ಹೊರ ಬಿತ್ತು ಆರ್ಯವರ್ಧನ್ ಮತ್ತೊಂದು ಮುಖ.. ಶಾಕ್ ಆದ ಅನು

ಜೊತೆ ಜೊತೆಯಲಿ ಜೀಕನ್ನಡ ವಾಹಿನಿಯ ಪ್ರಮುಖ ಧಾರಾವಾಹಿಗಳಲ್ಲಿ ಇದು ಕೂಡ ಒಂದು. ಈ ಧಾರಾವಾಹಿಗೆ ಇರುವ ಅಭಿಮಾನಿ ಬಳಗ ಮತ್ತು ಕ್ರೇಜ್ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಆರ್ಯ ಅನು ಜೋಡಿಯನ್ನು ನೋಡಿ ಇಷ್ಟಪಡದೆ ಇರುವವರು ತುಂಬಾ ಕಡಿಮೆ. ಪ್ರತಿ ವಾರ ಟಿ.ಆರ್.ಪಿ ರೇಟಿಂಗ್ ನಲ್ಲಿ ಟಾಪ್ ನಲ್ಲಿರುವ ಧಾರಾವಾಹಿ ಜೊತೆ ಜೊತೆಯಲಿ ಎಂದರೆ ತಪ್ಪಾಗುವುದಿಲ್ಲ. ಧಾರಾವಾಹಿಯಲ್ಲಿ ಈಗ ಹೊಸ ಹೊಸ ಟ್ವಿಸ್ಟ್ ಗಳು ಮೂಡಿಬರುತ್ತಿದ್ದು, ಪ್ರತಿವಾರ ವೀಕ್ಷಕರು ತಪ್ಪದೇ ವೀಕ್ಷಿಸುವ ಹಾಗೆ ಮಾಡುತ್ತಿದೆ ಜೊತೆ ಜೊತೆಯಲಿ ಧಾರಾವಾಹಿ. ಒಂದು ರೀತಿಯಲ್ಲಿ ಅತ್ಯಂತ ಕುತೂಹಲಕಾರಿ ಘಟ್ಟಕ್ಕೆ ಬಂದು ನಿಂತಿದೆ ಎಂದೇ ಹೇಳಬಹುದು. ರಾಜನಾಂದಿನಿ ಕಥೆ ಯಾವಾಗ ಆರಂಭ ಆಗುತ್ತದೆ ಎಂದು ಎಲ್ಲಾ ವೀಕ್ಷಕರು ಕಾಯುತ್ತಿದ್ದಾರೆ. ಅದರ ನಡುವೆ ಈಗ ಧಾರಾವಾಹಿಯಲ್ಲಿ ಒಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಅದೇನೆಂದರೆ, ಆರ್ಯವರ್ಧನ್ ಇನ್ನೊಂದು ಮುಖದ ಬಗ್ಗೆ ಅನುಗೆ ಗೊತ್ತಾಗಿ, ಶಾಕ್ ಆಗಿದ್ದಾಳೆ ಅನು.

ಎರಡೂವರೆ ವರ್ಷಗಳ ಹಿಂದೆ ಜೀಕನ್ನಡ ವಾಹಿನಿಯಲ್ಲಿ ಶುರುವಾದ ಧಾರಾವಾಹಿ ಜೊತೆ ಜೊತೆಯಲಿ. ಈ ಧಾರಾವಾಹಿಯ ಮೂಲಕ ಚಿತ್ರರಂಗದಲ್ಲಿ ಹೆಚ್ಚಿನ ಯಶಸ್ಸು ಕಾಣದ ನಟ ಅನಿರುದ್ಧ್ ಅವರ ಲಕ್ ಬದಲಾಯಿತು. ಜೊತೆ ಜೊತೆಯಲಿ ಇಂದ ಒಂದೇ ದಿನದಲ್ಲಿ ಸ್ಟಾರ್ ಆಗಿಬಿಟ್ಟರು ನಟ ಅನಿರುದ್ಧ್. ಆರ್ಯವರ್ಧನ್ ಪಾತ್ರವನ್ನು ಎಲ್ಲಾ ವೀಕ್ಷಕರು ಮೆಚ್ಚಿ, ಪ್ರೀತಿಸಲು ಶುರು ಮಾಡಿದರು. ಇನ್ನು ನಾಯಕಿಯ ಪಾತ್ರದಲ್ಲಿ ನಟಿಸಿದ ಹೊಸಮುಖ ಮೇಘಾ ಶೆಟ್ಟಿ ಅವರನ್ನು ಸಹ ಜನರು ತಮ್ಮ ಮನೆಯ ಮಗಳ ಹಾಗೆ ಒಪ್ಪಿಕೊಂಡರು. ಇಂದು ಆರ್ಯ ಮತ್ತು ಅನು ವೀಕ್ಷಕರಿಗೆ ಬಹಳ ಹತ್ತಿರವಾಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ..

ಆರಂಭದಲ್ಲಿ ಬಹಳ ಸುಂದರವಾಗಿ ಕಥೆ ಸಾಗಿತು. ಆರ್ಯನನ್ನು ಅನು ಇಷ್ಟಪಡಲು ಶುರು ಮಾಡಿ, ವಯಸ್ಸಿನ ವ್ಯತ್ಯಾಸ ಮತ್ತು ಇನ್ನಿತರ ಕಾರಣಗಳಿಂದ ಅನುವಿನಿಂದ ದೂರ ಉಳಿದಿದ್ದ ಆರ್ಯ, ಕೊನೆಗೆ ತನ್ನ ಪ್ರೀತಿಯನ್ನು ಅನುಗೆ ವ್ಯಕ್ತಪಡಿಸಿ, ಕಷ್ಟಪಟ್ಟ ಅನು ತಂದೆ ಒಪ್ಪುವ ಹಾಗೆ ಮಾಡಿ, ಅನು ಆರ್ಯನ ಮದುವೆ ಸಹ ನಡೆಯಿತು. ಈ ಮದುವೆ ನಡೆಯಲು ಎದುರಾದ ಕಷ್ಟಗಳು, ನೋವುಗಳು, ಟ್ವಿಸ್ಟ್ ಗಳು ಇದೆಲ್ಲವನ್ನು ವೀಕ್ಷಕರು ಬಹಳ ಇಷ್ಟಪಟ್ಟರು. ಆದರೆ ಆರ್ಯ ಅನು ಬೇಗ ಒಂದಾಗಲಿ ಎನ್ನುವುದೇ ಎಲ್ಲರ ಆಸೆಯಾಗಿತ್ತು. ವೀಕ್ಷಕರ ಆಸೆಯಂತೆ ಆರ್ಯ ಅನು ಮದುವೆ ಅದ್ಭುತವಾಗಿ ನಡೆಯಿತು.

ಮದುವೆ ನಂತರ ಅನುಗೆ ಒಂದೊಂದಾಗಿ ಎಲ್ಲಾ ವಿಚಾರಗಳು ಗೊತ್ತಾಗುತ್ತಿದೆ. ಆರ್ಯನ ಬಗ್ಗೆ, ಅಲ್ಲಿ ನಡೆಯುತ್ತಿರುವ ಸಮಸ್ಯೆಗಳ ಬಗ್ಗೆ ಅನೇಕ ವಿಚಾರಗಳು ಅನುಗೆ ಗೊತ್ತಾಗುತ್ತಿದೆ. ಕಂಪನಿಗೆ ತೊಂದರೆ ಆಗುತ್ತಿರುವುದು ಯಾರಿಂದ ಎನ್ನುವ ಪ್ರಶ್ನೆಗೆ ಇತ್ತೀಚೆಗೆ ಅನು ಉತ್ತರ ಹುಡುಕಿದ್ದಳು. ಸುಭಾಷ್ ಪಾಟೀಲ್ ಎನ್ನುವ ವ್ಯಕ್ತಿಯಿಂದ ತೊಂದರೆ ಆಗುತ್ತಿದೆ ಎಂದು ಅನು ಕಂಡುಹಿಡಿದಿದ್ದು ನೋಡಿ ಆರ್ಯನಿಗೆ ಶಾಕ್ ಆಗಿತ್ತು. ಅನು ನಡೆ ನುಡಿ ವ್ಯಕ್ತಿತ್ವ ಎಲ್ಲವನ್ನು ಗಮನಿಸಿ, ರಾಜನಂದಿನಿ ಅವರ ಹಾಗೆ ಇದ್ದಾಳೆ ಎಂದು ಆರ್ಯ ಹೇಳಿದ್ದು ಉಂಟು.

ಹೀಗಿರುವಾಗ ಅನುಗೆ ಈಗ ಮತ್ತೊಂದು ಶಾಕಿಂಗ್ ವಿಚಾರ ಗೊತ್ತಾಗಿದೆ. ಅದು ಆರ್ಯನ ಬಗ್ಗೆ.. ಎಲೆಕ್ಷನ್ ಗೆ ವೋಟ್ ಮಾಡುವ ಸಲುವಾಗಿ, ವೋಟರ್ ಐಡಿ ಚೆಕ್ ಮಾಡುವ ಸಲುವಾಗಿ ಕಚೇರಿಯಿಂದ ಒಬ್ಬರು ಅನು ಅವರ ಮನೆಗೆ ಬಂದಿರುತ್ತಾರೆ. ಅವರ ಜೊತೆ ಮಾತನಾಡುತ್ತಾ, ನನ್ನ ಹೆಸರು ವೋಟರ್ ಐಡಿ ಲಿಸ್ಟ್ ಗೆ ಸೇರ್ಪಡೆ ಆಗಿದೆಯಾ ಎಂದು ಅನು ಕೇಳಿದಾಗ, ಆಕೆ ಆಗಿದೆ ಎಂದು ಹೇಳಿ, ಆರ್ಯವರ್ಧನ್ ಅಂತ ಹೇಳಿದ್ರಲ್ಲ ಆ ಹೆಸರು ಇಲ್ಲಿಲ್ಲ ಎಂದು ಹೇಳುತ್ತಾರೆ. ಅದರಿಂದ ಶಾಕ್ ಆಗುವ ಅನು, ಆ ಹೆಸರು ಮಿಸ್ ಆಗೋಕೆ ಚಾನ್ಸ್ ಇಲ್ಲ ಎನ್ನುತ್ತಾಳೆ, ಆಗ ಅವರು ಎಲೆಕ್ಷನ್ ಕಮಿಷನ್ ಆಫೀಸ್ ಗೆ ಹೋಗಿ ಚೆಕ್ ಮಾಡಿ ಎಂದು ಹೇಳುತ್ತಾರೆ.

ಕೂಡಲೇ ಎಲೆಕ್ಷನ್ ಕಮಿಷನ್ ಗೆ ಹೋಗುತ್ತಾಳೆ ಅನು, ಹೋಗುವ ದಾರಿಯಲ್ಲಿ ಯಲ್ಲವ್ವ ಸಿಕ್ಕಿ,ಸತ್ಯಾನ ತಡೆದುಕೊಳ್ಳುವ ಶಕ್ತಿಯನ್ನ ಆ ತಾಯಿ ನಿನಗೆ ನೀಡುತ್ತಾಳೆ ಎಂದು ಹೇಳಿ ಹೊರಟುಬಿಡುತ್ತಾರೆ. ತಕ್ಷಣವೇ ಎಲೆಕ್ಷನ್ ಕಮಿಷನ್ ಆಫೀಸ್ ಗೆ ಹೋಗಿ ಚೆಕ್ ಮಾಡಿದಾಗ ಅನುಗೆ ಕಾದಿತ್ತು ಒಂದು ದೊಡ್ಡ ಶಾಕ್, ಆರ್ಯನ ಹೆಸರಿನಲ್ಲಿ ವೋಟರ್ ಐಡಿ ಇರಲಿಲ್ಲ, ಬದಲಾಗಿ ಸುಭಾಷ್ ಪಾಟೀಲ್ ಎನ್ನವ ಸತ್ಯ ಅನು ಕಣ್ಮುಂದೆ ಇದೆ. ಆರ್ಯನ ಇನ್ನೊಂದು ಹೊಸ ಮುಖ ಇದರಿಂದ ಪರಿಚಯವಾಗಿದೆ. ಇದನ್ನು ಅನು ಹೇಗೆ ನಿಭಾಯಿಸುತ್ತಾಳೆ, ಇದರ ಹಿಂದಿನ ಸತ್ಯವನ್ನು ಹೇಗೆ ಕಂಡುಹಿಡಿಯುತ್ತಾಳೆ ಎಂದು ಮುಂದಿನ ಎಪಿಸೋಡ್ ನಲ್ಲಿ ನೋಡಿ ಎಲ್ಲಾ ಅಭಿಮಾನಿಗಳು ಕಾಯುತ್ತಲಿದ್ದಾರೆ.