ಮೊದಲ ವಾರದ ನಾಮಿನೇಷನ್ ಮುಕ್ತಾಯ.. ಮನೆಯಿಂದ ಹೊರ ಬರೋದು ಇವರೇ ನೋಡಿ..

ಬಿಗ್ ಬಾಸ್ ಕನ್ನಡ ಓಟಿಟಿಯ ಸೀಸನ್ ಒಂದು ಮಿಶ್ರ ಪ್ರತಿಕ್ರಿಯೆಯನ್ನು ಪಡೆದಿದ್ದು ಅದಾಗಲೇ ಸಾಮಾಜಿಕ‌ ಜಾಲತಾಣದಲ್ಲಿ ಬಿಗ್ ಬಾಸ್ ಕುರಿತ ಬಿಸಿಬಿಸಿ ಚರ್ಚೆ ಆರಂಭವಾಗಿದೆ.. ಬಿಗ್ ಬಾಸ್ ಓಟಿಟಿಯ ಮೊದಲ ಸೀಸನ್ ಗೆ ಒಟ್ಟು ಹದಿನೈದು ಸ್ಪರ್ಧಿಗಳು ಆಯ್ಕೆಯಾಗಿದ್ದು ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ್ದಾರೆ.. ಮೊದಲ ದಿನವೇ ದೊಡ್ಡ ಮಟ್ಟದ ಬೆಳವಣಿಗೆ ನಡೆದಿದ್ದು ಅದಾಗಲೇ ನಾಮಿನೇಷನ್ ಪ್ರಕ್ರಿಯೆ ಕೂಡ ಮುಗಿದಿದ್ದು ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ಎಂಟು ಜನ ನಾಮಿನೇಟ್ ಆಗಿದ್ದಾರೆ..

ಹೌದು ಈ ಬಾರಿಯ ಬಿಗ್ ಬಾಸ್ ಗೆ ಗುರುಗಳ ಕೋಟದಲ್ಲಿ ಆರ್ಯವರ್ಧನ್ ಗುರೂಜಿ.. ಸಾಮಾಜಿಕ ಜಾಲತಾಣದ ಕೋಟಾದಲ್ಲಿ ಸೋನು ಶ್ರೀನಿವಾಸ್ ಗೌಡ.. ಇನ್ನು ಕಲಾವಿದರ ಕೋಟಾದಲ್ಲಿ ರೂಪೇಶ್ ಶೆಟ್ಟಿ.. ಸಾನಿಯಾ ಅಯ್ಯರ್.. ಸ್ಪೂರ್ತಿ ಗೌಡ ಲೋಕೇಶ್.. ಅಕ್ಷತಾ ಕುಕ್ಕಿ..ರಾಕೇಶ್ ಅಡಿಗಾ.. ಕಿರಣ್ ಯೋಗೇಶ್ವರ್.. ಚೈತ್ರಾ ಹಳ್ಳಿಕೇರಿ.. ಉದಯ್ ಸೂರ್ಯ.. ಜಯಶ್ರೀ ಆರಾಧ್ಯ.. ಅರ್ಜುನ್ ರಮೇಶ್.. ನಂದು.. ಜಶ್ವಂತ್.. ಪತ್ರಕರ್ತರ ಕೋಟಾದಡಿಯಲ್ಲಿ ಸೋಮಣ್ಣ ಮಾಚಿಮಾಡ.. ಹೀಗೆ ಒಟ್ಟು ಹದಿನಾರು ಮಂದಿ ಬಿಗ್ ಬಾಸ್ ಓಟಿಟಿ ಸೀಸನ್ ಒಂದಕ್ಕೆ ಆಯ್ಕೆಯಾಗಿದ್ದು ಮೊದಲ ದಿನ ನಾನು ಯಾರು ಎಂಬ ಚಟುವಟಿಕೆ ನೀಡಿದ್ದು ಆ ಚಟುವಟಿಕೆಯಲ್ಲಿ ತಮ್ಮ ಜೀವನದಲ್ಲಿ ನಡೆದ ನೋವಿನ ಕತೆಗಳನ್ನು ಬಿಚ್ಚಿಟ್ಟಿದ್ದಾರೆ..

ಹೌದು ಸಾನಿಯಾ ಅಯ್ಯರ್ ಹಾಗೂ ಚೈತ್ರಾ ಹಳ್ಳಿಕೇರಿ ಸೇರಿದಂತೆ ಸಾಕಷ್ಟು ಮಹಿಳಾ ಕಲಾವಿದರು ತಮ್ಮ ತಮ್ಮ ಜೀವನದಲ್ಲಿ ಸಕಾಷ್ಟು ನೊಂದು ಕಷ್ಟಗಳನ್ನು ಅನುಭವಿಸಿ ಅದರಿಂದ ಹೊರ ಬಂದವರಾಗಿದ್ದಾರೆ‌.. ಅದರಲ್ಲೂ ಪುಟ್ಟ ಗೌರಿ ಮದುವೆ ಖ್ಯಾತಿಯ ಸಾನಿಯಾ ಅಯ್ಯರ್ ಕತೆ ಮನಕಲಕುತ್ತದೆ.. ತಾನು ಪ್ರೀತಿಸಿದ ಇಬ್ಬರೂ ಹುಡುಗರು ಸಹ ಈಕೆಯನ್ನು ಬಳಸಿಕೊಂಡು ನೋವು ಕೊಟ್ಟು ಕೈ ಮಾಡಿ ಹೀಗೆ ಚಿತ್ರವಿಚಿತ್ರವಾಗಿ ನಡೆಸಿಕೊಂಡರೂ ಸಹ ಸಂಬಂಧವನ್ನು ಉಳಿಸಿಕೊಳ್ಳುವ ಸಲುವಾಗಿ ಎಲ್ಲವನ್ನು ಸಹಿಸಿಕೊಂಡು ಇದ್ದರಂತೆ.. ಇತ್ತ ಮಲತಂದೆಯೇ ರೂಮಿನಲ್ಲಿ ಈಕೆಯ ವೀಡಿಯೋವನ್ನು ಮಾಡಿ ಅದನ್ನು ಎಲ್ಲರಿಗೂ ತೋರಿಸಿ ಸಾನಿಯಾ ತಲೆ ತಗ್ಗಿಸುವಂತೆ ಮಾಡಿದ್ದರಂತೆ ಹೀಗೆ ಚಿಕ್ಕ ವಯಸ್ಸಿಗೆ ನೂರೆಂಟು ನೋವು ಅನುಭವಿಸಿದ ಜೀವನ ಅವರದ್ದಾರೆ.. ಅತ್ತ ಚೈತ್ರಾ ಹಳ್ಳಿಕೇರಿ ಕೂಡ ಗಂಡನಿಂದ ನೊಂದವರೇ.. ಇನ್ನು ಲೋಕಿ ಹಾಗೂ ಇನ್ನಷ್ಟು ಮಂದಿ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಒಂದೊತ್ತು ಊಟಕ್ಕೂ ಕಷ್ಟ ಪಟ್ಟು ಬಂದವರಾಗಿದ್ದಾರೆ.

ಇನ್ನು ಇತ್ತ ಪತ್ರಕರ್ತ ಸೋಮಣ್ಣ ಮಾಚಿಮಾಡ ಕೂಡ ತಮ್ಮ ಮದುವೆ ಜೀವನದಲ್ಲಿ ನೊಂದು ಕಳೆದ ನಾಲ್ಕು ತಿಂಗಳ ಹಿಂದೆ ಡಿವೋರ್ಸ್ ಪಡೆದು ಬಂದವರಾಗಿದ್ದಾರೆ.. ಒಟ್ಟಿನಲ್ಲಿ ಅವರುಗಳ ಬದುಕು ತೆರೆ ಮೇಲೆ ಮಾತ್ರವಲ್ಲ ನಿಜ ಜೀವನದಲ್ಲಿಯೂ ನೂರಾರು ಬಣ್ಣವೆನ್ನಬಹುದು.. ಇನ್ನು ಇವರೆಲ್ಲರೂ ಬಿಗ್ ಬಾಸ್ ಮನೆಗೆ ಕಾಲಿಟ್ಟ ಮೊದಲ ದಿನವೇ ಈ ಎಲ್ಲಾ ವಿಚಾರಗಳನ್ನು ಹಂಚಿಕೊಂಡು ಒಬ್ಬರಿಗೊಬ್ಬರು ಸಾಂತ್ವಾನ ಹೇಳಿದರೆ..

ಮತ್ತೊಂದು ಕಡೆ ಅದಾಗಲೇ ಆರ್ಯವರ್ಧನ್ ಗುರೂಜಿ ಹಾಗೂ ಲೋಕಿ ನಡುವೆ ಮನಸ್ತಾಪ ಮೂಡಿ ಜೋರು ಜೋರಾಗಿಯೇ ಮಾತುಗಳು ನಡೆದು ಮೊದಲ ಜಗಳವೂ ಸಹ ನಡೆದು ಹೋಗಿದೆ.. ಇನ್ನು ಎಂದಿನಂತೆ ಬಿಗ್ ಬಾಸ್ ಒಟಿಟಿಯಲ್ಲಿಯೂ ನಾಮಿನೇಷನ್ ಪ್ರಕ್ರಿಯೆ ನಡೆದಿದ್ದು ಮೊದಲ ವಾರ ಮನೆಯಿಂದ ಹೊರ ಹೋಗಲು ಎಂಟು ಮಂದಿಯನ್ನು ನಾಮಿನೇಟ್ ಮಾಡಲಾಗಿದೆ..

ಹೌದು ಮೊದಲ ವಾರವೇ ಸೋನು ಶ್ರೀನಿವಾಸ್​ ಗೌಡ ಸೇರಿದಂತೆ ಒಟ್ಟು ಎಂಟು ಜನರು ಮೊದಲ ವಾರವೇ ನಾಮಿನೇಟ್​ ಆಗಿದ್ದಾರೆ. ಸ್ಫೂರ್ತಿ ಗೌಡ, ಆರ್ಯವರ್ಧನ್​ ಗುರೂಜಿ, ಜಯಶ್ರೀ ಆರಾಧ್ಯಾ, ನಂದಿನಿ, ಜಶ್ವಂತ್​, ಕಿರಣ್​ ಯೋಗೇಶ್ವರ್​ ಮತ್ತು ಅಕ್ಷತಾ ಕುಕ್ಕಿ ಮೊದಲ ವಾರದ ಎಲಿಮಿನೇಷನ್ ಗೆ ನಾಮಿನೇಟ್ ಆಗಿದ್ದು ಈ ವಾರಾಂತ್ಯದಲ್ಲಿ ಯಾರು ಎಲಿಮಿನೇಟ್ ಆಗಲಿದ್ದಾರೆ ಎಂದು ತಿಳಿಯಲಿದೆ..

ಆದರೆ ಬಹುತೇಕರಿಗೆ ಸೋನು ಶ್ರೀನಿವಾಸ ಗೌಡ ಅವರ ಆಯ್ಕೆ ಬಹಳಷ್ಟು ಜನರಿಗೆ ಅಸಮಾಧಾನ ವ್ಯಕ್ತ ಪಡಿಸಿದ್ದು ಮೊದಲ ವಾರವೇ ಸೋನು ಶ್ರೀನಿವಾಸ ಗೌಡ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದರೂ ಆಶ್ಚರ್ಯ ಪಡಬೇಕಿಲ್ಲ.. ಈ ಹಿಂದೆಯೂ ಸಹ ಸಾಮಾಜಿಕ ಜಾಲತಾಣದ ಕೋಟಾದಡಿಯಲ್ಲಿ ಆಯ್ಕೆಯಾದವರು ಶುರುವಿನಲ್ಲಿಯೇ ಎಲಿಮಿನೇಟ್ ಆಗಿ ಬಂದದ್ದೂ ಉಂಟು.. ಇತ್ತ ಸಾಮಾಜಿಕ ಜಾಲತಾಣದಲ್ಲೂ ಸೋನು ಗೌಡ ಬೇಗ ಎಲಿಮಿನೇಟ್ ಆಗಲಿ ಎನ್ನುತ್ತಿದ್ದು ಈ ವಾರಾಂತ್ಯದ ವರೆಗೆ ಕಾದು ನೋಡಬೇಕಿದೆ..