ಬೇಕರಿ ಶೈಲಿಯ ರುಚಿಯಾದ ಆಲೂಗಡ್ಡೆ ಚಿಪ್ಸ್..‌ ಮನೆಯಲ್ಲೇ ಮಾಡುವ ಅತ್ಯಂತ ಸುಲಭ ವಿಧಾನ..

ಆಲೂಗಡ್ಡೆ ಚಿಪ್ಸ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ. ಇದನ್ನು ಚಿಕ್ಕವರಿಂದ ದೊಡ್ಡವರವರೆಗೂ ಎಲ್ಲರೂ ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಸಾಮಾನ್ಯವಾಗಿ ಆಲೂಗೆಡ್ಡೆ ಚಿಪ್ಸ್ ಅನ್ನು ಹೊರಗಡೆಯಿಂದ ತಂದು ತಿನ್ನುವುದೇ ಹೆಚ್ಚು. ಮನೆಯಲ್ಲಿ ಚಿಪ್ಸ್ ಮಾಡಲು ಟ್ರೈ ಮಾಡಿದರೆ, ಹೊರಗಡೆ ಸಿಗುವ ಹಾಗೆ ರುಚಿ ಮತ್ತು ಕ್ರಿಸ್ಪಿ ಆಗಿರುವುದಿಲ್ಲ ಎಂದು ಬಹುತೇಕರು ಹೇಳುತ್ತಾರೆ. ಆದರೆ ಇಂದು ನಾವು ಹೇಳಿಕೊಡುವ ರೀತಿಯಲ್ಲಿ ನೀವು ಚಿಪ್ಸ್ ಮಾಡಿದರೆ, ಖಂಡಿತವಾಗಿ ಹೊರಗಡೆ ಸಿಗುವ ರೀತಿಯಲ್ಲಿ ಚಿಪ್ಸ್ ತಯಾರಾಗುತ್ತದೆ. ಇವುಗಳನ್ನು ಮಕ್ಕಳಿಗೆ ಮಾಡಿಕೊಟ್ಟರೆ ತುಂಬಾ ಸಂತೋಷಪಡುತ್ತಾರೆ..ದೊಡ್ಡವರಿಗು ಟೈಮ್ ಪಾಸ್ ಮಾಡಲು ಒಳ್ಳೆಯ ಸ್ನ್ಯಾಕ್ ಆಗಿರುತ್ತದೆ. ಹಾಗಿದ್ರೆ ಆಲೂಗಡ್ಡೆ ಚಿಪ್ಸ್ ಅನ್ನು ಸರಿಯಾದ ರೀತಿಯಲ್ಲಿ ಹೇಗೆ ಮಾಡವುದು ಎಂದು ತೋರಿಸಿಕೊಡುತ್ತೇವೆ ಮುಂದೆ ಓದಿ..

ಮೊದಲಿಗೆ ನಾಲ್ಕು ದೊಡ್ಡ ಸೈಜ್ ಗಳ ಆಲೂಗಡ್ಡೆ ತೆಗೆದುಕೊಂಡು, ಚೆನ್ನಾಗಿ ತೊಳೆದು, ಒಂದು ಕಾಟನ್ ಬಟ್ಟೆಯಲ್ಲಿ ಒರೆಸಿ. ನಂತರ ಅದರ ಸಿಪ್ಪೆಯನ್ನು ಚೆನ್ನಾಗಿ ಪೀಲ್ ಮಾಡಿ. ಸಿಪ್ಪೆಯನ್ನು ಪೂರ್ತಿಯಾಗಿ ತೆಗೆದ ನಂತರ ಮತ್ತೊಮ್ಮೆ ಆಲೂಗಡ್ಡೆಯನ್ನು ತೊಳೆದು, ಕಾಟನ್ ಬಟ್ಟೆಯಲ್ಲಿ ಒರೆಸಿ. ಮಾರ್ಕೆಟ್ ನಲ್ಲಿ ಸಿಗುವ ಅಥವಾ ನಿಮ್ಮ ಮನೆಯಲ್ಲಿರುವ ಚಿಪ್ಸ್ ಮಾಡುವ ಸ್ಲೈಸರ್ ಬಳಸಿ ಆಲೂಗಡ್ಡೆಯನ್ನು ಸಣ್ಣದಾಗಿ ಸ್ಲೈಸ್ ಮಾಡಿಕೊಳ್ಳಿ. ಚಿಪ್ಸ್ ಮಾಡಲು ತೆಳುವಾಗಿ ಆಲೂಗಡ್ಡೆಗಳನ್ನು ಸ್ಲೈಸ್ ಮಾಡಿಕೊಂಡರೆ ಚೆನ್ನಾಗಿರುತ್ತದೆ..

ತುಂಬಾ ದಪ್ಪವಾಗಿಯೂ ಇರದೇ, ತೀರಾ ತೆಳುವಾಗಿಯೂ ಇರದೆ ಇದ್ದರೆ, ಎಣ್ಣೆಯಲ್ಲಿ ಫ್ರೈ ಮಾಡುವಾಗ ಚೆನ್ನಾಗಿರುತ್ತದೆ. ಆಲೋಗಡ್ಡೆಯಲ್ಲಿ ನೀರಿನ ಅಂಶ ಜಾಸ್ತಿ ಇರುವ ಕಾರಣ ಅವುಗಳೆಲ್ಲವು ಹೋಗುವವರೆಗೂ, ಚೆನ್ನಾಗಿ ಒಂದು ಕಾಟನ್ ಬಟ್ಟೆ ತೆಗೆದುಕೊಂಡು, ಒರೆಸಿಕೊಳ್ಳಬೇಕು..ಆಲೂಗಡ್ಡೆಯ ಮೇಲೆ ಒಂದು ಸ್ವಲ್ಪ ಕೂಡ ನೀರಿನ ಅಂಶ ಇರಬಾರದು, ಪೂರ್ತಿ ಡ್ರೈ ಆಗಿರಬೇಕು. ಒರೆಸಿದ ನಂತರ ಒಂದು ಪ್ಲೇಟ್ ನಲ್ಲಿ ಎಲ್ಲವನ್ನು ಇಟ್ಟುಕೊಳ್ಳಿ. ಎಲ್ಲಾ ಆಲೂಗಡ್ಡೆಗಳನ್ನು ಇದೇ ರೀತಿ ಕಾಟನ್ ಬಟ್ಟೆಯಲ್ಲಿ ಚೆನ್ನಾಗಿ ಒರೆಸಿ ಇಟ್ಟುಕೊಳ್ಳಿ.

ನಂತರ ಒರೆಸಿದ ಎಲ್ಲಾ ಆಲೂಗಡ್ಡೆಗಳನ್ನು ಒಂದು ಪ್ಲೇಟ್ ಗೆ ಹಾಕಿಕೊಳ್ಳಿ. ಎಲ್ಲಾ ಆಲೂಗಡ್ಡೆಗಳು ಒಂದು ಸ್ವಲ್ಪವೂ ನೀರಿನ ಅಂಶ ಇರದೇ ಡ್ರೈ ಆಗಿರಬೇಕು. ನಂತರ ಸ್ಟವ್ ಮೇಲೆ ಒಂದು ಬಾಣಲಿ ಇಟ್ಟು, ಎಣ್ಣೆಯನ್ನು ಚೆನ್ನಾಗಿ ಕಾಯಲು ಇಡೀ, ಆಲೂಗಡ್ಡೆ ಹಾಕುವ ಮೊದಲು ಹೈ ಫ್ಲೇಮ್ ನಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ, ಆಲೂಗಡ್ಡೆ ಬಿಡುವಾಗ, ಫ್ಲೇಮ್ ಕಮ್ಮಿ ಮಾಡಿಕೊಳ್ಳಿ. ಆಲೂಗಡ್ಡೆ
ಸ್ಲೈಸ್ ಗಳನ್ನು ಎಣ್ಣೆಯಲ್ಲಿ ಬಿಡುತ್ತಾ ಹೋಗಿ. ಎಲ್ಲವನ್ನು ಒಟ್ಟಿಗೆ ಹಾಕದೆ, ಒಂದೊಂದಾಗಿ ಆಲೂಗಡ್ಡೆಗಳನ್ನು ಹಾಕಬೇಕು, ಎಣ್ಣೆ ಕಾದಿರುವ ಕಾರಣ ಚೆನ್ನಾಗಿ ಫ್ರೈ ಆಗುತ್ತದೆ. ದೊಡ್ಡ ಪಾತ್ರೆಯನ್ನೇ ಇದಕ್ಕೆ ಬಳಸಿ.

ಫ್ರೈ ಆಗುವಾಗ ಬಣ್ಣ ಬದಲಾಗಿ, ಬಬಲ್ಸ್ ಬರೋದು ಕಡಿಮೆಯಾಗಿದೆ ಅಂದ್ರೆ, ಚಿಪ್ಸ್ ಪರ್ಫೆಕ್ಟ್ ಆಗಿ ಆಗಿದೆ ಎಂದು ಅರ್ಥ. ಆಗ ನೀವು ಅದನ್ನು ಹೊರತೆಗೆದು, ಒಂದು ಪ್ಲೇಟ್ ಗೆ ಹಾಕಿಕೊಳ್ಳಿ. ಎಲ್ಲಾ ಆಲೂಗಡ್ಡೆ ಸ್ಲೈಸ್ ಗಳನ್ನು ಇದೇ ರೀತಿ ಫ್ರೈ ಮಾಡಿ. ಎಲ್ಲವನ್ನು ಫ್ರೈ ಮಾಡಿದ ನಂತರ ಚಿಪ್ಸ್ ಮೇಲೆ ಅಚ್ಚಖಾರದ ಪುಡಿ, ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಟಾಸ್ ಮಾಡಿಕೊಳ್ಳಿ. ಈಗ ಹೊರಗಡೆ ಸಿಗುವ ಶೈಲಿಯ ಚಿಪ್ಸ್ ನಿಮ್ಮ ಮನೆಯಲ್ಲೇ ಸಿದ್ಧವಾಗಿದೆ. ಹೊರಗಿನಿಂದ ತಂದು ಮಕ್ಕಳಿಗೆ ಕೊಡುವ ಬದಲು ಮನೆಯಲ್ಲೇ ಸುಲಭವಾಗಿ ಈ ಆಲೂಗಡ್ಡೆ ಚಿಪ್ಸ್ ಟ್ರೈ ಮಾಡಿ.