ಸಿಹಿ ಸುದ್ದಿ ನೀಡಿದ ಅಶ್ವಿನಿ ಪುನೀತ್ ರಾಜ್ ಕುಮಾರ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈ ಹೆಸರನ್ನು ನೆನೆದರೆ ಈಗಲೂ ಎಲ್ಲರ ಕಣ್ಣಂಚಲ್ಲಿ ಕಂಬನಿ ಮೂಡುವುದು ಖಂಡಿತ. ಅಪ್ಪು ಅವರು ಇನ್ನಿಲ್ಲವಾಗಿ 3 ತಿಂಗಳು ಕಳೆದು ಹೋಗಿ ನಾಲ್ಕನೇ ತಿಂಗಳತ್ತ ಸಾಗುತ್ತಿದೆ. ಆದರೆ ಈಗಲೂ ಅಪ್ಪು ಅವರ ನೆನಪುಗಳು ಎಲ್ಲರ ಮನಸ್ಸಲ್ಲೂ ಅಚ್ಚಳಿಯದೇ ಹಾಗೆಯೇ ಇದೆ. ಅಪ್ಪು ಅವರು ಕನ್ನಡ ಸಿನಿಮಾಗಳ ಬಗ್ಗೆ ದೊಡ್ಡ ಕನಸುಗಳನ್ನು ಕಂಡಿದ್ದರು, ಹೊಸಬರಿತೆ ಅವಕಾಶ ಕೊಡಬೇಕು, ಹೊಸ ರೀತಿಯ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ಕೊಡಬೇಕು ಎನ್ನುವ ಕನಸುಗಳನ್ನು ಹೊತ್ತು, ಪಿ.ಆರ್.ಕೆ ಪ್ರೊಡಕ್ಸನ್ಸ್ ಸಂಸ್ಥೆ ಶುರು ಮಾಡಿದರು. ಈಗಾಗಲೇ ಒಳ್ಳೆಯ ಸಿನಿಮಾಗಳನ್ನು ಪಿ.ಆರ್.ಕೆ ಪ್ರೊಡಕ್ಷನ್ಸ್ ಇಂದ ನೀಡಲಾಗಿದೆ. ಅಪ್ಪು ಅವರು ಹೋದಮೇಲೆ ಅಶ್ವಿನಿ ಅವರು ಆ ಕೆಲಸವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇದೀಗ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಪಿ.ಆರ್.ಕೆ ಪ್ರೊಡಕ್ಷನ್ಸ್ ಸಂಸ್ಥೆಯ ಮೂಲಕ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಅಭಿಮಾನಿಗಳ ಪಾಲಿನ ಆರಾಧ್ಯ ದೈವ ಆಗಿದ್ದರು. ಅಪ್ಪು ಅವರನ್ನು ಕಂಡರೆ ಅಭಿಮಾನಿಗಳಿಗೆ ಮಾತ್ರವಲ್ಲ ಬೇರೆ ಸೆಲೆಬ್ರಿಟಿಗಳಿಗೂ ಬಹಳ ಪ್ರೀತಿ ಇತ್ತು. ಎಲ್ಲರ ಜೊತೆ ಪ್ರೀತಿಯಿಂದ ಆತ್ಮೀಯತೆಯಿಂದ ಇರುತ್ತಿದ್ದರು ಅಪ್ಪು. ಒಂದೇ ಒಂದು ಗಂಟೆ ಅಪ್ಪು ಅವರ ಜೊತೆ ಕಳೆದರು ಅವರೊಬ್ಬ ಅದ್ಭುತವಾದ ವ್ಯಕ್ತಿ ಎನ್ನುವುದು ಅರ್ಥವಾಗುತ್ತಿತ್ತು. ಜನರಿಗೆ ಅಪ್ಪು ಅವರ ಮೇಲೆ ಎಷ್ಟು ಪ್ರೀತಿ ಇತ್ತು ಎನ್ನುವುದು ಗೊತ್ತಾಗುತ್ತದೆ. ಅಪ್ಪು ಅವರ ಅಂತಿಮ ದರ್ಶನ ಪಡೆಯಲು ಸುಮಾರು 25 ಲಕ್ಷ ಜನ ಬಂದಿದ್ದರು. ಇದುವರೆಗೂ ಇಡೀ ದೇಶದಲ್ಲಿ ಯಾರೊಬ್ಬರ ಅಂತಿಮ ದರ್ಶನಕ್ಕೂ ಇಷ್ಟು ಜನ ಬಂದಿರಲಿಲ್ಲ.

ಈಗಲೂ ಕೂಡ ಅಪ್ಪು ಅವರ ಸಮಾಧಿ ಬಳಿಗೆ ಪ್ರತಿದಿನ ಸಾವಿರಾರು ಜನರು ಬಂದು ಅಪ್ಪು ಅವರ ಸ್ಮಾರಕ ದರ್ಶನ ಪಡೆಯುತ್ತಿದ್ದಾರೆ. ಅಪ್ಪು ಅವರನ್ನು ನೋಡಿ ತಮ್ಮ ಕುಟುಂಬದ ಒಹ್ಹ ವ್ಯಕ್ತಿಯನ್ನೇ ಕಳೆದುಕೊಂಡಿರುವ ಹಾಗೆ ಕಣ್ಣೀರು ಹಾಕುತ್ತಾರೆ, ಮಕ್ಕಳು ದೊಡ್ಡವರು, ಹಿರಿಯರು ಎಲ್ಲರೂ ಬಂದು ಅಪ್ಪು ಅವರ ದರ್ಶನ ಪಡೆಯುತ್ತಾರೆ. ಅಪ್ಪು ಅವರು ಸಾಮಾಜಿಕ ಕಳಕಳಿ ಇರುವ ವ್ಯಕ್ತಿಯಾಗಿದ್ದರು. ಇದ್ದಾಗ ಸಾವಿರಾರು ಜನರಿಗೆ ಸಹಾಯ ಮಾಡಿದ್ದಾರೆ ಆದರೆ ಯಾವತ್ತಿಗೂ ತಾವು ಮಾಡಿದ ಸಹಾಯದ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ ಪವರ್ ಸ್ಟಾರ್. ಪ್ರಚಾರಕ್ಕಾಗಿ ಅವರು ಸಹಾಯ ಮಾಡಿದ ವ್ಯಕ್ತಿ ಆಗಿರಲಿಲ್ಲ.

ಅಪ್ಪು ಅವರು ಇಲ್ಲವಾದ ಮೇಲೆ ಅವರ ಸಹಾಯ ಪಡೆದ ಸಾಕಷ್ಟು ಜನರು ಅಪ್ಪು ಅವರಿಂದ ತಮಗಾದ ಸಹಾಯಾದ ಬಗ್ಗೆ ಹೇಳಿಕೊಂಡರು. ಸಾಮಾನ್ಯ ಜನರು ಮಾತ್ರವಲ್ಲದೆ ಸೆಲೆಬ್ರಿಟಿಗಳು ಸಹ ಅಪ್ಪು ಅವರ ಸಹಾಯ ಪಡೆದಿದ್ದಾರೆ. ಪ್ರತಿಭೆ ಇರುವ ಯುವ ಪೀಳಿಗೆಗೆ ಸಹಾಯ ಆಗಲಿ ಎನ್ನುವ ಕಾರಣದಿಂದಲೇ ಅಪ್ಪು ಅವರು ಪಿ.ಆರ್.ಕೆ ಪ್ರೊಡಕ್ಷನ್ಸ್ ಸಂಸ್ಥೆಯನ್ನು ಶುರು ಮಾಡಿದರು. ಅಪ್ಪು ಅವರಿದ್ದಾಗ, ಕವಲುದಾರಿ, ಮಾಯಾ ಬಜಾರ್, ಫ್ರೆಂಚ್ ಬಿರಿಯಾನಿ ಸಿನಿಮಾಗಳನ್ನು ನಿರ್ಮಾಣ ಮಾಡಿ ಬಿಡುಗಡೆ ಮಾಡಿದ್ದರು. ಅಪ್ಪು ಅವರು ಇದ್ದಾಗಲೇ ಪಿ.ಆರ್.ಕೆ ಪ್ರೊಡಕ್ಷನ್ಸ್ ಸಂಸ್ಥೆಯ ಮೂಲಕ ಇನ್ನು ಕೆಲವು ಸಿನಿಮಾಗಳು ಸೆಟ್ಟೇರಿದ್ದವು.

ಇದೀಗ ಆ ಸಿನಿಮಾಗಳೆಲ್ಲವು ಪೂರ್ತಿಯಾಗಿದ್ದು, ಬಿಡುಗಡೆ ಹಂತಕ್ಕೆ ತಲುಪಿ, ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ ಆಗುತ್ತಿದೆ. ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಇನ್ನುಮುಂದೆ ಸಂಸ್ಥೆಯನ್ನು ನಡೆಸಿಕೊಂಡು ಹೋಗುವ, ಅಪ್ಪು ಅವರ ಕನಸುಗಳನ್ನು ಪೂರ್ತಿ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ಅದೇ ನಿಟ್ಟಿನಲ್ಲಿ, ಅಶ್ವಿನಿ ಅವರು ಅಮೆಜಾನ್ ಪ್ರೈಮ್ ನಲ್ಲಿ ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ. ಕಳೆದ ವಾರ ದ್ಯಾನಿಷ್ ಸೇಠ್ ಮತ್ತು ಸಂಯುಕ್ತ ಅಭಿನಯದ ಒನ್ ಕಟ್ ಟು ಕಟ್ ಸಿನಿಮಾ ಬಿಡುಗಡೆ ಆಯಿತು. ಇದೀಗ ಅಶ್ವಿನಿ ಅವರು ಮತ್ತೊಂದು ಗುಡ್ ನ್ಯೂಸ್ ನೀಡಿದ್ದಾರೆ.

ಪಿ.ಆರ್.ಕೆ ಪ್ರೊಡಕ್ಷನ್ಸ್ ಸಂಸ್ಥೆಯಿಂದ ಶುರುವಾಗಿರುವ ಮತ್ತೊಂದು ಸಿನಿಮಾದ ರಿಲೀಸ್ ಡೇಟ್ ತಿಳಿಸಿದ್ದಾರೆ ಅಶ್ವಿನಿ. ಇದೇ ಫೆಬ್ರವರಿ 17ರಂದು ಪಿ.ಆರ್.ಕೆ ಪ್ರೊಡಕ್ಷನ್ಸ್ ಸಂಸ್ಥೆಯಿಂದ ಶುರುವಾಗಿರುವ ಫ್ಯಾಮಿಲಿ ಪ್ಯಾಕ್ ಸಿನಿಮಾ ಬಿಡುಗಡೆ ಆಗಲಿದೆ. “ಮನರಂಜನೆ ತುಂಬಿದ ಈ ಕೌಟುಂಬಿಕ ಚಿತ್ರವನ್ನು ನಿಮಗೆ ಪ್ರಸ್ತುತ ಪಡಿಸುತ್ತಿದ್ದೇವೆ..” ಎಂದು ಕ್ಯಾಪ್ಶನ್ ನೀಡಿ, ಫ್ಯಾಮಿಲಿ ಪ್ಯಾಕ್ ಸಿನಿಮಾ ಟ್ರೈಲರ್ ಹಂಚಿಕೊಂಡಿದ್ದಾರೆ. ಈ ಮೂಲಕ ಮತ್ತೊಂದು ಸದಭಿರುಚಿ ಸಿನಿಮಾವನ್ನು ಕನ್ನಡ ಸಿನಿಪ್ರಿಯರಿಗೆ ನೀಡುತ್ತಿದ್ದಾರೆ ಅಶ್ವಿನಿ ಪುನೀತ್ ರಾಜ್ ಕುಮಾರ್. ಈ ಸಿನಿಮಾ ಕೂಡ ಒಳ್ಳೆಯ ಹಿಟ್ ಆಗಲಿ ಎಂದು ಹಾರೈಸೋಣ.