ಎರಡನೇ ಮಗುವಿಗೆ ತಾಯಿ ಆಗ್ತಾರಂತೆ ಅನುಷ್ಕಾ.. ಆದರೆ ವಿಚಾರ ತಿಳಿಸಿದ್ದು ಯಾರು ಗೊತ್ತಾ.. ಸುದ್ದಿ ಹೇಳುತ್ತಿದ್ದಂತೆ ಏನಾಗಿದೆ ನೋಡಿ..

ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೋಹ್ಲಿ ಸಧ್ಯ ನಿನ್ನೆಯಷ್ಟೇ ಮಡದಿ ಅನುಷ್ಕಾ ಶರ್ಮಾ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದು.. ನೀನು ಜನ್ಮ ತಾಳಿದ್ದಕ್ಕೆ ಭಗವಂತನಿಗೆ ನಾನು ಧನ್ಯವಾದಗಳನ್ನು ಹೇಳುತ್ತೇನೆ.. ನೀನಿಲ್ಲವಾದರೆ ನಾನು ಏನು ಮಾಡುತ್ತಿದ್ದೆ.. ನನಗೇನು ಕೆಲಸವಿರುತ್ತಿತ್ತು ಎಂದು ಅರ್ಥಪೂರ್ಣ ಸಾಲುಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಪತ್ನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿ ಭಾವುಕರಾಗಿದ್ದರು‌‌.. ಇನ್ನು ಈ ನಡುವೆಯೇ ಅನುಷ್ಕಾ ಶರ್ಮಾ ಎರಡನೇ ಮಗುವಿಗೆ ತಾಯಿ ಆಗ್ತಾರೆ ಎನ್ನುವ ವಿಚಾರ ಸುದ್ದಿಯಾಗಿದ್ದು ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿದ್ದಂತೆ ಬೇರೆಯೇ ಆಗಿ ಹೋಗಿದೆ..

ಹೌದು ಸಧ್ಯ ಅನುಷ್ಕಾ ಹಾಗೂ ವಿರಾಟ್ ದಂಪತಿಗೆ ವಮಿಕಾ ಎಂಬ ಮಗಳಿದ್ದು ಸಧ್ಯ ಪೋಷಕರಾಗುವ ಸಂತೋಷವನ್ನು ಇಬ್ಬರೂ ಸಹ ಅನುಭಬಿಸುತ್ತಿದ್ದಾರೆ.. ಆದರೆ ಈ ನಡುವೆಯೇ ಎರಡನೇ ಮಗು ಎಂದಾಗ ಆಶ್ವರ್ಯವಾಗೋದು ಸಹಜ.. ಆದರೆ ಈ ವಿಚಾರ ಹೇಳಿರೋದು ಅನುಷ್ಕಾ ಆಗಲಿ ಅಥವಾ ವಿರಾಟ್ ಆಗಲಿ ಅಲ್ಲ.. ಬದಲಿಗೆ ಹೇಳಿರೋದು ಖ್ಯಾತ ಜ್ಯೋತಿಷಿ..

ಹೌದು ಬಾಲಿವುಡ್ ಸಿನಿಮಾ ರಂಗದಲ್ಲಿ ಖ್ಯಾತಿ ಜ್ಯೋತಿಷಿ ಎಂದೇ ಗುರುತಿಸಿಕೊಂಡಿರುವ ಸಂಜಯ್ ಬಿ ಜುಮ್ಮಾನಿ ಇದೀಗ ಹೊಸ ಸುದ್ದಿಯೊಂದನ್ನು ಹೇಳಿದ್ದಾರೆ.. ಇನ್ನು ಮೂರೇ ಮೂರು ವರ್ಷಗಳಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಎರಡನೇ ಮಗುವಿನ ತಾಯಿಯಾಗಲಿದ್ದಾರೆ.. ನಿನ್ನೆಯಷ್ಟೇ 34ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡಿರುವ ಅನುಷ್ಕಾ ತಮ್ಮ 37 ಅಥವಾ 38ನೇ ವಯಸ್ಸಿನಲ್ಲಿ ತಾಯಿಯಾಗಲಿದ್ದಾರೆ ಎಂದು ಈ ಸಂಖ್ಯಾ ಶಾಸ್ತ್ರಜ್ಞ ತಿಳಿಸಿದ್ದಾರೆ..

ಅಷ್ಟೇ ಅಲ್ಲದೇ ವೃತ್ತಿ ಜೀವನದ ಉತ್ತುಂಗದಲ್ಲಿರುವಾಗಲೇ ಅನುಷ್ಕಾ ಮದುವೆಯಾದರು. ಮದುವೆಯ ನಂತರವೂ ಅವರು ಸಿನಿಮಾಗಳಲ್ಲಿ ಬ್ಯುಸಿಯಾದರು. ಈ ವೇಳೆಯಲ್ಲಿ ಅನುಷ್ಕಾ ಶರ್ಮಾ ತಾಯಿಗೆ ಇದೇ ಸಂಖ್ಯಾಶಾಸ್ತ್ರಜ್ಞರು ಭವಿಷ್ಯ ನುಡಿದಿದ್ದರಂತೆ.. ಅನುಷ್ಕಾ ಕೆರಿಯರ್ ನಲ್ಲಿ ಬ್ಯುಸಿ ಆಗಿರುವಾಗ ಮಗು ಮಾಡಿಕೊಳ್ಳಲು ಸಾಧ್ಯವೇ ಇಲ್ಲವೆಂದು ಅನುಷ್ಕಾ ತಾಯಿ ಹೇಳಿದ್ದರಂತೆ.. ಆದರೆ ಜ್ಯೋತಿಷಿ ಮಾತಿನಂತೆಯೇ ಅನುಷ್ಕಾ ಮಗು ಮಾಡಿಕೊಂಡರು ಎಂದು ಸಂಜಯ್ ಬಿ ಜುಮ್ಮಾನಿ ಮಾತನಾಡಿದ್ದಾರೆ..

ಈಗ ಹೇಳಿರುವ ಜ್ಯೋತಿಷ್ಯ ಕೂಡ ಯಾವುದೇ ಕಾರಣಕ್ಕೂ ಸುಳ್ಳಾಗದು.. ಅವರು ಇನ್ನೂ ಮೂರು ವರ್ಷದಲ್ಲಿ ಎರಡನೇ ಮಗುವಿಗೆ ತಾಯಿ ಆಗಲಿದ್ದಾರೆ. ಅನುಷ್ಕಾ ಶರ್ಮಾ ನಂತರವೂ ತಮ್ಮ ಕೆರಿಯರ್ ನಲ್ಲೇ ಮುಂದುವರೆಯಲಿದ್ದಾರೆ ಎಂದು ಸಂಜಯ್ ಹೇಳಿದ್ದಾರೆ. ಈ ಮಾತು ಸುಳ್ಳಾಗದು ಎಂದೂ ಅವರು ಮಾತನಾಡಿದ್ದಾರೆ..

ಇನ್ನು ಇತ್ತ ಜ್ಯೋತಿಷಿ ಈ ಮಾತನ್ನು ಹೇಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿದೆ.. ಹೌದು ಸಧ್ಯ ಸಾಮಾಜಿಕ ಜಾಲತಾಣದಲ್ಲಿ ಅನುಷ್ಕಾ ಹಾಗೂ ವಿರಾಟ್ ಅವರ ಎರಡನೇ ಮಗುವಿನ ವಿಚಾರ ಬಹಳ ದೊಡ್ಡ ಮಟ್ಟದಲ್ಲಿ ಟ್ರೋಲ್ ಆಗಿದ್ದು ಜ್ಯೋತಿಷ್ಯ ಹೇಳಲು ಬೇರೆ ವಿಚಾರ ಸಿಗಲಿಲ್ಲವಾ.. ಕೊರೊನಾ ಯಾವಾಗ ಮುಗಿಯುತ್ತದೆ ಅದನ್ನು ಹೇಳಿ ಮೊದಲು.. ಆನಂತರ ಯಾರು ಯಾವಾಗ ಮಕ್ಕಳನ್ನು ಮಾಡಿಕೊಳ್ತಾರೆ ಎಂಬುದನ್ನು ಹೇಳುವಿರಂತೆ ಎಂದು ಟ್ರೋಲ್‌ ಮಾಡಲಾಗುತ್ತಿದೆ..