ಬದಲಾಗು ನೀನು ಹಾಡಲ್ಲಿ ಸುದೀಪ್ ಯಾಕಿಲ್ಲ? ಸತ್ಯ ತಿಳಿಸಿದ ಸಚಿವ ಸುಧಾಕರ್..

ನಿನ್ನೆಯಷ್ಟೇ ವೈದ್ಯಕೀಯ ಶಿಕ್ಷಣ ಇಲಾಖೆ ವತಿಯಿಂದ ಕೊರೊನಾ ಜಾಗೃತಿ ಕುರಿತಾದ ಹಾಗೂ ಕೊರೊನಾ ವಾರಿಯರ್ಸ್ ಗಳಿಗೆ ಧನ್ಯವಾದ ತಿಳಿಸುವ ಸಲುವಾಗಿ ಬದಲಾಗು ನೀನು ಬದಲಾಯಿಸು ನೀನು ದೃಶ್ಯ ರೂಪಕವೊಂದು ಬಿಡುಗಡೆಯಾಗಿದೆ.. ಹಾಡಿನಲ್ಲಿ ಸ್ಯಾಂಡಲ್ವುಡ್ ನ ಬಹುತೇಕ ಎಲ್ಲಾ ಸೆಲಿಬ್ರೆಟಿಗಳು ಕಾಣಿಸಿಕೊಂಡಿದ್ದಾರೆ..

ರವಿಚಂದ್ರನ್, ಶಿವರಾಜ್ ಕುಮಾರ್, ದರ್ಶನ್, ಪುನೀತ್, ಯಶ್, ಉಪೇಂದ್ರ, ಸುಮಲತಾ ಅಂಬರೀಶ್, ಅಭಿಷೇಕ್, ಅನುಶ್ರೀ, ದೃವ ಸರ್ಜಾ, ರಕ್ಷಿತ್ ಶೆಟ್ಟಿ, ಗಣೇಶ್, ರಮೇಶ್ ಇನ್ನೂ ಮುಂತಾದವರು ಕಾಣಿಸಿಕೊಂಡಿದ್ದಾರೆ.. ಜೊತೆಗೆ ಕ್ರಿಕೆಟ್ ಆಟಗಾರರಾದ ಅನಿಲ್ ಕುಂಬ್ಳೆ ಅವರು, ರಾಹುಲ್ ದ್ರಾವಿಡ್ ಅವರೂ ಸಹ ಕಾಣಿಸಿಕೊಂಡಿದ್ದಾರೆ..

ಆದರೆ ಹಾಡಿನಲ್ಲಿ ಸ್ಯಾಂಡಲ್ವುಡ್ ನ ಪ್ರಮುಖ ನಟರಲ್ಲಿ ಒಬ್ಬರಾದ ಕಿಚ್ಚ ಸುದೀಪ್ ಅವರು ಇಲ್ಲದಿರುವುದು ಅವರ ಅಭಿಮಾನಿಗಳಿಗೆ ತೀವ್ರ ಬೇಸರವನ್ನು ಉಂಟು ಮಾಡಿತ್ತು.. ಹೌದು ಈ ಹಾಡಿನ ಪರಿಕಲ್ಪನೆ ಹಾಗೂ ನಿರ್ದೇಶನ ಪವನ್ ಒಡೆಯರ್ ಅವರದ್ದಾಗಿದ್ದು, ಹರಿಕೃಷ್ಣ ಅವರು ಸಂಗೀತ ನೀಡಿದ್ದಾರೆ.. ಇಮ್ರಾನ್ ಸರ್ದಾರಿಯಾ ಅವರು ಕೊರಿಯೋಗ್ರಾಫ್ ಮಾಡಿದ್ದಾರೆ.. ಹೊಸದರಲ್ಲಿ ಹಾಡಿನ ಶೂಟಿಂಗ್ ಸಮಯದಲ್ಲಿ ಪವನ್ ಒಡೆಯರ್ ಅವರು ಹಾಡಿನಲ್ಲಿ ಭಾಗವಹಿಸುತ್ತಿದ್ದ ಎಲ್ಲರ ಫೋಟೋವನ್ನು ಹಾಕಿಕೊಂಡಿದ್ದರು.. ಆ ಸಮಯದಲ್ಲಿಯೇ ಪವನ್ ಒಡೆಯರ್ ಅವರ ವಿರುದ್ಧ ಸುದೀಪ್ ಅವರ ಫೋಟೋ ಯಾಕಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದರು‌. ಆ ಸಮಯದಲ್ಲಿ ಇದಕ್ಕೆಲ್ಲಾ ಉತ್ತರವನ್ನು ಸುಧಾಕರ್ ಅವರೇ ನೀಡಲಿದ್ದಾರೆ ಎಂದು ಒಅವನ್ ಒಡೆಯರ್ ಅವರು ತಿಳಿಸಿದ್ದರು..

ಇದೀಗ ಹಾಡು ಬಿಡುಗಡೆಯಾಗಿದ್ದು ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.. ಈ ಸಮಯದಲ್ಲಿ ಹಾಡಿನಲ್ಲಿ ಸುದೀಪ್ ಅವರು ಯಾಕಿಲ್ಲ ಎಂಬ ಪ್ರಶ್ನೆ ಮತ್ತೆ ಮೂಡಿದ್ದು, ಇದಕ್ಕೆ ಸುಧಾಕರ್ ಅವರು ಉತ್ತರಿಸಿದ್ದಾರೆ.. ಹೌದು ಎಲ್ಲರಂತೆಯೇ ಸುದೀಪ್ ಅವರನ್ನು ಸಹ ನಾನು ಸಂಪರ್ಕ ಮಾಡಿದ್ದೆ.. ಅವರ ಮ್ಯಾನೇಜರ್ ಮಾತನಾಡಿದ್ದರು.. ಅವರಿಗೆ ಎಲ್ಲಾ ವಿಚಾರ ತಿಳಿಸಿದ್ದೆ.. ಆದರೆ ಮತ್ತೆ ಅವರು ಯಾಕೆ ಸ್ಪಂದಿಸಿ ಭಾಗವಹಿಸಲಿಲ್ಲ ಎಂಬುದು ನನಗೂ ತಿಳಿದಿಲ್ಲ.. ಬಹುತೇಕ ಎಲ್ಲರೂ ಸ್ವಯಂ ಪ್ರೇರಿತರಾಗಿ ಈ ಹಾಡಿನಲ್ಲಿ ಪಾಲ್ಗೊಂಡಿದ್ದಾರೆ ಎಂದಿದ್ದಾರೆ..