ನನ್ನಮ್ಮ ಸೂಪರ್ ಸ್ಟಾರ್ ಶೋ‌ ನಿರೂಪಣೆ ಮಾಡಲ್ಲ ಎಂದ ಅನುಪಮಾ.. ಕಾರಣವೇನು ಗೊತ್ತಾ?

ಕಳೆದ ಕೆಲವ್ಹ ತಿಂಗಳುಗಳಿಂದ ಕಲರ್ಸ್ ಕನ್ನಡ ವಾಹಿನಿ ವೀಕ್ಷಕರಿಗೆ ಭಾರಿ ಮನರಂಜನೆ ನೀಡುತ್ತಿದೆ. ಪ್ರತಿ ವೀಕೆಂಡ್ ರಾತ್ರಿ ಸಮಯದಲ್ಲಿ ವೀಕ್ಷಕರು ಬಹಳ ಇಷ್ಟಪಟ್ಟು ಕಲರ್ಸ್ ಕನ್ನಡ ವಾಹಿನಿಯ ಕಾರ್ಯಕ್ರಮಗಳನ್ನು ನೋಡುತ್ತಿದ್ದಾರೆ. ಮೊದಲಿಗೆ ರಾಜಾ ರಾಣಿ ಶೋ ಶುರುವಾಯಿತು, ಮದುವೆ ಆಗಿರುವ ಜೋಡಿಗಳಿಗಾಗಿ ಈ ಶೋ ಸ್ಪೆಶಲ್ ಆಗಿ ಶುರುವಾಯಿತು, ಭಾರಿ ಮೆಚ್ಚುಗೆಯನ್ನು ಪಡೆದುಕೊಂಡಿತು. ರಾಜಾ ರಾಣಿ ಶೋ ಮುಗಿದ ನಂತರ ಶುರುವಾಗಿದ್ದು ನನ್ನಮ್ಮ ಸೂಪರ್ ಸ್ಟಾರ್. ಅಮ್ಮ ಮಕ್ಕಳಿಗಾಗಿ ವಿಶೇಷವಾಗಿ ಶುರುವಾಗಿರುವ ಶೋ ಇದು. ಮಕ್ಕಳ ಮುದ್ದು ಮಾತುಗಳು ಅವರು ಮಾಡುವ ಟಾಸ್ಕ್ ಗಳು ಇದೆಲ್ಲವನ್ನು ಜನರು ಭಾರಿ ಎಂಜಾಯ್ ಮಾಡುತ್ತಿದ್ದಾರೆ. ಈ ಶೋ ನಿರೂಪಣೆ ಮಾಡುತ್ತಿರುವುದು ಅನುಪಮಾ ಗೌಡ. ಮೊದಲಿಗೆ ನನ್ನಮ್ಮ ಸೂಪರ್ ಸ್ಟಾರ್ ಶೋ ಜಡ್ಜ್ ಮಾಡುವುದಿಲ್ಲ ಎಂದಿದ್ದರಂತೆ ಅನುಪಮಾ. ಅದಕ್ಕೆ ಕಾರಣ ಏನು ಗೊತ್ತಾ?

ಅನುಪಮಾ ಗೌಡ ಅವರು ಧಾರಾವಾಹಿಯಲ್ಲಿ ನಟಿಯಾಗಿ ತಮ್ಮ ಕೆರಿಯರ್ ಶುರು ಮಾಡಿದರು. ನಂತರ ಬಿಗ್ ಬಾಸ್ ಮನೆಯೊಳಗೆ ಪ್ರವೇಶಿಸಿ ಇನ್ನಷ್ಟು ಫೇಮಸ್ ಆದರು. ಬಿಗ್ ಬಾಸ್ ಇಂದ ಬಂದ ನಂತರ ಬೇರೆ ಧಾರಾವಾಹಿಗಳಲ್ಲಿ ಅನುಪಮಾ ಗೌಡ ಕಾಣಿಸಿಕೊಳ್ಳಲಿಲ್ಲ. ಬದಲಾಗಿ ಒಂದೆರಡು ಸಿನಿಮಾಗಳಲ್ಲಿ ನಟಿಸಿದರು ನಂತರ ನಿರೂಪಣೆಗೆ ಎಂಟ್ರಿ ಕೊಟ್ಟರು. ಅನುಪಮಾ ಗೌಡ ಮಜಾಭಾರತ ಶೋ ನಿರೂಪಣೆ ಮಾಡುತ್ತಿದ್ದರು. ನಂತರ ರಾಜಾ ರಾಣಿ ಶೋ ನಿರೂಪಣೆ ಮಾಡಲು ಶುರು ಮಾಡಿದರು. ನಟನೆ ಮಾತ್ರವಲ್ಲದೆ ನಿರೂಪಣೆಯಲ್ಲೂ ಸೈ ಎನ್ನಿಸಿಕೊಂಡರು ಅನುಪಮಾ ಗೌಡ.

ರಾಜಾ ರಾಣಿ ಕಾರ್ಯಕ್ರಮವನ್ನು ಅನುಪಮಾ ಗೌಡ ನಿರೂಪಣೆ ಮಾಡಿದರೆ, ಸೃಜನ್ ಲೋಕೇಶ್ ಮತ್ತು ತಾರಾ ಅವರು ಜಡ್ಜ್ ಗಳಾಗಿದ್ದರು. ಸೆಲೆಬ್ರಿಟಿ ಜೋಡಿಗಳು ಸ್ಪರ್ಧಿಗಳಾಗಿದ್ದರು. ಈ ಬಾರಿ ನನ್ನಮ್ಮ ಸೂಪರ್ ಸ್ಟಾರ್ ಶೋನಲ್ಲಿ ತಾರಾ ಮತ್ತು ಸೃಜನ್ ಲೋಕೇಶ್ ಅವರು ಜಡ್ಜ್ ಗಳಾಗಿದ್ದು ಇವರ ಜೊತೆ ನಟಿ ಅನುಪ್ರಭಾಕರ್ ಅವರು ಕೂಡ ಸೇರಿಕೊಂಡಿದ್ದಾರೆ. ಈ ಶೋ ಹಿಂದಿನ ಶೋಗಳಿಗಿಂತ ಬೇರೆ ರೀತಿಯ ಶೋ ಆಗಿದೆ. ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮ ಮಕ್ಕಳ ಮುಗ್ಧತೆಯಿಂದ ಜನರಿಗೆ ಹೆಚ್ಚು ಇಷ್ಟವಾಗಿದೆ. ನಟಿ ಅನುಪಮಾ ಗೌಡ ಅವರ ನಿರೂಪಣೆಯನ್ನು ಕೂಡ ಜನರು ತುಂಬಾ ಇಷ್ಟ ಪಟ್ಟಿದ್ದಾರೆ.

ಆದರೆ ಈ ಶೋ ನಿರೂಪಣೆ ಮಾಡಿ ಎಂದು ಮೊದಲಿಗೆ ಅನುಪಮಾ ಅವರನ್ನು ಕೇಳಿಕೊಂಡಾಗ ಅವರು ನೋ ಎಂದಿದ್ದರಂತೆ.. ನಿಜಕ್ಕೂ ಅನುಪಮಾ ನೋ ಅಂದಿದ್ದೇಕೆ. ಇದರ ಬಗ್ಗೆ ಅನುಪಮಾ ಅವರು ಹೇಳೋದು ಹೀಗೆ.. “ನನ್ನ ಬಗ್ಗೆ ಇದ್ದ ಅಭಿಪ್ರಾಯ, ನಿರೂಪಣೆ ಚೆನ್ನಾಗಿ ಬರೋದಿಲ್ಲ, ನಿರೂಪಣೆ ಮಾಡೋಕೆ ಬರೋದಿಲ್ಲ ಅಂತ ಇತ್ತು. ಆದರೆ ಈಗ ನನ್ನಮ್ಮ ಸೂಪರ್ ಸ್ಟಾರ್ ಶೋ ಅದೆಲ್ಲವನ್ನು ಬದಲಾಯಿಸಿದೆ. ಅದಕ್ಕೆ ಕಾರಣ ಏನು ಅಂದ್ರೆ, ಮಕ್ಕಳ ಜೊತೆ ನಾನು ಕನೆಕ್ಟ್ ಆಗ್ತಾ ಇದ್ದೀನಿ. ಮಕ್ಕಳು ಇರುವ ಕಡೆ ನೆಗಟಿವ್ ಏನೇ ಇದ್ರು ಅದು ಹೋಗಿ ಪಾಸಿಟಿವ್ ಆಗುತ್ತೆ ಅಂತ ಹೇಳ್ತಾರೆ, ಅದು ನಿಜವಾಗಿದೆ.

ಈಗ ಎಲ್ಲರು ನನ್ನ ನಿರೂಪಣೆಯನ್ನು ಇಷ್ಟಪಡುತ್ತಿದ್ದಾರೆ. ಶೋ ಶುರುವಾಗುವ ಒಂದು ವಾರದ ಮುಂಚೆ ಕೂಡ ನಾನು ಮಾಡಲ್ಲ ಅಂತ ಹೇಳಿದ್ದೆ. ನೋ ಅಂತಾನೆ ಹೇಳಿದ್ದೆ. ಡೈರೆಕ್ಟರ್ ಪ್ರಕಾಶ್ ಸರ್ ಒಂದೆರಡು ಸಲ ಫೋನ್ ಮಾಡಿ ಹೇಳಿದ್ರು. ಸೃಜ ಕೂಡ ಯಾಕಮ್ಮ ಮಾಡಲ್ಲ ಅಂತೀಯಾ ಅಂತ ಒಂದು ಸಲ ಬೈದ್ರು. ಅದಾದ್ಮೇಲೆ ಒಪ್ಪಿಕೊಂಡೆ. ಈಗ ಮಕ್ಕಳು ಕೂಡ ನನ್ನ ಜೊತೆ ಬಂದು ಹೇಳ್ತಾರೆ, ಅವರ ಜೊತೆ ಹಾಗ್ ಮಾತಾಡ್ತೀರಾ ನನ್ನ ಜೊತೆ ಕೂಡ ಹಾಗೆ ಮಾತನಾಡಿ ಅಂತ ಕೇಳ್ತಾರೆ. ಅಷ್ಟರ ಮಟ್ಟಿಗೆ ವೀಕ್ಷಕರಿಗೆ ಮಕ್ಕಳಿಗೆ ಮತ್ತು ತಾಯಿಯಂದಿರಿಗೆ ನನ್ನ ನಿರೂಪಣೆ ಇಷ್ಟವಾಗಿದೆ. ಇದೆಲ್ಲದಕ್ಕೂ ಕಾರಣ ಡೈರೆಕ್ಷನ್ ಡಿಪಾರ್ಟ್ಮೆಂಟ್. ಅವರೆಲ್ಲರೂ ತಾಯಿ ಮಕ್ಕಳನ್ನ ಕನೆಕ್ಟ್ ಮಾಡಿಸೋದಕ್ಕೆ ಪ್ರತಿವಾರ ಹೊಸ ಕಾನ್ಸೆಪ್ಟ್ ಜೊತೆ ಬರ್ತಾ ಇದ್ದಾರೆ. ಅದರಿಂದ ನಾವೆಲ್ಲರೂ ಇಷ್ಟು ಚೆನ್ನಾಗಿ ಆನ್ ಸ್ಕ್ರೀನ್ ಕಾಣಿಸುತ್ತಿದ್ದೇವೆ.

ರಾಜಾ ರಾಣಿ ಶೋ ಆರಂಭ ಆದಾಗಿನಿಂದ ತಾರಮ್ಮ ನನ್ನ ಫೇವರೆಟ್, ನಮ್ಮೆಲ್ಲರನ್ನ ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ನಮ್ಮನ್ನೆಲ್ಲ ಕರೆದು ಊಟ ಮಾಡಿಸಿ, ತುಂಬಾ ಪ್ಯಾಂಪರ್ ಮಾಡ್ತಾರೆ. ಸೃಜ ಈ ಶೋನ ಹೈಲೈಟ್, ಶೋ ಶುರುವಾದಾಗಿನಿಂದ ನಾನೇ ದೊಡ್ಡ ಮಗು ಎಂದು ಹೇಳುತ್ತಿದ್ದಾರೆ. ಇನ್ನು ಅನು ಅವರು ತುಂಬಾ ಸ್ವೀಟ್, ಈಗೀಗ ಅವರು ನಮ್ಮ ಸೇರಿ ರೇಗಿಸೋದಕ್ಕೆ ಶುರು ಮಾಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲಾ ತಾಯಂದಿರು ಮತ್ತು ಮಕ್ಕಳು, ಅವರಿಂದಲೇ ಇದೆಲ್ಲವೂ, ಮಕ್ಕಳು ಏನೇ ಮಾಡಿದರೂ ಎಷ್ಟೇ ತರ್ಲೆ ತುಂಟಾಟ ಮಾಡಿ ಇರಿಟೇಟ್ ಮಾಡಿದರು ಕೂಡ ಕೊನೆಗೆ ಅವರೆಲ್ಲ ಮಕ್ಕಳೇ ಎಂದು ಹೇಳುವ ಮೂಲಕ ತಾವು ಶೋಗೆ ನೋ ಅಂದಿದ್ದು ಯಾಕೆ, ಒಪ್ಪಿಕೊಂಡಿದ್ದು ಹೇಗೆ ಎನ್ನುವ ಕಥೆಯನ್ನು ತಿಳಿಸಿದ್ದಾರೆ.