ಮನೆಯಲ್ಲಿ‌ ಹೆಣ್ಣು ಮಕ್ಕಳು ಈ ಸಣ್ಣ ತಪ್ಪು ಎಂದೂ ಮಾಡಬೇಡಿ..

ಮನೆಯಲ್ಲಿ ಹಿರಿಯರು ಇದ್ದರೆ ಕೆಲವೊಂದು ಮಾತುಗಳನ್ನು ಆಗಾಗ ಹೇಳುತ್ತಿರುತ್ತಾರೆ.‌ ಮನೆಯಲ್ಲಿ ಏನು ಮಾಡಬೇಕು ಏನು ಮಾಡಬಾರದು ಎಂಬುದನ್ನಿ ತಿಳಿಸುತ್ತಿರುತ್ತಾರೆ.. ಆದರೆ ಈಗಿನ ಕಾಲದಲ್ಲಿ ಹಿರಿಯರು ಹಳ್ಳಿಯಲ್ಲಿ‌ ಮಿಕ್ಕವರು ಪೇಟೆಯಲ್ಲಿ ಎನ್ನುವಂತಾಗಿದೆ..

ಇನ್ನು ಹಳ್ಳಿಗಳ ಕಡೆ ಸಾಮಾನ್ಯವಾಗಿ ಮನೆಯಲ್ಲಿ ಹೆಣ್ಣು‌ ಮಕ್ಕಳು ಈ ತಪ್ಪು ಮಾಡಿದ್ರೆ ಹಿರಿಯರು ಬಯ್ಯೋದುಂಟು.. ಹೌದು ಮನೆಯಲ್ಲಿ ರಾತ್ರಿ ಸಮಯದಲ್ಲಿ ಅಡುಗೆ ಮಾಡಿದ ಬಳಿಕ.. ಅದರಲ್ಲೂ ಮುದ್ದೆ ಮಾಡಿದ ಬಳಿಕ ಪಾತ್ರೆಯನ್ನು ಹಾಗೆಯೇ ಇಡೋದು ವಾಡಿಕೆ.. ಆದರೆ ಮುದ್ದೆ ಮಾಡಿದ ಪಾತ್ರೆಯನ್ನೆಂದೂ ಖಾಲಿ ಇಡೋದಿಲ್ಲ.. ಹಾಗೇನಾದರೂ ಖಾಲಿ ಇಟ್ಟರೆ ಮನೆಯಲ್ಲಿನ ಹಿರಿಯರ ಕೈಯಲ್ಲಿ ಬೈಗುಳ ಗ್ಯಾರಂಟಿ.. ಹೌದು ಮುದ್ದೆ ಪಾತ್ರೆಯನ್ನು ಖಾಲಿ ಇಡದೇ ಇರಲು ಪ್ರಮುಖ ಕಾರಣವೂ ಇದೆ..

ಹೌದು ಮುದ್ದೆ ಪಾತ್ರೆಯನ್ನು ಖಾಲಿ ಇಟ್ಟರೆ ಮನೆಗೆ ದರಿದ್ರ ಬರುತ್ತದೆ ಅನ್ನೋದು ಹಿರಿಯರ ನಂಬಿಕೆ.. ಅದರಲ್ಲೂ ರಾತ್ರಿಯ ಸಮಯದಲ್ಲಿ ಅಡುಗೆ ಮನೆಯಲ್ಲಿ ಒಂದು ಚೆಂಬಿನಲ್ಲಿ‌ ನೀರನ್ನೂ ಸಹ ತುಂಬಿ ಇಡುತ್ತಾರೆ.. ಲಕ್ಷ್ಮಿ ಮನೆಗೆ ಆಗಮಿಸಿದರೆ ಖಾಲಿ ಪಾತ್ರೆ ಇಡಬಾರದು ಖಾಲಿ ಚೆಂಬು ಕಾಣಬಾರದು ಎಂಬ ಕಾರಣಕ್ಕೆ ಈ ರೀತಿ ಮಾಡುತ್ತಾರೆ.. ಜೊತೆಗೆ ಈ ರೀತಿ ನೀರು ಹಾಗೂ ಮುದ್ದೆ ಪಾತ್ರೆಯಲ್ಲಿ ಸಣ್ಣದೊಂದು ಮುದ್ದೆಯನ್ನು ಕಟ್ಟಿ ಹಾಗೆ ಬಿಟ್ಟರೆ.. ಮನೆ ಸಮೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ..