ಅಂತೂ ಮದುವೆಯ ಸಿಹಿ ಸುದ್ದಿ ನೀಡಿದ ನಿರೂಪಕಿ ಅನುಶ್ರೀ.. ಹುಡುಗ ಯಾರು ಗೊತ್ತಾ..

ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸುದ್ದಿಯಾಗೋದು ಸಹಜ.. ಕೆಲವೊಮ್ಮೆ ಶೋಗಳ ವಿಚಾರವಾಗಿ ಸದ್ದು ಮಾಡಿದರೆ ಮತ್ತೆ ಕೆಲವೊಂದು ಬಾರಿ ಕೆಲ ವಿವಾದಗಳಲ್ಲಿಯೂ ಸುದ್ದಿಯಾಗಿದ್ದು ಉಂಟು.. ಆದರೆ ಸಾಕಷ್ಟು ಬಾರಿ ಮದುವೆ ವಿಚಾರದ ಬಗ್ಗೆ ಸುದ್ದಿಯಾಗಿ ಕೊನೆಗೆ ನಾನಿನ್ನು ಮದುವೆ ವಿಚಾರದ ಬಗ್ಗೆ ಆಲೋಚಿಸಿಲ್ಲ ಎಂದು ಖುದ್ದು ಅನುಶ್ರೀ ಅವರೇ ಹೇಳಿದ್ದುಂಟು.. ಆದರೀಗ ಮದುವೆಗೆ ಕಾಲ ಕೂಡಿ ಬಂದಂತಿದೆ.. ಮದುವೆಗೆ ಮನಸ್ಸು ಮಾಡಿರುವುದಾಗಿ ಖುದ್ದು ಅನುಶ್ರೀ ಅವರೇ ಹಂಚಿಕೊಂಡಿದ್ದು ಅಷ್ಟಕ್ಕೂ ಅನುಶ್ರೀ ಕೈ ಹಿಡಿಯುವ ಹುಡುಗ ಯಾರು ಎನ್ನುವ ಕುತೂಹಲ ಕಿರುತೆರೆ ಪ್ರಿಯರಲ್ಲಿ ಮೂಡಿದೆ..

ಹೌದು ಕನ್ನಡ ಸಿನಿಮಾ ಇಂಡಸ್ಟ್ರಿಯ ಕಾರ್ಯಕ್ರಮಗಳು ಹಾಗೂ ಕಿರುತೆರೆಯ ಶೋಗಳಲ್ಲಿ ನಿರೂಪಕಿಯಾಗಿ ಸಿಕ್ಕಾಪಟ್ಟೆ ಬ್ಯುಸಿ ಆಗಿರುವ ನಟಿ ನಿರೂಪಕಿ ಅನುಶ್ರೀ ಅವರು ಇದೀಗ ಮದುವೆಗೆ ಮನಸ್ಸು ಮಾಡಿದ್ದು ಈ ಬಗ್ಗೆ ಖುದ್ದು ಅನುಶ್ರೀ ಅವರೇ ಹೇಳಿಕೊಂಡಿದ್ದಾರೆ.. ಹೌದು ಇಷ್ಟು ದಿನಗಳ ಕಾಲ ಮದುವೆ ಬಗ್ಗೆ ಆಲೋಚನೆಯೇ ಮಾಡಿಲ್ಲ ಎನ್ನುತ್ತಿದ್ದ ಅನುಶ್ರೀ ಅವರೀಗ ಮದುವೆ ಬಗ್ಗೆ ಮನಸ್ಸು ಮಾಡಿರುವ ಬಗ್ಗೆ ಖುದ್ದು ಅವರೇ ಹೇಳಿಕೊಂಡಿದ್ದು ಅವರ ಆಪ್ತರು ಅಭಿಮಾನಿಗಳು ಸಂತೋಷ ಪಟ್ಟಿದ್ದಾರೆ‌ನ್ನಬಹುದು..

ಹೌದು ಸಾಕಷ್ಟು ಕಷ್ಟದಿಂದ ಬೆಳೆದು ಬಂದ ಅನುಶ್ರೀ ಇದೀಗ ತಮ್ಮದೇ ಆದ ಹೆಸರು ಖ್ಯಾತಿ ಹಣ ಎಲ್ಲವನ್ನೂ ಸಹ ಗಳಿಸಿದ್ದಾರೆ.. ನಿರೂಪಕಿಯಾಗಿ ಮಾತ್ರವಲ್ಲದೇ ನಟಿಯಾಗಿಯೂ ಗುರುತಿಸಿಕೊಂಡಿರುವ ಅನುಶ್ರೀ ಅವರು ತಮ್ಮ ವಿಭಿನ್ನ ನಿರೂಪಣೆಯ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಮನೆಮಾತಾಗಿದ್ದಾರೆ. ಚಿತ್ರರಂಗದ ಕಾರ್ಯಕ್ರಮಗಳ ಜೊತೆಗೆ ಟಿವಿ ಶೋ ಮುಖಾಂತರ ಅನುಶ್ರೀ, ಅಪಾರ ಅಭಿಮಾನಿಗಳ ಮನಗೆದ್ದಿದ್ದಾರೆ. ಇದೀಗ ಮತ್ತೆ ನಟಿ ಕಮ್ ನಿರೂಪಕಿ ಅನುಶ್ರೀ ಸುದ್ದಿಯಲ್ಲಿದ್ದಾರೆ. ಈ ಬಾರಿ ಮದುವೆಯ ವಿಚಾರದ ಮೂಲಕ ಕಿರುತೆರೆ ಹಾಗೂ ಸ್ಯಾಂಡಲ್ವುಡ್ ನಲ್ಲಿ ಸದ್ದು ಮಾಡುತ್ತಿದ್ದಾರೆ..

ಹೌದು ಅನುಶ್ರೀ ಅವರಿಗೆ ಮದುವೆಯಾಗಲು ಮನಸ್ಸು ಮಾಡಿದ್ದಾರೆ. ಮದುವೆ ಆಗುವುದಕ್ಕೆ ಆಸೆಯಾಗುತ್ತಿದೆ ಅಂತೆ ಹಾಗಂತ ಸ್ವತಃ ತಮ್ಮ ಮನದಾಳದ ಮಾತನ್ನ ಖಾಸಗಿ ಶೋವೊಂದರಲ್ಲಿ ಅನುಶ್ರೀ ಹೇಳಿಕೊಂಡಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಶುರುವಾದ ಹೊಸ ಶೋ ಜೋಡಿ ನಂಬರ್ ಒನ್ ಶೋನಲ್ಲಿ ಉದ್ಘಾಟನಾ ಸಮಾರಂಭದಲ್ಲಿ ಅನುಶ್ರೀ ಅವರು ಅತಿಥಿಯಾಗಿ ಭಾಗವಹಿಸಿದ್ದರು.. ಆ ಶೋನ ಜೋಡಿಗಳ ಪ್ರೀತಿ, ಬಾಂಧವ್ಯ ನೋಡಿ ಶೋನಲ್ಲಿ ತಾನು ಕೂಡ ಮದುವೆಯಾಗಬೇಕು ಅಂತಾ ಆಸೆಯಾಗುತ್ತಿದೆ ಎಂದು ಅನುಶ್ರೀ ಮುಕ್ತವಾಗಿ ಎರಡು ಮೂರು ಬಾರಿ ಹೇಳಿಕೊಂಡರು..

ದಾಂಪತ್ಯ ಜೀವನಕ್ಕೆ ಕಾಲಿಟ್ಟು ಹಸೆಮಣೆ ಏರಲು ಮನಸ್ಸು ಮಾಡಿರುವ ಅನುಶ್ರೀ ಅವರಿಗೆ ಈಗಾಗಲೇ ಹುಡುಗ ಸಿಕ್ಕಿದ್ದಾನ.. ಅಥವಾ ಹಾಗೇ ಮಾತಿಗೆ ಹೇಳಿರೋದಾ ಅಂತಾ ಕಾದುನೋಡಬೇಕಿದೆ. ಒಟ್ಟಿನಲ್ಲಿ ನಿರೂಪಕಿ ಅನುಶ್ರೀ ಅವರು ಮದುವೆಯತ್ತ ಮನಸ್ಸು ಮಾಡಿರೋದಕ್ಕೆ ಅವರನ್ನು ಇಷ್ಟ ಪಡುವ ಜನರು ಹಾಗೂ ಸ್ನೇಹಿತರು ಖುಷಿಯಾಗಿರೋದಂತೂ ನಿಜ.. ಸದ್ಯದಲ್ಲೇ ಅಭಿಮಾನಿಗಳಿಗೆ ಅನುಶ್ರೀ ಸಿಹಿ ಸುದ್ದಿ ನೀಡುವುದು ಖಚಿತವಾಗಿದೆ‌‌.. ಮುಂಬರುವ ದಿನಗಳಲ್ಲಿಯೂ ಇದೇ ವೃತ್ತಿ ಬದುಕನ್ನು ಮುಂದುವರೆಸುವ ನಿರ್ಧಾರ ಮಾಡಿರುವ ಅನುಶ್ರೀ ಅವರು ಇದೇ ಇಂಡಸ್ಟ್ರಿಯ ಹುಡುಗನನ್ನು‌ ಮದುವೆಯಾಗುವರಾ ಅಥವಾ ಬೇರೆ ರಂಗದ ಹುಡುಗನನ್ನು ಆಯ್ಕೆ ಮಾಡಿಕೊಳ್ಳುವರಾ ಕಾದು ನೋಡಬೇಕಷ್ಟೇ..