ಇಹಲೋಕ ತ್ಯಜಿಸಿದ ಹಿರಿಯ ನಟಿ ಭಾರ್ಗವಿ ನಾರಾಯಣ್.. ಇವರ ಮಕ್ಕಳು ಸ್ಯಾಂಡಲ್ವುಡ್ ನ ಸ್ಟಾರ್ ನಟ ನಟಿ ಅನ್ನೋದು ಗೊತ್ತಿದೆಯಾ..

ಕನ್ನಡ ಚಿತ್ರರಂಗದ ಕಳೆದ ಎರಡು ವರ್ಷಗಳು ಬಹಳ ನೋವಿನಿಂದ ಕೂಡಿದೆ, ಕೋವಿಡ್ ಇಂದ ಚೇತರಿಸಿಕೊಳ್ಳುತ್ತಿರುವ ಚಿತ್ರರಂಗ, ಈಗ ತಾನೇ ಕಣ್ಣು ಬಿಟ್ಟು, ಒಂದೊಂದೇ ಬುಗ್ ಬಜೆಟ್ ಸಿನಿಮಾಗಳು ಮತ್ತು ಸ್ಟಾರ್ ನಟರ ಸಿನಿಮಾಗಳು ಬಿಡುಗಡೆ ಆಗುತ್ತಿದೆ. ಜನರು ಕೂಡ ಸಿನಿಮಾ ನೋಡಲು ಥಿಯೇಟರ್ ಗೆ ಬರುತ್ತಿದ್ದಾರೆ. ಆದರೆ ಮತ್ತೊಂದು ಕಡೆ 2020ರಲ್ಲಿ ಕೋವಿಡ್ ಶುರುವಾದಾಗಿನಿಂದಲೂ ಕನ್ನಡ ಚಿತ್ರರಂಗ ಸಾಕಷ್ಟು ಕಲಾವಿದರನ್ನು ಕಳೆದುಕೊಂಡಿದೆ, ಈಗಲೂ ಸಹ ಕಳೆದುಕೊಳ್ಳುತ್ತಿದೆ. ನಿನ್ನೆ ಸಂಜೆ ಕನ್ನಡ ಚಿತ್ರರಂಗದ ಖ್ಯಾತ ಹಿರಿಯನಟಿ ಪೋಷಕ ನಟಿ ಭಾರ್ಗವಿ ನಾರಾಯಣ್ ಅವರು ಈ ಪ್ರಪಂಚ ಬಿಟ್ಟು ಹೋಗಿದ್ದಾರೆ, ಇದು ನಿಜಕ್ಕೂ ಕನ್ನಡ ಚಿತ್ರರಂಗಕ್ಕೆ ನಷ್ಟ. ಈ ಹಿರಿಯನಟಿಯ ಮಕ್ಕಳು ಕೂಡ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ ಎಂದು ನಿಮಗೆ ಗೊತ್ತಾ? ಭಾರ್ಗವಿ ನಾರಾಯಣ್ ಅವರ ಬಗ್ಗೆ ತಿಳಿಸುತ್ತೇವೆ ನೋಡಿ…

ಭಾರ್ಗವಿ ನಾರಾಯಣ್ ಅವರು ಸುಮಾರು 5 ದಶಕಕ್ಕಿಂತ ಹೆಚ್ಚಿನ ಸಮಯದಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇವರು ಹುಟ್ಟಿದ್ದು 1938ರ ಫೆಬ್ರವರಿ 4ರಂದು, ಈಗ ಅವರಿಗೆ 84 ವರ್ಷ ವಯಸ್ಸಾಗಿತ್ತು. ಇತ್ತೀಚೆಗೆ 84ನೇ ವರ್ಷದ ಹುಟ್ಟುಹಬ್ಬವನ್ನು ಕೂಡ ಆಚರಿಸಿಕೊಂಡಿದ್ದರು. ಭಾರ್ಗವು ನಾರಾಯಣ್ ಅವರು ಚಿಕ್ಕ ವಯಸ್ಸಿನಲ್ಲೇ ನಟನೆ ಶುರು ಮಾಡಿದವರು, ಆಗಿನ ಕಾಲದಲ್ಲೇ ನಾಟಕ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದರು. ಪ್ರೊಫೆಸರ್ ಹುಚ್ಚುರಾಯ, ಪಲ್ಲವಿ ಸೇರಿದಂತೆ 60ರ ದಶಕದಲ್ಲಿ ತೆರೆಕಂಡ ಅನೇಕ ಕನ್ನಡ ಸಿನಿಮಾಗಳಲ್ಲಿ ಭಾರ್ಗವಿ ನಾರಾಯಣ್ ಅವರು ಅಭಿನಯಿಸಿದ್ದಾರೆ. ಇವರು ಮದುವೆಯಾಗಿದ್ದು ಕನ್ನಡ ಚಿತ್ರರಂಗದಲ್ಲಿ ಮೇಕಪ್ ನಾಣಿ ಎಂದು ಖ್ಯಾತರಾಗಿದ್ದವರ ಜೊತೆ..

ದಿವಂಗತ ಬೆಳವಾಡಿ ನಂಜುಂಡಯ್ಯ ನಾರಾಯಣ ಅವರೊಡನೆ ವಿವಾಹವಾದರು. ಭಾರ್ಗವಿ ನಾರಾಯಣ್ ಅವರು ಅದ್ಭುತವಾದ ಅಭಿನೇತ್ರಿ, ಯಾವುದೇ ಪಾತ್ರವನ್ನು ಕೊಟ್ಟರು ಸಲೀಸಾಗಿ ಅಭಿನಯಿಸುತ್ತಿದ್ದರು. ಪ್ರೊಫೆಸರ್ ಹುಚ್ಚುರಾಯ ಸಿನಿಮಾದ ಅಭಿನಯಕ್ಕೆ ಉತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿ ಗೆದ್ದಿದ್ದರು. ಆಗಿನಿಂದ ಈಗಿನವರೆಗೂ 650ಕ್ಕಿಂತ ಹೆಚ್ಬು ಸಿನಿಮಾಗಳಲ್ಲಿ ಭಾರ್ಗವಿ ನಾರಾಯಣ್ ಅವರು ಅಭಿನಯಿಸಿದ್ದಾರೆ. ಸಿನಿಮಾ ಮಾತ್ರವಲ್ಲದೆ ಕಿರುತೆರೆಯಲ್ಲಿ ಕೂಡ ಇವರು ಬಹಳ ಫೇಮಸ್. ಮುಕ್ತ ಮುಕ್ತ ಮತ್ತು ಇನ್ನಿತರ ಧಾರಾವಾಹಿಗಳಲ್ಲಿ ಘಾಟಿ ಅಜ್ಜಿ ಎಂದೇ ಫೇಮಸ್ ಆಗಿದ್ದರು. ಇವರ ಅಭಿನಯವನ್ನು ಯಾರು ಮರೆಯುವ ಹಾಗಿಲ್ಲ.

ಭಾರ್ಗವಿ ನಂಜುಂಡಯ್ಯ ದಂಪತಿಗೆ ನಾಲ್ವರು ಮಕ್ಕಳು, ಅವರಲ್ಲಿ ಇಬ್ಬರು ಮಕ್ಕಳು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಚಂದನಾವನದ ಅದ್ಭುತವಾದ ಪೋಷಕ ಕಲಾವಿದರಾದ ನಟ ಪ್ರಕಾಶ್ ಬೆಳವಾಡಿ ಮತ್ತು ನಟಿ ಸುಧಾ ಬೆಳವಾಡಿ ಇಬ್ಬರು ಕೂಡ ಭಾರ್ಗಗವಿ ನಾರಾಯಣ್ ಅವರ ಮಕ್ಕಳು. ಪ್ರಕಾಶ್ ಬೆಳವಾಡಿ ಅವರು ಎಂತಹ ಅದ್ಭುತವಾದ ಕಲಾವಿದ ಎಂದು ಕನ್ನಡಿಗರಿಗೆ ಮಾತ್ರವಲ್ಲ ಬೇರೆ ಭಾಷೆಯವರಿಗೂ ಗೊತ್ತಿದೆ. ಇವರ ನಟನೆ ಮೆಚ್ಚಿ ತೆಲುಗು, ತಮಿಳು ಮತ್ತು ಬೇರೆ ಭಾಷೆಯ ಚಿತ್ರರಂಗದವರು ಕೂಡ ಸ್ಟ್ರಾಂಗ್ ಆದ ಪಾತ್ರಗಳನ್ನು ಪ್ರಕಾಶ್ ಬೆಳವಾಡಿ ಅವರಿಗೆ ನೀಡಿದ್ದಾರೆ. ದಕ್ಷಿಣ ಭಾರತ ಚಿತ್ರರಂಗದ ಬಹುಬೇಡಿಕೆಯ ಕಲಾವಿದರಲ್ಲಿ ಇವರು ಒಬ್ಬರು. ಇತ್ತೀಚೆಗೆ ಪುನೀತ್ ರಾಜ್ ಕುಮಾರ್ ನಿರ್ಮಾಣದ ಒನ್ ಕಟ್ ಟು ಕಟ್ ಸಿನಿಮಾದಲ್ಲಿ ಪ್ರಕಾಶ್ ಬೆಳವಾಡಿ ಅವರು ಅಭಿನಯಿಸಿದ್ದಾರೆ.

ಸುಧಾ ಬೆಳವಾಡಿ ಅವರು ಕನ್ನಡ ಕಿರುತೆರೆ ಮತ್ತು ಬೆಳ್ಳಿತೆರೆ ವೀಕ್ಷಕರಿಗೆ ಚೆನ್ನಾಗಿಯೇ ಗೊತ್ತಿರುತ್ತಾರೆ. ಮುಂಗಾರು ಮಳೆ ಸಿನಿಮಾದಲ್ಲಿ ಮತ ಗಣೇಶ್ ಅವರಿಗೆ ತಾಯಿ ಪಾತ್ರದಲ್ಲಿ ನಟಿಸಿ ಎಲ್ಲರ ಮೆಚ್ಚಿನ ಅಮ್ಮ ಆದರು ಸುಧಾ ಬೆಳವಾಡಿ, ಅದಾದ ಬಳಿಕ ಕನ್ನಡ ಚಿತ್ರರಂಗದಲ್ಲಿ ಎಲ್ಲರ ಫೇವರೆಟ್ ಅಮ್ಮ. ಸ್ಯಾಂಡಲ್ ವುಡ್ ನ ಎಲ್ಲಾ ಕಲಾವಿದರಿಗೂ ಇವರು ಅಮ್ಮ ಆಗಿ ಅಭಿನಯಿಸಿದ್ದಾರೆ. ಸಿನಿಮಾ ಮಾತ್ರವಲ್ಲದೆ ತಾಯಿಯ ಹಾಗೆ ಸೀರಿಯಲ್ ನಲ್ಲಿ ಸಹ ತೊಡಗಿಸಿಕೊಂಡಿದ್ದಾರೆ ಸುಧಾ, ಅನೇಕ ಸೀರಿಯಲ್ ಗಳಲ್ಲಿ ಮುಖ್ಯಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಇವರು ಮಗಳು ಜಾನಕಿ ಸೀರಿಯಲ್ ನಲ್ಲಿ ಅಭಿನಯಿಸಿದ ಪಾತ್ರ ಎಲ್ಲರ ಮೆಚ್ಚುಗೆ ಪಡೆದಿತ್ತು. ಪ್ರಸ್ತುತ ಲಕ್ಷಣ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಸುಧಾ ಬೆಳವಾಡಿ ಅವರ ಮಗಳು ಸಂಯುಕ್ತ ಹೊರನಾಡ್ ಇವರು ಕೂಡ ಚಂದನವನದಲ್ಲಿ ನಾಯಕಿ ಆಗಿದ್ದಾರೆ.

ಭಾರ್ಗವಿ ನಾರಾಯಣ್ ಇಂತಹ ಅದ್ಭುತವಾದ ಕೊಡುಗೆಯನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ಇವರು ಒಬ್ಬ ನಟಿಯಷ್ಟೇ ಅಲ್ಲ, ಬರಹಗಾರ್ತಿ ಸಹ ಹೌದು, “ನಾನು ಭಾರ್ಗವಿ” ಎನ್ನುವ ಪುಸ್ತಕ ಬರೆದು, ಅದರಲ್ಲಿ ತಮ್ಮ ವೃತ್ತಿ ಜೀವನದ ಅನೇಕ ಘಟನೆಗಳನ್ನು ವಿವರಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ದೇಹದಲ್ಲಿ ಸೋಡಿಯಂ ಕೊರತೆ ಮತ್ತು ಮರೆವಿನ ಸಮಸ್ಯೆಯಿಂದ ಬಳಲುತ್ತಿದ್ದರು. ವೈದ್ಯರಿಂದ ಚಿಕಿತ್ಸೆಯನ್ನು ಕೊಡಿಸಲಾಗಿತ್ತು. ಆದರೆ ಭಾರ್ಗವಿ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗದೆ, ನಿನ್ನೆ ಸಂಜೆ 7:30ರ ಸಮಯಕ್ಕೆ ಮಲಗಿರುವಾಗಲೇ ಭಾರ್ಗವಿ ನಾರಾಯಣ್ ಅವರು ಇಹಲೋಕ ತ್ಯಜಿಸಿದ್ದಾರೆ. ಈ ದುಃಖದ ವಿಚಾರವನ್ನು ಅವರ ಮೊಮ್ಮಗಳು ಸಂಯುಕ್ತ ಸೋಷಿಯಲ್ ಮೀಡಿಯಾ ಮೂಲಕ ಎಲ್ಲರಿಗೂ ತಿಳಿಸಿದ್ದಾರೆ. ಹಿರಿಯನಟಿಯ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ದೇವರು ಧೈರ್ಯ ನೀಡಲಿ ಎಂದು ಪ್ರಾರ್ಥಿಸೋಣ.