ಜೊತೆ ಜೊತೆಯಲಿ ಧಾರಾವಾಹಿ ಮುಕ್ತಾಯವಾಗಲಿದೆಯಾ? ಕಾರಣವೇನು ಗೊತ್ತಾ..

ಜೀಕನ್ನಡ ವಾಹಿನಿಯ ಪ್ರಮುಖ ಧಾರಾವಾಹಿ ಜೊತೆ ಜೊತೆಯಲಿ ಇತ್ತೀಚಿನ ದಿನಗಳಲ್ಲಿ ರೋಚಕವಾದ ಸಂಚಿಕೆಗಳ ಮೂಲಕ ವೀಕ್ಷಕರ ಗಮನ ಸೆಳೆಯುತ್ತಿದೆ. ರಾಜನಂದಿನಿ ಮತ್ತು ಆರ್ಯವರ್ಧನ್ ಫ್ಲ್ಯಾಶ್ ಬ್ಯಾಕ್ ಸಂಚಿಕೆಗಳು ಪ್ರಸಾರವಾಗಿ, ವೀಕ್ಷಕರು ತಪ್ಪದೇ ಜೊತೆ ಜೊತೆಯಲಿ ಧಾರಾವಾಹಿ ನೋಡುವ ಹಾಗೆ ಮಾಡಿದೆ. ರಾಜನಂದಿನಿ ಪರಿಚಯವಾದಾಗ, ಬಹಳ ಒಳ್ಳೆಯವನಾಗಿದ್ದ ಆರ್ಯವರ್ಧನ್ ನಂತರ ಹಣ, ಆಸ್ತಿಗಾಗಿ ಹೇಗೆ ಬದಲಾಗುತ್ತಾನೆ ಎಂದು ವೀಕ್ಷಕರು ನೋಡುತ್ತಿದ್ದಾರೆ. ಇದು ನಿಜಕ್ಕೂ ಆರ್ಯವರ್ಧನ್ ಪಾತ್ರನಾ ಎಂದು ವೀಕ್ಷಕರು ಶಾಕ್ ಆಗಿದ್ದು ಉಂಟು.. ಅನಿರುದ್ಧ್ ಅವರ ಅಭಿನಯವನ್ನು ಇಲ್ಲಿ ಮೆಚ್ಚಿಕೊಳ್ಳಲೇಬೇಕು.

ರಾಜನಂದಿನಿ ಜೊತೆ ಮದುವೆಯಾಗಿ, ಆಕೆಯ ತಂದೆಯನ್ನು ಮೋಸದಿಂದ ಕೊಂದ ನಂತರ, ವರ್ಧನ್ ಸಂಸ್ಥೆಯನ್ನು ತನ್ನದಾಗಿ ಮಾಡಿಕೊಂಡಿದ್ದಾನೆ ಆರ್ಯ. ಆರ್ಯ ಮಾಡಿದ ಎಲ್ಲಾ ತಂತ್ರ ಕುತಂತ್ರಗಳು ರಾಜನಾಂದಿನಿಗೆ ಈಗ ಗೊತ್ತಾಗಿದೆ. ಜಲಂಧರ್ ಎಲ್ಲಾ ಸತ್ಯವನ್ನು ರಾಜನಂದಿನಿಗೆ ತಿಳಿಸುತ್ತಾನೆ. ನಂಬಲು ಸಾಧ್ಯವಾಗದೆ, ಆರ್ಯನ ದಾರಿಯಲ್ಲೇ ಹೋಗಿ ಅವನನ್ನು ಹಿಡಿಯಬೇಕು ಎಂದು ನಿರ್ಧರಿಸುವ ರಾಜನಂದಿನಿ, ಆಫೀಸ್ ಟೇಬಲ್ ಕೆಳಗೆ ರೆಕಾರ್ಡರ್ ಇರಿಸಿ, ಆರ್ಯ ಮತ್ತು ಝೇಂಡೆ ಆಡುವ ಎಲ್ಲಾ ಮಾತುಗಳನ್ನು ಕೇಳಿಸಿಕೊಂಡ ನಂತರ ರಾಜನಾಂದಿನಿಗೆ ಆರ್ಯನ ನಿಜ ಸ್ವರೂಪ ಗೊತ್ತಾಗಿ ದಿಕ್ಕೆ ತೋಚದೆ ಹಾಗೆ ಆಗುತ್ತದೆ.

ಆರ್ಯ ಮತ್ತು ಝೇಂಡೆ ವಠಾರದ ಮನೆಯಲ್ಲಿ ಕೇರಮ್ ಅಡುತ್ತಿದ್ದಾಗ, ವ್ಯಕ್ತಿಯೊಬ್ಬ ಬಂದು ಆರ್ಯನ ಕೈಗೆ ಒಂದು ಟೇಪ್ ರೆಕಾರ್ಡರ್ ಕೊಟ್ಟು, ರಾಜನಂದಿನಿ ಅವರು ಕೊಟ್ಟಿದ್ದಾಗಿ ಹೇಳುತ್ತಾನೆ, ಹೆಂಡತಿ ಪ್ರೀತಿಯ ಸಂದೇಶ ಕಳಿಸಿರಬಹುದು ಎಂದುಕೊಂಡ ಆರ್ಯ, ಅದನ್ನು ಆನ್ ಮಾಡಿದಾಗ, ಆರ್ಯ ನಾನು ನಿನ್ನ ಮೇಲೆ ಇಟ್ಟಿದ್ದ ನಂಬಿಕೆಯನ್ನು ಸುಳ್ಳು ಮಾಡಿದ್ದೀಯ. ನನ್ನಿಂದ ನನ್ನ ತಂದೆ, ನನ್ನ ಬ್ಯುಸಿನೆಸ್ ಎಲ್ಲವನ್ನು ಕಿತ್ತುಕೊಂಡಿದ್ದೀಯ, ನೀನು ಮಾಡಿದ್ದೆಲ್ಲ ನನಗೆ ಗೊತ್ತಾಗಿದೆ. ಇನ್ನು ಏನೇನು ಸುಳ್ಳು ಹೇಳ್ತೀಯಾ ರೆಡಿ ಮಾಡಿಕೊ.. ಎಂದು ಹೇಳಿರುತ್ತಾಳೆ ರಾಜನಂದಿನಿ. ಇದನ್ನು ಕೇಳಿ ಆರ್ಯ ಮತ್ತು ಝೇಂಡೆ ಇಬ್ಬರಿಗೂ ಶಾಕ್ ಆಗುತ್ತದೆ.

ರಾಜನಾಂದಿನಿಗೆ ಎಲ್ಲಾ ವಿಚಾರ ಗೊತ್ತಾಗಿ, ಎಲ್ಲವೂ ಕೈತಪ್ಪಿ ಹೋಗುತ್ತದೆ ಎನ್ನುವ ಭಯದಲ್ಲಿ, ಎಲ್ಲಾ ಮುಗಿದುಹೋಯ್ತು ಎಂದು ಝೇಂಡೆ ಹೇಳುತ್ತಾನೆ. ಆಗ ಜೋರಾಗಿ ಕಿರುಚುವ ಆರ್ಯ, ವರ್ಧನ್ ಕಂಪನಿ, ಆ ಮನೆ ಆಸ್ತಿ ಎಲ್ಲವೂ ನಂದು. ಅಪಾಯ ಆದಾಗ ಏನು ಮಾಡಬೇಕು ಅಂತ ನನಗೆ ಗೊತ್ತಿದೆ ಎಂದು ಹೇಳುತ್ತಾನೆ ಆರ್ಯ. ನಂತರ ರಾಜನಂದಿನಿಗೆ ಕರೆ ಮಾಡಿ, ನಂದಿನಿ ಅವರೇ, ನಾನು ನಿಮ್ಮ ಜೊತೆ ಮಾತನಾಡಬೇಕು, ನಿಮ್ಮಿಂದ ಕೆಲವು ವಿಚಾರಗಳನ್ನ ಮುಚ್ಚಿಟ್ಟಿದ್ದೀನಿ ಅದೆಲ್ಲವನ್ನು ಹೇಳಬೇಕು, ಅದಾದ ಬಳಿಕ ನಿರ್ಧಾರ ತೆಗೆದುಕೊಳ್ಳಿ. ದಯವಿಟ್ಟು ನಾನು ಹೇಳುವ ಜಾಗಕ್ಕೆ ಬನ್ನಿ ಎಂದು ಕೇಳುತ್ತಾನೆ ಆರ್ಯ. ಅದಕ್ಕೆ ಒಪ್ಪಿಕೊಳ್ಳುವ ರಾಜನಂದಿನಿ, ನೀನು ಕೇಳಿದ ಎಲ್ಲದಕ್ಕೂ ಯೆಸ್ ಅಂದಿದ್ದೀನಿ, ಯೆಸ್ ಅನ್ನುತ್ತಿರುವುದು ಇದು ಕೊನೆಯ ಬಾರಿ ಎನ್ನುತ್ತಾಳೆ.

ಮನೆಯಿಂದ ರಾತ್ರಿ ಸಮಯದಲ್ಲಿ ರಾಜನಂದಿನಿ ಹೊರಟಾಗ, ತಾಯಿ ಶಾರದಾದೇವಿ ಎಲ್ಲಿಗೆ ಹೋಗ್ತಿದ್ದೀಯಾ ಎಂದು ಕೇಳಿದಾಗ, ಆರ್ಯನ ಜೊತೆ ಹೋಗುತ್ತಿದ್ದೇನೆ ಎಂದು ಹೇಳುವ ರಾಜನಂದಿನಿ, ರಾಜನಂದಿನಿ ಮನಸ್ಸಿನಲ್ಲಿ ಆರ್ಯನಿಗೆ ಇನ್ನುಮುಂದೆ ಜಾಗವಿಲ್ಲ, ಆರ್ಯ ಮನೆಗೆ ಬಂದರೆಷ್ಟು ಬಿಟ್ಟರೆಷ್ಟು ಎಂದು ಹೇಳಿ. ನಾನು ಹೋಗುತ್ತೇನೆ ಎಂದು ಹೇಳುತ್ತಾ, ರಾತ್ರಿಯಲ್ಲಿ ಕಾರ್ ನಲ್ಲಿ ಒಬ್ಬಳೇ ಹೊರಡುತ್ತಾಳೆ ರಾಜನಂದಿನಿ. ದಾರಿ ನಡುವೆ ಸಿಗುವ ಜೋಗ್ತವ್ವ, ಮುಂದೆ ಅಪಾಯ ಇದೆ ಜಾಗ್ರತೆಯಿಂದ ಇರು ಎಂದು ಎಚ್ಚರಿಕೆ ಕೊಡುತ್ತಾರೆ..ಇತ್ತ ಆರ್ಯನಿಗೆ ಝೇಂಡೆ ಏನು ಮಾಡಬೇಡ ಎಂದು ಬುದ್ಧಿವಾದ ಹೇಳುವ ಪ್ರಯತ್ನ ಮಾಡುತ್ತಾನೆ. ಆದರೆ ಆರ್ಯ ಒಪ್ಪಿಕೊಳ್ಳುವುದಿಲ್ಲ, ಏನು ಮಾಡಬೇಕು ಎಂದು ನನಗೆ ಗೊತ್ತಿದೆ ಎಂದು ಹೇಳುತ್ತಾನೆ ಆರ್ಯ.

ಆರ್ಯ ಏನು ಮಾಡುತ್ತಾನೆ ಎಂದು ನಂಬಲಾಗುವುದಿಲ್ಲ ಎಂದು ಭಯಪಡುವ ಝೇಂಡೆ, ಸ್ನೇಹಿತನನ್ನು ಉಳಿಸಿಕೊಳ್ಳಬೇಕು ಎಂದು, ರೌಡಿಗಳಿಗೆ ಕರೆಮಾಡಿ, ದಾರಿ ಮಧ್ಯದಲ್ಲಿ ರಾಜನಂದಿನಿಯನ್ನು ಅಟ್ಯಾಕ್ ಮಾಡಿ ಎಂದು ಹೇಳುತ್ತಾನೆ. ಕೆಲವು ರೌಡಿಗಳು ರಾಜನಂದಿನಿಯನ್ನು ಅಟ್ಯಾಕ್ ಮಾಡುತ್ತಾಳೆ, ಆಕೆ ತಪ್ಪಿಸಿಕೊಂಡು ಓಡಿ ಬರುತ್ತಾ ಇದ್ದಾಳೆ. ಅಲ್ಲಿಗೆ ರಾಜನಂದಿನಿಯ ಕಥೆಗೆ ಅಂತ್ಯ ಸಿಕ್ಕ ಹಾಗೆ.. ಇನ್ನು ಅನು ಸಿರಿಮನೆಗೂ ಆರ್ಯನ ಅಸಲಿ ರೂಪ ಗೊತ್ತಾಗಲಿದೆ. ಆರ್ಯನ ಬಗ್ಗೆ ತಿಳಿದುಕೊಳ್ಳುವ ಅನು, ಏನು ಮಾಡುತ್ತಾಳೆ? ಯಾವ ನಿರ್ಧಾರ ತೆಗೆದುಕೊಳ್ಳುತ್ತಾಳೆ? ಇಲ್ಲಿಗೆ ಜೊತೆ ಜೊತೆಯಲಿ ಧಾರಾವಾಹಿಯನ್ನು ಮುಗಿಸುತ್ತಾರಾ? ಎನ್ನುವ ಪ್ರಶ್ನೆಗಳಿಗೆ ಉತ್ತರ ಮುಂದಿನ ಸಂಚಿಕೆಗಳಲ್ಲಿ ಸಿಗಲಿದೆ.