ಬಿಗ್ ಬಾಸ್ ಮನೆಯಲ್ಲಿ ದೊಡ್ಡ ಯಡವಟ್ಟು.. ಬೇಕಿತ್ತಾ ಇದೆಲ್ಲಾ..

ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಎನಿಸಿಕೊಂಡಿರುವ ಬಿಗ್ ಬಾಸ್ ಒಂಭತ್ತನೇ ಸೀಸನ್ ಯಶಸ್ವಿಯಾಗಿ ಸಾಗುತ್ತಿದ್ದು ಅದಾಗಲೇ ಒಂದು ವಾರ ಮುಕ್ತಾಯಗೊಂಡಿದ್ದು ಎರಡನೇ ವಾರದಲ್ಲಿಯೇ ಸ್ಪರ್ಧಿಗಳ ನಡುವೆ ಸಾಕಷ್ಟು ಮನಸ್ತಾಪಗಳು ಉಂಟಾಗಿದೆ.. ಅದರಲ್ಲೂ ಆ ಒಂದು ಘಟನೆಯಿಂದಾಗಿ ದೊಡ್ಡ ಯಡವಟ್ಟಾಗಿದ್ದು ಇದೆಲ್ಲಾ ಯಾಕೆ ಬೇಕಿತ್ತು ಎನ್ನುವಂತಾಗಿದೆ.. ಹೌದು ಬಿಗ್ ಬಾಸ್ ಕನ್ನಡ ಓಟಿಟಿ 1 ಕಾರ್ಯಕ್ರಮದ ಆರಂಭದಿಂದಲೂ ರಾಕೇಶ್ ಅಡಿಗ ಪ್ರಾಂಕ್‌ಗಳನ್ನ ಮಾಡುತ್ತಾ ಬರುತ್ತಿದ್ದಾರೆ.. ಕೆಲವು ಬಾರಿ ಸುಮ್ಮನೆ ರಾಕೇಶ್ ಅಡಿಗ ಜಗಳ ಮಾಡುತ್ತಾ ಪ್ರಾಂಕ್ ಮಾಡಿದ್ದತು.. ಒಂದು ಬಾರಿ ಆರ್ಯವರ್ಧನ್ ಗುರೂಜಿ ಅವರ ಮೇಲೆ ದೊಡ್ಡ ಮಟ್ಟದಲ್ಲಿ ಪ್ರಾಂಕ್ ಮಾಡಿದ್ದರು. ಇದರಿಂದ ಹೆದರಿದ ಆರ್ಯವರ್ಧನ್ ಗುರೂಜಿ ಬಾತ್‌ ರೂಮ್‌ನಲ್ಲಿ ಬಿದ್ದಿದ್ದೂ ಉಂಟು.. ಇದನ್ನ ಗಮನಿಸಿದ ಕಿಚ್ಚ ಸುದೀಪ್ ಈ ತರಹದ ಪ್ರಾಂಕ್ಸ್ ಬೇಡ ಎಂದಿದ್ದರು. ಅಲ್ಲಿಗೆ ಸುಮ್ಮನಾಗಿದ್ದ ರಾಕೇಶ್ ಅಡಿಗ ಬಿಗ್ ಬಾಸ್ ಕನ್ನಡ 9 ಕಾರ್ಯಕ್ರಮದಲ್ಲಿ ಪಿಟ್ಸ್ ಬಂದ ರೀತಿಯಲ್ಲಿ ಪ್ರಾಂಕ್ ಮಾಡಿ ಯಡವಟ್ಟು ಮಾಡಿಕೊಂಡಿದ್ದಾರೆ..

ಹೌದು ಅನುಪಮಾ ಗೌಡ ಅವರು ಏನಾದರೂ ಪ್ರಾಂಕ್ ಮಾಡಬೇಕು ಎಂದು ಹೇಳಿದಾಗ ರಾಕೇಶ್ ಅಡಿಗ ಆ ಐಡಿಯಾ ಕೊಟ್ಟರು. ಆ ರೀತಿ ರಾಕೇಶ್ ಅಡಿಗ ನಟಿಸಿದ್ದನ್ನ ನೋಡಿ ಪ್ರಶಾಂತ್ ಸಂಬರಗಿ, ರೂಪೇಶ್ ಶೆಟ್ಟಿ, ಆರ್ಯವರ್ಧನ್ ಗುರೂಜಿ ಗಾಬರಿ ಆಗಿದ್ದರು.. ಈ ತರಹದ ಪ್ರಾಂಕ್ಸ್ ಓಕೆ ಅಲ್ಲ ಎಂದು ಮತ್ತೊಮ್ಮೆ ರಾಕೇಶ್ ಅಡಿಗ ಅವರಿಗೆ ಸುದೀಪ್ ಅವರೂ ಸಹ ತರಾಟೆಗೆ ತೆಗೆದುಕೊಂಡಿದ್ದಾರೆ..

ಆದರೆ ಅನುಪಮಾ ಗೌಡ ಅವರಿಂದಾಗಿ ಈ ರೀತಿ ಆಗಿದ್ದು ರಾಕೇಶ್ ಅಡಿಗ ಮೇಲೆ ಮನೆಯವರು ಕೋಪ ಮಾಡಿಕೊಂಡಂತಾಯ್ತು.. ಹೌದು ಅನುಪಮಾ ಗೌಡ ಏನಾದರೂ ಪ್ರಾಂಕ್ ಮಾಡಬೇಕು ಎಂದರು.. ಆಗ ನೇಹಾ ಗೌಡ ಮಾಡೋದು ಇದ್ದರೆ ಅರುಣ್ ಸರ್‌ ಗೆ ಮಾಡು ಎಂದರು.. ಆಗ ರಾಕೇಶ್ ಅಡಿಗ ಪೇಸ್ಟ್ ಮುಕ್ಕಳಿಸಿ ಅದು ಬಂದ ಹಾಗೆ ಮಾಡ್ತೀನಿ.. ನಾನು ಹಾಸ್ಟೆಲ್‌ನಲ್ಲಿ ಇದ್ದಾಗ ಮಾಡಿದ್ದೆ. ಎಲ್ಲರೂ ಹೆದರಿಕೊಂಡಿದ್ದರು.. ಎಂದರು..

ಅನುಪಮಾ ಗೌಡ ನಿಜ ಮಾಡ್ತಿಯಾ? ಎಂದರು.. ರಾಕೇಶ್ ಅಡಿಗ ಹೌದು ಮಾಡ್ತೀನಿ ನೀವು ಯಾರೂ ನಗಬಾರದು ಎಂದರು.. ವಿನೋದ್ ಗೊಬ್ಬರಗಾಲ ಮಾತನಾಡಿ ಗೊತ್ತಾದ ಮೇಲೆ ಜಗಳಕ್ಕೆ ಬೀಳ್ತಾರೆ. ಅದನ್ನ ಫೇಸ್‌ ಮಾಡಿ ಎಂದರು.. ಆನಂತರ ಪೇಸ್ಟ್ ಮುಕ್ಕಳಿಸಿ.. ಅದು ಬಂದ ಹಾಗೆ ರಾಕೇಶ್ ಅಡಿಗ ಬಿದ್ದರು. ರೂಪೇಶ್ ಶೆಟ್ಟಿ, ಪ್ರಶಾಂತ್ ಸಂಬರಗಿ, ಆರ್ಯವರ್ಧನ್ ಗುರೂಜಿ ಅಕ್ಷರಶಃ ಶಾಕ್ ಆದರು. ಬಳಿಕ ಅನುಪಮಾ ಗೌಡ, ಅಮೂಲ್ಯ ಗೌಡ ನಕ್ಕಿದ್ದು ಗೊತ್ತಾದ್ಮೇಲೆ, ಇದು ಪ್ರಾಂಕ್ ಅನ್ನೋದು ಎಲ್ಲರಿಗೂ ಅರಿವಾಯಿತು..

ಪ್ರಾಂಕ್ ಅಂತ ಗೊತ್ತಾದ್ಮೇಲೆ ರಾಕೇಶ್ ಅಡಿಗ ವಿರುದ್ಧ ಪ್ರಶಾಂತ್ ಸಂಬರಗಿ ಬೇಸರಗೊಂಡರು.. ರಾಕೇಶ್ ಅಡಿಗ ತಪ್ಪಾಯ್ತು ಸಾರಿ.. ನನ್ನದಲ್ಲ ಪ್ಲಾನ್ ಎಂದು ಹೇಳಿದರು.. ಪ್ರಶಾಂತ್ ಸಂಬರಗಿ ಅವರು ಮಾತನಾಡಿ ಇಂತಹ ವಿಷಯದಲ್ಲಿ ಹೀಗೆಲ್ಲಾ ಮಾಡಬಾರದು. ನಾನು ಒಪ್ಪಲ್ಲ. ನನ್ನ ಮಗನಿಗೂ ಹೀಗೇ ಆಗುತ್ತೆ. ನಿಮಗೆ ಗೊತ್ತಿಲ್ಲ.. ಎಂದು ಭಾವುಕರಾದರು..

ಆ ತಕ್ಷಣ ಮಾತನಾಡಿದ ಅನುಪಮಾ ಗೌಡ ಗೊತ್ತಿರಲಿಲ್ಲ ಸರ್.. ಸಾರಿ ಎಂದು ಕೇಳಿಕೊಂಡರು.. ಪ್ರಶಾಂತ್ ಸಂಬರಗಿ ಅವರು ನನಗೆ ಅದರ ಬಗ್ಗೆ ನೋವೇನು ಅಂತ ಗೊತ್ತು. ನನ್ನ ಮಗ ಜ್ಞಾಪಕ ಬಂದ ಎಂದರು.. ರಾಕೇಶ್ ಅಡಿಗ ಇನ್ಮೇಲೆ ಪ್ರಾಂಕ್ ಮಾಡಲ್ಲ.. ಸಾರಿ ಎಂದು ಕೇಳಿಕೊಂಡರು..

ಪ್ರಶಾಂತ್ ಸಂಬರಗಿ ಅವರು ಹೀಗೆ ಮಾಡಿದರೆ, ಪೇಷೆಂಟ್‌ಗೆ ಅವಮಾನ ಮಾಡಿದ ಹಾಗಾಗುತ್ತದೆ. ನಾನು ಮರೆತುಹೋಗಿದ್ದೆ. ಅದಾಗಿದ್ದು 8 ವರ್ಷಗಳ ಹಿಂದೆ. ನನ್ನ ಮಗನನ್ನ ರೋಡಿಗೆ ಬಿಡೋಕೆ ಭಯ ಆಗುತ್ತಿತ್ತು. ಈ ತರಹ ಮಾಡಬೇಡಿ. ಇದನ್ನ ಒಪ್ಪಿಕೊಳ್ಳೋಕೆ ಆಗಲ್ಲ ಎಂದರು.. ರಾಕೇಶ್ ಅಡಿಗ ಅವರು ಮತ್ತೊಮ್ಮೆ ಸಾರಿ ಸರ್ ಎಂದು ಕೇಳಿಕೊಂಡರು..

ರೂಪೇಶ್ ಶೆಟ್ಟಿ ಅವರು ಸಹ ಮಾತನಾಡಿ ನಾನು ಆತರಹದ್ದು ನೋಡೇ ಇಲ್ಲ. ಏನು ಮಾಡೋದು ಅಂತ ಗೊತ್ತಾಗಲ್ಲ. ಅದರಲ್ಲಿ ಈ ತರಹ ಪ್ರಾಂಕ್ ಮಾಡಿಬಿಟ್ಟರೆ ಬೇಜಾರಾಗುತ್ತದೆ ಎಂದರು.. ಇನ್ನು ವಾರದ ಕತೆಯಲ್ಲಿ ಕಿಚ್ಚ ಸುದೀಪ್ ಅವರು ಮಾತನಾಡಿ ಮನೆಯಲ್ಲಿ ಪ್ರಾಂಕ್ ಓಕೆ.. ಆದರೆ ಎಲ್ಲವೂ ಓಕೆ ಅಲ್ಲ.. ಮುಂಚೆ ಒಮ್ಮೆ ಮಾಡಿ ನಿಮಗೆ ಗೊತ್ತು ಹೇಗಾಯಿತು ಅಂತ.. ಹಾಗಂತ ಪ್ರಾಂಕ್ ಮಾಡಬೇಡಿ ಅಂತ ಹೇಳುತ್ತಿಲ್ಲ. ಕೆಲವೊಮ್ಮೆ ಕೆಲ ಪ್ರಾಂಕ್‌ಗಳು ಸೆನ್ಸಿಟಿವ್ ಆಗುತ್ತೆ. ದೊಡ್ಡ ಡ್ಯಾಮೇಜ್ ಆದರೆ.. ಯೋಚನೆ ಮಾಡಿ ಎಂದು ಕಿಚ್ಚ ಸುದೀಪ್ ಹೇಳಿದರು. ಆಗ, ಸಾರಿ ಅಣ್ಣ.. ನನ್ನದು ತಪ್ಪಾಯಿತು ಎಂದು ರಾಕೇಶ್ ಅಡಿಗ ಕ್ಷಮೆ ಸಹ ಕೇಳಿಕೊಂಡರು.. ಆದರೆ ಅದು ಅಲ್ಲಿಗೆ ಮುಗಿಯಲಿಲ್ಲ.. ಈ ವಾರ ಎಲ್ಲರೂ ಸೇರಿಕೊಂಡು ಕಳಪೆ ಬೋರ್ಡ್ ನೀಡಲು ರಾಕೇಶ್ ಅಡಿಗ ಅವರ ಪ್ರಾಂಕ್ ಅನ್ನು ಒಂದು ಕಾರಣವನ್ನಾಗಿ ಮಾಡಿಕೊಂಡರು..

ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯಂ.. ಪಂಡಿತ್ ಶ್ರೀನಿವಾಸ್ ಭಟ್ ಗುರೂಜಿ.. 20 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ಸಾಧ್ಯ ಆಗುವ ರೂಪದಲ್ಲಿ ಖಚಿತ ಪರಿಹಾರ, ನೂರಕ್ಕೆ ನೂರರಷ್ಟು ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ.. ಕರೆ ಅಥವಾ ವಾಟ್ಸಪ್ ಮಾಡಿ 9916889622. ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ, ಅನಾರೋಗ್ಯ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. 9916889622