ಗಂಧದ ಗುಡಿ ಸಿನಿಮಾ ನೋಡಿ ಸುಧಾ ಮೂರ್ತಿ ಅವರು ಹೇಳಿದ ಮಾತು ನೋಡಿ.. ದೊಡ್ಡ ಗುಣ ಅಂದರೆ ಇದು..

ನಾಡಿನಲ್ಲಿ ಇಂದು ಅಪ್ಪು ಅಗಲಿಕೆಯ ಒಂದು ವರ್ಷದ ನೋವಿನ ಜೊತೆಗೆ ಆ ಪುಣ್ಯಾತ್ಮನನ್ನು ಸಂಪೂರ್ಣ ನಾಡು ಸ್ಮರಿಸುತ್ತಾ ಗಂಧದಗುಡಿ ಸಿನಿಮಾವನ್ನು ಸಂಭ್ರಮಿಸುತ್ತಿದೆ.. ಇಂದು ನಾಡಿನಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿ ಅಪ್ಪು ಗಂಧದಗುಡಿಯ ಮೂಲಕ ಕಾಲಿಟ್ಟಿದ್ದು ಜನರು ಕಣ್ತುಂಬಿಕೊಳ್ಳುತ್ತಿದ್ದಾರೆ.. ಇನ್ನು ನಿನ್ನೆ ಸಾಕಷ್ಟು ಪ್ರೀಮಿಯರ್ ಶೋಗಳು ನಡೆದಿದ್ದು ಸೆಲಿಬ್ರೆಟಿಗಳು ಸಾಮಾನ್ಯ ಜನರು ಸಹ ಸಾಕಷ್ಟು ಜನರು ಸಿನಿಮಾ ನೋಡಿದ್ದಾರೆ.. ಇನ್ನು ಅಪ್ಪು ರೀತಿಯ ಗುಣ ಇರುವ ನಾಡಿನ ದೊಡ್ಡಗುಣದ ತಾಯಿ ಸುಧಾ ಮೂರ್ತಿ ಅವರೂ ಸಹ ಗಂಧದ ಗುಡಿ ಸಿನಿಮಾ ನೋಡಿದ್ದು ಅವರ ಮಾತುಗಳು ನಿಜಕ್ಕೂ ಅವರ ದೊಡ್ಡ ಗುಣ ತೋರುತ್ತದೆ..

ಹೌದು ಸಿಲೆಬ್ರಿಟಿಗಳಿಗಾಗಿ ನಿನ್ನೆ ಗಂಧದ ಗುಡಿ ಸ್ಪೆಷಲ್ ಶೋ ಆಯೋಜನೆ ಮಾಡಲಾಗಿತ್ತು. ಕನ್ನಡದ ಬಹುತೇಕ ನಟ, ನಟಿಯರು ಹಾಗೂ ತಂತ್ರಜ್ಞರ ಜೊತೆ ಲೇಖಕಿ, ಇನ್ಫೋಸಿಸ್ ನ ಸುಧಾಮೂರ್ತಿ ಅವರು ಕೂಡ ಆಗಮಿಸಿದ್ದರು. ಸಿನಿಮಾ ನೋಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಕನ್ನಡದಲ್ಲಿ ಇಂಥದ್ದೊಂದು ಸಿನಿಮಾ ಬಂದಿರುವುದು ನೋಡಿ ಗರ್ವ ಬಂತು. ಅವರ ಈ ಪ್ರಯತ್ನಕ್ಕೆ ಫುಲ್ ಮಾರ್ಕ್ಸ್ ಕೊಡುತ್ತೇನೆ ಎಂದು ಹೆಮ್ಮೆಯಿಂದ ಮಾತನಾಡಿದರು..

ಈ ಗಂಧದ ಗುಡಿಯಲ್ಲಿ ಯುವಕರು ನೋಡಿ ತಿಳಿದುಕೊಳ‍್ಳಬಹುದಾದ ಸಾಕಷ್ಟು ವಿಷಯಗಳು ಇವೆ. ಅದರಲ್ಲೂ ನನ್ನ ಉತ್ತರ ಕರ್ನಾಟಕದ ಬಗ್ಗೆ ತೋರಿಸಿದಾಗ ಮತ್ತು ಪುನೀತ್ ಅವರು ಉತ್ತರ ಕರ್ನಾಟಕದ ಬಗ್ಗೆ ಹೆಮ್ಮೆಯಿಂದ ಮಾತನಾಡಿದಾಗ ನಾನೂ ಭಾವುಕಳಾದೆ.. ನಮ್ಮ ನೆಲದ ಚಿತ್ರ ಇದಾಗಿದ್ದರಿಂದ ಹೆಚ್ಚು ಆಪ್ತತೆ ಅನಿಸಿತು ಅಪ್ಪು ಅವರನ್ನು ಆ ಕ್ಷಣ ನೋಡಿದಾಗ ಕಣ್ಣಲ್ಲಿ ನೀರು ಬಂತು.. ಅವರು ಈ ಸಿನಿಮಾ ಮೂಲಕ ಸಾಕಷ್ಟು ಸಂದೇಶವನ್ನು ನೀಡಿದ್ದಾರೆ.. ಅದೆಲ್ಲವನ್ನೂ ಅಳವಡಿಸಿಕೊಳ್ಳುವ ಮೂಲಕ ಅವರನ್ನು‌ ನಮ್ಮ ಜೊತೆಯೇ ಇರಿಸಿಕೊಳ್ಳಬಹುದೆಂದರು..

ಇನ್ನು ನಿನ್ನೆಯ ಶೋ ನಲ್ಲಿ ರಕ್ಷಿತ್ ಶೆಟ್ಟಿ ರಿಷಭ್ ಶೆಟ್ಟಿ ಅಜಯ್ ರಾವ್ ರಮ್ಯಾ ಅಣ್ಣಾವ್ರ ಕುಟುಂಬ ಅಶ್ವಿನಿ ಪುನೀತ್ ಅವರೂ ಸೇರಿದಂತೆ ಸಾಕಷ್ಟು ಮಂದಿ ಸಿನಿಮಾ ನೋಡಿದರು.. ಇನ್ನು ಇಂದು ಮೊದಲ ಪ್ರದರ್ಶನದಲ್ಲೇ ನೆಚ್ಚಿನ ನಟನ ಚಿತ್ರವನ್ನು ಕಣ್ತುಂಬಿಕೊಂಡ ಅಭಿಮಾನಿಗಳು ಭಾವುಕರಾದರು. ಅಭಿಮಾನಿಗಳ ಜೊತೆಯೇ ಡಾ.ರಾಜ್ ಕುಟುಂಬ ಕೂಡ ಸಿನಿಮಾ ವೀಕ್ಷಣೆ ಮಾಡಿ ಭಾವುಕರಾದರು‌..

ಇಂದು ಬೆಳಗ್ಗೆ ಹತ್ತು ಗಂಟೆಯೊಳಗೆ ಬೆಂಗಳೂರಿನಲ್ಲೇ 50ಕ್ಕೂ ಹೆಚ್ಚು ಪ್ರದರ್ಶನಗಳನ್ನು ಆಯೋಜನೆ ಮಾಡಿದ್ದು, ಬೆಳಗಿನ ಜಾವವೇ 50 ಬಾರಿ ಈ ಸಿನಿಮಾ ಬೆಂಗಳೂರಿನ ಮಲ್ಟಿಪ್ಲೆಕ್ಸ್ ಚಿತ್ರ ಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ ಎಂದು ವಿತರಕ ಕಾರ್ತಿಕ್ ಗೌಡ ಮಾಹಿತಿ ಹಂಚಿಕೊಂಡಿದ್ದಾರೆ. ಇದೊಂದು ನೂತನ ದಾಖಲೆ ಎಂದೂ ಅವರು ತಿಳಿಸಿದ್ದಾರೆ. ಬೆಳಗಿನ ಜಾವ 6 ಗಂಟೆಯಿಂದಲೇ ಸಿನಿಮಾ ಪ್ರದರ್ಶನ ಶುರುವಾಗಿದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಭಟ್, ಶ್ರೀ ಅಂಬಾ ಭವಾನಿ ದೈವ ಶಕ್ತಿ ಜ್ಯೋತಿಷ್ಯರು.. ಮೊ.9845642321 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ‌ ಉಲ್ಭಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಡುತ್ತಾರೆ.. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ.. ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ.. 9845642321 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ತೊಂದರೆ ಪ್ರೀತಿಯಲ್ಲಿ ನಂಬಿ ಮೋಸ.. ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ವಿಚಾರ ಜನರ ದೃಷ್ಟಿಯಿಂದ ಮನೆಯಲ್ಲಿ ಆಗುವ ತೊಂದರೆ ಹಣಕಾಸಿನ ತೊಂದರೆ ಸ್ತ್ರೀ ಪುರುಷ ವಶೀಕರಣ ಇನ್ನೂ ಅನೇಕ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಗಳಿಗೆ ಶಾಶ್ವತ ಪರಿಹಾರ ಪಡೆದುಕೊಳ್ಳಿ.. 9845642321