ಐರಾಳಿಗೆ ಮುಡಿ ಕೊಟ್ಟು ಕಣ್ಣೀರಿಟ್ಟ ಯಶ್.. ಫೋಟೋ ಗ್ಯಾಲರಿ ನೋಡಿ..

ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಮುದ್ದು ಕಂದ ಐರಾಳಿಗೆ ಇಂದು ಮುಡಿ ಕೊಡುವ ಶಾಸ್ತ್ರ ನಡೆದಿದೆ.. ಹೌದು ನಂಜನಗೂಡಿನ ನಂಜುಂಡೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಇಂದು ಬೆಳಿಗ್ಗೆ ಐರಾಳಿಗೆ ಮುಡಿ ನೀಡಲಾಗಿದೆ..

ಮಗುವಿನ ತಂದೆ ಮನೆಯ ದೇವರಿಗೆ ಮೊದಲ ಮುಡಿ..‌ ತಾಯಿ ಮನೆಯ ದೇವರಿಗೆ ಎರಡನೇ ಮುಡಿ ನೀಡುವುದು ಮೈಸೂರು ಭಾಗದ ಸಂಪ್ರದಾಯ.. ಇದೇ ಕಾರಣಕ್ಕೆ ಇಂದು ಯಶ್ ಅವರ ಮನೆ ದೇವರಾದ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಐರಾಳ ಮುಡಿ ಕೊಡುವ ಶಾಸ್ತ್ರವನ್ನು ನೆರವೇರಿಸಲಾಯಿತು..

ಇನ್ನು ಕಳೆದ ವರ್ಷ ಐರಾಳಿಗೆ ಕಿವಿ ಚುಚ್ಚುವ ಶಾಸ್ತ್ರ ಮಾಡಲಾಗಿತ್ತು.. ಆ ಸಮಯದಲ್ಲಿ ಮಗಳಿಗೆ ನೋವಾಯ್ತು ಎಂದು ಕಣ್ಣೀರಿಟ್ಟಿದ್ದ ವಿಷಯವನ್ನು ರಾಧಿಕಾ ಪಂಡಿತ್ ಹಂಚಿಕೊಂಡಿದ್ದರು..

ಇದೀಗ ಐರಾಳಿಗೆ ಮುಡಿ ಕೊಡುವ ಸಂದರ್ಭದಲ್ಲಿಯೂ ಅದೇ ಘಟನೆ ನಡೆದಿದೆ..‌ ಹೌದು ಮಗಳಿಗೆ ಮುಡಿ ನೀಡುವ ಸಂದರ್ಭದಲ್ಲಿ ಐರಾ ಅಳುತ್ತಿದ್ದದ್ದನ್ನು ನೋಡಿ ಎಲ್ಲಿ ಮಗಳಿಗೆ ನೋವಾಗೋಯ್ತೋ ಎಂದು ಯಶ್ ಕಣ್ಣೀರಿಟ್ಟಿದ್ದಾರೆ..

ಹೊರಗೆ ರಾಕಿಂಗ್ ಸ್ಟಾರ್ ಆದರೂ ಕೂಡ ಮಗಳ ವಿಚಾರ ಅಂತ ಬಂದರೆ ನಮ್ ರಾಕಿ ಭಾಯ್ ಒಳಗಿನ ತಂದೆಯ ಮನಸ್ಸು ಕಣ್ಣೀರಿಡುವಷ್ಟು ಮೃದು..‌ ಇನ್ನು ಮುಡಿ ಕೊಟ್ಟು ಸ್ನಾನ ಮಾಡಿಸಿಕೊಂಡು.. ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ..

Tags: