ನಿಜಕ್ಕೂ ಶಾಕಿಂಗ್.. ಭಾರ್ಗವಿ ನಾರಾಯಣ್ ಅವರ ಅಂತ್ಯ ಸಂಸ್ಕಾರ ಮಾಡಲಿಲ್ಲ.. ಕಾರಣವೇನು ಗೊತ್ತಾ.. ಕುಟುಂಬ ಮಾಡಿರೋ ಕೆಲಸ ನೋಡಿ..

ಕನ್ನಡ ಚಿತ್ರರಂಗ ಕಳೆದ ಕೆಲವು ದಿನಗಳಿಂದ ಸಾಕಷ್ಟು ಕಲಾವಿದರನ್ನು ಕಳೆದುಕೊಂಡಿದೆ. ಅದೇ ಸಾಲಿಗೆ ಹಿರಿಯನಟಿ ಭಾರ್ಗವಿ ನಾರಾಯಣ್ ಅವರು ಸಹ ಸೇರಿಕೊಂಡರು. ಮೊನ್ನೆಯಷ್ಟೇ ಹಿರಿಯನಟಿ ಭಾರ್ಗವಿ ನಾರಾಯಣ್ ಅವರು ಇಹಲೋಕ ತ್ಯಜಿಸಿದರು. ಕಿರುತೆರೆಯ ಮಾತಿನ ಮಲ್ಲಿ ಆಗಿದ್ದರು ಭಾರ್ಗವಿ ನಾರಾಯಣ್. ಹಲವು ಸೀರಿಯಲ್ ಗಳಲ್ಲಿ ಪಟಪಟ ಮಾತನಾಡುವ ಅಜ್ಜಿಯ ಪಾತ್ರದಲ್ಲಿ ಭಾರ್ಗವಿ ನಾರಾಯಣ್ ಅವರು ಅಭಿನಯಿಸಿದ್ದರು. ಈಗ ಆ ಎಲ್ಲಾ ಪಾತ್ರಗಳು ನೆನಪು ಮಾತ್ರ. ಭಾರ್ಗವಿ ನಾರಾಯಣ್ ಅವರ ಅಗಲಿಕೆ ಅವರ ಕುಟುಂಬಕ್ಕೆ ಮಾತ್ರವಲ್ಲದೆ ಕನ್ನಡ ಚಿತ್ರರಂಗ ಮತ್ತು ಕಿರುತೆರೆಗೆ ಕೂಡ ದೊಡ್ಡ ನಷ್ಟವೇ. ಆದರೆ ಈ ಪ್ರಪಂಚ ಬಿಟ್ಟು ಹೋದ ನಂತರ ಕೂಡ, ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ ಹಿರಿಯನಟಿ ಭಾರ್ಗವಿ ನಾರಾಯಣ್. ಕುಟುಂಬದವರು ಇವರ ಅಂತ್ಯಕ್ರಿಯೆ ಮಾಡಿಲ್ಲ, ಬದಲಾಗಿ ಅಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ. ಭಾರ್ಗವಿ ನಾರಾಯಣ್ ಅವರ ವಿಚಾರದಲ್ಲಿ ನಡೆದಿದ್ದೇನು ಎಂದು ತಿಳಿಸುತ್ತೇವೆ ನೋಡಿ..

ಭಾರ್ಗವಿ ನಾರಾಯಣ್ ಅವರು ಜನಿಸಿದ್ದು 1938ರಲ್ಲಿ, ಚಿಕ್ಕ ವಯಸ್ಸಿನಿಂದಲೇ ಕನ್ನಡ ನಾಟಕಗಳಲ್ಲಿ ನಂತರದ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದರು. 60ರ ದಶಕದಿಂದ ಈಗಿನವರೆಗೂ 300ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಭಾರ್ಗವಿ ನಾರಾಯಣ್ ಅವರು ಅಭಿನಯಿಸಿದ ಕೆಲವು ಪೋಷಕ ಪಾತ್ರಗಳಿಗೆ ಅವಾರ್ಡ್ ಗಳು ಸಹ ಬಂದಿದೆ. ರಾಜ್ಯ ಪ್ರಶಸ್ತಿ ಮತ್ತು ಇನ್ನಿತರ ಪ್ರಶಸ್ತಿಗಳು ಭಾರ್ಗವಿ ನಾರಾಯಣ್ ಅವರಿಗೆ ಸಿಕ್ಕಿದೆ. ಇತ್ತೀಚಿನ ವರ್ಷಗಳಲ್ಲಿ ಕೂಡ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದರು. ಪುನೀತ್ ರಾಜ್ ಕುಮಾರ್ ಅವರ ಜೊತೆ ರಾಜಕುಮಾರ ಸಿನಿಮಾದಲ್ಲಿ ಘಾಟಿ ಅಜ್ಜಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಆಗಿನ ಕಲಾವಿದರಿಂದ ಹಿಡಿದು ಈಗಿನ ಕಲಾವಿದರ ಸಿನಿಮಾಗಳಿಗೂ ಎಲ್ಲಾ ಸಿನಿಮಾಗಳಲ್ಲೂ ಅಭಿನಯಿಸಿದ್ದರು. ಭಾರ್ಗವಿ ನಾರಾಯಣ್ ಅವರು ನಟಿ ಮಾತ್ರ ಬರಹಗಾರ್ತಿ ಸಹ ಆಗಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ನಡೆದಿರುವ ಘಟನೆಗಳ ಬಗ್ಗೆ ವಿವರಿಸಿ “ನಾನು ಭಾರ್ಗವಿ” ಎನ್ನುವ ಪುಸ್ತಕ ಸಹ ಬರೆದಿದ್ದಾರೆ. ಈ ಪುಸ್ತಕ ಇಂದಿನ ಜೆನೆರೇಷನ್ ನಟಿಯರಿಗೆ ಸ್ಪೂರ್ತಿ ನೀಡುವ ಹಾಗಿದೆ. ಈ ಭಾರ್ಗವಿ ನಾರಾಯಣ್ ಅವರ ಆತ್ಮಕಥೆಗೆ ವಿಮರ್ಶಕರಿಂದ ಒಳ್ಳೆಯ ಪ್ರತಿಕ್ರಿಯೆ ಬಂದಿತ್ತು. ಹಾಗೂ ನಾನು ಭಾರ್ಗವಿ ಪುಸ್ತಕ ಅವಾರ್ಡ್ ಗಳನ್ನು ಸಹ ಪಡೆದುಕೊಂಡಿದೆ. ಇಂತಹ ಬಹುಮುಖ ಪ್ರತಿಭೆ ಇಂದು ಈ ಪ್ರಪಂಚದಲ್ಲಿ ಇಲ್ಲ ಎನ್ನುವುದು ನೋವಿನ ವಿಚಾರ. ಇವರ ಕುಟುಂಬ ಸಹ ಕಲೆಯ ಸೇವೆಯಲ್ಲೇ ತೊಡಗಿಕೊಂಡಿದ್ದಾರೆ.

ಭಾರ್ಗವಿ ನಾರಾಯಣ್ ಅವರು ಮದುವೆ ಆಗಿದ್ದು, ಕನ್ನಡ ಚಿತ್ರರಂಗದಲ್ಲಿ ಮೇಕಪ್ ನಾಣಿ ಎಂದೇ ಖ್ಯಾತಿಯಾಗಿದ್ದ ಬೆಳವಾಡಿ ನಂಜುಂಡಪ್ಪ ನಾರಾಯಣ್ ಅವರ ಜೊತೆ ಮದುವೆಯಾದರು. ಈ ದಂಪತಿಗೆ ನಾಲ್ವರು ಮಕ್ಳಳು, ಸುಜಾತ, ಪ್ರಕಾಶ್ ಬೆಳವಾಡಿ, ಸುಧಾ ಬೆಳವಾಡಿ, ಮತ್ತು ಪ್ರದೀಪ್. ಪ್ರಕಾಶ್ ಬೆಳವಾಡಿ ಅವರು ಅದ್ಭುತವಾದ ನಟ ಹಾಗೂ ಇವರಿಗೆ ನ್ಯಾಷನಲ್ ಅವಾರ್ಡ್ ಸಹ ಬಂದಿದೆ. ಸುಧಾ ಬೆಳವಾಡಿ ಅವರ ಬಗ್ಗೆ ಹೇಳುವ ಹಾಗೆ ಇಲ್ಲ, ಕರ್ನಾಟಕದಲ್ಲಿ ಸಿನಿಮಾಗಳನ್ನು ಮತ್ತು ಸೀರಿಯಲ್ ಗಳಿಂದ ಮನೆಮಾತಾಗಿದ್ದಾರೆ. ಸುಧಾ ಬೆಳವಾಡಿ ಅವರ ಮಗಳು ಸಂಯುಕ್ತ ಹೊರನಾಡ್ ಅವರು ಸಹ ಕನ್ನಡ ಚಿತ್ರರಂಗದಲ್ಲಿ ಹೀರೋಯಿನ್ ಆಗಿದ್ದಾರೆ..

ಭಾರ್ಗವಿ ಅವರು ಕುಟುಂಬಕ್ಕೆ ಹಿರಿಯ ಸದಸ್ಯೆಯಾಗಿ, ಕುಟುಂಬದ ಜೊತೆ ತುಂಬಾ ಚೆನ್ನಾಗಿದ್ದರು. ಕಳೆದ ಕೆಲವು ದಿನಗಳಿಂದ ಭಾರ್ಗವಿ ನಾರಾಯಣ್ ಅವರಿಗೆ ವಯೋಸಹಜ ಆರೋಗ್ಯ ಸಮಸ್ಯೆ, ಸೋಡಿಯಂ ಕೊರತೆ, ಹಾಗೂ ಮರೆವಿನ ಸಮಸ್ಯೆ ಕಾಡುತ್ತಿತ್ತು. 84 ವರ್ಷದ ಭಾರ್ಗವಿ ನಾರಾಯಣ್ ಅವರನ್ನು ಮಕ್ಕಳು ಮತ್ತು ಮೊಮ್ಮಕ್ಕಳು ಮಗುವಿನಂತೆ ನೋಡಿಕೊಳ್ಳುತ್ತಿದ್ದರು. ಮೊನ್ನೆ ಸಂಜೆ 7.30ರ ಸಮಯಕ್ಕೆ, ಭಾರ್ಗವಿ ನಾರಾಯಣ್ ಅವರು ಕೊನೆಯುಸಿರೆಳೆದಿದ್ದು, ಅವರ ಆಸೆಯ ಹಾಗೆ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಭಾರ್ಗವಿ ಅವರಿಗೆ ಸತ್ತ ನಂತರ ದೇಹದಾನ ಮಾಡಬೇಕು ಎನ್ನುವ ಆಸೆ ಇತ್ತು. ಕುಟುಂಬದವರು ಆ ಆಸೆಯನ್ನು ನೆರವೇರಿಸಿದ್ದಾರೆ.

ಭಾರ್ಗವಿ ನಾರಾಯಣ್ ಅವರ ಪತಿ ನಾರಾಯಣ್ ಅವರು ನಿಧನರಾದಾಗ, ಅವರ ದೇಹವನ್ನು ಕೂಡ ಆಸ್ಪತ್ರೆಗೆ ದಾನ ನೀಡಲಾಗಿತ್ತು. ಇದೀಗ ಭಾರ್ಗವಿ ನಾರಾಯಣ್ ಅವರು ಇನ್ನಿಲ್ಲವಾದ ಮೇಲೆ ಅವರ ದೇಹವನ್ನು ಸಹ ದಾನ ನೀಡಲಾಗಿದೆ. ಭಾರ್ಗವಿ ಅವರ ಕಣ್ಣು, ಕಿಡ್ನಿ, ಹೃದಯ ಎಲ್ಲವನ್ನು ದಾನ ಮಾಡಲಾಗಿದ್ದು, ಬೆಂಗಳೂರಿನ ಒಂದು ಮೆಡಿಕಲ್ ಕಾಲೇಜಿಗೆ ದೇಹವನ್ನು ದಾನ ನೀಡಲಾಗಿದೆ. ಮೆಡಿಸಿನ್ ಓದುವ ವಿದ್ಯಾರ್ಥಿಗಳಿಗೆ ಸಹಾಯ ಆಗಲಿ ಎಂದು ಈ ರೀತಿ ಮಾಡಿದ್ದಾರೆ. ಆದರೆ ಯಾವ ಕಾಲೇಜಿಗೆ ಭಾರ್ಗವಿ ಅವರ ಪಾರ್ಥಿವ ಶರೀರ ನೀಡಿದ್ದಾರೆ ಎನ್ನುವುದು ತಿಳಿದುಬಂದಿಲ್ಲ. ಹಿರಿಯನಟಿಯ ಆಸೆಯನ್ನು ಕುಟುಂಬದವರು ಈಡೇರಿಸಿರುವುದು ನಿಜಕ್ಕೂ ಒಳ್ಳೆಯ ವಿಚಾರ.