ಬಿಗ್ ಬಾಸ್ ಮನೆಯಿಂದ ರೂಪೇಶ್ ಶೆಟ್ಟಿ ವಾಕ್ ಔಟ್..? ಕಾರಣವೇನು ಗೊತ್ತಾ..

ಬಿಗ್ ಬಾಸ್ ಸೀಸನ್ ಒಂಭತ್ತು ಸಾಕಷ್ಟು ವಿಚಾರಗಳಿಗೆ ಸುದ್ದಿಯಾಗುತ್ತಿದೆ‌‌.. ಈ ಸೀಸನ್ ನಲ್ಲಿ ಇದೇ ಮೊದಲ ಬಾರಿಗೆ ಓಟಿಟಿ ಇಂದ ಸ್ಪರ್ಧಿಗಳನ್ನು ಕರೆತಂದರು.. ಜೊತೆಗೆ ಹಳೇ ಸೀಸನ್ ನ ಸ್ಪರ್ಧಿಗಳನ್ನೂ ಕರೆತಂದರು.. ಜೊತೆಗೆ ಹೊಸಬರೂ ಕೂಡ ಬಂದರು.. ಎಲ್ಲಾ ಸೀಸನ್ ಗಳಂತೆ ಜಗಳಗಳು ಕಿರಿಕ್ ಗಳು ಎಲ್ಲವುಯ್ ಸಾಮಾನ್ಯವಾಗಿತ್ತು‌‌.. ಇನ್ನು ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ದಿನ ಉಳಿಯುವ ಸಲುವಾಗಿ ಬಣ್ಣ ಬಣ್ಣದ ನಾಟಕಗಳನ್ನು ಆಡುವುದು ಹೊಸದೇನಲ್ಲಾ.. ಎಲಿಮಿನೇಷನ್ ಗೆ ನಾಮಿನೇಟ್ ಆದವರು ಇದ್ದಕಿದ್ದ ಹಾಗೆ ಬಿಗ್ ಬಾಸ್ ಮನೆಯಲ್ಲಿ ಜಗಳ ತೆಗೆಯುವುದು.. ಇನ್ನು ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ದಿನ ಉಳಿಯುವ ಸಲುವಾಗಿ ಒಳಗೆ ಹುಡುಗಿಯ ಜೊತೆಯೋ ಅಥವಾ ಹುಡುಗನ ಜೊತೆಯೋ ಪ್ರೀತಿ ಪ್ರೇಮ ಅಂತ ಒಂದಷ್ಟು ಅತಿರೇಕದ ಆತ್ಮೀಯರಾಗೋದು.. ಇನ್ನು ಕೆಲವರು ನಿಯತ್ತಾಗಿ ಟಾಸ್ಕ್ ಆಡೋರು ಇದ್ದಾರೆ.. ಕೆಲವರು ತಮ್ಮಲ್ಲಿನ ಪ್ರತಿಭೆಯಿಂದ ಮನರಂಜನೆ ನೀಡುತ್ತಾ ಹೆಚ್ಚು ದಿನ ಉಳಿಯೋದು ಇದೆ..

ಆದರೆ ಬಿಗ್ ಬಾಸ್ ನ ಎಲ್ಲಾ ಸೀಸನ್ ಗಳಲ್ಲಿಯೂ ಸಾಮಾನ್ಯವಾಗಿ ಸಿಗಬಹುದೆಂದರೆ ಅದು ಪ್ರತಿ ಸೀಸನ್ ನಲ್ಲಿ ಪ್ರೀತಿ ಪ್ರೇಮ ಅಂದುಕೊಂಡು ಒಂದಷ್ಟು ಹೆಚ್ಚು ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಉಳಿಯೋದು.. ಹೌದು ಈ ಸೀಸನ್ ನಲ್ಲಿಯೂ ಅಂತಹುದೇ ಜೋಡಿ ಹಕ್ಕಿ ಇರೋದು ಎಲ್ಲರಿಗೂ ತಿಳಿದಿದೆ.. ಅವರೇ ರೂಪೇಶ್ ಶೆಟ್ಟಿ ಹಾಗೂ ಸಾನ್ಯ ಅಯ್ಯರ್.. ಆದರೆ ಈಗ ಈ ಜೋಡಿ ಹಕ್ಕಿ ದೂರಾಗುವ ಸಮಯ ಬಂದಿದೆ.. ಹೌದು ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಅಯ್ಯರ್ ಅವರ ಅತಿಯಾದ ಆತ್ಮೀಯತೆ ಆಲಿಂಗನಗಳು ಹಾಗೂ ಆಪ್ತತೆ ಮಿತಿ ಮೀರಿದ ಕಾರಣ ಕಿಚ್ಚ ಸುದೀಪ್ ಅವರು ಈ ವಾರಾಂತ್ಯದಲ್ಲಿ ಇಬ್ಬರನ್ನೂ ತರಾಟೆಗೆ ತೆಗೆದುಕೊಂಡು ಈ ಮನೆ ಇರೋದು ನಿಮ್ಮ ಆ ಕೆಲಸಕ್ಕಲ್ಲ ಎಂದಿದ್ದರು.. ಇದರಿಂದ ಮನನೊಂದ ರೂಪೇಶ್ ಶೆಟ್ಟಿ ಇದೀಗ ಬಿಗ್ ಬಾಸ್ ಮನೆಯಿಂದ ವಾಕ್ ಔಟ್ ಮಾಡುವ ನಿರ್ಧಾರ ಮಾಡಿದ್ದಾರೆ..

ಹೌದು ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಮಾತನಾಡಿದ ಸುದೀಪ್ ಅವರು ರೂಪೇಶ್ ಶೆಟ್ಟಿ ಅವರಿಗೆ ನೇರವಾಗಿ ಬೈದಿದ್ದರು.. ಕಿಚ್ಚ ಸುದೀಪ್ ಅವರು ರೂಪೇಶ್ ಶೆಟ್ಟಿ ಹಾಗೂ ಸಾನ್ಯ ಅಯ್ಯರ್ ಗೆ ಈ ವಾರದ ಕ್ಯಾಪ್ಟೆನ್ಸಿ ಸಮಯ ಮುಗಿದ ನಂತರ ನೀವು ಕ್ಯಾಪ್ಟನ್ ರೂಮಿನಲ್ಲಿ ಪಿಕ್‌ನಿಕ್ ಮಾಡ್ತಾ ಇದ್ರಿ.. ಆ ಕ್ಯಾಪ್ಟನ್ ರೂಮಿಗೆ ಅದರದ್ದೇ ಆದ ಒಂದು ಗೌರವ ಇದೆ.. ಅದು ಪಿಕ್‌ನಿಕ್ ಮಾಡುವ ಜಾಗವಲ್ಲ ಎಂದು ಖಡಕ್ ಆಗಿಯೇ ಹೇಳಿದರು.. ಆ ತಕ್ಷಣ ನಮ್ಮ ಉದ್ದೇಶ ಆ ರೀತಿ ಇರಲಿಲ್ಲ.. ನಾನು ಯಾವಾಗಲೂ ಆ ರೀತಿ ಮಾಡಿಲ್ಲ ಎಂದು ಸ್ಪಷ್ಟನೆ ನೀಡಲು ಮುಂದಾದ ರೂಪೇಶ್ ಶೆಟ್ಟಿ ಅವರ ಬಾಯಿ‌ ಮುಚ್ಚಿಸಿದ ಸುದೀಪ್ ಅವರು ನೀವು ಮಿತಿಮೀರಿ ನಡೆದುಕೊಂಡಿದ್ದೀರಿ.. ಆ ರೀತಿ ಆಗಿದ್ದಕ್ಕಾಗಿಯೇ ನಾವು ಹೇಳ್ತಿರೋದು.. ನೀವು ಮಧ್ಯರಾತ್ರಿ ಹಗ್ ಮಾಡಿಕೊಳ್ತೀರಿ.. ಅದಕ್ಕೆ ನಾವು ಯಾವಾಗಲೂ ಅಪಸ್ವರ ತೆಗೆದಿಲ್ಲ.. ಅದು ಇಲ್ಲಿ ಸಮಸ್ಯೆ ಅಲ್ಲ.. ಈ ಮೊದಲು ಅನೇಕರು ಈ ಮನೆಯಲ್ಲಿ ಕ್ಲೋಸ್ ಆಗಿದ್ದರು.. ಆದರೆ ಈಗ ಇದನ್ನು ಹೇಳ್ತಿದೀವಿ ಎಂದರೆ ಅರ್ಥ ಮಾಡಿಕೊಳ್ಳಿ.. ನೀವು ಈ ರೀತಿ ಮಾಡ್ತಾ ಇರೋದ್ರಿಂದಲೇ ನಮಗೆ ಕಂಟೆಂಟ್ ಸಿಗುತ್ತಿದೆ ಎಂದುಕೊಂಡರೆ ಈ ಮನೆ ಅದಕ್ಕಲ್ಲ.. ಆ ಕೆಲಸ ಮಾಡೋದಕ್ಕಲ್ಲ ಎಂದು ಕಿಚ್ಚ ಸುದೀಪ್ ಅವರು ಖಡಕ್ ಆಗಿ ಎಚ್ಚರಿಕೆ ನೀಡಿದರು..

ಇನ್ನು ಸುದೀಪ್ ಅವರ ಮಾತು ಮುಗಿದ ಬಳಿಕ ಬ್ರೇಕ್ ಸಮಯದಲ್ಲಿ ಅವರ ಮಾತುಗಳಿಂದ ಬಹಳ ಬೇಸರಗೊಂಡಿದ್ದ ರೂಪೇಶ್ ಶೆಟ್ಟಿ ಅವರು ಕಣ್ಣಿರಿಟ್ಟರು.. ಅಷ್ಟೇ ಅಲ್ಲದೇ ನಮ್ಮ ಉದ್ದೇಶ ಕೆಟ್ಟದಾಗಿ ಇರಲಿಲ್ಲ ನಾನು ಮನೆಯಿಂದ ವಾಕ್ ಔಟ್ ಆಗುತ್ತೇನೆ ಎಂದು ಕ್ಯಾಮರಾ ಮುಂದೆ ಮತ್ತು ಅರುಣ್ ಸಾಗರ್ ಅವರ ಜೊತೆ ರೂಪೇಶ್ ಶೆಟ್ಟಿ ಹೇಳಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.. ನಾವು ನಡೆದುಕೊಂಡಿದ್ದು ಹೇಗೆ ಕಂಡಿದೆ ಎಂದು ನನಗೆ ಗೊತ್ತಿಲ್ಲ.. ನಾನು ಆ ತರಹದವನು ಅಲ್ಲ.. ನನ್ನ ತಾಯಿಗಿಂತ ದೊಡ್ಡ ದೇವರಿಲ್ಲ.. ನಾನು ಆ ತರಹ ಕಂಡಿದ್ದರೆ ಅದು ತಪ್ಪು.. ಇವತ್ತೇ ವಾಕ್ ಆಫ್ ಆಗೋದಕ್ಕೆ ರೆಡಿ ಇದ್ದೇನೆ ಸರ್.. ನನ್ನ ತಾಯಿ ಆಣೆಗೂ ಇಲ್ಲಿರೋರಲ್ಲಿ ಯಾರ ಮೇಲೂ ನನಗೆ ಆ ತರಹದ ಭಾವನೆ ಇಲ್ಲ.. ಅದ್ಯಾಕೆ ಹಾಗೆ ಕಂಡಿತು ಅಂತ ನನಗೆ ಗೊತ್ತಿಲ್ಲ..

ಕಂಡಿದೆ ಅಂದ್ರೆ ಅದಕ್ಕೆ ನನ್ನದೇ ತಪ್ಪು.. ವಾಕ್ ಆಫ್ ಆಗೋದಕ್ಕೂ ರೆಡಿ ಇದ್ದೀನಿ ಎಂದು ರೂಪೇಶ್ ತಿಳಿಸಿದ್ದಾರೆ.. ಸುದೀಪ್ ಅವರ ಮಾತುಗಳನ್ನ ಕೇಳಿದ ನಂತರ ನಾನೇನೂ ಮಾಡಿಲ್ಲ. ಹಗ್ ಕೊಡೋಕೆ ಹಿಂದೆ ಮುಂದೆ ನೋಡ್ತೀನಿ ಎಂದು ಹೇಳುತ್ತಾ ರೂಪೇಶ್ ಶೆಟ್ಟಿ ಮನೆಯವರ ಮುಂದೆ ಗಳಗಳನೆ ಅತ್ತಿದ್ದಾರೆ.. ಆದರೆ ನಡೆದಿರೋದಂತೂ ಸತ್ಯ.. ಆ ದಿನ ರೂಪೇಶ್ ಶೆಟ್ಟಿ ಬೆಡ್ ಮೇಲೆ ಸಾನ್ಯ ಅಯ್ಯರ್ ಜೊತೆಗೆ ಅತಿಯಾದ ಆತ್ಮೀಯತೆ ಇಂದ ಆಕೆಯ ಮೇಲೆ ಕೈ ಹಾಕಿದ್ದು.. ಆಕೆ ಆತನ ಕಾಲಿನ ಮೇಲೆ ಮಲಗಿದ್ದು ಎಲ್ಲವೂ ನಿಜವೆ ಆಗಿದೆ.. ಇದು ನಿಜವೇ ಆಗಿದ್ದರೆ ನಾನು ಮನೆಯಿಂದ ವಾಕ್ ಔಟ್ ಆಗ್ತೀನಿ ಎಂದಿರುವ ರೂಪೇಶ್ ಶೆಟ್ಟಿ ಇಂದು ಕಿಚ್ಚ ಸುದೀಪ್ ಅವರ ಮುಂದೆ ಈ ವಿಚಾರ ಮಾತನಾಡಿ ಹೊರ ಹೋಗುವರಾ ಕಾದು ನೋಡಬೇಕಿದೆ..

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಭಟ್, ಶ್ರೀ ಅಂಬಾ ಭವಾನಿ ದೈವ ಶಕ್ತಿ ಜ್ಯೋತಿಷ್ಯರು.. ಮೊ.9845642321 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ‌ ಉಲ್ಭಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಡುತ್ತಾರೆ.. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ.. ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ.. 9845642321 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ತೊಂದರೆ ಪ್ರೀತಿಯಲ್ಲಿ ನಂಬಿ ಮೋಸ.. ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ವಿಚಾರ ಜನರ ದೃಷ್ಟಿಯಿಂದ ಮನೆಯಲ್ಲಿ ಆಗುವ ತೊಂದರೆ ಹಣಕಾಸಿನ ತೊಂದರೆ ಸ್ತ್ರೀ ಪುರುಷ ವಶೀಕರಣ ಇನ್ನೂ ಅನೇಕ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಗಳಿಗೆ ಶಾಶ್ವತ ಪರಿಹಾರ ಪಡೆದುಕೊಳ್ಳಿ.. 9845642321