ಕೈಕೊಟ್ಟ ಅನುಶ್ರೀ.. ವಿಚಾರಣೆಗೆ ಹಾಜರಾಗದೆ ಎಲ್ಲಿ ಹೋದ್ರು ಗೊತ್ತಾ..

ಸ್ಯಾಂಡಲ್ವುಡ್ ಪ್ರಚಲಿತ ವಿಚಾರಕ್ಕೆ ಸಂಬಂಧಪಟ್ಟಂತೆ ಸಿಸಿಬಿ ವಿಚಾರಣೆ ಸಾಕಷ್ಟು ಚುರುಕುಗೊಂಡಿದೆ.. ಈ ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ನ ಹಲವು ನಟ ನಟಿಯರಿಗೆ ಸಿಸಿಬಿ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದೆ. ಅದರಂತೆ ಕನ್ನಡದ ಖ್ಯಾತ ನಿರೂಪಕಿ ಅನುಶ್ರೀಗೆ ಕೂಡ ಸಿಸಿಬಿ ತನಿಖೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಅನುಶ್ರಿ ಸಾಮಾಜಿಕ ಜಾಲತಾಣದಲ್ಲಿ ವಿಚಾರಣೆಗೆ ಕರೆದಿರುವುದಾಗಿ ಹೆಳಿಕೊಂಡಿದ್ದು ತಾನು ತನಿಖೆಯನ್ನು ಎದುರಿಸುವುದಾಗಿ ಹೇಳಿದ್ದರು. ಅಲ್ಲದೆ ಮಂಗಳೂರಿನ ಸಿಸಿಬಿ ಅಧಿಕಾರಿಗಳು ಬೆಂಗಳೂರಿಗೆ ಬಂದು ನೋಟಿಸ್ ಕೊಟ್ಟಿದ್ದು ವಿಚಾರಣೆ ಎದುರಿಸಲು ಅನುಶ್ರೀ ಇಂದು ಬೆಳಿಗ್ಗೆ 5 ಗಂಟೆಗೆ ಬೆಂಗಳೂರಿನಿಂದ ಹೊರಟು ಮಂಗಳೂರಿಗೆ ತೆರಳಿದ್ದರು ಎನ್ನಲಾಗಿದೆ. ಆದರೆ ಇಂದು ವಿಚಾರಣೆಗೆ ಹಾಜರಾಗುತ್ತೇನೆ ಎಂದು ಮಾದ್ಯಮಕ್ಕೆ ತಿಳಿಸಿದ್ದ ಅನುಶ್ರೀ ಸದ್ಯ ನಾಪತ್ತೆಯಾಗಿದ್ದು ನಾಟ್ ರೀಚೆಬಲ್ ಆಗಿದೆ.‌

ಹೌದು ನಿರೂಪಕಿ ಅನುಶ್ರೀಯ ಬಗ್ಗೆ ಈಗಾಗಲೇ ಪೊಲೀಸರ ವಶದಲ್ಲಿರುವ ತರುಣ್ ರಾಜ್ ಮಾಹಿತಿಯನ್ನು ನೀಡಿದ್ದು ಮೊದಲು ಅನುಶ್ರೀ ಕು’ಡಿ ಯುತ್ತಿದ್ದರು ಎಂದಷ್ಟೇ ಹೇಳಿದ್ದರು.. ಆದರೆ ಸಿಸಿಬಿ ವಿಚಾರಣೆಯ ಚುರುಕು ಮುಟ್ಟುತ್ತಿದ್ದಂತೆ ಇನ್ನಷ್ಟು ಮಹತ್ವದ ವಿಷಯಗಳನ್ನು ಹೊರಹಾಕಿದ್ದಾರೆ.
ಅನುಶ್ರೀ ಹಾಗೂ ನಾವು ಡ್ರ’ಗ್ ಪಾರ್ಟಿ ಮಾಡುತ್ತಿದ್ದೆವು ಎಂಬುದನ್ನು ತರುಣ್ ರಾಜ್ ಹೇಳಿದ್ದಾರೆ ಹಾಗೂ ಇನ್ನಷ್ಟು ಮಾಹಿತಿಯನ್ನು ನೀಡಿದ್ದಾರೆ ಎನ್ನಲಾಗಿದೆ..

ಪ್ರಕರಣಕ್ಕೆ ಸಂಬಂಧಿಸಿದಂತೆ ತರುಣ್ ರಾಜ್, ಕಿಶೋರ್ ಶೆಟ್ಟಿ, ಅಕೀಲ್ ಮಂಗಳೂರಿನ ಪೋಲಿಸರ ವಶದಲ್ಲಿದ್ದು ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿದೆ ಎನ್ನಲಾಗುತ್ತಿದೆ..

ಕಿಶೋರ್ ಶೆಟ್ಟಿ ಹಾಗೂ ಅಕೀಲ್ ಅವರ ಪೋಲಿಸ್ ವಿಚಾರಣೆ ಮುಗಿದ ನಂತರ ವಿಶೇಷ ನ್ಯಾಯಾಲಯದ ಮುಂದೆ ನಿಲ್ಲಿಸಲಾಗಿತ್ತು. ವಿಚಾರಣೆಯ ವೇಳೆ ನಡೆಸಿದ ಡ್ರಿ’ಲ್ ನಿಂದಾಗಿ ಆರೋಪಿಗಳು ಹೆಚ್ಚು ಮಾಹಿತಿಯನ್ನು ನೀಡಿದ್ದಾರೆ. ಅಲ್ಲದೆ ತರುಣ್ ರಾಜ್ ಅನುಶ್ರೀಯ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ನೀಡಿದ್ದಾರೆ. ಅನುಶ್ರೀ ವಿಚಾರಣೆಗೆ ಮಂಗಳೂರು ತನಿಖಾ ತಂಡ ಹದಿನೈದು ಸಿಬ್ಬಂದಿಗಳೊಂದಿಗೆ ಸಜ್ಜಾಗಿತ್ತು. ಆದರೆ ನಿರೂಪಕಿ ಅನುಶ್ರೀ ವಿಚಾರಣೆಗೆ ಹಾಜರಾಗದೇ ಇದ್ದದ್ದು ಅನುಮಾನಕ್ಕೆ ಎಡೆಮಾಡಿ ಕೊಟ್ಟಂತಾಗಿದೆ.‌

ಮಂಗಳೂರಿಗೆ ಬಂದೂ ಕೂಡ ಅನುಶ್ರೀ ಇಂದು ವಿಚಾರಣೆಗೆ ಹಾಜರಾಗಿಲ್ಲ. ಅನುಶ್ರೀಗೆ ನೋಟಿಸ್ ಪ್ರಕಾರ ತನಿಖೆಗೆ ಹಾಜರಾಗಲು ಮೂರು ದಿನಗಳ ಅವಕಾಶವಿದ್ದು, ಅವರು ನಾಳೆ ಯಾವುದೇ ಕಾರಣಕ್ಕೂ ವಿಚಾರಣೆಯಿಂದ ತಪ್ಪಿಸಿಕೊಳ್ಳುವಂತಿಲ್ಲ. ಕಿಶೋರ್ ಅಮನ್ ಹಾಗೂ ತರುಣ್ ರಾಜ್ ಅವರೊಂದಿಗೆ ಅನುಶ್ರೀಗಿರುವ ಸಂಬಂಧದ ಬಗ್ಗೆ ದಾಖಲೆ ಸಮೇತ ವಿಚಾರಣೆ ಮಾಡುವ ಸಾಧ್ಯತೆಗಳಿವೆ. ಹಾಗಾಗಿ ಅನುಶ್ರೀ ತಮಗೆ ಗೊತ್ತಿರುವ ವಿಚಾರದ ಬಗ್ಗೆ ಸ್ಪಷ್ಟತೆ ಕೊಡಲೇಬೇಕಾಗುತ್ತದೆ.

ನಿನ್ನೆ ತರುಣ್ ಅವರನ್ನು ಅನುಶ್ರೀ ಬಗ್ಗೆ ವಿಚಾರಿಸಿದಾಗ ಸರಿಯಾದ ಮಾಹಿತಿ ನೀಡದಿದ್ದರೂ ಇಂದು ಹೆಚ್ಚಿನ ವಿವರಗಳನ್ನು ನೀಡಿದ್ದಾರೆ.. ಹಾಗಾಗಿ ತರುಣ್ ರಾಜ್ ನೀಡಿರುವ ಮಾಹಿತಿಗಳು ಅನುಶ್ರೀಗೆ ತೊಂದರೆಯಾಗಬಹುದು ಎಂದು ಬಲ್ಲ ಮೂಲಗಳು ತಿಳಿಸಿವೆ..