ಕೇವಲ 20 ವರ್ಷಕ್ಕೆ ಕೋಟಿ ಬೆಲೆಯ ಕಾರ್ ಖರೀದಿಸಿದ ಕಿರುತೆರೆಯ ಖ್ಯಾತ ನಟಿ

ಬಣ್ಣದ ಲೋಕ ಎನ್ನುವುದೇ ಹೀಗೆ, ಎಲ್ಲರನ್ನು ಇದು ಕೈಬೀಸಿ ಕರೆಯುವುದಿಲ್ಲ, ಬಂದ ಎಲ್ಲರನ್ನು ಇದು ಒಪ್ಪಿಕೊಳ್ಳುವುದು ಇಲ್ಲ. ಈ ಬಣ್ಣದ ಪ್ರಪಂಚದ ಮೇಲೆ ಆಕರ್ಷಿತರಾಗಿ ಬರುವವರ ಅದೃಷ್ಟ ಕೈಹಿಡಿದು ಇಲ್ಲಿ ದಶಕಗಳ ಕಲಾ ನೆಲೆಯೂರಿದವರು ಇದ್ದಾರೆ, ಹಾಗೆಯೇ ಅದೃಷ್ಟ ಕೈಕೊಟ್ಟು ಒಂದು ಹೊತ್ತಿನ ಊಟಕ್ಕೂ ಕಷ್ಟ ಪಟ್ಟಂಥವರ ಉದಾಹರಣೆ ಕೂಡ ಇಲ್ಲಿ ಸಾಕಷ್ಟಿದೆ. ಚಿತ್ರರಂಗ ಮತ್ತು ಕಿರುತೆರೆಗೆ ಎಂಟ್ರಿ ಕೊಟ್ಟವರು, ತಮಗೆ ಸಿಗುವ ಅವಕಾಶಗಳನ್ನು ಹೇಗೆ ಬಳಸಿಕೊಳ್ಳುತ್ತಾರೆ, ತಮಗೆ ಸಿಗುಗ ಆಯ್ಕೆಗಳಲ್ಲಿ ಒಳ್ಳೆಯದನ್ನು ಹೇಗೆ ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನುವುದೇ ಇಲ್ಲಿನ ಯಶಸ್ಸಿನ ಗುಟ್ಟು. ಈ ವಿಚಾರ ನಿಮಗೆ ಹೇಳುತ್ತಿರುವುದು ಯಾಕೆ ಅಂದ್ರೆ, ಕೇವಲ 20 ವರ್ಷದ ನಟಿಯೊಬ್ಬಳು ಇಂದು ಒಂದು ಕೋಟಿ ಬೆಲೆ ಬಾಳುವ ಕಾರ್ ಖರೀದಿ ಮಾಡಿದ್ದಾಳೆ ಎನ್ನುವುದು ಬಹಳ ವಿಶೇಷ..

ಹೀಗೆ ಚಿಕ್ಕ ವಯಸ್ಸಿಗೆ ಕೋಟಿ ಬೆಲೆಯ ಕಾರ್ ಖರೀದಿ ಮಾಡಿರುವ ಯುವಕಲಾವಿದೆಯ ಹೆಸರು ಅವನೀತ್ ಕೌರ್. ಈಕೆ ಉತ್ತರ ಭಾರತದವರು, ಆದರೆ ಭಾರತದ ಎಲ್ಲರಿಗೂ ಈಕೆಯ ಪರಿಚಯವಿದೆ. ಅದು ಈಕೆ ನಟಿಸಿದ್ದ ಒಂದು ಜಾಹೀರಾತಿನ ಮೂಲಕ. ಅವನೀತ್ ನಟಿಸಿದ್ದ ಜಾಹಿರಾತು ಬಹಳ ಫೇಮಸ್ ಆಗಿತ್ತು. ಕೆಲ ವರ್ಷಗಳ ಹಿಂದೆ ಬಂದಿದ್ದ, ಲೈಫ್ ಬಾಯ್ ಸೋಪ್ ಜಾಹಿರಾತಿನಲ್ಲಿ ‘ಬಂಟಿ, ನಿನ್ನ ಸೋಪ್ ಸ್ಲೋ ನ..’ ಎಂದು ಕೇಳುವ ಹುಡುಗಿ ನಿಮಗೆ ನೆನಪಿದ್ದಾಳಾ? ಈ ಜಾಹಿರಾತು ಕರೊನಾ ಮೊದಲ ಅಲೆ ಸಮಯದಲ್ಲಿ ಕೂಡ ಬಹಳ ವೈರಲ್ ಆಗಿತ್ತು

ಆ ಜಾಹೀರಾತಿನ ಪುಟ್ಟ ಹುಡುಗಿಯೇ ಇಂದು ದುಬಾರಿ ಬೆಲೆಯ ಕಾರ್ ಖರೀದಿ ಮಾಡಿದ್ದಾರೆ. ಅವನೀತ್ ಕೌರ್ ಇಂದು ಬೆಳೆದು ದೊಡ್ಡವಳಾಗಿದ್ದಾರೆ, ಕಿರುತೆರೆ ಬೆಳ್ಳಿತೆರೆ ಎರಡರಲ್ಲೂ ಬ್ಯುಸಿ ಆಗಿದ್ದಾರೆ. ಅವನೀತ್ ಕೌರ್ 9 ವರ್ಷದ ಪುಟ್ಟ ಬಾಲಕಿ ಆಗಿದ್ದಾಗಲೇ ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟವರು, ‘ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಲೈಟ್ಲ್ ಮಾಸ್ಟರ್ಸ್’ ಶೋನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು ಅವನೀತ್ ಕೌರ್. ಈ ಶೋ ಇಂದ 7ನೇ ಸ್ಥಾನಕ್ಕೆ ಹೊರಬಂದಿದ್ದರು. ಆದರೆ ಜನರಿಗೆ ಇವರು ತುಂಬಾ ಇಷ್ಟವಾಗಿದ್ದರು.

ಈ ಡ್ಯಾನ್ಸ್ ಶೋ ನಂತರ ಒಂದೆರಡು ಬೇರೆ ಬೇರೆ ರಿಯಾಲಿಟಿ ಶೋಗಳಲ್ಲಿ ಅವನೀತ್ ಕಾಣಿಸಿಕೊಂಡರು. ಹಲವಾರು ಜಾಹೀರಾತುಗಳಲ್ಲಿ ಸಹ ಕಾಣಿಸಿಕೊಂಡರು ಅವನೀತ್, ಹೀಗೆ ಕಾಣಿಸಿಕೊಂಡ ಒಂದು ಜಾಹಿರಾತು ಲೈಫ್ ಬಾಯ್ ಆಡ್ ಆಗಿದೆ. ಕೆಲವು ಧಾರಾವಾಹಿಗಲ್ಲಿ, ಕೆಲವು ಹಿಂದಿ ಸಿನಿಮಾಗಳಲ್ಲಿ ಹಾಗೂ ಕೆಲವು ಮ್ಯೂಸಿಕ್ ವಿಡಿಯೋಗಳಲ್ಲಿ ಸಹ ಅವನೀತ್ ಬಣ್ಣ ಹಚ್ಚಿದ್ದರು. ಇದೀಗ ಇವರು ಹೀರೋಯಿನ್ ಆಗಿ ಬಾಲಿವುಡ್ ಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.

ಬಾಲಿವುಡ್ ನ ಖ್ಯಾತ ನಟಿ ಕಂಗನಾ ರಣಾವತ್ ಅವರು ಹೊಸ ನಿರ್ಮಾಣ ಸಂಸ್ಥೆ ಶುರು ಮಾಡಿ, ಅದರ ಮೂಲಕ ಮೊದಲ ಸಿನಿಮಾ ಪ್ರೊಡ್ಯೂಸ್ ಮಾಡುತ್ತಿದ್ದಾರೆ, ಸಿನಿಮಾ ಹೆಸರು ಟೀಕು ವೆಡ್ಸ್ ಶೇರು, ಈ ಸಿನಿಮಾದ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ ಅವನೀತ್ ಕೌರ್. ಇವರ ಜೊತೆ ಖ್ಯಾತ ನವಾಜುದ್ದೀನ್ ಸಿದ್ದಿಕಿ ಅವರು ನಟಿಸುತ್ತಿದ್ದಾರೆ. ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಆದಷ್ಟು ಬೇಗ ತೆರೆಮೇಲೆ ತರುವ ಪ್ಲಾನ್ ನಲ್ಲಿದ್ದಾರೆ ನಟಿ ಕಂಗನಾ.

ಹೀಗೆ ಸಿಕ್ಕ ಅವಕಾಶಗಳ ಸದುಪಯೋಗ ಮಾಡಿಕೊಂಡ ನಟಿ ಅವನೀತ್ ಕೌರ್, ಇಂದು ಬರೋಬ್ಬರಿ ಒಂದು ಕೋಟಿ ಬೆಲೆ ಬಾಳುವ ರೇಂಜ್ ರೋವರ್ ಕಾರ್ ಖರೀದಿಸಿದ್ದಾರೆ. ಈಕೆ ಹುಟ್ಟಿದ್ದು 2001ರಲ್ಲಿ, ಈಗಷ್ಟೇ 20 ವರ್ಷ ತುಂಬಿದೆ. ಇಷ್ಫು ಚಿಕ್ಕ ವಯಸ್ಸಿಗೆ, ಇಷ್ಟೆಲ್ಲಾ ಹಣ ಸಂಪಾದನೆ ಮಾಡಿ, ದುಬಾರಿ ಬೆಲೆಯ ಕಾರ್ ಖರೀದಿ ಮಾಡಿರುವುದು ಒಳ್ಳೆಯ ವಿಚಾರ. ಈಕೆ ಖರೀದಿ ಮಾಡಿರುವ ಕಾರ್ ಬೆಲೆ 83 ಲಕ್ಷ, ಇದರ ಆನ್ ರೋಡ್ ಬೆಲೆ 1 ಕೋಟಿ ಎನ್ನಲಾಗುತ್ತಿದೆ. ಈ ಹೊಸ ಕಾರ್ ಖರೀದಿ ಮಾಡಿರುವ ಸಂತೋಷದ ವಿಚಾರವನ್ನು ಅವನೀತ್ ಕೌರ್ ಸೋಷಿಯಲ್ ಮೀಡಿಯಾ ಮೂಲಕ ಶೇರ್ ಮಾಡಿಕೊಂಡಿದ್ದಾರೆ.

ಈಕೆಯ ಅಭಿಮಾನಿಗಳೆಲ್ಲರು ಹೊಸ ಕಾರ್ ಖರೀದಿ ಮಾಡಿರುವುದಕ್ಕೆ ಶುಭಾಶಯ ತಿಳಿಸುತ್ತಿದ್ದಾರೆ. ಸಧ್ಯಕ್ಕೆ ಸಿನಿಮಾ ಕೆಲಸಗಳಲ್ಲಿ ಸದ್ಯಕ್ಕೆ ಅವನೀತ್ ಬಹಳ ಬ್ಯುಸಿ ಆಗಿದ್ದಾರೆ ಅವನೀತ್, ಆದರೆ ಫೋಟೋಶೂಟ್ ಗಳಲ್ಲಿ ಪಾಲ್ಗೊಂಡು, ಆಗಾಗ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. 20 ವರ್ಷಕ್ಕೆ ಈ ಹಂತ ತಲುಪಿದ್ದಾರೆ ಅವನೀತ್ ಕೌರ್. ಹೀರೋಯಿನ್ ಆಗಿ ಬಾಲಿವುಡ್ ಗೆ ಎಂಟ್ರಿ ಕೊಡಲಿರುವ ಅವನೀತ್ ಕೌರ್ ಇನ್ನು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸೋಣ.