ಬಿಗ್ ಬಾಸ್ ಎಲಿಮಿನೇಷನ್ ಮುಕ್ತಾಯ. ಈ ವಾರ ಎಲಿಮಿನೇಟ್ ಆದ ಸ್ಪರ್ಧಿ ಇವರೇ ನೋಡಿ..

ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಎನಿಸಿಕೊಂಡಿರುವ ಬಿಗ್ ಬಾಸ್ ಸೀಸನ್ ಒಂಭತ್ತು ಅದಾಗಲೇ ನೋಡು ನೋಡುತ್ತಿದ್ದಂತೆ ಮೂರು ವಾರಗಳು ಕಳೆದಿದ್ದು‌.. ಇದೀಗ ಮೂರನೇ ವಾರದ ಎಲಿಮಿನೇಷನ್ ಕೂಡ ಮುಕ್ತಾಯವಾಗಿದೆ.. ಬಿಗ್ ಬಾಸ್ ಮನೆಯಿಂದ ಮೂರನೇ ವಾರ ಮತ್ತೊಬ್ಬ ಸ್ಪರ್ಧಿ ಹೊರ ನಡೆದದ್ದಾಗಿದೆ.. ಹೌದು ಬಿಗ್ ಬಾಸ್ ಸೀಸನ್ ಒಂಭತ್ತಕ್ಕೆ ಆಗಮಿಸಿದ ಸ್ಪರ್ಧಿಗಳಲ್ಲಿ ಮೊದಲಿಗೆ ಬೈಕ್ ರೈಡರ್ ಐಶ್ವರ್ಯ ಪಿಸ್ಸೆ ಮೊದಲವಾರವೇ ಎಲಿಮಿನೇಟ್ ಆಗಿ ಹೊರ ಹೋದರು..

ಇನ್ನು ಎರಡನೇ ವಾರ ಸಾಮಾಜಿಕ ಜಾಲತಾಣದಲ್ಲಿ ಕೊಂಚ ಅತಿರೇಕವಾಗಿಯೇ ತಮ್ಮದೇ ಶೈಲಿಯಲ್ಲಿ ಸಿನಿಮಾ ರೀವ್ಯೂವ್ ಕೊಟ್ಟು ಟ್ರೋಲ್ ಆಗಿ ಖ್ಯಾತಿ ಗಳಿಸಿ ಬಿಗ್ ಬಾಸ್ ಅವಕಾಶ ಪಡೆದಿದ್ದ ನವಾಜ್ ಬಿಗ್ ಬಾಸ್ ಮನೆಯಿಂದ ಹೊರ ಹೋದರು.. ಎರಡೇ ವರಾಕ್ಕೆ ತಮ್ಮ ಬಿಗ್ ಬಾಸ್ ಜರ್ನಿ ಮುಗಿದಿದ್ದರ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದ ನವಾಜ್ ತನ್ನ ತಂದೆಯ ಬಳಿಯೂ ವೇದಿಕೆಯ ಮೇಲೆ ಕ್ಷಮೆ ಕೇಳಿದ್ದರು.. ಇನ್ನು ಎಂದಿನಂತೆ ಸಿನಿಮಾ ರಿವ್ಯೂವ್ ಕೊಡ್ತೀನಿ ಎಂದು ಹೊರ ಬಂದರು..

ಇನ್ನು ಮೂರನೇ ವಾರದಲ್ಲಿ ಮನೆಯೊಳಗೆ ಚಿನ್ನದ ಟಾಸ್ಕ್ ಕೊಟ್ಟು ಸ್ಪರ್ಧಿಗಳನ್ನು ಚುರುಕುಗೊಳಿಸಿದ್ದ ಬಿಗ್ ಬಾಸ್ ಇದೀಗ ಎಲಿಮಿನೇಷನ್ ಇಟ್ಟು ಮತ್ತೊಬ್ಬ ಸ್ಪರ್ಧಿಯನ್ನು ಹೊರ ಕಳುಹಿಸಿದ್ದಾರೆ.. ಹೌದು ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ಮೂರನೇ ವಾರ ಅಮೂಲ್ಯ ಗೌಡ, ರೂಪೇಶ್ ರಾಜಣ್ಣ.. ದಿವ್ಯಾ ಉರುಡುಗ, ಪ್ರಶಾಂತ್ ಸಂಬರ್ಗಿ, ಮಯೂರಿ.. ಅನುಪಮಾ ಗೌಡ.. ದರ್ಶ್ ಚಂದ್ರಪ್ಪ.. ರೂಪೇಶ್ ಶೆಟ್ಟಿ ವಿನೋದ್ ಗೊಬ್ರಗಾಲ ಹೀಗೆ ಬಹಳಷ್ಟು ಜನರು ನಾಮಿನೇಟ್ ಆಗಿದ್ದರು.. ಕಳೆದ ವಾರ ಟಾಸ್ಕ್ ಚೆನ್ನಾಗಿ ಆಡಿದರೂ ಸಹ ವೀಕ್ಷಕ ಮಹಾಪ್ರಭುಗಳ ವೋಟ್ ನಿಂದಾಗಿ ಈ ವಾರ ಪ್ರಮುಖ ಸ್ಪರ್ಧಿಯೇ ಬಿಗ್ ಬಾಸ್ ಮನೆಯಿಂದ ಹೊರ ಹೋಗುವಂತಾಯಿತು..

ಹೌದು ಈ ವಾರ ವರಾದ ಕತೆಗೆ ಆಗಮಿಸಿದ ಕಿಚ್ಚ ಸುದೀಪ್ ಅವರು ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ನಡೆಸಿ ಕೆಲವರಿಗೆ ಕ್ಲಾಸ್ ತೆಗೆದುಕೊಂಡು ಕೊನೆಗೆ ಈ ವಾರದ ಎಲಿಮಿನೇಷನ್ ಕೂಡ ನಡೆಸಿ ಮನೆಯಿಂದ ಒಬ್ಬ ಸದಸ್ಯನನ್ನು ಹೊರ ಕಳುಹಿಸಿದರು.. ಆ ಸ್ಪರ್ಧಿ ಮತ್ಯಾರೂ ಅಲ್ಲ.. ಅದು ದರ್ಶ್ ಚಂದ್ರಪ್ಪ.. ಹೌದು ದರ್ಶ್ ಚಂದ್ರಪ್ಪ ಮೂರೇ ವಾರಕ್ಕೆ ತಮ್ಮ ಬಿಗ್ ಬಾಸ್ ಜರ್ನಿ ಮುಗಿಸಿ ಮನೆಯಿಂದ ಹೊರ ನಡೆದಿದ್ದಾರೆ.. ನೇರ ಮಾತುಗಳಿಂದ ಹೆಸರು ಮಾಡಿದರೂ ಸಹ ಕೆಲವೊನ್ಮೆ ಪ್ರಥಮ್ ನನ್ನು ಅನುಕರಣೆ ಮಾಡಲು ಹೋಗುತ್ತಿದ್ದಾರೆ ಎಂದು ಎದ್ದು ಕಾಣುತಿತ್ತು.. ಇನ್ನು ಇತ್ತ ಮೂರನೇ ವಾರದ ಟಾಸ್ಕ್ ಗಳಲ್ಲಿ ದರ್ಶ್ ಚಂದ್ರಪ್ಪ ಚೆನ್ನಾಗಿ ಆಡಿದರೂ ಸಹ ವೋಟಿಂಗ್ ಕಡಿಮೆಯಾದ ಕಾರಣ ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದಾರೆ..

ಹೌದು ಸೀತಾ ವಲ್ಲಭ ಹಾಗೂ ಇನ್ನೂ ಕೆಲ ಧಾರಾವಾಹಿಗಳಲ್ಲಿ ಮಿಂಚಿ ಕಿರುತೆರೆ ಕೋಟಾದಡಿಯಲ್ಲಿ ಬಿಗ್ ಬಾಸ್ ಮನೆಗೆ ಕಾಲಿಟ್ಟ ದರ್ಶ್ ಚಂದ್ರಪ್ಪ ಅವರು ಬಿಗ್ ಬಾಸ್ ಸೀಸನ್ ಒಂಭತ್ತರಲ್ಲಿ ಮೂರನೇ ವಾರದಲ್ಲಿ ಎಲಿಮಿನೇಟ್ ಆಗಿ ಮನೆಯಿಂದ ಹೊರ ನಡೆದಿದ್ದಾರೆ.. ಇನ್ನುಳಿದಂತೆ ರೂಪೇಶ್ ರಾಜಣ್ಣ.. ಪ್ರಶಾಂತ್ ಸಂಬರ್ಗಿ ದೀಪಿಕಾ ದಾಸ್ ಅಮೂಲ್ಯ ಗೌಡ ದಿವ್ಯಾ ಉರುಡುಗ ಸೇರಿದಂತೆ ಉಳಿದವರು ಸೇಫ್ ಆಗಿದ್ದು ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದಾರೆ..