ಬಿಗ್ ಬಾಸ್ ಮನೆಯಲ್ಲಿ ಸಾನ್ಯ ಅವತಾರ ನೋಡಿ ಬೆಚ್ಚಿಬಿದ್ದ ರೂಪೇಶ್ ರಾಜಣ್ಣ..

ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ ಒಂಭತ್ತು ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದು ಅದಾಗಲೇ ಮೂರು ವಾರಗಳು ಮುಕ್ತಾಯಗೊಂಡಿದೆ.. ನಾಲ್ಕನೇ ವಾರಕ್ಕೆ ಹದಿನೈದು ಸ್ಪರ್ಧಿಗಳು ಕಾಲಿಟ್ಟಿದ್ದು ಹೊಸ ಹುಮ್ಮಸ್ಸಿನೊಂದಿಗೆ ಒಂದಷ್ಟು ಪ್ಲಾನ್ ಮಾಡಿಕೊಂಡು ಮತ್ತಷ್ಟು ವಾರಗಳು ಬಿಗ್ ಬಾಸ್ ಮನೆಯಲ್ಲಿ ಉಳಿಯಲು ಯೋಜನೆ ಹಾಕುತ್ತಿದ್ದಾರೆ.. ಇತ್ತ ಮೂರನೇ ವಾರ ಬಿಗ್ ಬಾಸ್ ಮನೆಯಿಂದ ದರ್ಶ್ ಚಂದ್ರಪ್ಪ ಎಲಿಮಿನೇಟ್ ಆಗಿ ಹೊರ ಹೋದರೆ ಅತ್ತ ಉಳಿದ ಸ್ಪರ್ಧಿಗಳು ಹೇಗೋ ಸೇಫ್ ಆದೆವು ಎಂದು ನಿಟ್ಟುಸಿರು ಬಿಟ್ಟಿದ್ದಾರೆ.. ಮುಂದಿನ ವಾರವೂ ಉಳಿಯುವ ಸಲುವಾಗಿ ಒಬ್ಬೊಬ್ಬರು ಒಂದೊಂದು ರೀತಿಗ ಪ್ಲಾನ್ ಮಾಡುತ್ತಿರುವುದಂತೂ ಸತ್ಯ.. ಆದರೆ ಈ ನಡುವೆ ಸಾನ್ಯಾ ಅಯ್ಯರ್ ಬಿಗ್ ಬಾಸ್ ಮನೆಯೊಳಗೆ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದು ಮತ್ತೊಬ್ಬರ ಮನಸ್ಸಿನಲ್ಲಿ ಇದ್ದದ್ದನ್ನು ಇರೋ ಹಾಗೆ ಹೇಳುತ್ತಿದ್ದು ರೂಪೇಶ್ ರಾಜಣ್ಣ ಸಾನ್ಯ ನಡವಳಿಕೆ ಕಂಡು ಅಕ್ಷರಶಃ ಶಾಕ್ ಆದರೆ ಅತ್ತ ಪ್ರಶಾಂತ್ ಸಂಬರ್ಗಿ ಸಾನ್ಯಾ ಗೆ ಇರುವ ಶಕ್ತಿ ನೋಡಿ ಕಾಲಿಗೆ ಬಿದ್ದಿದ್ದಾರೆ..

ಹೌದು ಬಿಗ್ ಬಾಸ್ ಓಟಿಟಿಯಲ್ಲಿ ಅವಕಾಶ ಪಡೆದಿದ್ದ ಸಾನ್ಯಾ ಅಯ್ಯರ್ ಕೊನೆವರೆಗೂ ಇದ್ದು ಬಿಗ್ ಬಾಸ್ ಸೀಸನ್ ಒಂಭತ್ತಕ್ಕೂ ಅವಕಾಶ ಪಡೆದುಕೊಂಡರು.. ಇನ್ನು ಸದಾ ಕಾಲ ರೂಪೇಶ್ ಶೆಟ್ಟಿ ಅವರ ಜೊತೆಯೇ ಆತ್ಮೀಯವಾಗಿ ಕಾಣಿಸಿಕೊಂಡಿದ್ದ ಸಾನ್ಯ ಅಯ್ಯರ್ ಕಳೆದ ವಾರ ಕೊಂಚ ಅತಿರೇಕವಾಗಿಯೇ ನಡೆದುಕೊಂಡರು. ರೂಪೇಶ್ ಶೆಟ್ಟಿ ಹಾಗೂ ಸಾನ್ಯ ಅಯ್ಯರ್ ಅತಿಯಾದ ಆತ್ಮೀಯತೆಯ ಆಲಿಂಗನ ನೋಡುಗರಿಗೆ ಮುಜುಗರವನ್ನೂ ತಂದಿತ್ತು.. ಒಂದೇ ಬೆಡ್ ಮೇಲೆ ಆಲಿಂಗಿಸಿಕೊಂಡು ಮಲಗಿದ್ದ ರೀತಿ ಕೊಂಚ ಅತಿಯಾಗಿತ್ತು.. ಈ ಕಾರಣಕ್ಕೆ ವಾರದ ಕತೆಯಲ್ಲಿ ಕಿಚ್ಚ ಸುದೀಪ್ ಅವರು ರೂಪೇಶ್ ಶೆಟ್ಟಿ ಹಾಗೂ ಸಾನ್ಯ ಅಯ್ಯರ್ ಗೆ ಮಂಗಳಾರತಿ ಮಾಡಿದ್ದು ಖಡಕ್ ಆಗಿ ನೀವು ನಡೆದುಕೊಂಡ ರೀತಿ ತಪ್ಪು..

ನೀವು ಮಾಡೋ ಆ ಕೆಲಸಕ್ಕಲ್ಲ ಈ ಮನೆ.. ನಿಮ್ಮಿಂದ ಅಂದರೆ ನೀವು ಆ ರೀತಿ ನಡೆದುಕೊಳ್ಳೋದ್ರಿಂದ ನಮಗೆ ಕಂಟೆಂಟ್ ಸಿಗುತ್ತಿದೆ ಎಂದರೆ ಅದು ತಪ್ಪು.. ಈ ಮನೆಗೆ ಒಂದು ಗೌರವ ಇದೆ.. ಮಧ್ಯ ರಾತ್ರಿ ಎದ್ದು ಬಂದು ಹಗ್ ಮಾಡಿಕೊಳ್ತೀರಾ ಅದನ್ನು ನಾವು ತಪ್ಪು ಎಂದಿಲ್ಲ.. ಆದರೆ ಆ ದಿನ ಕ್ಯಾಪ್ಟನ್ ರೂಮಿನಲ್ಲಿ ಮಲಗಿದ್ದ ರೀತಿ ತಪ್ಪು ಎಂದು ಗರಂ ಆಗಿದ್ದರು.. ಮೊದ ಮೊದಲು ನಮ್ಮ ಉದ್ದೇಶ ಆ ರೀತಿ ಇಲ್ಲ ಎಂದು ಸ್ಪಷ್ಟನೆ ನೀಡಲು ರೂಪೇಶ್ ಶೆಟ್ಟಿ ಮುಂದಾದರೂ ಸಹ ಕೊನೆಗೆ ತಾವು ಇದ್ದ ರೀತಿಗೆ ಕ್ಷಮೆ ಕೇಳಿ ಮುಂದೆ ಆ ರೀತಿ ಮಾಡೋದಿಲ್ಲ ಎಂದರು..

ಇನ್ನು ಇತ್ತ ಸಾನ್ಯ ಅಯ್ಯರ್ ಗೆ ಮಾತ್ರ ಯಾವುದೇ ರೀತಿಯ ಪಶ್ಚತ್ತಾಪ ಆದಂತೆ ಕಾಣಲಿಲ್ಲ.. ಅಷ್ಟೆಲ್ಲಾ ಬೈಗುಳಗಳನ್ನು ಕೇಳಿದರೂ ಸಹ ಯಾವುದೇ ಕೊರಗಿಲ್ಲದೇ ಐದು ನಿಮಿಷದ ಬಳಿಕ ಮತ್ತೆ ಮೊದಲಿನಂತಾದರು.. ಇನ್ನು ನಾಲ್ಕನೇ ವಾರ ಶುರುವಾಗುತ್ತಿದ್ದಂತೆ ಬಿಗ್ ಬಾಸ್ ಮನೆಯಲ್ಲಿ ಸಾನ್ಯ ಅಯ್ಯರ್ ಹೊಸ ಅವತಾರ ಶುರುವಾಗಿದೆ.. ಹೌದು ಸಾನ್ಯ ಅಯ್ಯರ್ ಕಣ್ಣು ಮುಚ್ಚಿಕೊಂಡು ದೇವಿಯ ರೀತಿ ಕೂತು ನನಗೆ ಏನೋ ಆಗ್ತಿದೆ.. ಏನೋ ಶಕ್ತಿ ಇದೆ.. ನನಗೆ ನಿಮ್ಮೆಲ್ಲರ ಮನಸ್ಸಿನಲ್ಲಿ ಇರೋದೆಲ್ಲಾ ಗೊತ್ತಾಗುತ್ತಿದೆ ಎಂದಿದ್ದು ಇದನ್ನು ಪರೀಕ್ಷಿಸಲು ಪ್ರಶಾಂತ್ ಸಂಬರ್ಗಿ ಮುಂದಾದರು.. ಪಕ್ಕದಲ್ಲಿ ರೂಪೇಶ್ ರಾಜಣ್ಣ ಅವರನ್ನು ಕೂರಿಸಿಕೊಂಡು ನಮ್ಮ ಮನಸ್ಸಿನಲ್ಲಿ ಒಂದು ವಸ್ತುವನ್ನು ನೆನಪಿಸಿಕೊಂಡೆವು ಅದು ಏನು ಎಂದು ಕೇಳಿದರು..

ತಕ್ಷಣ ಆ ವಸ್ತು ಹೆಸರನ್ನು ಹೇಳಿದ್ದು ಮೂರ್ನಾಲ್ಕು ಬಾರಿ ಇದೇ ಪ್ರಯತ್ನ ಮಾಡಿ ಸಾನ್ಯಾ ಅಯ್ಯರ್ ಪ್ರಶಾಂತ್ ಸಂಬರ್ಗಿ ಮನಸಿನಲ್ಲಿದ್ದ ಎಲ್ಲಾ ವಸ್ತುಗಳನ್ನು ಗುರುತಿಸಿದರು.. ರೂಪೇಶ್ ರಾಜಣ್ಣ ಅವರಂತೂ ಸಾನ್ಯಾ ಅಯ್ಯರ್ ನ ಅವತಾರ ನೋಡಿ ಸಂಪೂರ್ಣ ಶಾಕ್ ಗೆ ಒಳಗಾದರು.‌. ಅಷ್ಟೇ ಅಲ್ಲದೇ ಮನೆಯಲ್ಲಿದ್ದ ದೇವರ ಮೂರ್ತಿ ಬಳಿ ಹೋಗಿ ಕೈ ಮುಗಿದು ಆ ಹುಡುಗಿಗೆ ಏನ್ ಶಕ್ತಿ ಇದೆ.. ನನಗಂತೂ ಶಾಕ್ ಆಗಿದೆ ಎಂದರು.. ಇತ್ತ ಪ್ರಶಾಂತ್ ಸಂಬರ್ಗಿ ಅವರೂ ಸಹ ಸಾನ್ಯ ಅಯ್ಯರ್ ನ ಕಾಲಿಗೆ ಬಿದ್ದರು.. ಏನಮ್ಮ ನಿನ್ನ ಶಕ್ತಿ ಎಂದರು..

ಆದರೆ ಇಲ್ಲಿ ಅಸಲಿಗೆ ನಿಜಕ್ಕೂ ಆಗಿರೋದೆ ಬೇರೆ.. ಹೌದು ಮನೆಯಲ್ಲಿ ಮೊದಲಿನಿಂದಲೂ ರಾಕೇಶ್ ಅಡಿಗ ಪ್ರಾಂಕ್ ಮಾಡೋದು ಎಲ್ಲರಿಗೂ ತಿಳಿದೇ ಇದೆ.. ಆದರೆ ಕಳೆದ ಕೆಲವೊಣ್ದು ಬಾರಿ ರಾಕೇಶ್ ಅಡಿಗ ಅವರ ಪ್ರಾಂಕ್ ನಿಂದಾಗಿ ಮನೆಯಲ್ಲಿ ದೊಡ್ಡ ಅಸಮಾಧಾನ ಬೇಸರ ಎಲ್ಲವೂ ಉಂಟಾಗಿತ್ತು.. ಅದರಿಂದಾಗಿ ರಾಕೇಶ್ ಅಡಿಗಾಗೆ ಕಳಪೆ ಬೋರ್ಡ್ ಕೂಡ ಸಿಕ್ಕಿತ್ತು.. ಅದೇ ಕಾರಣಕ್ಕಾಗಿ ರಾಕೇಶ್ ಅಡಿಗ ಪ್ರಾಂಕ್ ಮಾಡೋದನ್ನು ನಿಲ್ಲಿಸಿದರು.. ಆದರೆ ಈ ವಾರ ಶುರುವಾಗುತ್ತಿದ್ದಂತೆ ಮನರಂಜನೆಗಾಗಿ ಖುದ್ದು ಪ್ರಶಾಂತ್ ಸಂಬರ್ಗಿ ಹಾಗೂ ಸಾನ್ಯ ಅಯ್ಯರ್ ಸೇರಿಕೊಂಡು ರೂಪೇಶ್ ರಾಜಣ್ಣ ಅವರನ್ನು ಪ್ರಾಂಕ್ ಮಾಡಲು ಮುಂದಾದರು.. ಆಗಲೇ ಪ್ರಶಾಂತ್ ಸಂಬರ್ಗಿ ಹಾಗೂ ಸಾನ್ಯ ಅಯ್ಯರ್ ಪ್ಲಾನ್ ಮಾಡಿಕೊಂಡು ನಾನು ಮನಸ್ಸಿನಲ್ಲಿ ವಸ್ತುಗಳನ್ನು ನೆನಪಿಸಿಕೊಳ್ಳುತ್ತೇನೆ..

ಮೂರನೇ ಆಪ್ಶನ್ ನಲ್ಲಿ ಆ ವಸ್ತು ಇರುತ್ತದೆ ಎಂದು ಮೊದಲೇ ತಿಳಿಸಿ ರೂಪೇಶ್ ರಾಜಣ್ಣ ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಆ ವಸ್ತುಗಳನ್ನು ಹೇಳುತ್ತಾ ಹೋದರು.. ಆಗ ಮೂರನೇ ವಸ್ತುವಿಗೆ ಇದೇ ವಸ್ತು ನೀವು ನೆನಪಿಸಿಕೊಂಡದ್ದು ಎಂದು ಉತ್ತರ ನೀಡಿದ ಸಾನ್ಯಾ ಅಯ್ಯರ್ ಕಂಡು ರೂಪೇಶ್ ರಾಜಣ್ಣ ಅವರು ಶಾಕ್ ಆಗಿ ದೇವರ ಬಳಿ ಹೋಗಿ ಕೈ ಮುಗಿದಿದ್ದೂ ಆಯಿತು.. ಅತ್ತ ಪ್ರಶಾಂತ್ ಸಂಬರ್ಗಿ ಅವರು ರೂಪೇಶ್ ರಾಜಣ್ಣ ಅವರನ್ನು ನಂಬಿಸಲು ಸಾನ್ಯಾ ಅಯ್ಯರ್ ಅವರ ಕಾಲಿಗೆ ಬಿದ್ದದ್ದೂ ಉಂಟು.. ಒಟ್ಟಿನಲ್ಲಿ ಬಿಗ್ ಬಾಸ್ ಮನೆಯಲ್ಲಿ ಮತ್ತಷ್ಟು ದಿನಗಳ ಕಾಲ ಉಳಿಯುವ ಸಲುವಾಗಿ ಪ್ರಾಂಕ್ ಮೂಲಕ ಮನರಂಜನೆ ನೀಡಲು ಮುಂದಾಗಿದ್ದು ಈ ವಾರ ಸಾನ್ಯ ಅಯ್ಯರ್ ರೂಪೇಶ್ ಶೆಟ್ಟಿ ಮನೆಯಲ್ಲಿ ದೂರವಿದ್ದರೂ ಆಶ್ಚರ್ಯ ಪಡಬೇಕಿಲ್ಲ..

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಭಟ್, ಶ್ರೀ ಅಂಬಾ ಭವಾನಿ ದೈವ ಶಕ್ತಿ ಜ್ಯೋತಿಷ್ಯರು.. ಮೊ.9845642321 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ‌ ಉಲ್ಭಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಡುತ್ತಾರೆ.. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ.. ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ.. 9845642321 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ತೊಂದರೆ ಪ್ರೀತಿಯಲ್ಲಿ ನಂಬಿ ಮೋಸ.. ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ವಿಚಾರ ಜನರ ದೃಷ್ಟಿಯಿಂದ ಮನೆಯಲ್ಲಿ ಆಗುವ ತೊಂದರೆ ಹಣಕಾಸಿನ ತೊಂದರೆ ಸ್ತ್ರೀ ಪುರುಷ ವಶೀಕರಣ ಇನ್ನೂ ಅನೇಕ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಗಳಿಗೆ ಶಾಶ್ವತ ಪರಿಹಾರ ಪಡೆದುಕೊಳ್ಳಿ.. 9845642321