ಇಬ್ಬರು ಹುಡುಗರು ಹಾಗೂ ಮಲತಂದೆ ತನ್ನ ಜೊತೆ ಮಾಡಿದ ಕೆಲಸ ಬಿಚ್ಚಿಟ್ಟ ಪುಟ್ಟ ಗೌರಿ ಮದುವೆ ಧಾರಾವಾಹಿಯ ಸಾನ್ಯಾ ಅಯ್ಯರ್.. ನಿಜಕ್ಕೂ ಮನಕಲಕುತ್ತದೆ..

ಜೀವನದಲ್ಲಿ ಯಾರಿಗೆ ತಾನೇ ನೋವಿಲ್ಲ.. ಸಾಮಾನ್ಯರಾದ ನಾವುಗಳು ನಮ್ಮ ನೋವುಗಳನ್ನು ನೆನೆದು ದೂರದಲ್ಲಿನ ಸೆಲಿಬ್ರೆಟಿಗಳು ಕಲಾವಿದರುಗಳು ಸ್ಟಾರ್ ಗಳ ಜೀವನ ಎಷ್ಟು ಚೆಂದ.. ಕೈ ತುಂಬಾ ಹಣ ಇರುತ್ತದೆ.. ಎಲ್ಲರೂ ಪ್ರೀತಿಸುತ್ತಾರೆ.. ಅವರಿಗೇನು ಕಡಿಮೆ ಎನ್ನುತ್ತೇವೆ.. ಆದರೆ ಅವರುಗಳು ತೆರೆ ಮೇಲೆ ನಗು ಮುಖದಿ ಕಂಡರೂ ಸಹ ಅವರ ನಿಜ ಜೀವನದಲ್ಲಿ ಸಾಕಷ್ಟು ನೋವುಗಳನ್ನು ಅನುಭವಿಸುತ್ತಿರುತ್ತಾರೆ.. ಅದೇ ರೀತಿ ನೋವು ಅನುಭವಿಸಿ ಇಬ್ಬರು ಹುಡುಗರನ್ನು ಪ್ರೀತಿಸಿದರೂ ಕೊನೆಗೆ ಸಾನ್ಯಾ ಗೆ ಆದ ಗತಿ ನಿಜಕ್ಕೂ ಬೇಸರವಾಗುತ್ತದೆ.. ಹೌದು ಕನ್ನಡ ಕಿರುತೆರೆಯಲ್ಲಿ ಪುಟ್ಟ ಗೌರಿ ಮದುವೆ ನಿಜಕ್ಕೂ ದಾಖಲೆ ಬರೆದ ಧಾರಾವಾಹಿಯಾಗಿತ್ತು.. ಸಾಕಷ್ಟು ವರ್ಷಗಳ ಹಿಂದೆ ಶುರುವಾದ ಧಾರಾವಾಹಿ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು.. ಆ ಧಾರಾವಾಹಿಗೆ ಮೊದಲು ಜೀವ ತುಂಬಿದ್ದು ಗೌರಿ ಹಾಗೂ ಮಹೇಶ ಪಾತ್ರದ ಬಾಲ ಕಲಾವಿದರು.. ಆ ಪುಟ್ಟ ಕಲಾವಿದೆ ಬಾಲ ಗೌರಿಯೇ ಈ ಸಾನ್ಯ ಅಯ್ಯರ್.. ಆ ಧಾರಾವಾಹಿಯಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿ ಬದುಕು ಕಟ್ಟಿಕೊಂಡ ರೀತಿಯಲ್ಲಿಯೇ ಸಾನ್ಯಾ ಅಯ್ಯರ್ ನ ನಿಜ ಬದುಕಿನಲ್ಲಿ ಸಾಕಷ್ಟು ಸವಾಲುಗಳು ಎದುರಾಗಿತ್ತು..

ಸಧ್ಯ ಇದೀಗ ಬಿಗ್ ಬಾಸ್ ಮನೆಗೆ ಬಂದಿರುವ ಸಾನ್ಯ ಅಯ್ಯರ್ ತನ್ನ ಜೀವನದ ನೋವಿನ ಕತೆಯನ್ನು ಬಿಚ್ಚಿಟ್ಟಿದ್ದಾರೆ.. ಹೌದು ಇಬ್ಬರು ಹುಡುಗರು ಹಾಗೂ ತನ್ನ ಮಲತಂದೆ ತನ್ನ ಜೊತೆ ನಡೆದುಕೊಂಡ ರೀತಿಯ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.. ನಿಜಕ್ಕೂ ಆಕೆಯ ಕತೆ ಮನಕಲಕುತ್ತದೆ.. ಹೌದು ಕಿರುತೆರೆಯಲ್ಲಿ ಮೊದಲ ಬಾರಿಗೆ ಬಿಗ್ ಬಾಸ್ ಓಟಿಟಿ ಶೋ ಆರಂಭವಾಗಿದ್ದು ಮೊದಲ ಸೀಸನ್ ಗೆ ಸ್ಪರ್ಧಿಗಳಾಗಿ ಆರ್ಯವರ್ಧನ್ ಗುರೂಜಿ.. ಸೋನು ಗೌಡ.. ರಾಕೇಶ್ ಅಡಿಗ.. ಸೋಮಣ್ಣ ಮಾವಿಮಾಡ.. ಚೈತ್ರ ಹಳ್ಳಿಕೇರಿ.. ಸಾನ್ಯ ಅಯ್ಯರ್.. ನಂದೂ.. ಹೀಗೆ ಒಟ್ಟು ಹದಿನಾರು ಮಂದಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದು ಮೊದಲ ದಿನ ತಮ್ಮ ಬದುಕಿನ ಪರಿಚಯವನ್ನು ಬಿಗ್ ಬಾಸ್ ಮನೆಯೊಳಗಿನ ಮಂದಿ ಹಾಗೂ ಪ್ರೇಕ್ಷಕರ ಜೊತೆ ಹಂಚಿಕೊಂಡಿದ್ದಾರೆ..

ಅದರಲ್ಲೂ ಒಬ್ಬೊಬ್ಬರ ಕತೆ ಒಂದೊಂದು ರೀತಿ ಎನ್ನುವಂತೆ ಪ್ರತಿಯೊಬ್ಬರ ಜೀವನದಲ್ಲಿಯೂ ಸಹ ಸಾಕಷ್ಟು ನೋವಿನ ಘಟನೆಗಳು ನಡೆದಿದ್ದು ಎಲ್ಲವನ್ನು ಮನಬಿಚ್ವಿ ಹಂಚಿಕೊಂಡಿದ್ದಾರೆ.. ಇನ್ನು ಸಾನ್ಯಾ ಅಯ್ಯರ್ ಮಾತನಾಡುವಾಗ ಅಲ್ಲಿದ್ದ ಎಲ್ಲರೂ ಕಣ್ಣೀರಿಟ್ಟರು.. ಹೌದು ಮಾತು ಶುರು ಮಾಡಿದ ಸಾನ್ಯ ಅಯ್ಯರ್ ಮೊದಲಿಗೆ ತನ್ನ ಅಮ್ಮ ಹಾಗೂ ಚಿಕ್ಕಮ್ಮನ ಕ್ಷಮೆ ಕೇಳುತ್ತಲೇ ಮಾತು ಶುರು ಮಾಡಿದರು..

ಕ್ಷಮಿಸಿ ಅಮ್ಮ ಚಿಕ್ಕಮ್ಮ.. ನಾನು ಇಲ್ಲಿ ಈಗ ನಿಮ್ಮ ಜೀವನದ ಬಗ್ಗೆಯೂ ಮಾತನಾಡಲೇ ಬೇಕಿದೆ.. ನನ್ನನ್ನು ಕ್ಷಮಿಸಿ.. ನಮ್ಮ ಚಿಕ್ಕಮ್ಮನ ಮನೆಯಲ್ಲಿ ನಾನು ಬಹಳಷ್ಟು ವರ್ಷ ಇದ್ದೆ.. ನಮ್ಮ ಚಿಕ್ಕಮ್ಮನ ಮೇಲೆ ಪ್ರತಿದಿನ ಅವರ ಗಂಡ ಕೈ ಮಾಡುತ್ತಿದ್ದರು.. ನಾನು ಪ್ರತಿದಿನ ಬರಿ ಜಗಳಗಳನ್ನೇ ನೋಡಿ ಬದುಕಿದೆ.. ಆಗ ಬಹುಶಃ ಇದು ಸಾಮಾನ್ಯ ನಾವೇ ಹೊಂದಿಕೊಂಡು ಬದುಕಬೇಕೇನೋ ಎಂದುಕೊಂಡೆ.. ನಂತರದಲ್ಲಿ ನಮ್ಮ ತಾಯಿಗೆ ಎರಡು ಬಾರಿ ಡಿವೋರ್ಸ್ ಆಗಿದೆ.. ನನ್ನನ್ನು ಹುಟ್ಟಿಸಿದ ತಂದೆ ಚಿಕ್ಕ ವಯಸ್ಸಿನಲ್ಲಿಯೇ ದೂರ ಆಗಿದ್ರು.. ಅವರ ಜೊತೆ ನನಗೆ ಹೆಚ್ಚು ಕನೆಕ್ಷನ್ ಇಲ್ಲ.. ಇನ್ನು ಅಮ್ಮನ ಸ್ನೇಹಿತರೊಬ್ಬರು ಅಮ್ಮನನ್ನು ಮದುವೆಯಾದರು.. ನಾನು ಅವರನ್ನಿ ಬಹಳ ಇಷ್ಟ ಪಡುತ್ತಿದ್ದೆ.. ಅಪ್ಪ ಎಂದೇ ಕರೆಯುತ್ತಿದ್ದೆ.. ಆದರೆ ಅಮ್ಮನಿಗೆ ನಂತರ ಗೊತ್ತಾಯಿತು.. ಅವರು ಸ್ನೇಹಿತನಾಗಿದ್ದಾಗ ಓಕೆ.. ಆದರೆ ಪಾರ್ಟನರ್ ಆಗಲು ತಪ್ಪು ಆಯ್ಕೆ ನನ್ನದು ಎಂದುಕೊಂಡರು..

ಇತ್ತ ಯಾರ ಪ್ರೀತಿಯೂ ಇಲ್ಲದೇ ಬೆಳೆದ ನನಗೆ ಯಾರಾದರೂ ಒಬ್ಬ ಹುಡುಗನ ಪ್ರೀತಿ ಕಾಳಜಿ ಬೇಕು ಎನಿಸಿತು.. ಆಗ ನಾನು ಒಬ್ಬನ ಜೊತೆ ರಿಲೇಶನ್ ಶಿಪ್ ನಲ್ಲಿದ್ದೆ.. ಆದರೆ ಆತ ನನಗೆ ಪ್ರತಿದಿನ ಬಹಳ ನೋವು ಕೊಡುತ್ತಿದ್ದ.. ಬಾಟಲ್ ಬಿಸಾಕ್ದ.. ಅವನ ಕಾಲ ಬಳಿ ಕೂತು ಅವನನ್ನು ಕ್ಷಮೆ ಕೇಳಿದೆ.. ನನಗೆ ಕೈ ಮಾಡಿದ.. ಆದರೆ ನಾನು ಅದೆಲ್ಲವನ್ನೂ ಸಹಿಸಿಕೊಂಡೆ ನಮ್ಮ ಸಂಬಂಧವನ್ನು ಉಳಿಸಿಕೊಳ್ಳುವ ಸಲುವಾಗಿ ನಾನು ಸಾಕಷ್ಟು ಪ್ರಯತ್ನ ಪಟ್ಟೆ.. ನಾನು ಒಂದು ವರ್ಷದ ಮಗುವಿದ್ದಾಗಿನಿಂದಲೂ ಅಭಿನಯಿಸುತ್ತಿದ್ದೆ.. ಆದರೆ ಅವನಿಗಾಗಿ ನಾನು ನನ್ನ ಕೆರಿಯರ್ ಕೂಡ ಬಿಟ್ಟೆ.. ಪರವಾಗಿಲ್ಲ.. ನನಗೆ ನನ್ನ ಹುಡುಗ ಇದ್ದಾನೆ ಎಂದುಕೊಂಡು ಸುಮ್ಮನಾದೆ.. ಆದರೆ ನಾನು ಯಾರಾದರೂ ನನ್ನ ಹಳೆ ಧಾರಾವಾಹಿ ಅಥವಾ ಆಲ್ಬಂ ನಟನ ಬಗ್ಗೆ ಮಾತನಾಡಿದರೂ ಸಹ ಅನುಮಾನ ಪಡಲು ಆರಂಭಿಸಿದ ಆಗ ನಮ್ಮ ನಡುವೆ ಬ್ರೇಕಪ್ ಆಯಿತು..

ನಂತರ ಮತ್ತೊಬ್ಬ ಹುಡುಗನ ಜೊತೆ ರಿಲೇಶನ್ ಶಿಪ್ ನಲ್ಲಿದ್ದೆ.. ಆದರೆ ಆತ ತಾನು ಪ್ರೀತಿಸಿದ್ದ ಇನ್ನೊಂದು ಹುಡುಗಿಯ ಜೊತೆಯೂ ಸಂಬಂಧದಲ್ಲಿದ್ದ.. ಆಗ ಅವನಿಂದ ದೂರವಾದೆ.. ನಂತರ ನನಗೆ ಯಾರು ಬೇಡ.. ನಾನೊಬ್ಬಳೆ ಸಾಕು ಎಂದುಕೊಂಡು ಸ್ವತಂತ್ರವಾಗಿ ಬದುಕುತ್ತಿದ್ದೇನೆ.. ನನಗೆ ಈಗ ಮುಖ್ಯ ನನ್ನ ವೃತ್ತಿ ಜೀವನ.. ಬರೀ ಜಗಳವನ್ನೇ ನೋಡಿದ ನನಗೆ ಇದೂ ಕೂಡ ನೋವು ಕೊಟ್ಟಿತು.. ಎಮೋಷನಲಿ ಒಬ್ರು ಜೊತೆಗಿರ್ತಾರೆ ಅನ್ನೋ ನಂಬಿಕೆಯಿಂದ ಇಬ್ಬರ ಜೊತೆ ರಿಲೇಶನ್ ಶಿಪ್ ನಲ್ಲಿದ್ದೆ.. ಆದರೆ ಎರಡೂ ಕೂಡ ಹಾಗಾಯ್ತು..

ಎರಡೂ ಸಂಬಂಧ ಹದಗೆಟ್ಟಿತ್ತು.. ನಂತರ ನಾನು ಚಿಕಿತ್ಸೆ ಪಡೆದು ಎಲ್ಲಾ ನೋವಿಂದ ಹೊರ ಬಂದೆ.. ನನ್ನ ತಾಯಿ ಇಬ್ಬರ ಜೊತೆ ಮದುವೆಯಾಗಿದ್ರು.. ನನ್ನ ತಂದೆ ಜೊತೆ ಸಂಬಂಧ ಕಳೆದುಕೊಂಡೆ.. ಮಲತಂದೆ ನನ್ನ ತಾಯಿಗೆ ಫ್ರೆಂಡ್ ಆಗಿದ್ರು.. ನನ್ನ ಜೊತೆಯೂ ಮಗಳಂತೆ ಕಾಣುತ್ತಿದ್ದರು.. ಸ್ನೇಹಿತನಾಗಿ ಅವರು ಓಕೆ.. ಆದರೆ ಪಾರ್ಟನರ್ ಆಗಿ ನಾಟ್ ಓಕೆ.. ಅವರು ನನ್ನ ತಾಯಿಯ ಜೊತೆ ಉಳಿಯೋದಕ್ಕೆ ನನ್ನ ಹೆಸರನ್ನು ಕೆಡಿಸಿದ್ರು.. ನನ್ನ ಮಲತಂದೆ ನನ್ನ ಬಗ್ಗೆ ಬಹಳ ಚೀಪ್ ಆಗಿ ವೀಡಿಯೋ ತೆಗೆದು ನಮ್ಮ ಅಜ್ಜಿಗೆ ತೋರಿಸ್ತಾರೆ.. ನಮ್ಮ ಚಿಕ್ಕಮ್ಮಂದಿರಿಗೆ ತೋರಿಸ್ತಾರೆ.. ನಾನು ರೂಮ್ ನಲ್ಲಿ ನನ್ನ ಹುಡುಗನ ಜೊತೆ ಕ್ಲೋಸ್ ಆಗಿ ಇದ್ದದ್ದನ್ನು ನೋಡಿ ಕಿಟಕಿಯಿಂದ ವೀಡಿಯೋ ಮಾಡಿ ಅದನ್ನು ನನ್ನ ಸಂಬಂಧಿಕರೆಲ್ಲರಿಗೂ ನಾನು ಕೆಲಸ ಮಾಡುತ್ತಿದ್ದ ಜಾಗದಲ್ಲಿಯೂ ಎಲ್ಲರಿಗೂ ತೋರಿಸ್ತಾರೆ..

ನನ್ನ್ ಅಮ್ಮ ಆ ವೀಡಿಯೋ ನೋಡಿಲ್ಲ.. ಈಗಲೂ ಕೇಳ್ತಾರೆ ಅಂತದ್ದು ಏನಿತ್ತು.. ಅಲ್ಲಿ ಏನೂ ಇರಲಿಲ್ಲ.. ನನ್ನ ಕೋ ಆರ್ಟಿಸ್ಟ್ ಗಳಿಗೆ ವೀಡಿಯೋ ತೋರಿಸಿ ಅವಮಾನ ಮಾಡ್ತಾರೆ.. ಒಂದು ದಿನ ನಮ್ಮ ತಾಯಿಗೆ ಬಂದು ಮಗಳ ವೀಡಿಯೋ ನೋಡುದ್ವಿ ಅಂದರಂತೆ.. ಆಗ ನಮ್ ಅಮ್ಮ ಸ್ತಭ್ದವಾಗಿ ನಿಂತರಂತೆ.. ನಾನ್ ನಿಮ್ಮನ್ನ ಅಪ್ಪ ಅಂತ ಕರೆದಿದ್ದೆ.. ನಾನು ಅಷ್ಟು ಪ್ರೀತಿ ಕೊಟ್ಟಿದ್ದೆ.. ಆದರೆ ನನ್ನಮ್ಮ ಆಚೆ ಕಡೆ ತಲೆ ತಗ್ಗಿಸೋ ಆಗೆ ನೀನು ಮಾಡಿದ್ಯಾ.. ಯಾರಾದರೂ ತಂದೆ ಮಗಳನ್ನು ಆ ರೀತಿ ವೀಡಿಯೋ ಮಾಡ್ತಾರಾ.. ಆತ ನನ್ನಮ್ಮನ ಜೀವನದಲ್ಲಿ‌ಉಳಿಯುವ ಸಲುವಾಗಿ ಈ ರೀತಿಯ ಕೆಲಸ ಮಾಡಿ ನನ್ನ ಹೆಸರನ್ನು ಕೆಡಿಸಿದ..

ನಾನು ಈ ಹಿಂದೆನೂ ಸಾಕಷ್ಟು ಮೋಸ ಹೋಗಿದ್ದೆ.. ಆದರೆ ನನ್ನ ಕುಟುಂಬದಲ್ಲಿ ಒಡೆದ ಸಂಬಂಧಗಳನ್ನ ನೋಡಿ ನೋಡಿ ಬೇಜಾರ್ ಆಗಿತ್ತು.. ಅದೇ ಕಾರಣಕ್ಕೆ ಎಲ್ಲವನ್ನೂ ಸಹಿಸಿಕೊಂಡು ಬಂದೆ.. ಶುರುವಿನಲ್ಲೇ ನಮ್ಮ ಚಾಯ್ಸ್ ಗಳನ್ನ ಸರಿಯಾಗಿ ಮಾಡಿಕೊಳ್ಳಬೇಕು.. ನಾನ್ ನಿಮಗೆ ಅವಮಾನ ಮಾಡಿರಬಹುದು.. ಆದರೆ ನಾನು ಒಳ್ಳೆ ಹ್ಯೂಮನ್ ಆಗಿರಲು ಪ್ರಯತ್ನ ಮಾಡ್ತೀನಿ ಎಂದು ತಮ್ಮ ಚಿಕ್ಕ ವಯಸ್ಸಿಗೆ ತಮ್ಮ ಜೀವನದಲ್ಲಿ ಆದ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ..