ಮದುವೆಯ ಸಂಭ್ರಮದಲ್ಲಿ ಬಿಗ್ ಬಾಸ್ ಸೀಸನ್ 6 ವಿಜೇತ ಶಶಿ.. ಹುಡುಗಿ ಇವರೇ ನೋಡಿ..

ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸಾಕಷ್ಟು ಜನರ ಜೀವನವನ್ನು ಬದಲಾವಣೆ ಮಾಡಿದ್ದುಂಟು.. ಅಂತವರಲ್ಲಿ ಶಶಿ ಕೂಡ ಒಬ್ಬರು.. ಕೃಷಿ ವಿಜ್ಞಾನದಲ್ಲಿ ಪದವಿ ಪಡೆದಿದ್ದ ಶಶಿ ಮಾಡ್ರನ್ ರೈತ ಎಂದೇ ಹೆಸರು ಮಾಡಿದ್ದರು.. ಇದೇ ಕಾರಣಕ್ಕೆ ರೈತ ಎಂಬ ಗುರುತಿನಿಂದಲೇ ಬಿಗ್ ಬಾಸ್ ಸೀಸನ್ ಆರರಲ್ಲಿ ಭಾಗವಹಿಸಲು ಅವಕಾಶವನ್ನೂ ಪಡೆದುಕೊಂಡರು.. ಅಂತೆಯೇ ಬಿಗ್ ಬಾಸ್ ಗೆದ್ದು ಹೊರ ಬಂದ ಮಾಡ್ರನ್ ರೈತ ಶಶಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಸಂತೋಷದ ಸುದ್ದಿ ಹಂಚಿಕೊಂಡಿದ್ದಾರೆ..

ಹೌದು ಸೆಲಿಬ್ರೆಟಿಗಳ ಜೊತೆ ಸಾಮಾನ್ಯರಿಗೂ ಅವಕಾಶ ಕೊಡಬೇಕು ಎನ್ನುವ ನಿಟ್ಟಿನಲ್ಲಿ ಬಿಗ್ ಬಾಸ್ ಸೀಸನ್ ಆರರಲ್ಲಿ ಸಾಕಷ್ಟು ಕಾಮನ್ ಮ್ಯಾನ್ ಗಳಿಗೆ ಬಿಗ್ ಬಾಸ್ ಮನೆಗೆ ಹೋಗಲು ಅವಕಾಶ ನೀಡಲಾಗಿತ್ತು.. ಅದೇ ರೀತಿ ಶಶಿ ಕೂಡ ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದಿದ್ದರು.. ಅಲ್ಲಿ ಇದ್ದಷ್ಟು ದಿನಗಳ ಕಾಲವೂ ರೈತನಾಗಿಯೇ ಗುರುತಿಸಿಕೊಂಡ ಶಶಿ.. ಕಿರುತೆರೆಯ ನಟಿ ಕವಿತಾ ಗೌಡ ಅವರ ಜೊತೆ ಆತ್ಮೀಯವಾಗೂ ಇದ್ದರು.. ಈ ಜೋಡಿಗಳಿಗೆ ಇತ್ತ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಪುಟಗಳು ಹುಟ್ಟುಕೊಂಡದ್ದೂ ಉಂಟು..

ಆದರೆ ಅವರಿಬ್ಬರ ಆತ್ಮೀಯತೆ ಬಿಗ್ ಬಾಸ್ ಮನೆಗಷ್ಟೇ ಸೀಮಿತವಾಗಿ ಹೊರಬಂದ ಬಳಿಕ ತಮ್ಮ ತಮ್ಮ ಜೀವನ ತಮ್ಮದು ಎನ್ನುವಂತಾಯ್ತು.. ಅತ್ತ ಕಳೆದ ವರ್ಷ ಕವಿತಾ ಗೌಡ ಅವರು ಚಂದನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸಧ್ಯ ಹೊಸ ಮನೆ ಖರೀದಿಸಿ ಸಂತೋಷ ಹಂಚಿಕೊಂಡಿದ್ದರು..ಇತ್ತ ಇದೀಗ ಶಶಿ ಕುಮಾರ್ ಹೊಸ ಜೀವನಕ್ಕೆ ಕಾಲಿಡುವ ನಿರ್ಧಾರ ಮಾಡಿದ್ದಾರೆ.. ಹೌದು ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ಸಿನಿಮಾಗಳ ಅವಕಾಶ ಪಡೆದ ಶಶಿ ಕೆಲ ಸಿನಿಮಾಗಳಲ್ಲಿಯೂ ಸಹ ಅಭಿನಯಿಸುತ್ತಿದ್ದು ಆದರ ಜೊತೆಗೆ ತಮ್ಮ ತೋಟ ಕೃಷಿ ಕಾಯಕದಲ್ಲಿಯೂ ತೊಡಗಿಕೊಂಡಿದ್ದಾರೆ..

ಅದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿಯೂ ಬಹಳ ಆಕ್ಟೀವ್ ಇರುವ ಶಶಿ ಆಗಾಗ ಪ್ರಚಲಿತ ವಿಚಾರಗಳ ಬಗ್ಗೆ ವೀಡಿಯೋ ಮಾಡೋದು ಉಂಟು.. ಇನ್ನು ಇದೀಗ ಮದುವೆಯ ಹೊಸ ಹೆಜ್ಜೆಯ ಬಗ್ಗೆ ನಿರ್ಧರಿಸಿದ್ದು ಸಂತೋಷ ಹಂಚಿಕೊಂಡಿದ್ದಾರೆ.. ಹೌದು ಮಾರ್ಡನ್ ರೈತ ಶಶಿ ಕುಮಾರ್ ಅವರು ಚಿಕ್ಕಬಳ್ಳಾಪುರದ ಚಿಂತಾಮಣಿ ಮೂಲದವರು. ಬೆಂಗಳೂರಿನ ಜಿಕೆವಿಕೆ ಕೃಷಿ ವಿದ್ಯಾಲಯದಲ್ಲಿ ಶಶಿ ಕುಮಾರ್ ಪದವಿ ಪಡೆದಿದ್ದಾರೆ. ಕೃಷಿಯಲ್ಲಿ ನೂತನ ತಂತ್ರಜ್ಞಾನವನ್ನು ಅಳವಡಿಸುವುದರಲ್ಲಿ ಶಶಿ ಕುಮಾರ್ ಸದಾ ಮುಂದು.

ಶಶಿ ಕುಮಾರ್ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.. ಶಶಿ ಕುಮಾರ್ ಅವರ ಮದುವೆ ಮುಂದಿನ ತಿಂಗಳು.. ಅಂದ್ರೆ ಆಗಸ್ಟ್ 6 ಮತ್ತು 7 ರಂದು ಶಶಿ ಕುಮಾರ್ ಅವರ ವಿವಾಹ ಮಹೋತ್ಸವ ನಡೆಯಲಿದೆ ಎನ್ನಲಾಗಿದೆ.. ಮೂಲಗಳ ಪ್ರಕಾರ, ದೊಡ್ಡಬಳ್ಳಾಪುರ ಮೂಲದ ಸ್ವಾತಿ ಎಂಬುವರನ್ನು ಶಶಿ ಕುಮಾರ್ ಮದುವೆಯಾಗಲಿದ್ದಾರೆ. ಸ್ವಾತಿ ಅವರಿಗೂ ಕೃಷಿ ಕುಟುಂಬದ ಹಿನ್ನೆಲೆಯಿದೆ ಎನ್ನಲಾಗಿದೆ. ನೂತನ ಜೀವನಕ್ಕೆ ಕಾಲಿಡುತ್ತಿರುವ ಶಶಿಕುಮಾರ್ ಅವರಿಗೆ ಶುಭವಾಗಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಸ್ನೇಹಿತರು ಶುಭ ಹಾರೈಸಿದ್ದಾರೆ..

ಓಂ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.. ಮಹರ್ಷಿ ರವೀಂದ್ರ ಭಟ್ ಗುರೂಜಿ.. 20 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 9620202225. ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ, ಅನಾರೋಗ್ಯ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9620202225