ಚಿಕ್ಕ ವಯಸ್ಸಿನಲ್ಲಿ ಬಿಟ್ಟು ಹೋದ ಅನುಶ್ರೀ ತಂದೆ ವಾಪಸ್.. ನಿಜಕ್ಕೂ ಈತ ಯಾರು.. ಇಷ್ಟು ದಿನ ಎಲ್ಲಿದ್ದರು ಗೊತ್ತಾ.. ನಿಜಕ್ಕೂ ಶಾಕಿಂಗ್..

ನಿರೂಪಕಿ ಅನುಶ್ರೀ ಅವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ.. ಸಧ್ಯ ಕನ್ನಡ ಕಿರುತೆರೆಯ‌ ನಂಬರ್ ಒನ್ ನಿರೂಪಕಿ ಎನಿಸಿಕೊಂಡಿದ್ದರೂ ಸಹ ಜೀವನದಲ್ಲಿ ಸಾಕಷ್ಟು ನೋವು ಅನುಭವಿಸಿದ್ದ ಅನುಶ್ರೀ ಅವರು ಚಿಕ್ಕ ವಯಸ್ಸಿನಲ್ಲಿಯೇಅನೆಯ ಜವಾಬ್ದಾರಿ ಹೊತ್ತು ಅಮ್ಮನನ್ನು ತಮ್ಮನನ್ನು ಸಾಕಿ ಅವರ ಸಂತೋಷದಲ್ಲಿಯೇ ತಮ್ಮ ಸಂತೋಷವನ್ನು ಕಾಣುತ್ತಿರುವವರು.. ಅವರ ತಂದೆ ಚಿಕ್ಕ ವಯಸ್ಸಿನಲ್ಲಿಯೇ ಬಿಟ್ಟು ಹೋಗಿದ್ದು‌ ಈ ಬಗ್ಗೆ ಸಾಕಷ್ಟು ಕಾರ್ಯಕ್ರಮಗಳಲ್ಲಿ ಹೇಳಿಕೊಂಡಿದ್ದರು.. ಆದರೀಗ ಅನುಶ್ರೀ ಅವರ ತಂದೆ ಪ್ರತ್ಯಕ್ಷವಾಗಿದ್ದಾರೆ..

ಹೌದು ಸಂಪತ್ ಎಂಬ ವ್ಯಕ್ತಿ ನಾನೇ ಅನುಶ್ರೀ ಅವರ ತಂದೆ ಎಂದು ಹೇಳುತ್ತಿದ್ದು ನನ್ನನ್ನು ಕರೆದುಕೊಂಡು ಹೋಗಿ ಎನ್ನುತ್ತಿದ್ದಾರೆ.. ನಿರೂಪಕಿ ಅನುಶ್ರೀ ನನ್ನ ಮಗಳು.. ಸಿಂಪತಿಗಿಟ್ಟಿಸಿಕೊಂಡು ಜೀವನದಲ್ಲಿ ಮುಂದೆ ಬಂದಿದ್ದಾಳೆ.. ಚೆನ್ನಾಗಿರಲಿ ಅಂತ ನಾನು ಯಾರಿಗೂ ಡಿಸ್ಟರ್ಬ್ ಮಾಡ್ಲಿಲ್ಲ.. ಆದ್ರೆ ಈಗ ನನ್ನ ಕೊನೆಗಾಲದಲ್ಲಿ ನನ್ನ ಬಂದು ಒಂದುಬಾರಿಯಾದ್ರೂ ನೋಡಲಿ ಎಂದು ಪಾರ್ಶ್ವವಾಯುವಿನಿಂದ ಬಳಲುತ್ತಿರುವ ವ್ಯಕ್ತಿಯೊಬ್ಬರು ಮಾಧ್ಯಮಗಳ ಮುಂದೆ ಅಲವತ್ತುಕೊಂಡಿದ್ದಾರೆ.. ಅವರ ಬಳಿಯಲ್ಲಿ ಸಾಕಷ್ಟು ಫೋಟೋಗಳು ಅವರ ಹೇಳಿಕೆಯನ್ನು ಸಮರ್ಥಿಸುವಂತಿದ್ದು.. ನಿಜಕ್ಕೂ ಇವರು ಅನುಶ್ರೀ ತಂದೆಯಾ ಎನ್ನುತ್ತಿದ್ದಾರೆ ಕೆಲವರು.. ಆದರೆ ಅದಾಗಲೇ ಅನುಶ್ರೀ ಅವರ ತಮ್ಮ ಕಳೆದ ವರ್ಷ ಬಂದು ಇವರನ್ನು ನೋಡಿಕೊಂಡು ಹೋಗಿದ್ದರಂತೆ..

ಹೌದು ಆತನೇ ಹೇಳಿಕೊಂಡಿರುವ ಮಾತುಗಳು ಇವು.. ನನ್ನ ಹೆಸರು ಸಂಪತ್.. ನಿರೂಪಕಿ ಅನುಶ್ರೀ ನನ್ನ ಮಗಳು.. ನಾನು ಅನುಶ್ರೀ ಅವರ ತಂದೆ.. ಈಗ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದೇನೆ.. ಮಗ ಅಭಿಜಿತ್.. ಮಗಳು ಅನುಶ್ರೀ ನನ್ನ ಮಕ್ಕಳು.. ಮಗಳ ಇಮೇಜ್ ಡ್ಯಾಮೇಜ್ ಆಗಬಾರದು ಕಷ್ಟಪಟ್ಟು ಮೇಲೆ ಬಂದಿದ್ದಾಳೆ..
ಸಿಂಪತಿಗಿಟ್ಟಿಸಿಕೊಂಡು ಮುಂದೆ ಬಂದಿದ್ದಾಳೆ.‌. ಚೆನ್ನಾಗಿರಲಿ ಅಂತ ನಾನು ಯಾರಿಗೂ ಡಿಸ್ಟರ್ಬ್ ಮಾಡ್ಲಿಲ್ಲ.. ಇವರಿಗೋಸ್ಕರ ನನ್ನ ಇಡೀ ಜೀವನ ತ್ಯಾಗ ಮಾಡ್ಕೊಂಡೆ.. ನನ್ನ ನೋಡೋಕೆ ಹೋದ ವರ್ಷ ನನ್ನ ಮಗ ಅಭಿಜಿತ್ ಬಂದಿದ್ದ. ಮಗಳು ಇನ್ನೂ ಒಳ್ಳೆ ಲೆವೆಲ್​ಗೆ ಬೆಳೆಯಲಿ..

ನಾನು ಕೊನೆಯುಸಿರೆಳೆದರೆ ಮಣ್ಣಾಕಿ ಹೋಗ್ಲಿ.. ನಾನು ಅವರಿಂದ ಏನೂ ಎಕ್ಸ್ ಪೆಕ್ಟ್ ಮಾಡಲ್ಲ.. ಮಕ್ಕಳು ಹಾಳಾಗ್ಲಿ ಅಂತ ಯಾವ ತಂದೆನೂ ಬಯಸಲ್ಲ.. ಆದರೆ ಅಪ್ಪ ಇದ್ಗೊಂಡು ಅಪ್ಪ ಇಲ್ಲ ಅಂದ್ರೆ ನನಗೆ ಹೇಗೆ ಅನಿಸಬೇಡ. ನಾನು ಮನೆ ಬಿಟ್ಟೋಗೋ ಪರಿಸ್ಥಿತಿ ಬಂತು ನನಗೆ ಯಾರೂ ಇಂಪಾರ್ಟೆನ್ಸ್ ಕೊಡ್ಲಿಲ್ಲ.. ನನಗೆ ಮಗಳನ್ನ ಡ್ಯಾನ್ಸ್​​ಗೆ  ಕಳಿಸೋಕೆ ಇಷ್ಟವಿರಲಿಲ್ಲ.. ನನ್ನ ಹೆಂಡತಿಗೆ ಇಂಟ್ರೆಸ್ಟ್ ಇತ್ತು.. ನನ್ನ ಮಾತಿಗೆ ಬೆಲೆ ಕೊಡ್ತಿರಲಿಲ್ಲ. 1998ರಿಂದ ಇಲ್ಲೆ ಇದ್ದೀವಿ.. ಸೆಂಟ್ ಥಾಮಸ್ ಸ್ಕೂಲ್ನಲ್ಲಿ 6 ನೇ ತರಗತಿ ವರೆಗೂ ಓದಿಸಿದ್ವಿ.. ಆನಂತರ ಮಂಗಳೂರಿಗೆ ಶಿಫ್ಟ್ ಆದ್ವಿ.. ಸಾಕೋದಾದ್ರೆ ನನ್ನ ಸಾಕಲಿ ಇಲ್ಲ ಮಣ್ಣಾಕ್ಲಿ..

ಒಂದು ಬಾರಿಯಾದ್ರೂ ಹೆಂಡತಿ ಮಕ್ಕಳು ಬಂದು ನೋಡ್ಕೊಂಡು ಹೋಗ್ಲಿ. 5 ದಿನದ ಮುಂಚೆ ನನ್ನ ಬಾಮೈದ ಹೇಮಂತ್ ಕುಮಾರ್​​ಗೆ ಕಾಲ್ ಮಾಡಿದ್ದೆ. ನಾನು ಇದ್ದ ಫೀಲ್ಡ್​​ನಲ್ಲಿ ಇವರ ಹೆಸ್ರು ತಿಳಿಸಿದ್ರೆ ಇವರನ್ನ ಎತ್ತಿಬಿಡ್ತಿದ್ರು. ಅವರ ಲೈಫ್ ಹಾಳು ಮಾಡಬಾರದು ಅಂತ ನನ್ನ ಜೀವನ.‌. ವ್ಯವಹಾರ ಎಲ್ಲಾ ತ್ಯಾಗ ಮಾಡ್ದೇ.. 2003 2004 ರಲ್ಲಿ ನಾವು ಬೇರೆ ಆದ್ವಿ.. ನಾನು ಎರಡನೇ ಮದುವೆ ಆಗಿಲ್ಲ.. ಸೇಲ್ಸ್ ಮತ್ತು ಮಾರ್ಕೆಟಿಂಗ್ ಮಾಡ್ಕೊಂಡಿದ್ದೆ, ನ್ಯೂಜಿಲೆಂಡ್, ದುಬೈ, ಬಾಂಬೆಯಲ್ಲಿ ಕೆಲಸ ಮಾಡ್ತಿದ್ದೆ, ಚೆನ್ನಾಗಿದ್ದೆ, ಆದ್ರೆ ಬಾಂಬೆ ಗ್ಯಾಂಗ್ ಒಂದ್ರಲ್ಲಿ ಸೇರ್ಕೊಂಡೆ ಇವರ ಹೆಸ್ರು ಹೇಳಿದ್ರೆ ಎತ್ತಿ ಬಿಡ್ತಿದ್ರು.. ಬಿಡಿ ಹೋಗ್ಲಿ ಆದ್ರೆ ಸಾಕ್ಲಿ ಇಲ್ಲ ಮಣ್ಣಾಕಲಿ ಎಂದು ಅನುಶ್ರೀ ತಂದೆ ಎಂದು ಹೇಳುತ್ತಿರುವ ಸಂಪತ್ ಹೇಳಿದ್ದಾರೆ..

ಇತ್ತ ಇನ್ನು ಸಂಪತ್​​​​​ ಸದ್ಯ ಬೆಂಗಳೂರು ಉತ್ತರ ತಾಲ್ಲೂಕು ಮಾದನಾಯಕನಹಳ್ಳಿಯ ಅಭಯ ವಸಿಷ್ಠ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.. ಅವರಿಗೆ ಶಿವಲಿಂಗೇಗೌಡ ಎಂಬುವವರು ಚಿಕಿತ್ಸೆ ನೀಡುತ್ತಾ ಆರೈಕೆ ಮಾಡುತ್ತಿದ್ದಾರೆ.‌ ಆದರೆ ಸಂಪತ್​ಗೆ ಕುಟುಂಬಸ್ಥರ ಅಗತ್ಯವಿದೆ.. ಹೀಗಾಗಿ ಕುಟುಂಬಸ್ಥರು ಬರಲಿ ಎಂದು ಚಿಕಿತ್ಸೆ ನೀಡ್ತಿರೋ ಆಸ್ಪತ್ರೆ ವೈದ್ಯರೂ ಸಹ ಮನವಿ ಮಾಡಿಕೊಂಡಿದ್ದಾರೆ.. ಇಷ್ಟು ದಿನ ಬಿಟ್ಟು ಹೋಗಿ ತಾಯಿ ಕಷ್ಟ ಪಟ್ಟು ಸಾಕಿ ಬೆಳೆಸಿದ್ದಾರೆ.. ಇತ್ತ ಅನುಶ್ರೀ ಕೂಡ ತನ್ನ ಚಿಕ್ಕ ವಯಸ್ಸಿಗೆ ದುಡಿಮೆಗೆ ಬಂದು ತನ್ನ ಸಂಪೂರ್ಣ ಜೀವನವನ್ನು ಅಮ್ಮ ಹಾಗೂ ತಮ್ಮನಿಗಾಗಿ ಮುಡಿಪಿಟ್ಟಿದ್ದಾರೆ.. ಆ ವ್ಯಕ್ತಿಯ ಬಗ್ಗೆ ಮನಸ್ಸು ಕಲ್ಲಾಗಿ ಹೋಗಿದೆ ಎಂದಿದ್ದರು.. ಆದರೆ ಈಗ ಬಂದ ತಂದೆಯನ್ನು‌ ಒಪ್ಪಿಕೊಳ್ಳುವರಾ ಕಾದು ನೋಡಬೇಕಷ್ಟೇ..