ಬಿಗ್ ಬಾಸ್ ಮನೆಯಿಂದ ಈ ವಾರ ಎಲಿಮಿನೇಟ್ ಆಗೋ ಸ್ಪರ್ಧಿ ಇವರೇ ನೋಡಿ..

ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ ಒಂಭತ್ತು ಶುರುವಾಗಿ ಅದಾಗಲೇ ಎರಡು ವಾರಗಳು ಕಳೆದಿದ್ದು ಇಂದಿನ ಸಂಚಿಕೆಯ ವಾರದ ಕತೆಯಲ್ಲಿ ಮತ್ತೊಬ್ಬ ಸ್ಪರ್ಧಿ ಬಿಗ್ ಬಾಸ್ ಮನೆಯ ಜರ್ನಿ ಮುಗಿಸಿ ಎರಡು ವಾರದ ಸಂಭಾವನೆಯ ಜೊತೆಗೆ ಹೊರ ನಡೆಯಲಿದ್ದಾರೆ.. ಹೌದು ಬಿಗ್ ಬಾಸ್ ಕನ್ನಡದ ಹೊಸ ಒರಯತ್ನ ಬಿಗ್ ಬಾಸ್ ಓಟಿಟಿ ಸೀಸನ್ ಒಂದು ಜನರಿಗೆ ಅಷ್ಟು ಹತ್ತಿರವಾಗದ ಕಾರಣ.. ಅದನ್ನು ಅಂದುಕೊಂಡದ್ದಕ್ಕಿಂತ ಬೇಗನೇ ಮುಕ್ತಾಯ ಮಾಡಿ ಇತ್ತ ಟಿವಿ ಸೀಸನ್ ಬಿಗ್ ಬಾಸ್ ಒಂಭತ್ತನ್ನು ಆರಂಭಿಸಲಾಯಿತು..

ಇನ್ನು ಇತ್ತ ಸ್ಪರ್ಧಿಗಳ ಆಯ್ಕೆಯ ವಿಚಾರದಲ್ಲಿ ಕೊಂಚ ಬದಲಾವಣೆ ತಂದ ವಾಹಿನಿ ಈ ಬಾರಿ ಹಳೆಯ ಸ್ಪರ್ಧಿಗಳ ಜೊತೆಗೆ ಓಟಿಟಿ ಯಲ್ಲಿನ ಕೆಲ ಸ್ಪರ್ಧಿಗಳು ಜೊತೆಗೆ ಹೊಸ ಸ್ಪರ್ಧಿಗಳನ್ನೂ ಸಹ ಆಯ್ಕೆ ಮಾಡಿಕೊಳ್ಳಲಾಯಿತು.. ಇನ್ನು ಬಿಗ್ ಬಾಸ್ ಎರಡು ವಾರದ ಜರ್ನಿಗೆ ಪ್ರೇಕ್ಷಕರಿಂದ ಬಹಳ ದೊಡ್ಡ ಮಟ್ಟದಲ್ಲಿಯೇ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಬಿಗ್ ಬಾಸ್ ಸೀಸನ್ ಒಂಭತ್ತು ಯಶಸ್ವಿಯಾಗಿದೆ ಎಂಬ ಲೆಕ್ಕಾಚಾರ ಕಿರುತೆರೆಯದ್ದು..

ಇನ್ನು ಈ ಸೀಸನ್ ನಲ್ಲಿಯೂ ಎಲ್ಲಾ ಸೀಸನ್ ಗಳಂತೆಯೇ ಅದಾಗಲೇ ಎರಡೇ ವಾರಕ್ಕೆ ಜಗಳಗಳು ಮನಸ್ತಾಪಗಳು ಕಿರಿಕ್ ಗಳು ಗುಂಪುಗಾರಿಕೆಗಳು ಒಳಗೊಳಗಿನ ಪ್ಲಾನ್ ಗಳು ಎಲ್ಲವೂ ಶುರುವಾಗಿದ್ದು ಹಳೆಯ ಸ್ಪರ್ಧಿಗಳು ಕೊಂಚ ಅಹಂಕಾರದಿಂದಲೂ ಹೊಸಬರು ನಾವೇನು ಕಡಿಮೆ ಇಲ್ಲ ಎನ್ನುವ ರೀತಿಯಿಂದಲೂ ನಡೆದುಕೊಳ್ಳೋದು ಉಂಟು.. ಇನ್ನು ಈ ಸೀಸನ್ ನ ಮೊದಲ ವಾರದಲ್ಲಿ ಐಶ್ವರ್ಯ ಪಿಸ್ಸೆ ಮನೆಯಿಂದ ಹೊರ ನಡೆದಿದ್ದು ಕೇವಲ‌ ಒಂದೇ ವಾರಕ್ಕೆ ತಮ್ಮ ಬಿಗ್ ಬಾಸ್ ಜರ್ನಿಯನ್ನು ಮುಗಿಸಿ ಮನೆಯಿಂದ ಹೊರ ಬಂದರು.. ಯಾರಿಂದ ಮನರಂಜನೆ ಅಥವಾ ಟಿ ಆರ್ ಪಿ ಕಡಿಮೆಯೋ ಅವರನ್ನು ಮೊದಲ ವಾರವೇ ಎಲಿಮಿನೇಟ್ ಮಾಡೋದು ಹೊಸ ವಿಚಾರವೇನೂ ಅಲ್ಲ..

ಇನ್ನು ಇದೀಗ ಎರಡನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಕೂಡ ಇಂದು ನಡೆಯಲಿದ್ದು ಮತ್ತೊಬ್ಬ ಸ್ಪರ್ಧಿ ತಮ್ಮ ಬಿಗ್ ಬಾಸ್ ಜರ್ನಿ ಮುಗಿಸಿ ಎರಡೇ ವಾರಕ್ಕೆ ಮನೆಯಿಂದ ಹೊರ ನಡೆಯಲಿದ್ದಾರೆ.. ಆದರೆ ಅಷ್ಟಕ್ಕೂ ಆ ಸ್ಪರ್ಧಿ ಯಾರು.. ಹೌದು ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ಒಟ್ಟು ಒಂಭತ್ತು ಮಂದಿ ನಾಮಿನೇಟ್ ಆಗಿದ್ದಾರೆ.. ನಂಬರ್ ಎಂದರೆ ನಾನು ನಾನು ಎಂದರೆ ನಂಬರ್ ಎನ್ನುವ ಆರ್ಯವರ್ಧನ್ ಗುರೂಜಿ.. ಸದಾ ಒಂದಿಲ್ಲೊಂದು ಕಿರಿಕ್ ಮಾಡುವ ಪ್ರಶಾಂತ್ ಸಂಬರ್ಗಿ.. ನಟಿ ಮಯೂರಿ.. ದೀಪಿಕಾ ದಾಸ್.. ದರ್ಶ್ ಚಂದ್ರಪ್ಪ.. ಅಮೂಲ್ಯ ಗೌಡ.. ನೇಹಾ ಗೌಡ.. ರೂಪೇಶ್ ರಾಜಣ್ಣ.. ನವಾಜ್ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ..

ಎಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಮನೆಯಲ್ಲಿ ಕಂಟೆಂಟ್ ಕೊಟ್ಟೋನೆ ಬಾಸು.. ಬಿಗ್ ಬಾಸ್ ಮಾತ್ರವಲ್ಲ ಯಾವ ಶೋ ಆಗಲಿ ಯಾವುದೇ ಧಾರಾವಾಹಿಯಾಗಲಿ ಟಿ ಆರ್ ಪಿ ಬಂದರಷ್ಟೇ ಅದಕ್ಕೆ ಬೆಲೆ.. ಅದೇ ರೀತಿ ಬಿಗ್ ಬಾಸ್ ನಲ್ಲಿ ಯಾವ ಸ್ಪರ್ಧಿ ಯಾವ ಮಟ್ಟಕ್ಕೆ ಮನರಂಜನೆ ನೀಡಿವರೋ ಅಷ್ಟೂ ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಉಳಿಯಬಹುದಾಗಿದೆ.. ಮನರಂಜನೆ ಇದ್ದರೆ ವಾಹಿನಿಗೂ ಟಿ ಆರ್ ಪಿ ಹೆಚ್ಚಲಿದೆ ಆ ಕಾರಣಕ್ಕೆ ಟಿ ಆರ್ ಪಿ ತಂದುಕೊಡುವಂತ ಸ್ಪರ್ಧಿಗಳು ಕೊನೆಯ ವಾರದವರೆಗೂ ಇದ್ದೇ ಇರುವರು.. ಇನ್ನು ಈ ವಾರ ನಾಮಿನೇಟ್ ಆದ ಸಾಕಷ್ಟು ಮಂದಿ ಅಂತಹ ಸ್ಪರ್ಧಿಗಳೇ ಇದ್ದು ಅವರೆಲ್ಲಾ ಸೇಫ್ ಆಗೋದು ಖಚಿತ..

ಹೌದು ನಾಮಿನೇಟ್ ಆಗಿರುವ ಒಂಭತ್ತು ಸ್ಪರ್ಧಿಗಳ ಪೈಕಿ ಆರ್ಯವರ್ಧನ್ ಗುರೂಜಿ ಸೇಫ್ ಆಗುವರು.. ಹೌದು ಸಧ್ಯ ಮನೆಯಲ್ಲಿ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಾಗುವ ಹಾಗೂ ಕಣ್ಣು ಬಾಯಿ ತುಟಿ ಎಲ್ಲವನ್ನೂ ನೋಡಿ ಭವಿಷ್ಯ ಹೇಳುತ್ತಾ ಮನರಂಜನೆ ನೀಡುತ್ತಿರುವ ಕಾರಣ ಆರ್ಯವರ್ಧನ್ ಗುರೂಜಿ ಸೇಫ್ ಆಗೋದು ಖಚಿತ.. ಇನ್ನು ಪ್ರಶಾಂತ್ ಸಂಬರ್ಗಿ ಅವರು ಕೊನೆಯ ವಾರದವರೆಗೂ ಬಾರದಿದ್ದರೂ ಒಂದಷ್ಟು ವಾರಗಳಂತೂ ಬಿಗ್ ಬಾಸ್ ಮನೆಯಲ್ಲಿ ಉಳಿಯೋದು ಖಚಿತ ಎನ್ನಬಹುದು..

ಇನ್ನುಳಿದಂತೆ ದರ್ಶ್ ಚಂದ್ರಪ್ಪ ಕೂಡ ವಾದ ವಿವಾದಗಳನ್ನು ಶುರು ಮಾಡೋದ್ರಿಂದ ಅವರೂ ಕೂಡ ಈ ವಾರ ಸೇಫ್ ಆಗಲಿದ್ದಾರೆ.. ಇನ್ನು ನೇಹಾ ಗೌಡ ಹಾಗೂ ಅಮೂಲ್ಯ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಒಂದಷ್ಟು ವಾರಗಳು ಉಳಿಯಲಿದ್ದು ಚೆಂದದ ಮಹಿಳಾ ಸ್ಪರ್ಧಿಗಳೂ ಸಹ ಟಿ ಆರ್ ಪಿ ಗಾಗಿ ಕಂಟೆಂಟ್ ಗಳು ಅನ್ನೋದು ಸುಳ್ಳಲ್ಲ.. ಇನ್ನು ದೀಪಿಕಾ ದಾಸ್ ಟಾಸ್ಕ್ ಗಳಿಗಾಗಿ ಉಳಿದರೆ.. ನವಾಜ್ ಕೂಡ ಮತ್ತಷ್ಟು ದಿನಗಳು ಉಳಿಯಬಹುದಾಗಿದೆ.. ಇನ್ನು ಮಯೂರಿ ಅವರು ಅದಾಗಲೇ ತಮ್ಮ ಪುಟ್ಟ ಕಂದನನ್ನು ಮಿಸ್ ಮಾಡಿಕೊಳ್ಳುತ್ತಿರುವ ಕಾರಣ ಈ ವಾರ ಅವರೇ ಬಿಗ್ ಬಾಸ್ ಮನೆಯಿಂದ ಹೊರ ಹೋಗಬಹುದಾಗಿದೆ.. ಹೌದು ಮಯೂರಿ ಅವರು ತಮ್ಮ‌ ಒಂದೂವರೆ ವರ್ಷದ ಪುಟ್ಟ ಮಗುವನ್ನು ಬಿಟ್ಟು ಬಿಗ್ ಬಾಸ್ ಮನೆಗೆ ಬಂದಿದ್ದಾರೆ.. ಬಂದ ದಿನದಿಂದಲೂ ಮಗುವನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೊಂಚ ಟೀಕೆಗೂ ಒಳಗಾಗಿತ್ತು..

ಇತ್ತ ರೂಪೇಶ್ ರಾಜಣ್ಣ ಅವರೂ ಸಹ ಈ ವಾರ ಯಾವುದೇ ಗೋಜಿಗೆ ಹೋಗದೇ ಸೈಲೆಂಟ್ ಆಗಿದ್ದು ಅವರೇ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ನಡೆದರೂ ಆಶ್ಚರ್ಯ ಪಡಬೇಕಿಲ್ಲ.. ಒಟ್ಟಿನಲ್ಲಿ ಈ ವಾರದ ಎಲಿಮಿನೇಶನ್ ಕಾಯಿ ಮಯೂರಿ ಹಾಗೂ ರೂಪೇಶ್ ರಾಜಣ್ಣ ಅವರ ಮನೆಯಲ್ಲಿದ್ದು ಯಾರು ಬಿಗ್ ಬಾಸ್ ಮನೆಯಿಂದ ಹೊರ ನಡೆಯುವರೋ ಇಂದು ತಿಳಿಯಲಿದೆ.. ಅಸಲಿ ಆಟದಲ್ಲಿ ಇಂದು ಎರಡನೇ ಆಟಗಾರ ಹೊರ ನಡೆಯಲ್ಲಿದ್ದು ಉಳಿದವರ ನಡುವೆ ಮತ್ತಷ್ಟು ವಾರಗಳು ಪೈಪೋಟಿ ಮುಂದುವರೆಯಲಿದೆ..