ರಾಜಾ ರಾಣಿ‌ ಶೋನಿಂದ ಅನುಪಮಾರನ್ನು ಹೊರ ಕಳುಹಿಸಿದ ವಾಹಿನಿ.. ಅಸಲಿ‌ ಕಾರಣ ಬೇರೆಯೇ ಇದೆ..

ಕನ್ನಡ ಕಿರುತೆರೆಯ ಖ್ಯಾತ ಶೋಗಳಲ್ಲಿ ಒಂದಾಗಿರುವ ರಾಜಾ ರಾಣಿ‌ ಶೋ ಇದೀಗ ತನ್ನ ಹೊಸ ಸೀಸನ್ ನನ್ನು ಆರಂಭಿಸಿದ್ದು ಮೊನ್ನೆಯಿಂದ ತನ್ನ ಪ್ರಸಾರವನ್ನು ಆರಂಭಿಸಿದ್ದು ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ.. ಆದರೆ ಶೋನಿಂದ ನಿರೂಪಕಿ ಅನುಪಮಾ ಅವರು ಹೊರ ಹೋಗಿರುವುದು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿರುವುದು ಸತ್ಯ.. ಆದರೆ ಅಷ್ಟಕ್ಕೂ ಅನುಪಮಾ ಅವರು ರಾಜಾ ರಾಣಿ ಶೋ ನಿಂದ ಹೊರ ಹೋದರಾ ಅಥವಾ ಅವರನ್ನು ಹೊರ ಕಳುಹಿಸಿದರಾ ನಿಜವಾದ ಕಾರಣ ಬೇರೆಯೇ ಇದೆ..

ಹೌದು ಕನ್ನಡದ ಖ್ಯಾತ ವಾಹಿನಿಗಳಲ್ಲಿ ಒಂದಾಗಿರುವ ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ ವರ್ಷದ ಅಂತ್ಯ ದಲ್ಲಿ ಶುರುವಾದ ಹೊಸ ಬಗೆಯ ವಿಭಿನ್ನ ಶೋ ಅದು ರಾಜಾ ರಾಣಿ.. ರಾಜಾ ರಾಣಿ ಶೋ ನಿರೀಕ್ಷೆಯಂತೆಯೇ ದೊಡ್ಡ ಯಶಸ್ಸು ಪಡೆಯಿತು.. ಒಂದು ಕಡೆ ಕಿರುತೆರೆ ಹಾಗೂ ಬೆಳ್ಳಿತೆರೆಯ ಸಾಕಷ್ಟು ಸೆಲಿಬ್ರೆಟಿ ಜೋಡಿಗಳು ಜನರ ಮನಸ್ಸಿಗೆ ಹತ್ತಿರವಾದರೆ ಮತ್ತೊಂದು ಕಡೆ ಸೃಜನ್ ಹಾಗೂ ತಾರಮ್ಮನವರ ಕಾಂಬಿನೇಷನ್ ಮನರಂಜನೆಗೆ ಯಾವುದೇ ಕೊರತೆ ಆಗದಂತಿತ್ತು..

ಇನ್ನು ಇತ್ತ ಶೋ ನಿರೂಪಣೆಯ ಜವಾಬ್ದಾರಿಯನ್ನು ಅನುಪಮಾ ಅವರು ವಹಿಸಿಕೊಂಡಿದ್ದು ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು.. ಅದೇ ಶೋ ಮೂಲಕ ಅನುಪಮಾ ಅವರ ಮದುವೆ ಮಾಡುವ ಪ್ರಯತ್ನವನ್ನೂ ಸಹ ತಾರಾ ಅವರು ಮಾಡಿದ್ದುಂಟು.. ಇನ್ನು ಆ ಶೋ ಯಶಸ್ವಿಯಾಗಿ ಮುಗಿದ ಬಳಿಕ ನನ್ನಮ್ಮ ಸೂಪರ್ ಸ್ಟಾರ್ ಶೋ ಆರಂಭವಾಗಿ ಅದರಲ್ಲಿಯೂ ಕೂಡ ಅನುಪಮಾ ಅವರೇ ನಿರೂಪಕಿಯಾಗಿ ಕಾಣಿಸಿಕೊಂಡಿದ್ದರು.. ಆದರೆ ಈಗ ರಾಜಾ ರಾಣಿ ಶೋ ಹೊಸ ಸೀಸನ್ ಆರಂಭವಾಗಿದ್ದು ಈ ಶೋನಲ್ಲಿ ಅನುಪಮಾ ಅವರು ನಿರೂಪಕಿಯಾಗಿ ಇಲ್ಲದಿರುವುದು ಸಾಕಷ್ಟು ಪ್ರಶ್ನೆಗಳನ್ನು ಉಂಟು ಮಾಡಿತ್ತು..

ಒಂದು ಕಡೆ ಅನುಪಮಾ ಅವರು ಬೇರೆ ವಾಹಿನಿಯಲ್ಲಿ ನಿರೂಪಕಿಯಾಗಿ ಕೆಲಸ ಮಾಡಲು ನಿರ್ಧರಿಸಿದ್ದಾರೆ ಎಂದೆಲ್ಲಾ ಸುದ್ದಿಗಳು ಹಬ್ಬಿದವು.. ಆದರೆ ಅಸಲಿ ಕಾರಣ ಬೇರೆಯೇ ಇದೆ.. ಹೌದು ರಾಜಾ ರಾಣಿ ಶೊ ನಿಂದ ಅನುಪಮಾ ಅವರು ಹೊರ ಬಂದಿಲ್ಲ.. ಬದಲಿಗೆ ವಾಹಿನಿಯವರೇ ಅನುಪಮಾ ಅವರನ್ನು ಈ ಶೋನಿಂದ ಕೈ ಬಿಟ್ಟಿದ್ದಾರೆ.. ಹೌದು ಎಲ್ಲರಿಗೂ ತಿಳಿದಿರುವಂತೆ ಜೀ ಕನ್ನಡ ವಾಹಿನಿ ಹಾಗೂ ಕಲರ್ಸ್ ಕನ್ನಡ ವಾಹಿನಿ ನಡುವೆ ರೇಟಿಂಗ್ ಗಾಗಿ ಪೈಪೋಟಿ ನಡೆಯುತ್ತಿರುವುದು ಎಲ್ಲರಿಗೂ ತಿಳಿದೇ ಇದೆ.. ಎರಡೂ ವಾಹಿನಿಗಳು ಹೊಸ ಹೊಸ ಶೋಗಳನ್ನು ಜನರ ಮುಂದೆ ತರುತ್ತಿದ್ದು ಕಿರುತೆರೆ ಪ್ರಿಯರಿಗೆ ಮನರಂಜನೆಗೇನೂ ಕೊರತೆ ಇಲ್ಲ ಎನ್ನುವಂತಾಗಿದೆ..

ಇನ್ನು ಇತ್ತ ರಾಜಾರಾಣಿ ಶೋ ಮತ್ತೆ ಆರಂಭವಾಗುತ್ತಿದ್ದಂತೆ ಅತ್ತ ಜೀ ಕನ್ನಡ ವಾಹಿನಿಯಲ್ಲಿಯೂ ಜೋಡಿ ನಂಬರ್ ಒನ್ ಶೋ ಆರಂಭವಾಗಿದೆ.. ದಂಪತಿಗಳಿಗೆ ಸಂಬಂಧ ಪಟ್ಟ ಶೋ ಇದಾಗಿದ್ದು ಎರಡೂ ವಾಹಿನಿಗಳ ನಡುವೆ ಮತ್ತೆ ಪೈಪೋಟಿ ಶುರುವಾಗಿದೆ.. ಇನ್ನೂ ಅದಾಗಲೇ ಯಶಸ್ವಿಯಾಗಿದ್ದ ರಾಜಾರಾಣಿ ಶೋನ ಹೊಸ ಸೀಸನ್ ನ ರೇಟಿಂಗ್ ಕಾಪಾಡಿಕೊಳ್ಳುವ ಸಲುವಾಗಿ ಕೆಲ ಬದಲಾವಣೆಗಳನ್ನು ಮಾಡುವುದು ಅನಿವಾರ್ಯವಾಗಿತ್ತು.. ಅದರಲ್ಲೂ ಈ ಹೊಸ ರಾಜಾರಾಣಿ ಶೋವನ್ನು ಸೃಜನ್ ಲೋಕೇಶ್ ಅವರೇ ನಿರ್ಮಾಣ ಮಾಡುತ್ತಿರುವ ಕಾರಣ ಅವರು ಹಾಗೂ ವಾಹಿನಿ ಸೇರಿ ನಿರೂಪಕರನ್ನು ಬದಲು ಮಾಡುವ ನಿರ್ಧಾರ ಕೈಗೊಂಡು ಹೊಸ ನಿರೂಪಕಿಯನ್ನು ತರಲಾಗಿದೆ..

ಇತ್ತ ಜೀ ಕನ್ನಡ ವಾಹಿನಿಯಲ್ಲಿ ಶ್ವೇತಾ ಚಂಗಪೊಅ ಅವರು ನಿರೂಪಕಿಯಾಗಿ ಮತ್ತೆ ಕಿರುರೆರೆಯ ಮೇಲೆ ಬರುತ್ತಿದ್ದು ಕಲರ್ಸ್ ಕನ್ನಡದಿಂದ ಜೀ ಕನ್ನಡಕ್ಕೆ ಆಗಮಿಸಿದ್ದಾರೆ.. ಇದೇ ಕಾರಣದಿಂದಾಗಿ ರಾಜಾ ರಾಣಿ ಶೋನಲ್ಲಿಯೂ ಹೊಸ ನಿರೂಪಕಿಯನ್ನು ತಂದು ಹೊಸತನವನ್ನು ತರಬೇಕಿದ್ದ ಕಾರಣ ಅನುಪಮಾ ಬದಲಿಗೆ ಬೇರೆಯವರನ್ನು ನಿರೂಪಕಿಯಾಗಿ ಮಾಡಲಾಗಿದೆ..

ಇನ್ನು ಇತ್ತ ಈ ಬಗ್ಗೆ ಅನುಪಮಾ ಅವರನ್ನು ಸಾಕಷ್ಟು ಜನರು ಪ್ರಶ್ನೆ ಮಾಡಲಾಗಿ ಈ ಬಗ್ಗೆ ಖುದ್ದು ಅನುಪಮಾ ಅವರೇ ವಿಚಾರ ತಿಳಿಸಿದ್ದಾರೆ.. ನಾನು ಬೇರೆ ಯಾವ ಶೋ ಕೂಡ ಮಾಡುತ್ತಿಲ್ಲ.. ನನಗೆ ವಾಹಿನಿ ಕಡೆಯಿಂದ ಫೋನ್ ಬಂದಿಲ್ಲ.. ಬಂದಿದ್ದರೆ ನಾನು ಸಂತೋಷವಾಗಿಯೇ ರಾಜಾರಾಣಿ ಶೋವನ್ನು ನಿರೂಪಣೆ ಮಾಡುತ್ತಿದ್ದೆ.. ಆದರೆ ಅದಕ್ಕೆ ಕಾರಣವೂ ನನಗೆ ಗೊತ್ತಿಲ್ಲ.. ಆ ಬಗ್ಗೆ ಹೆಚ್ಚು ಮಾತನಾಡುವುದು ಸರಿಯಲ್ಲ.. ಮುಂದಿನ ಸೀಸನ್ ನಲ್ಲಿ ವಾಹಿನಿ ಕಡೆಯಿಂದ ಫೋನ್ ಬಂದರೆ ಕಂಡಿತ ಶೋ ನಲ್ಲಿ‌ ಕಾಣಿಸಿಕೊಳ್ಳುವೆ.. ನಾನು ವ್ಯಯಕ್ತಿಕ ಜೀವನದಲ್ಲಿ ಸಾಕಷ್ಟು ಕೆಲಸಗಳಲ್ಲಿ ಬ್ಯುಸಿ ಆಗಿರುವೆ.. ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದ ಎಂದಿದ್ದಾರೆ..