ಅನುಶ್ರೀ ತಂದೆ ವಿಚಾರದಲ್ಲಿ ಊಹಿಸಿರದ ತಿರುವು.. ದುರಹಂಕಾರದ ಮಾತು ಆಡುತ್ತಿರುವ ಅನುಶ್ರೀ ತಂದೆ ಮಾಡುತ್ತಿರುವ ಡಿಮ್ಯಾಂಡ್ ನೋಡಿ..

ಅನುಶ್ರೀ.. ಸಧ್ಯ ಆಗಾಗ ಸುದ್ದಿಯಾಗುವ ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರು ಇದೀಗ ಅವರ ತಂದೆ ವಿಚಾರವಾಗಿ ಮತ್ತೆ ಸುದ್ದಿಗೆ ಬಂದಿದ್ದಾರೆ.. ಹೌದು ಚಿಕ್ಕ ವಯಸ್ಸಿನಲ್ಲಿ ಬಿಟ್ಟು ಹೋದ ಅನುಶ್ರೀ ಅವರ ತಂದೆ ಇದೀಗ ಇದ್ದಕಿದ್ದ ಹಾಗೆ ಪ್ರತ್ಯಕ್ಷವಾಗಿದ್ದು ಇಂತಹ ಸಮಯದಲ್ಲಿಯೂ ದುರಹಂಕಾರದ ಮಾತುಗಳನ್ನು ಆಡುತ್ತಿದ್ದು ನಿಜಕ್ಕೂ ಬೇಸರವನ್ನುಂಟು ಮಾಡುತ್ತಿದೆ.. ಹೌದು ಎಲ್ಲರಿಗೂ ತಿಳಿದಿರುವಂತೆ ಅನುಶ್ರೀ ಅವರೇ ಸಾಕಷ್ಟು ಕಾರ್ಯಕ್ರಮಗಳಲ್ಲಿ ಹೇಳಿಕೊಂಡಂತೆ ಅವರಿಗೆ ತಂದೆ ಇರಲಿಲ್ಲ.. ಹೆಂಡತಿ ಹಾಗೂ ಇಬ್ಬರು ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲಿಯೇ ಬಿಟ್ಟು, ಯಾವ ಜವಾಬ್ದಾರಿಯನ್ನೂ ನಿಭಾಯಿಸದೇ ಮಕ್ಕಳನ್ನು ಹಾಗೂ ಹೆಂಡತಿಯನ್ನು ನೋಡಿಕೊಳ್ಳದೇ ಮನೆ ಬಿಟ್ಟು ಹೋಗಿದ್ದ ಮನುಷ್ಯನೀಗ ಮಕ್ಕಳು ಬೆಳೆದು ಸ್ವಂತ ಪರಿಶ್ರನದಲ್ಲಿ ಹೆಸರು ಮಾಡಿದ ಬಳಿಕ ಮರಳಿ ಬಂದಿದ್ದಾರೆ..

ಬಂದು ತನ್ನ ಕುಟುಂಬವನ್ನು ಸೇರಿದರೆ ಎಲ್ಲರಿಗೂ ಸಂತೋಷ.. ಆದರೆ ಇಂತಹ ಸಮಯದಲ್ಲಿಯೂ ಹೆಂಡತಿ ಹಾಗೂ‌ ಮಗಳ ಮೇಕೆ ದುರಃಹಂಕಾರದ ಮಾತುಗಳನ್ನಾಡುತ್ತಿದ್ದು ನಿಜಕ್ಕೂ ಬೇಸರವನ್ನುಂಟು ಮಾಡುತ್ತಿದೆ.. ಅಷ್ಟೇ ಅಲ್ಲದೇ ಆತ ಏಕೆ ಹೆಂಡತಿ ಹಾಗೂ ಮಕ್ಕಳನ್ನಿ ಬಿಟ್ಟು ಹೋದೆ ಎಂಬ ವಿಚಾರವನ್ನೂ ಸಹ ತಿಳಿಸಿದ್ದು ಜೊತೆಗೆ ನನ್ನ ಗ್ಯಾಂಗ್ ಗೆ ಇವರ ವಿಚಾರ ಗೊತ್ತಾದ್ರೆ ಇವರನ್ನು ಎತ್ತಿಬಿಡ್ತಾರೆ ಎನ್ನುವ ಅರ್ಥವಿಲ್ಲದ ಅಸಹ್ಯದ ಮಾತುಗಳನ್ನಾಡಿದ್ದು ನಿಜಕ್ಕೂ ಅಸಹ್ಯವನ್ನುಂಟು ಮಾಡುತ್ತಿದೆ..

ಹೌದು ಅನುಶ್ರೀ ಅವರು ಚಿಕ್ಕವರಿದ್ದಾಗ ಡ್ಯಾನ್ಸ್ ನಲ್ಲಿ ಆಸಕ್ತಿ ಇದ್ದ ಕಾರಣ ಅವರನ್ನು ಡ್ಯಾನ್ಸ್ ತರಗತಿಗೆ ಸೇರಿಸಲಾಗಿತ್ತು.. ಆದರೆ ಅದು ಅವರ ತಂದೆ ಸಂಪತ್ ಕುಮಾರ್ ಗೆ ಇಷ್ಟವಿಲ್ಲದ ಕಾರಣ ಬೇಡ ಎಂದಿದ್ದರಂತೆ.. ಆದರೆ ಮಕ್ಕಳ ಭವಿಷ್ಯ ಮುಖ್ಯ ಎಂದು ಅನುಶ್ರೀ ತಾಯಿ ಡ್ಯಾನ್ಸ್ ಶಾಲೆಗೆ ಸೇರಿಸಿದ್ದರು.. ಇದರಿಂದ ಕೋಪಗೊಂಡ ಅನುಶ್ರೀ ತಂದೆ ಸಂಪತ್ ನನ್ನ ಮಾತಿಗೆ ಬೆಲೆ ಇಲ್ಲ ಎಂದು ಮನೆ ಬಿಟ್ಟು ಹೋಗಿದ್ದರಂತೆ.. ಮಕ್ಕಳ ಆಸೆಯನ್ನು ಪೂರೈಸದೇ ಮಕ್ಕಳಿಗೆ ಎರಡು ಹೊತ್ತು ಅನ್ನ ಹಾಕದೇ ಬಿಟ್ಟು ಹೋದ ಮನುಷ್ಯ ನಂತರ ದೇಶ ವಿದೇಶಗಳನ್ನಿ ಸುತ್ತಿಕೊಂಡು ಇಪ್ಪತ್ತು ವರ್ಷಗಳ ಕಾಲ ನೆಮ್ಮದಿಯಾಗಿ ಸಂತೋಷವಾಗಿಯೇ ಜೀವನ ಮಾಡಿದ್ದಾರೆ.. ಮಾರ್ಕೆಟಿಂಗ್ ಅದು ಇದು ಅಂತ ಮಾಡುತ್ತಿದ್ದ ಸಂಪತ್ ಮುಂಬೈ ನಲ್ಲಿ ಗ್ಯಾಂಗ್ ಒಂದಕ್ಕೂ ಸೇರಿಕೊಂಡಿದ್ದರಂತೆ..

ಸಧ್ಯ ಇದೀಗ ಎರಡು ಬಾರಿ ಪಾರ್ಶ್ವ ವಾಯು ಆಗಿದ್ದು ಈಗ ಮಕ್ಕಳು ಸಾಕಲಿ ಎನ್ನುತ್ತಿದ್ದಾರೆ.. ಹೌದು ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಪತ್ ಕುಮಾರ್ ನಾನು ಅನುಶ್ರೀ ತಂದೆ ಎಂದು ಮಾದ್ಯಮದವರನ್ನು ಕರೆಸಿ ಹೇಳಿಕೆ ನೀಡಿದ್ದಾರೆ.. ಇಷ್ಟು ದಿನ ಏಕೆ ಬರಲಿಲ್ಲ ಎಂದಾಗ ಅವರಿಗೆ ಡಿಸ್ಟರ್ಬ್ ಮಾಡಬಾರದು ಅಂತ ಬರಲಿಲ್ಲ ಎಂದಿದ್ದಾರೆ.. ಅವರಿಗೆ ತೊಂದರೆ ಕೊಡಲು ಇಷ್ಟವಿಲ್ಲ ಅದಕ್ಕೆ ಬರಲಿಲ್ಲ ಎಂದಿದ್ದಾರೆ.. ಹಾಗಾದರೆ ಈಗ ಕೊಡುತ್ತಿರುವುದು ಏನು ಎಂಬುದೇ ಆ ಪುಣ್ಯಾತ್ಮನ ಮಾತು ಕೇಳಿದ ನೆಟ್ಟಿಗರ ಪ್ರಶ್ನೆ..

ಸಾಕುವಾಗ ಸಾಕಲಿಲ್ಲ.. ಆಡಿಸುವಾಗ ಆಡಿಸಲಿಲ್ಲ.. ಅನ್ನ ಹಾಕುವಾಗ ಹಾಕಲಿಲ್ಲ.. ದೇಶ ವಿದೇಶ ಸುತ್ತಿ ಎಂಜಾಯ್ ಮಾಡಿದ್ದಾಯ್ತು.. ಈಗ ಪಾರ್ಶ್ವ ವಾಯು ಹೊಡೆದ ನಂತರ ಹೆಂಡತಿ ಮಕ್ಕಳು ಬಂದು ಸಾಕಲಿ ಎನ್ನುತ್ತಿದ್ದಾರೆ.. ಅಷ್ಟೇ ಅಲ್ಲದೇ ಇವರ ಹೆಸರನ್ನು ನಾನು ಹೇಳಿದ್ದರೆ ನನ್ನ ಗ್ಯಾಂಗ್ ಯಾವತ್ತೋ ಇವರನ್ನು ಎತ್ತಿ ಬಿಡುತ್ತಿದ್ದರು ಎನ್ನುವ ಅಹಂಕಾರದ ಮಾತು ಬೇರೆ.. ಮಗಳು ಹೆಸರು ಮಾಡಿದ್ದಾಳೆ ಮಕ್ಕಳ ಮೇಲೆ ಅಷ್ಟೂ ಪ್ರೀತಿ ಇದ್ದಿದ್ದರೆ ಮಾದ್ಯಮದ ಮುಂದೆ ಬಾರದೇ ನೇರವಾಗಿ ಹೆಂಡತಿ ಹಾಗೂ ಮಗಳ ಬಳಿ ಮಾತನಾಡಬಹುದಾಗಿತ್ತು.. ಮಾಡಿದ ತಪ್ಪಿಗೆ ಕ್ಷಮೆ ಕೇಳಿಯೋ ಅಥವಾ ಮತ್ತೋಂದೋ ನೇರವಾಗಿ ಹೆಂಡತಿ ಮಗಳ ಮುಂದೆ ಕೇಳಿ ಜೊತೆಯಾಗಬಹುದಾಗಿತ್ತು.. ಅಥವಾ ಅವರಿಗಿಷ್ಟ ಇಲ್ಲದಿದ್ದರೆ ಸುಮ್ಮನಾಗಬಹುದಿತ್ತು..

ಆದರೆ ಸಂಪತ್‌ ಕುಮಾರ್‌ ಅವರು ಮಾತ್ರ ಮಗಳು ಬಂದು ಸಾಕಲಿ ಎಂದು ಮಾದ್ಯಮದ ಮುಂದೆ ಡಿಮ್ಯಾಂಡ್‌ ಮಾಡುವಂತೆ ಮಾತನಾಡುತ್ತಿದ್ದಾರೆ.. ಈಗ ಅನುಶ್ರೀ ಹೆಸರು ಮಾಡಿದ್ದಾಳೆ ಎಂಬ ಕಾರಣಕ್ಕೆ ಮಾದ್ಯಮದ ಮುಂದೆ ಬಂದು ಬಾಯಿಗೆ ಬಂದ ಹಾಗೆ ಮಾತನಾಡಿ ಇಷ್ಟ ಇದ್ರೆ ಬಂದ್ ಸಾಕ್ಲಿ ಅದು ಇದು ಎನ್ನುವ ಈ ದೊಡ್ಡ ಮನುಷ್ಯನ ಮಾತುಗಳು ನಿಜಕ್ಕೂ ಇಂತಹವರಿಂದಲೇ ಎಷ್ಟೋ ಮಕ್ಕಳು ಸುಖವಾಗಿ ಬೆಳೆಯಬೇಕಾದ ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಕಷ್ಟ ಪಟ್ಟು ಬದುಕು ಕಟ್ಟಿಕೊಳ್ಳುತ್ತಿರುವುದು.. ಎಷ್ಟೋ ಮಕ್ಕಳು ತಂದೆ ಪ್ರೀತಿಯನ್ನೇ ಕಾಣದೇ ಕಷ್ಟ ಪಡುತ್ತಿರುವುದು.. ಇನ್ನು ಈಗಾಗಲೇ ವಿಚಾರವೆಲ್ಲಾ ಅನುಶ್ರೀಗೆ ತಿಳಿದಿದ್ದು ಅಪ್ಪನನ್ನು ಕ್ಷಮಿಸಿ‌ ಮನೆಗೆ ಕರೆದುಕೊಂಡು ಹೋಗುವರಾ ಅಥವಾ ಅದಾಗಲೇ ಅಪ್ಪನ ವಿಚಾರದಲ್ಲಿ ಕಲ್ಲಾದ ಮನಸ್ಸಿಗೆ ಮತ್ತಷ್ಟು ನೋವು ಕೊಡುವುದು ಬೇಡವೆಂದು ಸುಮ್ಮನಾಗುವರಾ ಕಾದು ನೋಡಬೇಕಷ್ಟೇ..