ಸಿಹಿ ಸುದ್ದಿ ಕೊಟ್ಟ ಅನು ಪ್ರಭಾಕರ್ ಮುಖರ್ಜಿ..

ಕನ್ನಡದ ಪ್ರಖ್ಯಾತ ನಟಿ ಅನು ಪ್ರಭಾಕರ್ ಮುಖರ್ಜಿ ಅವರು ಸಿಹಿಸುದ್ದಿ ನೀಡಿದ್ದಾರೆ.. ಹೌದು ಕಳೆದ ಕೆಲವು ದಿನಗಳಿಂದ ಸಂಸಾರ ಮಗು ಅಂತ ಬ್ಯುಸಿ ಆಗಿದ್ದ ಅನುಪ್ರಭಾಕರ್ ಅವರ ಕಡೆಯಿಂದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದು ಬಂದಿದೆ.. 2016 ರಲ್ಲಿ ರಘು ಮುಖರ್ಜಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅನು ಪ್ರಭಾಕರ್ ಅವರು ನಂತರ ಸಂಸಾರ ಮಗು ಎನ್ನುವ ಜವಬ್ದಾರಿಯಲ್ಲಿ ಬ್ಯುಸಿ ಆದರು..

ಆದರೆ ಇದೀಗ ಸ್ಯಾಂಡಲ್ವುಡ್ ಗೆ ಕಂಬ್ಯಾಕ್ ಮಾಡಿದ್ದಾರೆ. ಹೌದು ಕಾದಂಬರಿ ಆಧಾರಿತ ಸಿನಿಮಾವೊಂದರಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದು ಚಿತ್ರರಂಗಕ್ಕೆ ಎರಡನೇ ಎಂಟ್ರಿ ಪಡೆಯುತ್ತಿದ್ದಾರೆ.. 1999 ರಲ್ಲಿ ಶಿವಣ್ಣನ ಜೊತೆ ಹೃದಯ ಹೃದಯ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಪರಿಚಯವಾದ ಅನು ಪ್ರಭಾಕರ್ ಅವರು ಅನೇಕ ಸಿನಿಮಾಗಳಲ್ಲಿ‌ ಮಿಂಚಿದರು.. ಆದರೆ ಬರುಬರುತ್ತಾ ಅವರಿಗೆ ಇಷ್ಟವಾಗುವಂತಹ ಪಾತ್ರಗಳು ಸಿಗದ ಕಾರಣ ದೊಡ್ಡ ಪರದೆಯಲ್ಲಿ ಕಾಣಿಸಿಕೊಳ್ಳೋದು ಕಡಿಮೆಯಾಯಿತು.. ನಂತರ ಕೆಲವೊಂದು ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳಲು ಶುರು ಮಾಡಿದರು..

ಆ ಬಳಿಕ ಮೊದಲ ಪತಿಯಿಂದ ದೂರಾದ ಅನು ಪ್ರಭಾಕರ್ ಅವರು ರಘು ಮುಖರ್ಜಿ ಅವರೊಡನೆ ನೂತನ ಜೀವನ ಆರಂಭಿಸಿದರು.. ಇದೀಗ ಮುದ್ದಾದ ಹೆಣ್ಣು ಮಗುವೊಂದಿದ್ದು ಜೀವನದಲ್ಲಿ ಈಗ ಬಹಳ ಸಂತೋಷವಾಗಿದ್ದೇನೆ ಎನ್ನುತ್ತಾರೆ ಅನು ಪ್ರಭಾಕರ್..

ಇದೀಗ ಮತ್ತೊಮ್ಮೆ ತೆರೆ ಮೇಲೆಯೂ ಕೂಡ ಕಂಬ್ಯಾಕ್ ಮಾಡಿದ್ದು ಸಾರಾ ಅಬೂಬಕರ್ ಬರೆದಿರುವ ವಜ್ರಗಳು ಎಂಬ ಕಾದಂಬರಿ ಆಧಾರಿತ “ಸಾರಾವಜ್ರ” ಎಂಬ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ‌‌..

ಇವರ ಜೊತೆ ನಿರೂಪಕ ರೆಹಮಾನ್ ಕೂಡ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.. ಕೆಲ ದಿನಗಳ ಹಿಂದಷ್ಟೇ ಶೈನ್ ಶೆಟ್ಟಿಗಾಗಿ ಬಿಗ್ ಬಾಸ್ ಫಿನಾಲೆ ವೇದಿಕೆಯಲ್ಲಿ ಡ್ಯಾನ್ಸ್ ಮಾಡಿದ್ದ ಅನು ಪ್ರಭಾಕರ್ ಅವರು ಅದೇ ಸಮಯದಲ್ಲಿ ಸಿನಿಮಾ ಬಗ್ಗೆ ಕಿಚ್ಚನ ಜೊತೆ ಮಾತನಾಡಿದ್ದರು…

ಇದೀಗ ಚಿತ್ರೀಕರಣ ಪೂರ್ಣಗೊಂಡಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬರದಿಂದ ಸಾಗಿವೆ.. ಎಲ್ಲವೂ ಅಂದುಕೊಂಡಂತೆ ಆದರೆ ಮೇ ಅಥವಾ ಜೂನ್ ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.. ಈ ಮೂಲಕ ಅನುಪ್ರಭಾಕರ್ ಅವರು ತಮ್ಮ ಸಿನಿ ಕೆರಿಯರ್ ನ ಹೊಸ ಜರ್ನಿಯನ್ನು ಪ್ರಾರಂಭಿಸಲಿದ್ದಾರೆ..