ಸಿಹಿ ಸುದ್ದಿ ನೀಡಿದ ಅನುಷ್ಕಾ ಪ್ರಭಾಸ್ ಜೋಡಿ.. ಅಭಿಮಾನಿಗಳಿಗೆ ಹಬ್ಬ..

ಚಿತ್ರರಂಗದಲ್ಲಿ ಕೆಲವು ಜೋಡಿಗಳು ಬಹಳ ಫೇಮಸ್ ಆಗುತ್ತಾರೆ. ಅವರಿಬ್ಬರ ಜೋಡಿ ನೋಡಲು ಮುದ್ದಾಗಿ ಕಾಣುವುದರ ಜೊತೆಗೆ ಜನರಿಗೂ ಮೋಡಿ ಮಾಡಿಬಿಡುತ್ತದೆ. ಅಂತಹ ಕೆಲವು ಎವರ್ ಗ್ರೀನ್ ಹಿಟ್ ಜೋಡಿಗಳನ್ನು ಭಾರತ ಚಿತ್ರರಂಗ ಕಂಡಿದೆ. ದಕ್ಷಿಣ ಭಾರತದಲ್ಲಿ ಅಣ್ಣಾವ್ರು ಭಾರತಿ, ವಿಷ್ಣುದಾದ ಸುಹಾಸಿನಿ ಅವರು, ಅಪ್ಪು ರಮ್ಯಾ, ಹೀಗೆ ಕನ್ನಡದಲ್ಲಿ ಸಾಕಷ್ಟು ಜೋಡಿಗಳಿದ್ದಾರೆ. ಇದೇ ರೀತಿ ಬೆಳ್ಳಿತೆರೆಯಲ್ಲಿ ಜನರನ್ನು ಮೋಡಿ ಮಾಡಿದ ಜೋಡಿಗಳಲ್ಲಿ ಒಂದು ಜೋಡಿ, ತೆಲುಗು ಚಿತ್ರರಂಗದ ನಟ ಪ್ರಭಾಸ್ ಮತ್ತು ಕರ್ನಾಟಕದ ಮನೆಮಗಳು ಅನುಷ್ಕಾ ಶೆಟ್ಟಿ. ಈ ಜೋಡಿ ಎಂಥ ದೊಡ್ಡ ಕ್ರೇಜ್ ಸೃಷ್ಟಿಸಿತ್ತು, ಎಂದು ಈಗಾಗಲೇ ಎಲ್ಲರೂ ನೋಡಿದ್ದಾರೆ.

ಅದರಲ್ಲೂ ಬಾಹುಬಲಿ ಸಿನಿಮಾ ಬಂದಾಗ, ಈ ಜೋಡಿ ಯಶಸ್ಸಿನ ಉತ್ತುಂಗದಲ್ಲಿತ್ತು. ಪ್ರಭಾಸ್ ಅನುಷ್ಕಾ ಜೋಡಿ ಅಂದ್ರೆ ಅಭಿಮಾನಿಗಳು ಥಿಯೇಟರ್ ಗೆ ಮುಗಿ ಬೀಳುತ್ತಿದ್ದರು. ಇವರಿಬ್ಬರು ಜೊತೆಯಾಗಿ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಿಲ್ಲಾ, ಮಿರ್ಚಿ, ಬಾಹುಬಲಿ ಮತ್ತು ಬಾಹುಬಲಿ2. ಇವರಿಬ್ಬರ ಕಾಂಬಿನೇಷನ್ ನಲ್ಲಿ ಮೂಡಿಬಂದ ಬಿಲ್ಲಾ ಮತ್ತು ಮಿರ್ಚಿ ಸಿನಿಮಾ ಸೂಪರ್ ಹಿಟ್ ಆಗಿ ಬಾಕ್ಸ್ ಆಫೀಸ್ ಕೊಳ್ಳೆಹೊಡೆದಿತ್ತು. ಅದೇ ಕಾರಣದಿಂದಲೋ ಏನೋ, ಈ ಜೋಡಿ ಬಾಹುಬಲಿ ಸಿನಿಮಾ ಮೂಲಕ ಅದಕ್ಕಿಂತ ಎರಡರಷ್ಟು ಮೋಡಿ ಮಾಡಿತ್ತು.

ಪ್ರಭಾಸ್ ಮಟ್ಟಿ ಅನುಷ್ಕಾ ಅವರ ನಡುವಿನ ಕೆಮಿಸ್ಟ್ರಿ ಮತ್ತು ಇವರಿಬ್ಬರ ನಟನೆ ಬಗ್ಗೆ ಎರಡು ಮಾತಿಲ್ಲ. ಇಬ್ಬರು ಸಹ ಅದ್ಭುತವಾದ ಕಲಾವಿದರು. ಬಾಹುಬಲಿ2 ನಂತರ ಈ ಜೋಡಿಯನ್ನು ಮತ್ತೊಮ್ಮೆ ತೆರೆಮೇಲೆ ನೋಡಬೇಕು ಎನ್ನುವುದು ಎಲ್ಲಾ ಅಭಿಮಾನಿಗಳ ಆಸೆ. ಆದರೆ ಬಾಹುಬಲಿ2 ನಂತರ ಪ್ರಭಾಸ್ ಅವರು ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇನ್ನು ಅನುಷ್ಕಾ ಶೆಟ್ಟಿ ಅವರು ಸೈಜ್ ಜೀರೋ ಮತ್ತು 2020ರಲ್ಲಿ ಓಟಿಟಿ ಮೂಲಕ ತೆರೆಕಂಡ ನಿಶಬ್ಧಮ್ ಸಿನಿಮಾ ನಂತರ ಇನ್ಯಾವುದೇ ಸಿನಿಮಾದಲ್ಲೂ ಅವರು ಕಾಣಿಸಿಕೊಂಡಿಲ್ಲ. ಅನುಷ್ಕಾ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿತಾದರು, ಚಿತ್ರೀಕರಣ ಇನ್ನು ಶುರುವಾಗಿಲ್ಲ.

ಸಧ್ಯ ಅನುಷ್ಕಾ ಅವರು ದೇಹದ ತೂಕ ಇಳಿಸಿಕೊಳ್ಳುವಲ್ಲಿ ನಿರತರಾಗಿದ್ದು, ಶೀಘ್ರದಲ್ಲೇ ಕಂಬ್ಯಾಕ್ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಬಾಹುಬಲಿ2 ಸಿನಿಮಾ ಬಳಿಕ ಅನುಷ್ಕಾ ಮತ್ತು ಪ್ರಭಾಸ್ ಅವರ ಬಗ್ಗೆ ಸಾಕಷ್ಟು ಗಾಸಿಪ್ ಗಳು ಸಹ ಕೇಳಿಬಂದಿದ್ದವು. ಇವರಿಬ್ಬರು ಡೇಟ್ ಮಾಡುತ್ತಿದ್ದಾರೆ, ಇಬ್ಬರು ಮದುವೆ ಆಗುತ್ತಾರೆ ಎನ್ನುವ ಸುದ್ದಿಗಳು ಜೋರಾಗಿ ಸದ್ದು ಮಾಡಿದ್ದವು. ಪ್ರಭಾಸ್ ಅನುಷ್ಕಾ ಪ್ರೀತಿ ಮಾಡುತ್ತಿದ್ದಾರೆ ಎಂದು ಎಲ್ಲೆಡೆ ಗುಲ್ಲಾಗಿತ್ತು. ಆದರೆ ಈ ಜೋಡಿ ಮಾತ್ರ ಆ ಸುದ್ದಿಗಳನ್ನು ಒಪ್ಪಿಕೊಂಡಿರಲಿಲ್ಲ.

ತಾವಿಬ್ಬರು ಒಳ್ಳೆಯ ಫ್ರೆಂಡ್ಸ್ ಅಷ್ಟೇ ಎಂದೇ ಹೇಳುತ್ತಾ ಬಂದಿತ್ತು ಈ ಜೋಡಿ. ಇವರಿಬ್ಬರು ಇನ್ನೇನು ಮದುವೆ ಆಗಿಯೇ ಬಿಡುತ್ತಾರೆ ಎಂದೇ ಮಾಧ್ಯಮಗಳಲ್ಲಿ ಸುದ್ದಿಗಳು ಪ್ರಸಾರವಾಗಿದ್ದವು. ಆದರೆ ಈಗಲೂ ಇವರಿಬ್ಬರು ಮದುವೆಯಾಗಿಲ್ಲ. ಈ ಜೋಡಿಯನ್ನು ಮತ್ತೆ ತೆರೆಮೇಲೆ ನೋಡಬೇಕು ಎಂದುಕೊಂಡಿದ್ದ ಅಭಿಮಾನಿಗಳಿಗೆ ಈಗ ಸಂತೋಷದ ಸುದ್ದಿಯೊಂದು ಸಿಕ್ಕಿದೆ. ಇವರಿಬ್ಬರನ್ನು ಮತ್ತೊಮ್ಮೆ ತೆರೆಮೇಲೆ ತೋರಿಸುವ ಪ್ರಯತ್ನ ನಡೆಯುತ್ತಿದೆ ಎನ್ನುವ ಮಾತುಗಳು ಟಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ..

ನಿರ್ದೇಶಕ ಮಾರುತಿ ಅವರು ತಮ್ಮ ಹೊಸ ಸಿನಿಮಾದಲ್ಲಿ ನಾಯಕ ನಾಯಕಿಯಾಗಿ ನಟಿಸಲು ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇವರಿಬ್ಬರ ಜೊತೆಗೆ ಮಾತನಾಡಿದ್ದು, ಇಬ್ಬರು ಒಪ್ಪಿಗೆ ಸೂಚಿಸಿದ್ದಾರೆ. ಈ ವರ್ಷ ದಸರಾ ಹಬ್ಬದ ಸಿನಿಮಾ ಸೆಟ್ಟೇರುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಸಿನಿಮಾವನ್ನು ದಾನಯ್ಯ ಅವರು ನಿರ್ಮಾಣ ಮಾಡುತ್ತಾರೆ ಎನ್ನಲಾಗಿದೆ. ಒಂದು ವೇಳೆ ಇದು ನಿಜವೇ ಆದರೆ, ಪ್ರಭಾಸ್ ಅನುಷ್ಕಾ ಅಭಿಮಾನಿಗಳಿಗೆ ಬಹಳ ಸಂತೋಷ ಆಗುವುದಂತು ಖಂಡಿತ.