ಬಿಗ್‌ ಬಾಸ್‌ ಮನೆಗೆ ಕನ್ನಡ ಕಿರುತೆರೆಯ ಖ್ಯಾತ ನಟಿ.. ಈ ಬಗ್ಗೆ ನೇರವಾಗಿ ಹೇಳಿಕೆ ಕೊಟ್ಟ ನಟಿ..

ಕನ್ನಡದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಇನ್ನೊಂದು ತಿಂಗಳಲ್ಲಿ ಆರಂಭವಾಗಲಿದ್ದು ಅದಾಗಲೇ ಬಿಗ್ ಬಾಸ್ ಕನ್ನಡ ಸೀಸನ್ ಒಂಭತ್ತರ ಸ್ಪರ್ಧಿಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಜೋರಾಗಿಯೇ ಚರ್ಚೆ ನಡೆಯುತ್ತಿದೆ.. ಇನ್ನು ಬಿಗ್ ಬಾಸ್ ಗೆ ಹೋಗುವ ಸಂಭಾವ್ಯರ ಪಟ್ಟಿ ಕೂಡ ಹರಿದಾಡುತ್ತಿದ್ದು ಅದರಲ್ಲಿ ಮುಖ್ಯವಾಗಿ ಕೇಳಿ ಬರುತ್ತಿರುವ ಹೆಸರು ನಟಿ ನಮ್ರತಾ ಗೌಡ.. ಹೌದು ಬಿಗ್ ಬಾಸ್ ಮನೆಗೆ ಹಿರಿತೆರೆ ಕಿರುತೆರೆ ಕ್ರೀಡೆ ಸಂಗೀತ ಹೀಗೆ ನಾನಾ ವಿಭಾಗದಿಂದ ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಳ್ಳುವುದು ವಾಡಿಕೆ.. ಅದರಲ್ಲಿಯೂ ಕಿರುತೆರೆ ಕಲಾವಿದರಿಗೆ ಕೊಂಚ ಹೆಚ್ಚಾಗಿಯೇ ಮಣೆ ಮಾಕುವುದುಂಟು.. ಅದೇ ರೀತಿ‌ಈ ಬಾರಿ ಬಿಗ್ ಬಸ್ ಮನೆಗೆ ಹೋಗುವ ಸ್ಪರ್ಧಿಗಳಲ್ಲಿ ಅದರಲ್ಲಿಯೂ ಕಿರುತೆರೆ ಕಲಾವಿದರುಗಳಲ್ಲಿ ನಟಿ ನಮ್ರತಾ ಗೌಡ ಅವರ ಹೆಸರೂ ಸಹ ಕೇಳಿ‌ ಬಂದಿತ್ತು.. ಆದರೀಗ ಆ ಬಗ್ಗೆ ನಮ್ರತಾ ಬೇರೆಯದ್ದೇ ಹೇಳಿಕೆ ನೀಡಿದ್ದಾರೆ..

ಹೌದು ಆಗಸ್ಟ್‌ನಲ್ಲಿ ಕನ್ನಡದ ಬಿಗ್ ಬಾಸ್ ಓಟಿಟಿ ಶುರುವಾಗಲಿದೆ. ಈಗಾಗಲೇ ಯಾರು ಯಾರು ಈ ಶೋನಲ್ಲಿ ಪಾಲ್ಗೊಳ್ಳುತ್ತಾರೆ ಎಂಬ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ನಾಗಿಣಿ 2 ಧಾರಾವಾಹಿ ನಟಿ ನಮ್ರತಾ ಗೌಡ ಬಿಗ್ ಬಾಸ್ ಶೋನಲ್ಲಿ ಭಾಗವಹಿಸಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಇದೇ ಪ್ರಶ್ನೆಯು ನಮ್ರತಾಗೆ ಎದುರಾದಾಗ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಯಾರು ಇಂತಹ ಗಾಸಿಪ್‌ ಹಬ್ಬಿಸೋದು ಎಂದು ಸಿಟ್ಟಾಗಿದ್ದಾರೆ ನಮ್ರತಾ.

ನಮ್ರತಾ ಬಿಗ್ ಬಾಸ್‌ನಲ್ಲಿ ಭಾಗವಹಿಸುತ್ತಿಲ್ಲ.. ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಪುಟ್ಟಗೌರಿ ಮದುವೆ, ನಾಗಿಣಿ 2 ಧಾರಾವಾಹಿ ನಟಿ ನಮ್ರತಾ ಗೌಡ ಅವರು ಭಾಗವಹಿಸುತ್ತಿಲ್ಲ. ನಾನು ಬಿಗ್ ಬಾಸ್‌ಗೆ ಹೋಗುತ್ತಿಲ್ಲ ಎಂದು ನಮ್ರತಾ ಸ್ಪಷ್ಟಪಡಿಸಿದ್ದಾರೆ. ಈ ಶೋನಲ್ಲಿ ಪಾಲ್ಗೊಳ್ಳುವವರು ಬಿಗ್ ಬಾಸ್‌ ಹೋಗುವ ವಿಚಾರವನ್ನು ರಿವೀಲ್ ಮಾಡೋದಿಲ್ಲ. ಇದು ವಾಹಿನಿಯ ನಿಯಮ. ಆದರೆ ತಾನು ಶೋನಲ್ಲಿ ಪಾಲ್ಗೊಳ್ಳೋದಿಲ್ಲ ಎಂದು ನಮ್ರತಾ ನೇರವಾಗಿ ಸ್ಪಷ್ಟವಾಗಿ ಹೇಳಿದ್ದಾರೆ.

ನಮ್ರತಾ ಗೌಡ ನಾಗಿಣಿ 2 ಬಿಡುತ್ತಿಲ್ಲ.. ನಾಗಿಣಿ 2 ಧಾರಾವಾಹಿಯಲ್ಲಿ ಲೀಡ್ ಪಾತ್ರ ಮಾಡುತ್ತಿರುವ ನಮ್ರತಾ ಗೌಡ ಅವರು ಬಿಗ್ ಬಾಸ್ ಶೋಗೆ ಹೋಗಬೇಕು ಎಂದು ಧಾರಾವಾಹಿ ಬಿಡಬೇಕು. ಅದೆಲ್ಲವೂ ಸದ್ಯಕ್ಕೆ ಸಾಧ್ಯವಿಲ್ಲದ ಮಾತು. ಈಗಾಗಲೇ ನಮ್ರತಾ ಸೇರಿ ಇನ್ನೂ ಅನೇಕರು ಈ ಶೋನಲ್ಲಿ ಪಾಲ್ಗೊಳ್ಳುತ್ತಾರೆ ಎಂಬ ಮಾತು ಕೇಳಿ ಬಂದಿತ್ತು. ಅವೆಲ್ಲವೂ ಸುಳ್ಳು ಎನ್ನಲಾಗಿದೆ. ಇನ್ನೂ ಈ ಶೋನಲ್ಲಿ ಪಾಲ್ಗೊಳ್ಳುವ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆಯೇ ವಿನಃ, ಫೈನಲ್ ಆಗಿಲ್ಲ ಎನ್ನಲಾಗಿದೆ..

ಓಟಿಟಿ ಶೋ ನಂತರ ಬಿಗ್ ಬಾಸ್ ಕನ್ನಡ 9.. ವೂಟ್‍ನಲ್ಲಿ ಬಿಗ್ ಬಾಸ್ ಶೋ ಪ್ರದರ್ಶನಕ್ಕೆ ಸಜ್ಜಾಗಿದ್ದು, ವೀಕ್ಷಕರಿಗೆ 24/7 ಲೈವ್ ಆಕ್ಷನ್ ಆಸಕ್ತಿದಾಯಕ ಸಂವಹನಗಳು ಮತ್ತು ಪ್ಲಾಟ್ ಟ್ವಿಸ್ಟ್‌ಗಳನ್ನು ವೀಕ್ಷಕರಿಗೆ ನೀಡಲಾಗುವುದು. ಈ ಹಿಂದೆ ಬಿಗ್ ಬಾಸ್‌ ಶೋ ವಾಹಿನಿಯಲ್ಲಿ ಪ್ರಸಾರವಾಗುವ ವೇಳೆ ಓಟಿಟಿಯಲ್ಲಿಯೂ ಪ್ರಸಾರವಾಗುತ್ತಿತ್ತು. ಈಗ ಓಟಿಟಿಯಲ್ಲಿ ಮಾತ್ರ ಮೊದಲ ಬಾರಿಗೆ ಬಿಗ್ ಬಾಸ್ ಕನ್ನಡ ಶೋ ಪ್ರಸಾರವಾಗುತ್ತಿದೆ. ಆ ನಂತರದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 9 ಪ್ರಸಾರ ಆಗುವುದು ಎಂದು ತಿಳಿದು ಬಂದಿದೆ..

ಇನ್ನು ಈ ಬಗ್ಗೆ ಮಾತನಾಡಿರುವ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಈಗಾಗಲೇ 8 ಸೀಸನ್‌ ಆಯೋಜಿಸಿದ ನಂತರ ಬಿಗ್ ಬಾಸ್ ಕನ್ನಡ ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದಿದೆ. ಈ ವರ್ಷ ಮೊಟ್ಟ ಮೊದಲನೆಯ ಒಟಿಟಿ ಆವೃತ್ತಿಯ ಮೂಲಕ ಮನರಂಜನೆಯಲ್ಲಿ ಕಥೆಗೆ ಟ್ವಿಸ್ಟ್ ತರಲು ಬಹಳ ಸಂತೋಷ ಹೊಂದಿದ್ದೇವೆ. ನಾವು ವೂಟ್‍ನಲ್ಲಿ ಈ ಶೋ ಪ್ರದರ್ಶನಕ್ಕೆ ಸಜ್ಜಾಗಿದ್ದೇವೆ” ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ..

ಓಂ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.. ಮಹರ್ಷಿ ರವೀಂದ್ರ ಭಟ್ ಗುರೂಜಿ.. 20 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 9620202225. ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ, ಅನಾರೋಗ್ಯ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9620202225