ್ದಾರಂತೆ.

ತಮ್ಮ ವಿಭಿನ್ನ ಮ್ಯಾನರಿಂಸಂ ನಿಂದಲೇ ಫೇಮಸ್ ಆಗಿರುವ ಪ್ರಮೋದ್ ಶೆಟ್ಟಿ ಕೂಡ ಈ ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಸಂದೇಶ್ ಶೆಟ್ಟಿ ಆಜ್ರಿ ಹೇಳಿರುವ ಕಥೆಯನ್ನು ಪ್ರಮೋದ್ ಶೆಟ್ಟಿ ಅವರು ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಇನ್ನು ರಂಗಭುಮಿ ಕಲಾವಿದರಾಗಿರುವ ಪ್ರಮೋದ್ ಶೆಟ್ಟಿ ಅವರು ಒಂದು ಶಿಕಾರಿಯ ಕಥೆ, ಉಳಿದವರು ಕಂಡಂತೆ ಸಿನಿಮಾಗಳಲ್ಲಿ ತಮ್ಮ ಉತ್ತಮ ನಟನೆಯಿಂದಲೇ ಜನ ಮನ ಗೆದ್ದಿದ್ದಾರೆ. ಇನ್ನು ಈ ಚಿತ್ರದ ಶೀರ್ಷೆಕೆಯನ್ನು ಕೆಲವೇ ದಿನಗಳಲ್ಲಿ ರಿವೀಲ್ ಮಾಡುವುದಾಗಿ ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ಹೇಳಿದ್ದಾರೆ.

ಟ್ರೈಬಲ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಸ್ಯಾಂಡಲ್ ವುಡ್ ನ ಖ್ಯಾತ ನಟ-ನಟಿಯರು ಬಣ್ಣ ಹಚ್ಚಲಿದ್ದಾರೆ ಎಂದು ಸಂದೇಶ್ ಶೆಟ್ಟಿ ಆಜ್ರಿ ತಿಳಿಸಿದ್ದಾರೆ. ಸಿನಿಮಾದ ಚಿತ್ರೀಕರಣವನ್ನಿ ಉತ್ತರ ಕರ್ನಾಟಕ ಭಾಗದಲ್ಲೇ ಮಾಡಲಿದ್ದು, ಕರಾವಳಿ, ಪಶ್ಚಿಮ ಘಟ್ಟದ ತಪ್ಪಲುಗಳಲ್ಲಿ ಚಿತ್ರ ನಿರ್ಮಿಸಲಿದ್ದಾರೆ. ಇನ್ನು ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರದ ಚಿತ್ರೀಕರಣವನ್ನು ಆರಂಭಿಸಲಿದ್ದೇವೆ ಎಂದು ಸಂದೇಶ್ ಶೆಟ್ಟಿ ಆಜ್ರಿುಮಿ ಶೆಟ್ಟಿ, ಪ್ರಮೋದ್ ಶೆಟ್ಟಿ ಅನ್ನು ಮತ್ತೆ ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.