ಕಾರ್ಯಕ್ರಮ ಒಂದನ್ನು ನಡೆಸಿಕೊಡಲು ಅನುಶ್ರೀ ಪಡೆಯುವ ಸಂಭಾವನೆ ಎಷ್ಟು ಗೊತ್ತಾ.. ಶಾಕ್ ಆಗ್ತೀರಾ..

ಒಂದು ಕಾರ್ಯಕ್ರಮ ನಿರೂಪಣೆ ಮಾಡುವುದು ಅಂದ್ರೆ ಅದು ಸುಲಭದ ಕೆಲಸ ಅಲ್ಲ. ಗಂಟೆಗಳ ಕಾಲ ವೇದಿಕೆ ಮೇಲೆ ನಿಂತು, ಕಾರ್ಯಕ್ರಮಕ್ಕೆ, ಸಂದರ್ಭಕ್ಕೆ ತಕ್ಕ ಹಾಗೆ ಮಾತುಗಳನ್ನಾಡುವುದು, ಜನರಿಗೆ ಇಷ್ಟ ಆಗುವ ಹಾಗೆ ಮಾತನಾಡುವುದು ಒಂದು ಕಲೆ. ಅದರಲ್ಲೂ ಅಚ್ಚ ಕನ್ನಡದಲ್ಲಿ ಮಾತನಾಡಿ, ಜನರನ್ನು ನಗಿಸಿ ಜನರ ಫೇವರೆಟ್ ಆಗುವುದು ಸುಲಭದ ಕೆಲಸವಲ್ಲ. ಕನ್ನಡದಲ್ಲಿ ಇದುವರೆಗೂ ಅನೇಕ ನಿರೂಪಕ ನಿರೂಪಕಿಯರು ಬಂದು ಹೋಗಿದ್ದಾರೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಕನ್ನಡ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ನಿರೂಪಕಿ ಅನುಶ್ರೀ. ಅನುಶ್ರೀ ಅವರು ಅರಳು ಹುರಿದ ಹಾಗೆ ಆಡುವ ಪಟಪಟ ಮಾತುಗಳನ್ನು ಎಂಜಾಯ್ ಮಾಡದೆ ಇರುವವರೆ ಇಲ್ಲ. ಅನುಶ್ರೀ ಅವರ ನಿರೂಪಣೆ ನೋಡಲೆಂದೇ ಸಾಕಷ್ಟು ಜನ ಕಾರ್ಯಕ್ರಮಗಳನ್ನು ನೋಡುತ್ತಾರೆ. ಇಂದು ಕರ್ನಾಟಕದ ಟಾಪ್ ನಿರೂಪಕಿ ಎಂದೇ ಖ್ಯಾತಿ ಗಳಿಸಿರುವ ಅನುಶ್ರೀ ಅವರು ಒಂದು ಕಾರ್ಯಕ್ರಮ ನಡೆಸಿ ಕೊಡಲು ಪಡೆಯುವ ಸಂಭಾವನೆ ಎಷ್ಟು ಲಕ್ಷ ಗೊತ್ತಾ?

ಇಂದು ಖ್ಯಾತ ನಿರೂಪಕಿ ಆಗಿರುವ ಅನುಶ್ರೀ ಹಿಂದಿನ ಜೀವನ ಹೀಗಿರಲಿಲ್ಲ. ಬಹಳ ಕಷ್ಟದ ವಾತವರಣದಲ್ಲಿ ಬೆಳೆದವರು ಅನುಶ್ರೀ. ಮಂಗಳೂರಿನಲ್ಲಿ ಹುಟ್ಟಿ ಬೆಳೆದ ಅನುಶ್ರೀ ಅವರು, ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡರು. ಅನುಶ್ರೀ ಮತ್ತು ಅವರ ತಮ್ಮನನ್ನು ಸಾಕಿ ಬೆಳೆಸಿದ್ದು ಅವರ ತಾಯಿ. ಹದಿನೇಳು ಹದಿನೆಂಟು ವರ್ಷಕ್ಕೆ ಓದುವುದನ್ನು ನಿಲ್ಲಿಸಿ, ಕೆಲಸ ಮಾಡಬೇಕು, ಅಮ್ಮನನ್ನು ತಮ್ಮನನ್ನು ನೋಡಿಕೊಳ್ಳಬೇಕು ಎಂದು ನಿರ್ಧಾರ ಮಾಡುವ ಅನುಶ್ರೀ, ಮಂಗಳೂರಿನ ಲೋಕಲ್ ಚಾನೆಲ್ ಒಂದರಲ್ಲಿ ಒಂದು ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದರು. ಅನುಶ್ರೀ ನಿರೂಪಣೆ ಚೆನ್ನಾಗಿದೆ ಎಂದು ಅವರನ್ನು ಎಲ್ಲರೂ ಹೊಗಳಿ, ಬೆಂಗಳೂರಿಗೆ ಹೋಗಿ, ಇನ್ನು ಒಳ್ಳೆಯ ಕೆಲಸ ಸಿಗುತ್ತದೆ ಎಂದು ಹುರಿದುಂಬಿಸಿದ್ದರು.

ಅಂತೆಯೇ ಹೊಸ ಕನಸುಗಳನ್ನು ಹೊತ್ತು ಬೆಂಗಳೂರಿಗೆ ಬಂದರು ಅನುಶ್ರೀ..ಆದರೆ ಬೆಂಗಳೂರಿನ ಜೀವನ ಅನುಶ್ರೀ ಅಂದುಕೊಂಡ ಹಾಗೆ ಇರಲಿಲ್ಲ. ಇಲ್ಲಿ ಒಂದು ಒಳ್ಳೆಯ ಅವಕಾಶ ಪಡೆಯುವುದೆ ತುಂಬಾ ಕಷ್ಟವಾಗಿತ್ತು. ಅನುಶ್ರೀ ಮಾತನಾಡುತ್ತಾ ಇದ್ದದ್ದು ಮಂಗಳೂರು ಕನ್ನಡ, ಬೆಂಗಳೂರಿನ ಕನ್ನಡ ಕಲಿತ ನಂತರ ಈಟಿವಿ ಚಾನೆಲ್ ನಲ್ಲಿ ಡಿಮ್ಯಾಂಡಪ್ಪೋ ಡಿಮ್ಯಾಂಡು ಕಾರ್ಯಕ್ರಮದ ನಿರೂಪಣೆ ಶುರು ಮಾಡಿದರು. ಅನುಶ್ರೀ ಮಾತಿನ ಧಾಟಿ ಎಲ್ಲರಿಗೂ ಇಷ್ಟವಾದ ಕಾರಣ, ಇವರನ್ನೇ ನಿರೂಪಕಿಯಾಗಿ ಮುಂದುವರೆಸಿದರು. ನಂತರ ಒಂದೊಂದೇ ಕಾರ್ಯಕ್ರಮಗಳು, ರಿಯಾಲಿಟಿ ಶೋಗಳ ನಿರೂಪಣೆ ಅನುಶ್ರೀ ಅವರನ್ನು ಅರಸಿ ಬರಲು ಶುರುವಾಯಿತು.

ಅಲ್ಲಿಂದ ಅನುಶ್ರೀ ಅವರ ಜನಪ್ರಿಯತೆ ಕೂಡ ತುಂಬಾ ಹೆಚ್ಚಾಯಿತು. ಜನರೆಲ್ಲರೂ ಅನುಶ್ರೀ ಅವರನ್ನು ಗುರುತಿಸಲು, ಪ್ರೀತಿಸಲು ಶುರು ಮಾಡಿದರು. ಅನುಶ್ರೀ ತಮಾಷೆಯ ಮಾತಿನ ಧಾಟಿ ಎಲ್ಲರಿಗೂ ಇಷ್ಟವಾಗುತ್ತಾ ಇದ್ದ ಹಾಗೆ ಅನುಶ್ರೀ ಅವರಿಗೆ ಅವಕಾಶಗಳು ಹೆಚ್ಚಾಗುತ್ತಾ ಹೋದವು. ಸಿನಿಮಾ ಕಾರ್ಯಕ್ರಮಗಳು, ರಿಯಾಲಿಟಿ ಶೋಗಳ ನಿರೂಪಣೆ, ಕನ್ನಡಪರ ಕಾರ್ಯಕ್ರಮಗಳು, ಸೀರಿಯಲ್ ಸಂತೆಗಳು, ಅವಾರ್ಡ್ ಶೋಗಳ ನಿರೂಪಣೆ ಹೀಗೆ ಹಲವು ಬಗೆಯ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುತ್ತಿದ್ದರು ಅನುಶ್ರೀ. ಸರಿಗಮಪ ಲೈಟ್ಲ್ ಚಾಂಪ್ಸ್, ಡ್ಯಾನ್ಸ್ ಕರ್ನಾಟಕ ಡ್ಯಾನ್ಡ್ ಇವುಗಳು ಅನುಶ್ರೀ ನಿರೂಪಣೆ ಮಾಡುವ ಕೆಲವು ಕಾರ್ಯಕ್ರಮಗಳಲ್ಲಿ ಒಂದಾಗಿದೆ.

ಹೀಗೆ ಕಷ್ಟದ ದಾರಿಯಲ್ಲಿ ಕುಗ್ಗದೆ, ತಮ್ಮ ಮೇಲೆ ತಾವು ನಂಬಿಕೆ ಇಟ್ಟು, ಕಠಿಣ ಪರಿಶ್ರಮದಿಂದ ಜೀವನದಲ್ಲಿ ಇಷ್ಟು ಎತ್ತರಕ್ಕೆ ಬೆಳೆದಿರುವವರು ಅನುಶ್ರೀ..ಇಂದು ಕರ್ನಾಟಕ ಮೆಚ್ಚುವ ಹೆಮ್ಮೆಯ ನಿರೂಪಕಿ. ಹಲವು ಶೋಗಳ ನಿರೂಪಣೆ ಜೊತೆಗೆ, ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಒಂದನ್ನು ಸಹ ಹೊಂದಿದ್ದಾರೆ ಅನುಶ್ರೀ. ಅದರಲ್ಲಿ ಸೆಲೆಬ್ರಿಟಿಗಳನ್ನು ಸಂದರ್ಶನ ಮಾಡಿರುವ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಹಲವಾರು ಫೋಟೋಶೂಟ್ ಗಳಲ್ಲಿ ಸಹ ಕಾಣಿಸಿಕೊಳ್ಳುತ್ತಾರೆ ಅನುಶ್ರೀ. ಕರ್ನಾಟಕದ ಜನತೆ ಇವರ ನಿರೂಪಣೆಗೆ ಫಿದಾ ಆಗಿದ್ದಾರೆ.

ಅನುಶ್ರೀ ಅವರು ತಮ್ಮ ತಾಯಿ ಮತ್ತು ತಮ್ಮನಿಗಾಗಿ ಒಂದು ಐಷಾರಾಮಿ ಮನೆಯನ್ನು ಸಹ ಕಟ್ಟಿಸಿದ್ದಾರೆ. ಹಾಗೂ ತಮ್ಮನನ್ನು ಓದಿಸಿ ತಮ್ಮನಿಗಾಗಿ ಒಂದು ಒಳ್ಳೆಯ ಭವಿಷ್ಯ ಕಟ್ಟಿಕೊಟ್ಟಿದ್ದಾರೆ. ಹೆಣ್ಣುಮಗಳಾಗಿ, ಗಂಡು ಮಗನಂತೆ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಕನ್ನಡ ಸಿನಿಮಾಗಳ ಕುರಿತು ನಡೆಯುವ ಬಹುತೇಕ ಎಲ್ಲ ಕಾರ್ಯಾಕ್ರಮಗಳಿಗೂ ಅನುಶ್ರೀ ಅವರ ನಿರೂಪಣೆ ಇರುತ್ತದೆ. ಹಾಗಿದ್ದಲ್ಲಿ ಒಂದು ಕಾರ್ಯಕ್ರಮ ನಿರೂಪಣೆ ಮಾಡಲು ಅನುಶ್ರೀ ಅವರು ಪಡೆಯುವ ಸಂಭಾವನೆ ಎಷ್ಟಿರಬಹುದು ಎನ್ನುವ ಕುತೂಹಲ ನಿಮ್ಮಲ್ಲಿ ಮೂಡಿರುತ್ತದೆ. ನಿರೂಪಕಿ ಅನುಶ್ರೀ, ಒಂದು ಕಾರ್ಯಕ್ರಮ ನಿರೂಪಣೆ ಮಾಡಲು, ಬರೊಬ್ಬರಿ 4 ಲಕ್ಷ ರೂಪಾಯಿ ಸಂಭಾವನೆ ಪಡೆದುಕೊಳ್ಳುತ್ತಾರೆ. ಮಂಗಳೂರಿನಿಂದ ಬೆಂಗಳೂರಿಗೆ ಏನು ಇಲ್ಲದೆ ಬಂದು, ಇಂದು ಇಷ್ಟು ಎತ್ತರಕ್ಕೆ ಬೆಳೆದಿರುವ ಅನುಶ್ರೀ, ನಿಜಕ್ಕೂ ಎಲ್ಲರಿಗೂ ಸ್ಪೂರ್ತಿ.