ಅನುಶ್ರೀ ಹಿಂದೆ ಮಾಜಿ ಸಿಎಂ ಮತ್ತು ಅವರ ಮಗನ ಹೆಸರು.. ಗ್ರಹಚಾರ ಬಿಡಿಸಿದ ಕುಮಾರಸ್ವಾಮಿ ಅವರು ಅನುಶ್ರೀ ಬಗ್ಗೆ ಹೇಳಿದ್ದೇನು ಗೊತ್ತಾ?

ಅನುಶ್ರೀ ವಿಚಾರದಲ್ಲಿ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು ಹೊಸ ಹೊಸ ವಿಚಾರಗಳು ಹೊರ ಬರುತ್ತಿವೆ.. ಅದರಲ್ಲೂ ಅದಾಗಲೇ ಮಂಗಳೂರು ಸಿಸಿಬಿ ಪೊಲೀಸರ ವಶದಲ್ಲಿರುವ ಅನೇಕರು ಅನುಶ್ರೀ ಅವರ ಹೆಸರನ್ನು ಹೇಳಿದರೂ‌ ಕೂಡ ಅನುಶ್ರೀ ಅವರನ್ನು ಏಕೆ ವಶಕ್ಕೆ ಪಡೆದಿಲ್ಲ.. ಎನ್ನುವ ಮಾತಿನ ಜೊತೆಗೆ ಅನುಶ್ರೀಗೆ ಮಾಜಿ ಮುಖ್ಯಮಂತ್ರಿ ಮತ್ತು ಅವರ ಮಗ ಶ್ರೀರಕ್ಷೆಯಾಗಿ ನಿಂತಿದ್ದಾರೆ ಎನ್ನುವ ಮಾತು ಕೇಳಿ ಬಂತು..

ಈ ವಿಚಾರ ಸುದ್ದಿಯಾಗುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಗ್ರಹಚಾರ ಬಿಡಿಸಿದ್ದಾರೆ.. ಹೌದು ಇಂದು ಮಾದ್ಯಮದ ಜೊತೆ ಅನುಶ್ರೀ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ ಅವರು ಈ ಬಗ್ಗೆ ಸತ್ಯವನ್ನು ಸರ್ಕಾರ ಹೊರ ತೆಗೆಯಬೇಕು.. ವರದಿಗಾರನಿಗೆ ಈ ಬಗ್ಗೆ ಮಾಹಿತಿ‌ ಕೊಟ್ಟವನು ಯಾರು? ಆ ಹೆಣ್ಣು ಮಗಳು ಮಾತನಾಡಿರುವ ಕಾಲ್ ಡೀಟೈಲ್ ನಲ್ಲಿ ಇರುವ ನಂಬರ್ ನನ್ನದಲ್ಲ.. ಈ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು.. ನಡತೆ ಹಾಳು ಮಾಡುವ ಸುದ್ದಿಯನ್ನು ತಡೆಯಬೇಕು.. ಯಾರು ಆ ಮಾಜಿ ಮುಖ್ಯ ಮಂತ್ರಿ ಎಂಬುದನ್ನು ಬಹಿರಂಗವಾಗಿ ತಿಳಿಸಬೇಕು..

ಏಕೆಂದರೆ ನಾವು ಇರೋದೇ ಆರು ಜನ ಮಾಜಿ ಮುಖ್ಯಮಂತ್ರಿಗಳು.. ನಾನು ಸದಾನಂದ ಗೌಡರು.. ಸಿದ್ದರಾಮಯ್ಯ, ವೀರಪ್ಪ‌ಮೋಯ್ಲಿ, ಎಸ್ ಎಂ ಕೃಷ್ಣ ಅವರು, ಜಗದೀಶ್ ಶೆಟ್ಟರ್ ಅವರು ಇದ್ದೇವೆ.. ಇವರಲ್ಲಿ ಯಾರು ಎಂಬುದನ್ನ ಬಹಿರಂಗವಾಗಿ ಹೇಳಬೇಕು.. ಇಲ್ಲದೇ ಸುಮ್ಮನೆ ಸುದ್ದಿ ಹಬ್ಬಿಸಿದ್ದರೆ ಆ ವರದಿಗಾರನಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ..

ಅಷ್ಟೇ ಅಲ್ಲದೆ ಆ ನಂಬರ್ ಯಾರೋ ಶಿವಪ್ರಕಾಶ್ ನಾಯಕ್ ಅನ್ನೋರದ್ದು ಅವರು ಕೂಡ ಮಂಗಳೂರು ಪೊಲೀಸ್ ಇಲಾಖೆಯವರು.. ಆದರೆ ಅವರನ್ನ ಎತ್ತಂಗಡಿ‌ ಮಾಡಲಾಗಿದೆ.. ಆದರೆ ಈ ನಂಬರ್ ಅನ್ನು ಮತ್ಯಾರದ್ದೋ ಎಂದು ಬಿಂಬಿಸಲಾಗುತ್ತಿದೆ.. ಏನು ಹುಡುಗಾಟ ಆಡ್ತಾ ಇದ್ದೀರಾ? ಎಂದು ತರಾಟೆಗೆ ತೆಗೆದುಕೊಂಡರು..