ದುಡ್ಡು ಕೊಟ್ಟರೆ ಯಾರು ಬೇಕಾದರೂ ಬಿಗ್‌ ಬಾಸ್‌ ಸ್ಪರ್ಧಿಯಾಗಿ ಹೋಗಬಹುದಾ.. ಎಷ್ಟು ಹಣ ಕೊಡಬಬೇಕು ಗೊತ್ತಾ.. ಭಾಗವಹಿಸಲು ಇಚ್ಛಿಸುವ ಸಾಮಾನ್ಯ ಜನರಿಗೆ ವಾಹಿನಿಯಿಂದ ಅಧಿಕೃತ ಸೂಚನೆ..

ಬಿಗ್‌ ಬಾಸ್‌ ಕನ್ನಡ, ಕನ್ನಡ ಕಿರುತೆರೆಯಲ್ಲಿಅತಿದೊಡ್ಡ ರಿಯಾಲಿಟಿ ಶೋ ಎಂದು ಹೆಸರು ಮಾಡಿರುವ ಬಿಗ್‌ ಬಾಸ್‌ ಕನ್ನಡ ಅದೆಷ್ಟೇ ಟ್ರೋಲ್‌ ಆದರೂ ಸಹ ಆ ಶೋ ಮೇಲಿನ ಜನರ ಕುತೂಹಲ ಮಾತ್ರ ಕಡಿಮೆಯಾಗಿಲ್ಲ.. ಕಿಚ್ಚ ಸುದೀಪ್‌ ಅವರ ಸಾರಥ್ಯದಲ್ಲಿ ಮೂಡಿ ಬರುವ ಬಿಗ್‌ ಬಾಸ್‌ ನ ಹೊಸ ಸೇಸನ್‌ ಇನ್ನೇನು ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದ್ದು ಈ ಬಾರಿ ಓಟಿಟಿಯಲ್ಲಿಯೂ ಸೇಸನ್‌ ಒಂದು ಆರಂಭವಾಗಲಿದೆ ಎನ್ನುವ ಮಾತುಗಳು ಕೇಳಿ ಬಂದಿದೆ. ಇನ್ನು ಈ ಹಿಂದೆ ಕಲರ್ಸ್‌ ಕನ್ನಡ ವಾಹಿನಿ ಸೆಲಿಬ್ರೆಟಿಗಳ ಜೊತೆಗೆ ಸಾಮಾನ್ಯ ಜನರಿಗೂ ಸಹ ಬಿಗ್‌ ಬಾಸ್‌ ಮನೆಯೊಳಗೆ ಹೋಗಲು ಅವಕಾಶ ಮಾಡಿಕೊಟ್ಟಿತ್ತು..

ನಂತರದಲ್ಲಿ ರೇಟಿಂಗ್‌ ಕಾರಣದಿಂದ ಕೇವಲ ಸೆಲಿಬ್ರೆಟಿಗಳಿಗೆ ಮಾತ್ರವೇ ಅವಕಾಶ ಕೊಟ್ಟು ಸೇಸನ್‌ ಎಂಟನ್ನು ಪ್ರಸಾರ ಮಾಡಿ ಯಶಸ್ವಿಯೂ ಆಗಿತ್ತು.. ಆದರೆ ಈಗ ಮತ್ತೆ ಸಾಮಾನ್ಯ ಜನರಿಗೂಬಿಗ್‌ ಬಾಸ್‌ ಮನೆಯೊಳಗೆ ಹೋಗುವ ಅವಕಾಶ ಇದೆ ಎನ್ನುವ ಮಾತುಗಳು ಕೇಳಿ ಬಂದಿದೆ.. ಆದರೆ ಈ ಮಾತಿನ ಹಿಂದೆಯೇ ಬೇರೆ ಬೇರೆ ರೀತಿಯಲ್ಲಿ ಹಣ ಪಡೆಯುವ ಕೆಲಸ ನಡೆದಿದ್ದು ಸಾಮಾನ್ಯ ಜನರಿಂದ ಕೆಲವರು ಬಿಗ್‌ ಬಾಸ್‌ ಮನೆಯೊಳಗೆ ಹೋಗಲು ಅವಕಾಶ ನೀಡಲು ಹಣ ಪಡೆಯುತ್ತಿರುವ ವಿಚಾರ ಹೊರ ಬಂದಿದೆ.. ಅದೇ ಕಾರಣ್ಕೆ ಈಗ ವಾಹಿನಿ ಅಧಿಕೃತವಾಗಿ ಸೂಚನೆಯೊಂದನ್ನು ನೀಡಿದೆ..

ಹೌದು ಈ ಬಗ್ಗೆ ಸುದೀಪ್‌ ಅವರು ಮೊದಲು ಮಾತನಾಡಿದ್ದು ಉತ್ಸಾಹಕರ 8 ಸೀಸನ್‌ಗಳನ್ನು ಆಯೋಜಿಸಿದ ನಂತರ ಬಿಗ್ ಬಾಸ್ ಕನ್ನಡ ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದಿದೆ. ಈ ವರ್ಷ ಮೊಟ್ಟ ಮೊದಲನೆಯ ಒಟಿಟಿ ಆವೃತ್ತಿಯ ಮೂಲಕ ಮನರಂಜನೆಯಲ್ಲಿ ಕಥೆಗೆ ಟ್ವಿಸ್ಟ್ ತರಲು ಬಹಳ ಸಂತೋಷವಾಗುತ್ತಿದೆ. ನಾವು ವೂಟ್‍ನಲ್ಲಿ ಈ ಶೋ ಪ್ರದರ್ಶನಕ್ಕೆ ಸಜ್ಜಾಗಿದ್ದು, ವೀಕ್ಷಕರಿಗೆ ವಾರ ಪೂರತಿ ಇಪ್ಪತ್ತ ಆಲ್ಕು ಗಂಟೆಯೂ ಲೈವ್ ಆಕ್ಷನ್, ಆಸಕ್ತಿದಾಯಕ ಸಂವಹನಗಳು ಮತ್ತು ಪ್ಲಾಟ್ ಟ್ವಿಸ್ಟ್‌ಗಳನ್ನು ವೀಕ್ಷಕರಿಗೆ ತರಲು ಉತ್ಸುಕನಾಗಿದ್ದೇನೆ, ಇದು ನಮ್ಮ ವೀಕ್ಷಕರನ್ನು ಸೆಳೆಯುತ್ತದೆ ಎಂಬ ಭರವಸೆ ನನ್ನದು ಎಂದಿದ್ದಾರೆ..

ಅಷ್ಟೇ ಅಲ್ಲದೇ ಇತ್ತ ವಾಹಿನಿಯಿಂದಾಚೆಗೆ ಕೆಲವರು ಬಿಗ್‌ ಬಾಸ್‌ ಗೆ ಹೋಗಲು ಅವಕಾಶ ಹುಡುಕುತ್ತಿರುವ ಸಾಮಾಜಿಕ ಜಾಲತಾಣದ ಸ್ಟಾರ್‌ ಗಳಿಂದ ಹಣ ಪೀಕುವ ಕೆಲಸ ಮಾಡುತ್ತಿದ್ದು ಇದು ವಾಹಿನಿಗೆ ತಿಳಿದು ಬಂದಿದೆ.. ಅಷ್ಟೇ ಅಲ್ಲದೇ ದುಡ್ಡು ಕೊಟ್ಟರೆ ಯಾರು ಬೇಕಾದರೂ ಬಿಗ್‌ ಬಾಸ್‌ ಗೆ ಹೋಗಬಹುದಾ ಎನ್ನುವ ಮಾತು ಕೇಳಿ ಬರುತ್ತಿದ್ದ ಹಾಗೆ ವಾಹಿನಿ ಅಧಿಕೃತವಾಗಿ ಸೂಚನೆ ನೀಡಿದೆ.. ಹೌದು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನೀವು ಯಾರಿಗೂ ಹಣ ಕೊಡಬೇಕಾಗಿಲ್ಲ. ಸ್ಪರ್ಧಿಗಳನ್ನು ಆರಿಸುವ ಹೊಣೆಯನ್ನು ಕಲರ್ಸ್ ಕನ್ನಡವು ಯಾವುದೇ ಸಂಸ್ಥೆ ಅಥವಾ ವ್ಯಕ್ತಿಗೆ ವಹಿಸಿಲ್ಲ. ಕಲರ್ಸ್ ಕನ್ನಡ ತಂಡವೇ ನೇರವಾಗಿ ಸ್ಪರ್ಧಿಗಳನ್ನು ಆಯ್ಕೆ ಮಾಡುತ್ತದೆ. ಹಾಗಾಗಿ ಈ ಸಂಬಂಧ ಯಾವುದೇ ಆಡಿಶನ್ ನಡೆಸಲಾಗುತ್ತಿಲ್ಲ..

ಬಿಗ್ ಬಾಸ್ ಮನೆಗೆ ಕಳಿಸುವ ಭರವಸೆ ನೀಡಿ ಯಾರಾದರೂ ನಿಮ್ಮಿಂದ ಹಣ ಕೇಳಿದರೆ ತಕ್ಷಣ ಅಂಥವರ ವಿರುದ್ಧ ಪೊಲೀಸರಿಗೆ ದೂರು ಕೊಡಿ. ಪ್ರವೇಶ ಶುಲ್ಕ, ಠೇವಣಿ, ತರಬೇತಿ ಇಂಥ ಯಾವುದೇ ಹೆಸರಿನಲ್ಲೂ ನಾವು ಸ್ಪರ್ಧಿಗಳಿಂದ ಹಣ ಪಡೆಯುವುದಿಲ್ಲ ಎಂಬುದು ನೆನಪಿರಲಿ. ಬಿಗ್ ಬಾಸ್ ಕುರಿತ ಸರಿಯಾದ ಮಾಹಿತಿಗೆ ಕಲರ್ಸ್ ಕನ್ನಡ ವಾಹಿನಿ ಅಥವಾ ವೂಟ್‌ನ ಅಧಿಕೃತ ಸೋಶಿಯಲ್ ಮೀಡಿಯಾ ಹ್ಯಾಂಡಲ್‌ಗಳನ್ನು ಮಾತ್ರ ಪರಿಗಣಿಸಿ.. ಬಿಗ್ ಬಾಸ್ ಮನೆಗೆ ಕಳಿಸುವ ಭರವಸೆ ನೀಡಿ, ಯಾರಾದರೂ ನಿಮ್ಮಿಂದ ಹಣ ಕೇಳಿದರೆ ತಕ್ಷಣ ಅಂಥವರ ವಿರುದ್ಧ ಪೊಲೀಸರಿಗೆ ದೂರು ನೀಡಿ.. ಎಂದಿದ್ದಾರೆ..

ಓಂ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.. ಮಹರ್ಷಿ ರವೀಂದ್ರ ಭಟ್ ಗುರೂಜಿ.. 20 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 9620202225. ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ, ಅನಾರೋಗ್ಯ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9620202225