ಬಿಗ್ ಬಾಸ್ ನಿಂದ ಹೊರ ಬರುತ್ತಿದ್ದಂತೆ ಮದುವೆ..

ಚಿಕ್ಕ ವಯಸ್ಸಿಗೆ ಮನೆಯಿಂದ ಹೊರಗಡೆ ಬಂದು, ಕಷ್ಟಪಟ್ಟು ಉದ್ಯಮ ಶುರು ಮಾಡಿ ಈಗ ತಿಂಗಳಿಗೆ ಲಕ್ಷಾಂತರ ರೂಪಾಯಿ ದುಡಿಯುತ್ತಿರುವ ಜಯಶ್ರೀ ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ರಿಲೇಶನ್‌ಶಿಪ್‌ನಲ್ಲಿರುವ ವಿಚಾರ ಹೇಳಿಕೊಂಡಿದ್ದರು. ವಿವಾಹಿತ ಪುರುಷನ ಜೊತೆ ಪ್ರೀತಿ ಇದ್ದಿದ್ದರ ಬಗ್ಗೆಯೂ ಮಾತನಾಡಿದ್ದ ಜಯಶ್ರೀ ಅವರು ಈಗ ಮನೆಯಿಂದ ಹೊರಗಡೆ ಹೋದಕೂಡಲೇ ಮದುವೆ ಆಗೋದಾಗಿ ಹೇಳಿಕೊಂಡಿದ್ದಾರೆ.

ಚೈತ್ರಾ ಹಳ್ಳಿಕೇರಿ, ಅಕ್ಷತಾ ಕುಕಿ ಜೊತೆ ಮಾತನಾಡುವಾಗ, ನಾನು ನನ್ನ ಹುಡುಗನನ್ನು ತುಂಬ ಪ್ರೀತಿ ಮಾಡುತ್ತೇನೆ, ಅವನು ನನ್ನ ತುಂಬ ಪ್ರೀತಿಸುತ್ತಾನೆ. ಬಿಗ್ ಬಾಸ್ ಮನೆಗೆ ಬರುವ ಮುಂಚೆ ಇಬ್ಬರೂ ರಿಜಿಸ್ಟರ್ ಮ್ಯಾರೇಜ್ ಆಗೋಣ ಅಂದುಕೊಂಡಿದ್ದೆವು. ನನ್ನ ಮನಸ್ಥಿತಿ ಎಲ್ಲಿ ಬದಲಾಗಿ ನಾನೆಲ್ಲಿ ದೂರ ಆಗುತ್ತೀನೋ ಅಂತ ನನ್ನ ಹುಡುಗನಿಗೆ ಭಯ ಇತ್ತು. ಹಾಗಾಗಿ ಅವನು ಮದುವೆಯಾಗೋಣ ಅಂತಿದ್ದ ಎಂದಿದ್ದಾರೆ.

ನಾನು ಬಿಗ್ ಬಾಸ್ ಮನೆಗೆ ಬಂದಕೂಡಲೇ ಅವನ ಮಹತ್ವ ಏನು ಅನ್ನೋದು ಅರ್ಥ ಆಯ್ತು. ಅವನಿಗೆ ಅಷ್ಟೊಂದು ಆದ್ಯತೆ ಕೊಡ್ತಿರಲಿಲ್ಲ. ಈಗ ಅವನೇ ನನ್ನ ಜೀವನ ಅಂತ ಅರ್ಥ ಆಗಿದೆ. ಮನೆಯಿಂದ ಹೊರಗಡೆ ಹೋಗುತ್ತಿದ್ದಹಾಗೆ ಮದುವೆ ಆಗುವೆ ಎಂದು ಜಯಶ್ರೀ ಹೇಳಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಎಷ್ಟೋ ಜನರು ಪ್ರೀತಿಸಿ ಮದುವೆಯಾಗಿದ್ದಾರೆ, ಇನ್ನೂ ಕೆಲವರು ಪರಸ್ಪರ ಅರ್ಥ ಮಾಡಿಕೊಂಟು ಒಟ್ಟಿಗೆ ಇದ್ದಾರೆ. ಹೊರಗಡೆ ಇದ್ದವರಿಗೆ ಈ ಮನೆಯಲ್ಲಿ ಯಾವ ರೀತಿ ವಾತಾವರಣ ಇರತ್ತೆ ಅಂತೆಲ್ಲ ಗೊತ್ತಾಗುವುದಿಲ್ಲ ಎಂದು ಚೈತ್ರಾ ಹಳ್ಳಿಕೇರಿ, ಅಕ್ಷತಾ, ಜಯಶ್ರೀ ಮಾತನಾಡಿಕೊಂಡಿದ್ದಾರೆ.

ನಮ್ಮಣ್ಣ ಪೋಲೀಸರ ವಶಕ್ಕೆ ಹೋಗಿದ್ದರೂ ಅವನಿಗೆ ಮನೆಯಲ್ಲಿ ಬೆಂಬಲ ಇತ್ತು, ನನಗೆ ಬೇಸರ ಆಗಿ ಮನೆಯಿಂದ ಹೊರಗೆ ಬಂದೆ. ಆಮೇಲೆ ನನಗೆ ಯಾರೂ ಫೋನ್ ಮಾಡಲಿಲ್ಲ. ನನಗೆ ಯಾರೂ ಸರಿಯಾಗಿ ಗೈಡ್ ಮಾಡುವವರು ಇರಲಿಲ್ಲ. ಬೇರೆ ಬೇರೆ ಅಭ್ಯಾಸಕ್ಕೆ ಬಿದ್ದುಬಿಟ್ಟೆ. ಆಮೇಲೆ ಇದಕ್ಕಾಗಿ ಮನೆ ಬಿಟ್ಟು ಬಂದ್ನಾ ಅಂತ ನನಗೆ ಅರಿವಾಯಿತು. ಬಳಿಕ ನಾನು ಉದ್ಯಮ ಶುರು ಮಾಡಿದೆ. ಬಿಗ್ ಬಾಸ್‌ ಮನೆಗೆ ಬರುವ ಮುನ್ನ ಹೊಸ ಮನೆ ಖರೀದಿ ಮಾಡಿದೆ. ಇನ್ನೊಂದು ಹೇರ್‌ & ಸ್ಕಿನ್ ಕ್ಲಿನಿಕ್‌ನ ಬ್ರ್ಯಾಂಚ್ ಶುರು ಮಾಡೋಣ ಅಂತ ಅಂದುಕೊಂಡಿದ್ದೇನೆ. ಮಾನಸಿಕವಾಗಿ ಬೆಂಬಲ ಬೇಕು ಅಂತ ವಿವಾಹಿತ ಪುರುಷನ ಜೊತೆ ಸಂಬಂಧದಲ್ಲಿದ್ದೆ ಎಂದು ಈ ಹಿಂದೆ ಜಯಶ್ರೀ ಹೇಳಿಕೊಂಡಿದ್ದರು.

ಜಯಶ್ರೀ ಕೈ ನೋಡಿದ್ದ ಆರ್ಯವರ್ಧನ್ ಗುರೂಜಿ ಅವರು ನಿನಗೆ 2 ಮದುವೆಯಾಗುತ್ತದೆ. ನಿನ್ನ ಮಕ್ಕಳನ್ನು ತುಂಬ ಚೆನ್ನಾಗಿ ನೋಡಿಕೊಳ್ಳುತ್ತೀಯಾ. ನಿನ್ನ ಮಕ್ಕಳು ತುಂಬ ಪುಣ್ಯ ಮಾಡಿರುತ್ತವೆ. ನಿನ್ನ ಮಕ್ಕಳು ನಿನಗಿಂತ ಹೈಟ್ ಇರುತ್ತವೆ. ನಿನ್ನ ಲೈಫ್‌ನಲ್ಲಿ ತುಂಬ ದುಡ್ಡು ಇರುತ್ತದೆ. ಮದುವೆ ಬಗ್ಗೆ ನೀನು ತಲೆ ಕೆಡಿಸಿಕೊಳ್ಳೋದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.

ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯಂ.. ಪಂಡಿತ್ ಶ್ರೀನಿವಾಸ್ ಭಟ್ ಗುರೂಜಿ.. 20 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ಸಾಧ್ಯ ಆಗುವ ರೂಪದಲ್ಲಿ ಖಚಿತ ಪರಿಹಾರ, ನೂರಕ್ಕೆ ನೂರರಷ್ಟು ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ.. ಕರೆ ಅಥವಾ ವಾಟ್ಸಪ್ ಮಾಡಿ 9916889622. ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ, ಅನಾರೋಗ್ಯ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. 9916889622