ರಮೇಶ್ ಬಿಟ್ಟರೆ ಕಿರುತೆರೆಯಲ್ಲಿ ಅನುಶ್ರೀ ಸಂಭಾವನೆಯೇ ಹೆಚ್ಚು.. ಒಂದು ಎಪಿಸೋಡ್ ಗೆ ಎಷ್ಟು ಗೊತ್ತಾ?

ಅನುಶ್ರೀ ಕೆಲ ವರ್ಷಗಳಿಂದ ಕನ್ನಡ ಕಿರುತೆರೆಯ ಟಾಪ್ ನಿರೂಪಕರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಹೆಸರು.. ಸರಿಗಮಪ ಎಂದ ಕೂಡಲೇ ಸಂಗೀತದ ಜೊತೆಗೆ ಅನುಶ್ರೀ ಕೂಡ ನೆನಪಾಗುವ ಮಟ್ಟಕ್ಕೆ ಹೆಸರು ತಂದು ಕೊಟ್ಟ ಶೋ ಅದು.. ಜೀವನದ ದಾರಿ ಕಂಡುಕೊಳ್ಳಲು ಮಂಗಳೂರಿನಿಂದ ಬೆಂಗಳೂರಿಗೆ ಬರಿಗೈ ನಲ್ಲಿ ಬಂದ ಅನುಶ್ರೀ ಇಂದು ಒಂದು ಎಪಿಸೋಡ್ ಗೆ ಪಡೆಯುವ ಸಂಭಾವನೆ ಕೇಳಿದ್ರೆ ನಿಜಕ್ಕೂ ಬೆಳವಣಿಗೆ ಅಂದರೆ ಇದು ಎನ್ನುವಂತಾಗುತ್ತದೆ..

ಅನುಶ್ರೀ ಅವರ ನಿರೂಪಣೆ ಕೆಲವರಿಗೆ ಕಿರಿಕಿರಿಯಾದರೆ ಬಹುತೇಕರಿಗೆ ಬಹಳ ಇಷ್ಟವಾಗುತ್ತದೆ.. ಅದರಲ್ಲೂ ಆನ್ ಸ್ಟೇಜ್ ಲೈವ್ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಅನುಶ್ರೀ ಅವರನ್ನೇ ಪ್ರಿಫರ್ ಮಾಡೋದು ಉಂಟು.. ಟಾಕ್ ಬ್ಯಾಕ್ ಕೈ ಕೊಟ್ಟರೂ ಕೂಡ ವೇದಿಕೆ ಮೇಲೆ ಸರಾಗವಾಗಿ ಕಾರ್ಯಕ್ರಮವನ್ನು ನಡೆಸುವ ಸಾಮರ್ಥ್ಯ ಅನುಶ್ರೀ ಅವರಿಗಿದೆ ಎನ್ನುವ ಮಾತಿದೆ..

ಬಿಗ್ ಬಾಸ್ ಗೂ ಮುಂಚೆಯೂ ನಿರೂಪಕಿಯಾಗಿ‌ ಕೆಲಸ ಮಾಡಿದ್ದರೂ ಕೂಡ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿರಲಿಲ್ಲ.. ಬಿಗ್ ಬಾಸ್ ಬಳಿಕ ಜ಼ೀ ವಾಹಿನಿಯ ಸರಿಗಮಪ ಶೋ ಮೂಲಕ ದೊಡ್ಡ ಹೆಸರು ಪಡೆದುಕೊಂಡರು.. ಕಾರ್ಯಕ್ರಮವೂ 8 ರಿಂದ 9 ರೇಟಿಂಗ್ ಪಡೆದು ಯಶಸ್ವಿಯಾಯಿತು.. ಇನ್ನು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮಕ್ಕೂ ಇವರದ್ದೇ ನಿರೂಪಣೆ..

ಇದೆಲ್ಲವನ್ನು ಹೊರತು ಪಡಿಸಿ ಯೂಟ್ಯೂಬ್ ಚಾನಲ್‌ ಕೂಡ ಹೊಂದಿರುವ ಅನುಶ್ರೀ ಅವರು ಸ್ಟಾರ್ ನಟ ನಟಿಯರ ಸಂದರ್ಶನ ಮಾಡುತ್ತಿರುತ್ತಾರೆ.. ಇನ್ನು ಯಾವುದೇ ದೊಡ್ಡ ದೊಡ್ಡ ಸಿನಿಮಾಗಳ ಆಡಿಯೋ ಬಿಡುಗಡೆ ಸಮಾರಂಭವಾದರೂ ಅಲ್ಲಿ ಅನುಶ್ರೀ ಅವರೇ ನಿರೂಪಕಿ ಎನ್ನುವಷ್ಟರ ಮಟ್ಟಕ್ಕೆ ಅನುಶ್ರೀ ಬೆಳೆದಿದ್ದಾರೆ… ಇನ್ನು ಅನುಶ್ರೀ ಅವರ ಸಂಭಾವನೆ ವಿಚಾರಕ್ಕೆ ಬಂದರೆ ಹೊರಗಿನ ಕಾರ್ಯಕ್ರಮಗಳು ಆಡಿಯೋ ಬಿಡುಗಡೆ, ಲೈವ್ ಕಾರ್ಯಕ್ರಮ ಈ ರೀತಿಯ ಕಾರ್ಯಕ್ರಮಗಳಿಗೆ ಅನುಶ್ರೀ ಅವರ ಸಂಭಾವನೆ 1 ಲಕ್ಷ ಎನ್ನಲಾಗುತ್ತದೆ.. ಇನ್ನು ಜ಼ೀ ವಾಹಿನಿಯ ಎಪಿಸೋಡ್ ಒಂದಕ್ಕೆ 80 ಸಾವಿರ ರೂಪಾಯಿ ಸಂಭಾವನೆಯಾಗಿ ನೀಡಲಾಗುತ್ತದೆ ಎನ್ನಲಾಗಿದೆ..

ಏನೂ ಇಲ್ಲದೆ ಬರಿಗೈ ನಲ್ಲಿ ಬಂದು ತಮ್ಮ ಪ್ರತಿಭೆ ಹಾಗೂ ನಂಬಿಕೆಯಿಂದ ಇಂದು ಅನುಶ್ರೀ ತಮ್ಮ ಜೀವನದಲ್ಲಿ ಅಂದುಕೊಂಡದ್ದನ್ನು ಸಾಧಿಸಿದ್ದಾರೆ.. ಅವರ ಈ ಸಕ್ಸಸ್ ಜರ್ನಿ ಹೀಗೆ ಮುಂದುವರೆಯಲಿ ಎಂದು ಆಶಿಸೋಣ..