ಹೊಸ ರೀತಿಯಲ್ಲಿ ಕಾಣಿಸಿಕೊಂಡ ರವಿಚಂದ್ರನ್ ಪುತ್ರಿ

ಮಲಯಾಳಂ ನಲ್ಲಿ ತೆರೆಕಂಡು ಸೂಪರ್ ಹಿರ್ ಆದ ಸಿನಿಮಾ ದೃಶ್ಯಮ್ ಮತ್ತು ದೃಶ್ಯಮ್2. ಈ ಸಿನಿಮಾ ಕನ್ನಡ ಸೇರಿದಂತೆ ತೆಲುಗು ಮತ್ತು ತಮಿಳಿಗೂ ರಿಮೇಕ್ ಆಯಿತು. ಆಯಾ ಭಾಷೆಗೆ ನೇಟಿವಿಟಿಗೆ ತಕ್ಕ ಹಾಗೆ ಸಿನಿಮಾ ಚಿತ್ರೀಕರಣ ಮಾಡಲಾಯಿತು. ಮಲಯಾಳಂ ನಲ್ಲಿ ಖ್ಯಾತ ನಟ ಮೋಹನ್ ಲಾಲ್ ಮತ್ತು ಮೀನಾ ಅವರು ನಿರ್ವಹಿಸಿದ ಪಾತ್ರವನ್ನು ಕನ್ನಡದಲ್ಲಿ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಗಜ ಸಿನಿಮಾ ಖ್ಯಾತಿಯ ನಟಿ ನವ್ಯ ನಾಯರ್ ನಟಿಸಿದರು. ಕನ್ನಡದಲ್ಲಿ ಸಹ ಈ ಸಿನಿಮಾ ದೊಡ್ಡ ಹಿಟ್ ಆಯಿತು. ರವಿಚಂದ್ರನ್ ಅವರಿಗೆ ಹೊಸ ಇಮೇಜ್ ತಂದುಕೊಟ್ಟಿತು ದೃಶ್ಯ ಸಿನಿಮಾ ಇತ್ತೀಚೆಗೆ ದೃಶ್ಯ2 ಕೂಡ ಬಿಡುಗಡೆಯಾಗಿ ಒಳ್ಳೆಯ ಪ್ರಶಂಸೆ ಪಡೆದುಕೊಂಡಿತು. ಈ ಸಿನಿಮಾದಲ್ಲಿ ರವಿಚಂದ್ರನ್ ಮತ್ತು ನವ್ಯ ನಾಯರ್ ಪಾತ್ರ ಮಾತ್ರವಲ್ಲದೆ ಅವರ ಮಕ್ಳಳ ಪಾತ್ರಕ್ಕೆ ಪ್ರಾಮುಖ್ಯತೆ ಹೆಚ್ಚಾಗಿತ್ತು..

ರಾಜೇಂದ್ರ ಪೊನ್ನಪ್ಪ ತಮ್ಮ ಕುಟುಂಬವನ್ನು ಹೇಗೆ ರಕ್ಷಿಸಿಕೊಳ್ಳುತ್ತಾರೆ ಎನ್ನುವ ಈ ಕಥೆಯಲ್ಲಿ ಮಗಳ ಪಾತ್ರ ಬಹುಮುಖ್ಯವಾದ ಪಾತ್ರವಾಗಿತ್ತು. ಈ ಮಗಳ ಪಾತ್ರದಲ್ಲಿ ಅಚ್ಚುಕಟ್ಟಾಗಿ ನಟಿಸಿದ ಕಲಾವಿದೆ ಆರೋಹಿ ನಾರಾಯಣ್. ದೃಶ್ಯ ಸಿನಿಮಾದ ಎರಡು ಭಾಗದಲ್ಲೂ ಸಹ ಇವರು ರವಿಚಂದ್ರನ್ ಅವರ ಮೊದಲ ಮಗಳು ಸಿಂಧು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆರೋಹಿ ಅವರ ಪಾತ್ರದಲ್ಲಿ ಬಹಳ ವೇರಿಯೇಷನ್ಸ್ ಇತ್ತು, ಬಹಳಷ್ಟು ಅಚ್ಚುಕಟ್ಟಾದ ಅಭಿನಯದ ಅಗತ್ಯತೆ ಹೊಂದಿದ್ದ ಆ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು ಈ ಯುವನಟಿ.

ಆರೋಹಿ ನಾರಾಯಣ್ ಅವರ ಪಾತ್ರಕ್ಕೆ ಬಹಳಷ್ಟು ಮೆಚ್ಚುಗೆ ಸಹ ವ್ಯಕ್ತವಾಯಿತು. 2014ರಲ್ಲಿ ತೆರೆಕಂಡ ದೃಶ್ಯ ಸಿನಿಮಾದ ಮೊದಲ ಭಾಗ, ಸೂಪರ್ ಹಿಟ್ ಆದ ಬಳಿಕ ಆರೋಹಿ ನಾರಾಯಣ್ ಅವರಿಗೆ ಸ್ಯಾಂಡಲ್ ವುಡ್ ನಲ್ಲಿ ಒಳ್ಳೆಯ ಅವಕಾಶಗಳು ಮತ್ತು ಪಾತ್ರಗಳು ಸಿಗಲು ಆರಂಭವಾದವು. ದೃಶ್ಯ ಮತ್ತು ದೃಶ್ಯ2 ಮಾತ್ರವಲ್ಲದೆ, ಭೀಮಸೇನನಳಮಹಾರಾಜ ಸಿನಿಮಾದಲ್ಲಿ ಆರೋಹಿ ನಟಿಸಿದ್ದರು, ದೃಶ್ಯ ಸಿನಿಮಾದ ಪಾತ್ರಕ್ಕಿಂತ ಈ ಪಾತ್ರ ಬಹಳ ವಿಭಿನ್ನವಾಗಿದ್ದ ಕಾರಣ ಆರೋಹಿ ಅಭಿನಯಕ್ಕೆ ಬಹಳಷ್ಟು ಮೆಚ್ಚುಗೆ ಸಹ ಸಿಕ್ಕಿತು. ಓಟಿಟಿಯಲ್ಲಿ ತೆರೆಕಂಡ ಭೀಮಸೇನ ನಳಮಹರಾಜ ಸಿನಿಮಾ ಒಳ್ಳೆಯ ಹೆಸರು ಪಡೆಯಿತು.

ಇದಲ್ಲದೆ ಮಸ್ತ್ ಕಳಂದರ್ ಎನ್ನುವ ಸಿನಿಮಾದಲ್ಲಿ ಸಹ ಆರೋಹಿ ನಟಿಸಿದ್ದರು. ಆರೋಹಿ ಅವರು ಜನಿಸಿದ್ದು 1992ರ ಜನವರಿ 26ರಂದು, ಇವರಿಗೆ ಈಗ 28 ವರ್ಷಗಳು. ಎಲ್ಲಾ ನಟಿಯರ ಹಾಗೆ ಇವರು ಸಹ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ, ವಿವಿಧ ರೀತಿಯ ಫೋಟೋಶೂಟ್ ಗಳಿಗೆ ಪೋಸ್ ನೀಡಿ, ಅವುಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳುತ್ತಾರೆ ಆರೋಹಿ. ಸಿನಿಮಾ ನಟಿಯರು ಎಂದಮೇಲೆ, ಬಟ್ಟೆಯ ಬ್ರ್ಯಾಂಡ್ ಎಂಡೋರ್ಸ್ಮೆಂಟ್ ಗಳಲ್ಲಿ ಕಾಣಿಸಿಕೊಳ್ಳುವುದು ಕಾಮನ್.

ಆರೋಹಿ ಸಹ ಕೆಲವು ಬ್ರ್ಯಾಂಡ್ ಎಂಡೋರ್ಸ್ಮೆಂಟ್ ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅದಕ್ಕಾಗಿ ಫೋಟೋಶೂಟ್ ಗಳನ್ನು ಸಹ ಮಾಡಿಸುತ್ತಾರೆ. ದೃಶ್ಯ ಬಳಿಕ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಗಳು ಎಂದೇ ಖ್ಯಾತಿಯಾಗಿರುವ ಆರೋಹಿ ನಾರಾಯಣ್ ಅವರು ಇತ್ತೀಚಿನ ಹೊಸ ಫೋಟೋಶೂಟ್ ಗಳಲ್ಲಿ, ಹೊಸ ರೀತಿಯ ಕಾಸ್ಟ್ಯೂಮ್ ಗಳಲ್ಲಿ ಸುಂದರವಾಗಿ ಕಾಣಿಸಿಕೊಂಡಿದ್ದು, ನೆಟ್ಟಿಗರಿಂದ ಮೆಚ್ಚುಗೆ ಪಡೆಯುತ್ತಿದ್ದಾರೆ..