ಅಶ್ವಿನಿ ಅವರ ಕಡೆಯಿಂದ ಬಂತು ಗುಡ್‌ ನ್ಯೂಸ್..

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಅಭಿಮಾನಿಗಳ ಮನಸ್ಸಿನಲ್ಲಿ ಅಜರಾಮರವಾಗಿ ಉಳಿದಿದ್ದಾರೆ. ಪುನೀತ್ ಅವರು ಇನ್ನಿಲ್ಲವಾಗಿ 5 ತಿಂಗಳು ಕಳೆದಿದೆ. ಆದರೆ ಆ ನೋವು ಎಲ್ಲರ ಮನಸ್ಸಲ್ಲೂ ಹಾಗೆಯೇ ಇದೆ. ಪುನೀತ್ ಅವರ ಹುಟ್ಟುಹಬ್ಬಕ್ಕೆ ಅವರ ಅಭಿಮಾನಿಗಳಿಗೆ ಜೇಮ್ಸ್ ಸಿನಿಮಾ ಭರ್ಜರಿ ಗಿಫ್ಟ್ ಆಗಿ ಸಿಕ್ಕಿತ್ತು. ಅಪ್ಪು ಅವರು ಅಭಿನಯಿಸಿರುವ ಕೊನೆಯ ಕಮರ್ಷಿಯಲ್ ಸಿನಿಮಾ ಜೇಮ್ಸ್ ಎಂದು ಅಭಿಮಾನಿಗಳು ಭರ್ಜರಿಯಾಗಿ, ಭಾವನಾತ್ಮಕವಾಗಿ ಮತ್ತು ನೋವಿನಿಂದ ಸಿನಿಮಾವನ್ನು ಬರಮಾಡಿಕೊಂಡರು. ಜೇಮ್ಸ್ ಸಿನಿಮಾ ಎಲ್ಲಾ ದಾಖಲೆಗಳನ್ನು ಮುರಿದಿದೆ. ಜೇಮ್ಸ್ ನಂತರ ಮುಂದೇನು ಎಂದು ಅಭಿಮಾನಿಗಳು ಯೋಚನೆ ಮಾಡುತ್ತಿರುವಾಗಲೇ, ಮೇ ತಿಂಗಲಿನಲ್ಲಿ ಪುನೀತ್ ಅವರ ಅಭಿಮಾನಿಗಳಿಗಾಗಿ ದೊಡ್ಡ ಸುದ್ದಿಯೊಂದು ಕಾದಿದೆ.

ಜೇಮ್ಸ್ ಬಿಡುಗಡೆಗಿಂತ ಮೊದಲೇ ಹಲವು ದಾಖಲೆಗಳನ್ನು ಮುರಿದಿತ್ತು. ಟಿಕೆಟ್ ಬುಕಿಂಗ್ ಶುರುವಾದ ಕೆಲವೇ ನಿಮಿಷಗಳಲ್ಲಿ ಎಲ್ಲಾ ಟಿಕೆಟ್ಸ್ ಗಳು ಸೋಲ್ಡ್ ಔಟ್ ಆಗಿದ್ದವು. ಇನ್ನು ಸಿನಿಮಾ ಬಿಡಿಗಡೆಯನ್ನು ಕರುನಾಡ ಜನತೆ ಹಬ್ಬದ ರೀತಿ ಸಂಭ್ರಮಿಸಿದರು. ಪುನೀತ್ ಅವರ ಹುಟ್ಟುಹಬ್ಬವನ್ನು, ಅಪ್ಪು ಹಬ್ಬ ಎಂದು ಪ್ರೀತಿಯಿಂದ ಕರೆದರು. ಜೇಮ್ಸ್ ಸಿನಿಮಾವನ್ನು ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ, ಥಿಯೇಟರ್ ಗೆ ಬಂದು ನೋಡಲು ಶುರು ಮಾಡಿದರು. ಇಂದಿಗೂ ಥಿಯೇಟರ್ ಗೆ ಬಂದು ಸಿನಿಮಾ ವೀಕ್ಷಿಸುವವರ ಸಂಖ್ಯೆ ಕಡಿಮೆಯಾಗಿಲ್ಲ.

ಇದೇ ಏಪ್ರಿಲ್ 14ರಂದು ಜೇಮ್ಸ್ ಸಿನಿಮಾ, ಸೋನಿ ಲೈವ್ ಓಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ. ಓಟಿಟಿಯಲ್ಲಿ ಬಿಡುಗಡೆ ಆಗಲಿದೆ ಎಂದು ಗೊತ್ತಿದ್ದರೂ ಸಹ ಥಿಯೇಟರ್ ಗೆ ಬಂದು ಅಪ್ಪು ಅವರನ್ನು ಕಣ್ತುಂಬಿಕೊಳ್ಳುತ್ತಿರುವವರ ಸಂಖ್ಯೆ ಕಡಿಮೆ ಆಗುತ್ತಿಲ್ಲ. ಬಿಡುಗಡೆಯಾದ ನಾಲ್ಕೇ ದಿನಕ್ಕೆ ಜೇಮ್ಸ್ ಸಿನಿಮಾ 100 ಕೋಟಿ ಕಲೆಕ್ಷನ್ ಮಾಡಿ, ಕನ್ನಡ ಸಿನಿಮಾಗಳ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿತ್ತು. ಜೇಮ್ಸ್ ಸಿನಿಮಾ ನಂತರ ಮುಂದೇನು ಎಂದು ಹೊಸ ಅಪ್ಡೇಟ್ ಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಗಂಧದಗುಡಿ ಸಿಗಲಿದೆ.

ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಗಂಧದಗುಡಿಯನ್ನು ಮೇ ತಿಂಗಳಿನಲ್ಲಿ ತೆರೆಗೆ ತರುವ ಕೆಲಸಗಳು ನಡೆಯುತ್ತಿದೆ. ಗಂಧದಗುಡಿ ಅಪ್ಪು ಅವರ ಕನಸಿನ ಕೂಸು, ಈ ಪ್ರಾಜೆಕ್ಟ್ ಬಗ್ಗೆ ತುಂಬಾ ಪ್ರೀತಿ ಮತ್ತು ಆಸಕ್ತಿಯಿಂದ ಕೆಲಸ ಮಾಡಿದ್ದಾರೆ ಪವರ್ ಸ್ಟಾರ್. ಪುನೀತ್ ಕರ್ನಾಟಕದ ಕಾಡು ಮೇಡುಗಳನ್ನು ಸುತ್ತಿ, ಗಂಧದಗುಡಿಯ ಚಿತ್ರೀಕರಣ ಮಾಡಿದ್ದಾರೆ. ಈ ಕೆಲಸಕ್ಕೆ ಪುನೀತ್ ಅವರಿಗೆ ಸಾಥ್ ನೀಡಿದ್ದು, ನಿರ್ದೇಶಕ ಅಮೋಘ ವರ್ಷ, ವೈಲ್ಡ್ ಕರ್ನಾಟಕ ಡಾಕ್ಯುಮೆಂಟರಿ ಮಾಡಿದ್ದ ಅಮೋಘ ವರ್ಷ ಅವರ ಜೊತೆ ಗಂಧದ ಗುಡಿ ಕನಸನ್ನು ಹೆಣೆದರು ಅಪ್ಪು.

ಆದರೆ ಗಂಧದ ಗುಡಿ ತೆರೆಮೇಲೆ ಬರುವ ಮೊದಲೇ ಅಪ್ಪು ಇನ್ನಿಲ್ಲವಾದರು. ಗಂಧದಗುಡಿಯ ಮೂಲಕ ಕರ್ನಾಟಕದ ವನ್ಯಪ್ರದೇಶಗಳ ಸಂಪತ್ತನ್ನು ನೈಜವಾಗಿ ಎಲ್ಲರೂ ನೋಡಬೇಕೆನ್ನುವುದು ಪುನೀತ್ ಅವರ ಆಸೆಯಾಗಿತ್ತು. ಈ ಪ್ರಾಜೆಕ್ಟ್ ಬಗ್ಗೆ ಅವರಿಗೆ ಹೆಮ್ಮೆ ಇತ್ತು. ಕಳೆದ ವರ್ಷ ಕನ್ನಡ ರಾಜ್ಯೋತ್ಸವದಂದು ಗಂಧದಗುಡಿ ಟೀಸರ್ ಬಿಡುಗಡೆ ಮಾಡುವ ಪ್ಲಾನ್ ನಲ್ಲಿದ್ದ ಪವರ್ ಸ್ಟಾರ್, ಅದಕ್ಕಿಂತ ಮೊದಲೇ ಇಹಲೋಕ ತ್ಯಜಿಸಿದರು. ಆದರೆ ಅಪ್ಪು ಅವರು ಕಂಡ ಆ ಕನಸು ಹಾಗೆಯೇ ಉಳಿಯಲು ಅಶ್ವಿನಿ ಅವರು ಬಿಡಲಿಲ್ಲ.

ಗಂಧದಗುಡಿ ಕೆಲಸವನ್ನು ಪಿ.ಆರ್.ಕೆ ಪ್ರೊಡಕ್ಷನ್ಸ್ ಮೂಲಕ ಮುಗಿಸುತ್ತಿರುವ ಅಶ್ವಿನಿ ಅವರು, ಈಗಾಗಲೇ ಗಂಧದಗುಡಿ ಟೀಸರ್ ಅನ್ನು ಡಿಸೆಂಬರ್ 6ರಂದು ಬಿಡುಗಡೆ ಮಾಡಿದರು. ಗಂಧದಗುಡಿ ಟೀಸರ್ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದರು. ಗಂಧದಗುಡಿಯಲ್ಲಿ ಎಲ್ಲವೂ ನ್ಯಾಚುರಲ್ ಆಗಿರಬೇಕು ಎಂದು ಅಪ್ಪು ಅವರು, ಸಹಜವಾಗಿಯೇ ಕಾಣಿಸಿಕೊಂಡಿದ್ದು, ಜೊತೆಗೆ ಅವರ ಧ್ವನಿಯಲ್ಲೇ ಗಂಧದಗುಡಿಯಲ್ಲಿ ಕೇಳಬಹುದು. ಎಲ್ಲವೂ ಅಂದುಕೊಂಡಂತೆ ಆದರೆ, ಮೇ ತಿಂಗಳ ಕೊನೆಯ ವಾರದಲ್ಲಿ ಗಂಧದಗುಡಿಯನ್ನು ತೆರೆಗೆ ತರಲಿದ್ದಾರೆ ಅಶ್ವಿನಿ ಮೇಡಂ. ಆದರೆ ಈ ವಿಚಾರದ ಬಗ್ಗೆ ಅಶ್ವಿನಿ ಮೇಡಂ ಅಧಿಕೃತ ಮಾಹಿತಿ ನೀಡಬೇಕಿದೆ.