ರಾಜಾ ರಾಣಿಯಿಂದ ಹೊರ ಬಂದ ನಂತರ ಅನುಪಮಾ ಗೌಡ ಯಾವ ಕೆಲಸ ಮಾಡ್ತಿದ್ದಾರೆ ಗೊತ್ತಾ?

ಕನ್ನಡದ ಕಿರುತೆರೆ ಲೋಕದಲ್ಲಿ ಬಹಳ ಫೇಮಸ್ ಆಗಿರುವವರಲ್ಲಿ ಒಬ್ಬರು ನಟಿ ಅನುಪಮಾ ಗೌಡ. ನಟಿಯಾಗಿ, ನಿರೂಪಕಿಯಾಗಿ, ಗುರುತಿಸಿಕೊಂಡಿದ್ದಾರೆ. ಅನುಪಮಾ ಗೌಡ ಅವರು ಈಗ ಧಾರವಾಹಿಯಲ್ಲಿ ಆಗಲಿ, ನಿರೂಪಕಿಯಾಗಿ ಆಗಲಿ ಕಾಣಿಸಿಕೊಳ್ಳುತ್ತಿಲ್ಲ. ಹಾಗಿದ್ದಲ್ಲಿ ಅನುಪಮಾ ಗೌಡ ಈಗ ಏನು ಮಾಡುತ್ತಿದ್ದಾರೆ? ಎಲ್ಲಿದ್ದಾರೆ ಗೊತ್ತಾ.. ಅನುಪಮಾ ಅವರ ಬಗ್ಗೆ ಹೊಸ ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ..

ಅನುಪಮಾ ಗೌಡ ಅವರು ಕಿರುತೆರೆಯಲ್ಲಿ ಹೆಚ್ಚು ಗುರುತಿಸಿಕೊಂಡಿದ್ದು, ಕಲರ್ಸ್ ಕನ್ನಡ ವಾಹಿನಿಯ ಅಕ್ಕ ಧಾರವಾಹಿ ಮೂಲಕ. ಆದರೆ ಅಕ್ಕ ಧಾರವಾಹಿಗಿಂತ ಮೊದಲು, ಕೆಲವು ರಿಯಾಲಿಟಿ ಶೋ ಮತ್ತು ಸಿನಿಮಾಗಳಿಗೆ ಸಹ ಬಣ್ಣ ಹಚ್ಚಿದ್ದರು. ಅನುಪಮಾ ಗೌಡ ಅವರು ಮೊದಲು ನಟಿಸಿದ್ದು, ಲಂಕೇಶ್ ಪತ್ರಿಕೆ ಸಿನಿಮಾದಲ್ಲಿ. ಅದಾದ ಬಳಿಕ ಚಿತ್ರರಂಗದಿಂದ ಸ್ವಲ್ಪ ಬ್ರೇಕ್ ಪಡೆದಿದ್ದ ಅನುಪಮಾ ಗೌಡ ಅವರು ಮತ್ತೆ ಕಾಣಿಸಿಕೊಂಡಿದ್ದು, ಹಳ್ಳಿ ದುನಿಯಾ ಎನ್ನುವ ರಿಯಾಲಿಟಿ ಶೋ ಮೂಲಕ. ಈ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು ಅನುಪಮಾ ಗೌಡ.

ಇದಲ್ಲದೆ ಇನ್ನು ಒಂದೆರಡು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು. ನಂತರ ಅನುಪಮಾ ಗೌಡ ಅವರಿಗೆ ಅಕ್ಕ ಧಾರವಾಹಿಯಲ್ಲಿ ದ್ವಿಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು, ನೆಗಟಿವ್ ಮತ್ತು ಪಾಸಿಟಿವ್ ಎರಡು ಶೇಡ್ ಇರುವ ಪಾತ್ರದಲ್ಲಿ ನಟಿಸಿ, ಫೇಮಸ್ ಆದರು ಅನುಪಮಾ. ಅಕ್ಕ ಧಾರವಾಹಿ ಮೂಲಕ ಮನೆಮಾತಾಗಿದ್ದರು. ಆದರೆ ಅಕ್ಕ ಧಾರವಾಹಿ ಮುಗಿದ ಬಳಿಕ ಅನುಪಮಾ ಅವರು ಇನ್ಯಾವುದೇ ಧಾರವಾಹಿಯಲ್ಲಿ ಕಾಣಿಸಿಕೊಳ್ಳಲಿಲ್ಲ. ಬದಲಿಗೆ ಬಿಗ್ ಬಾಸ್ ಕನ್ನಡ ಸೀಸನ್ 5ರಲ್ಲಿ ಸ್ಫರ್ಧಿಯಾಗಿ ಎಂಟ್ರಿ ಕೊಟ್ಟರು, ಫಿನಾಲೆ ವರೆಗೂ ಕಾರ್ಯಕ್ರಮದಲ್ಲಿದ್ದರು ಅನುಪಮಾ.

ಬಿಗ್ ಬಾಸ್ ಬಳಿಕ ಒಂದು ಬ್ರೇಕ್ ಪಡೆದು, ರಿಯಾಲಿಟಿ ಶೋ ನಿರೂಪಕಿಯಾಗಿ ಕಾಣಿಸಿಕೊಂಡರು. ಮಜಾ ಭಾರತ ಕಾಮಿಡಿ ಶೋ ನಿರೂಪಕಿಯಾಗಿದ್ದ ಅನುಪಮಾ, ನಂತರ ರಾಜ ರಾಣಿ ಶೋ ಹಾಗೂ ನನ್ನಮ್ಮ ಸೂಪರ್ ಸ್ಟಾರ್ ಶೋ ನಿರೂಪಣೆ ಮಾಡಿದರು. ನಿರೂಪಕಿಯಾಗಿ ಕೂಡ ಅನುಪಮಾ ಗೌಡ ಅವರು ಒಳ್ಳೆಯ ಹೆಸರನ್ನು ಪಡೆದರು. ಜನರು ಸಹ ಇವರ ನಿರೂಪಣೆಯನ್ನು ಇಷ್ಟಪಟ್ಟಿದ್ದರು. ಆದರೆ ಕಾರಣಾಂತರಗಳಿಂದ ರಾಜ ರಾಣಿ ಸೀಸನ್2 ಗೆ ಅನುಪಮಾ ಗೌಡ ಅವರು ನಿರೂಪಕಿಯಾಗಿ ಬರಲಿಲ್ಲ. ಪ್ರಸ್ತುತ ಬಣ್ಣದ ಪ್ರಪಂಚದಿಂದ ದೂರ ಉಳಿದಿರುವ ಅನುಪಮಾ ಗೌಡ, ರಿಯಲ್ ಲೈಫ್ ನಲ್ಲಿ ಬ್ಯುಸಿ ಇದ್ದಾರೆ.

ಅನುಪಮಾ ಅವರು ಯೂಟ್ಯೂಬ್ ಚಾನೆಲ್ ಸಹ ಶುರು ಮಾಡಿ, ತಮ್ಮ ದಿನನಿತ್ಯ ಜೀವನ ಹೇಗಿರುತ್ತದೆ, ಟ್ರಾವೆಲ್ ಡೈರೀಸ್, ಆರೋಗ್ಯದ ಕುರಿತು, ಹೆಣ್ಣುಮಕ್ಕಳ ವಿಚಾರಗಳು ಹೀಗೆ ಅನೇಕ ವಿಚಾರಗಳನ್ನು ಅನುಪಮಾ ಗೌಡ ಅವರು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಶೇರ್ ಮಾಡಿಕೊಳ್ಳುತ್ತಾರೆ. ಇದೀಗ ಅನುಪಮಾ ಗೌಡ ಅವರು ಟ್ರಾವೆಲ್ಲಿಂಗ್ ಅನ್ನು ಎಂಜಾಯ್ ಮಾಡುತ್ತಿದ್ದಾರೆ. ಇತ್ತೀಚೆಗೆ ಅನುಪಮಾ ಗೌಡ ಅವರು ಸ್ನೇಹಿತೆಯರ ಜೊತೆಗೆ ಗೋವಾ ಟ್ರಿಪ್ ಹೋಗಿ ಎಂಜಾಯ್ ಮಾಡಿದ್ದರು.

ಅದಾದ ಬಳಿಕ ಅನುಪಮಾ ಅವರು ಥಾಯ್ಲೆಂಡ್ ಗೆ ಸೋಲೋ ಟ್ರಿಪ್ ಹೋಗಿ, ಎಂಜಾಯ್ ಮಾಡಿದ್ದಾರೆ. ಥಾಯ್ಲೆಂಡ್ ನಲ್ಲಿ ಒಂದು ವಾರ ಇದ್ದ ಅನುಪಮಾ, ಸ್ಕೂಬ ಡೈವಿಂಗ್ ಕಲಿತಿದ್ದಾರೆ. ಅಲ್ಲಿನ ಜಾಗಗಳನ್ನು ಎಕ್ಸ್ಪ್ಲೋರ್ ಮಾಡಿದ್ದಾರೆ. ಒಂದು ಇಡೀ ದಿನ ಆನೆಯ ಕ್ಯಾಂಪ್ ನಲ್ಲಿ ಕಳೆದು, 70 ವರ್ಷದ ಯೇಯೋ ಆನೆಗೆ ಊಟ ನೀಡಿ, ಸ್ನಾನ ಮಾಡಿಸಿ ಸಂತೋಷಪಟ್ಟಿದ್ದಾರೆ. ಓಪನ್ ವಾಟರ್ ಮತ್ತು ಓಪನ್ ಡ್ರೈವಿಂಗ್ ಮಾಡಿ, ಸರ್ಟಿಫಿಕೇಟ್ ಸಹ ಪಡೆದುಕೊಂಡಿದ್ದಾರೆ ಅನುಪಮಾ. ಮುಂದಿನ ದಿನಗಳಲ್ಲಿ ಹೊಸ ಪ್ರಾಜೆಕ್ಟ್ ನಲ್ಲಿ ಇವರು ಕಾಣಿಸಿಕೊಳ್ಳುವುದು ಖಚಿತವಾಗಿದೆ.