ರಾಮಚಾರಿ ಧಾರಾವಾಹಿಯ ನಟಿ ಅಂಜಲಿ ಸುಧಾಕರ್ ನಿಜಕ್ಕೂ ಯಾರು ಗೊತ್ತಾ..

90ರ ದಶಕದಲ್ಲಿ ಗ್ಲಾಮರಸ್ ಪಾತ್ರಗಳಿಂದಲೇ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದವರು ನಟಿ ಅಂಜಲಿ ಸುಧಾಕರ್. ಕಾಶಿನಾಥ್ ಅವರ ಸಿನಿಮಾ ಮೂಲಕ ನಟನೆ ಶುರು ಮಾಡಿದ ಅಂಜಲಿ ಅವರು, ಕನ್ನಡದ ಸ್ಟಾರ್ ನಟರಾದ ಸಾಹಸಸಿಂಹ ಡಾ.ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಶ್ ಇವರೆಲ್ಲರ ಜೊತೆ ಅಭಿನಯಿಸಿ ಸೈ ಎನ್ನಿಸಿಕೊಂಡವರು. ಆಗಿನ ಕಾಲದಲ್ಲಿ ಬಹಳ ಬೇಡಿಕೆಯಿದ್ದ ನಟಿಯರಲ್ಲಿ ಇವರು ಕೂಡ ಒಬ್ಬರು. ನಾಯಕಿಯಾಗಿ, ಎರಡನೇ ನಾಯಕಿಯಾಗಿ ಹಾಗೂ ಸಿನಿಮಾಗಳಲ್ಲಿ ಮುಖ್ಯ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದರು ಅಂಜಲಿ. ಪೀಕ್ ಟೈಮ್ ನಲ್ಲಿ ಇದ್ದಕ್ಕಿದ್ದ ಹಾಗೆ ಚಿತ್ರರಂಗದಿಂದ ದೂರವಾದ ಅಂಜಲಿ ಈಗ ಕಿರುತೆರೆ ಮೂಲಕ ನಟನೆಗೆ ಕಂಬ್ಯಾಕ್ ಮಾಡಿದ್ದಾರೆ. ರಾಮಾಚಾರಿ ಧಾರಾವಾಹಿಯಲ್ಲಿ, ಜಾನಕಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. 21 ವರ್ಷಗಳ ಬಿಗ್ ಬ್ರೇಕ್ ಪಡೆದಿದ್ದೇಕೆ ನಟಿ ಅಂಜಲಿ? ಈಗ ಅವರಿಗೆ ಸಿಗುತ್ತಿರುವ ಪಾತ್ರಗಳು ಹೇಗಿವೆ? ಎಲ್ಲದರ ಬಗ್ಗೆ ತಿಳಿಸುತ್ತೇವೆ ನೋಡಿ..

ನಟಿ ಅಂಜಲಿ ಸುಧಾಕರ್ 90ರ ದಶಕದಲ್ಲಿ ಸಿನಿಮಾ ಮತ್ತು ಸೀರಿಯಲ್ ಎರಡರಲ್ಲೂ ನಟಿಸಿದ್ದಾರೆ. ಕಿರುತೆರೆ ಕೂಡ ಅವರಿಗೆ ಹೊಸದೇನಲ್ಲ. ಆಗಿನ ಕಾಲದಲ್ಲೇ ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು. ಅಂಜಲಿ ಅವರು ಮದುವೆಯಾದ ನಂತರ, ಅವರ ಪತಿ ದುಬೈನಲ್ಲಿ ಇದ್ದ ಕಾರಣ ಚಿತ್ರರಂಗ ತೊರೆದು ದುಬೈಗೆ ಹೋಗಿ ನೆಲೆಸುವ ಪರಿಸ್ಥಿತಿ ಎದುರಾಯಿತು. ಎಲ್ಲರ ಹಾಗೆ ಅವರಿಗೂ ಕುಟುಂಬ ಮುಖ್ಯ. ಹಾಗಾಗಿ ನಟಿ ಅಂಜಲಿ ಚಿತ್ರರಂಗ ತೊರೆದು ದುಬೈಗೆ ಹೋಗಿ ನೆಲೆಸಿ, ಗಂಡನನ್ನು ಚೆನ್ನಾಗಿ ನೋಡಿಕೊಳ್ಳಲು ಶುರು ಮಾಡಿದರು.

ಅಂಜಲಿ ಅವರಿಗೆ ಇಬ್ಬರು ಹೆಣ್ಣುಮಕ್ಕಳು, ಸಿರಿ ಮತ್ತು ಸಮೃದ್ಧಿ. ಮಕ್ಕಳು ಹುಟ್ಟಿದ ನಂತರ ಫುಲ್ ಟೈಮ್ ಗೃಹಿನಣಿಯಾಗಿ, ಮಕ್ಕಳನ್ನು ಮತ್ತು ಗಂಡನನ್ನು ನೋಡಿಕೊಳ್ಳುತ್ತಿದ್ದರು. ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಬೇಕು, ಇಬ್ಬರನ್ನು ಒಳ್ಳೆಯ ರೀತಿಯಲ್ಲಿ ಬೆಳೆಸಬೇಕು ಎನ್ನುವ ಕಾರಣದಿಂದ ಬೇರೆ ಎಲ್ಲಾ ಕೆಲಸಗಳನ್ನು ಬಿಟ್ಟು ಮಕ್ಕಳ ಪಾಲನೆ ಪೋಷಣೆಯಲ್ಲೇ ತೊಡಗಿಕೊಂಡರು. ಈಗ ಅಂಜಲಿ ಅವರ ಮಕ್ಕಳು ಬೆಳೆದು ದೊಡ್ಡವರಾಗಿದ್ದಾರೆ. ಅಂಜಲಿ ಅವರ ಸಹೋದರ ತೀರಿಕೊಂಡಾಗ, ಆ ಕಾರಣದ ಸಲುವಾಗಿ ನಟಿ ಅಂಜಲಿ ಬೆಂಗಳೂರಿಗೆ ಬಂದರು. ಇಲ್ಲಿಗೆ ಬಂದಮೇಲೆ ಕರೋನಾ ಶುರುವಾಗಿ, ಮತ್ತೆ ಅವರಿಗೆ ದುಬೈಗೆ ಹೋಗಲು ಸಾಧ್ಯವಾಗಿಲ್ಲ.

ಬೆಂಗಳೂರಿಗೆ ಬಂದ ನಂತರ ಒಂದು ಕಾರ್ಯಕ್ರಮಕ್ಕೆ ಹೋಗಿದ್ದಾಗ, ಒಂದು ಮಾಧ್ಯಮದವರು ಅಂಜಲಿ ಅವರನ್ನು ಗುರುತಿಸಿ ಮಾತನಾಡಿಸಿದರು, ಹೀಗೆ ಅಂಜಲಿ ಅವರು ವಾಪಸ್ ಬಂದಿದ್ದಾರೆ ಎನ್ನುವ ವಿಚಾರ ಹೊರಬಂದು, ಹಲವು ಮಾಧ್ಯಮಗಳು ಅವರನ್ನು ತಲುಪಿ ಸಂದರ್ಶನಗಳನ್ನು ಮಾಡಿದರು. ಮಕ್ಕಳು ದೊಡ್ಡವರಾಗಿರುವ ಕಾರಣ ಮತ್ತೆ ನಟನೆಗೆ ಮರಳು ಸಿದ್ಧವಿದ್ದೇನೆ ಎಂದು ಹೇಳಿದ್ದರು ಅಂಜಲಿ. ಆ ಸಮಯದಲ್ಲಿ ಪುನೀತ್ ರಾಜ್ ಕುಮಾರ್ ಅವರ ಬ್ಯಾನರ್ ನಲ್ಲಿ ತಯಾರಾಗುತ್ತಿದ್ದ ನೇತ್ರಾವತಿ ಧಾರಾವಾಹಿಯಲ್ಲಿ ಭಾಗೀರಥಿ ಪಾತ್ರದಲ್ಲಿ ಅಭಿನಯಿಸುವ ಅವಕಾಶ ಅಂಜಲಿ ಅವರಿಗೆ ಸಿಕ್ಕಿತು. ಪ್ರಸ್ತುತ ರಾಮಾಚಾರಿ ಧಾರಾವಾಹಿಯಲ್ಲಿ ನಾಯಕನ ತಾಯಿ ಜಾನಕಿ ಪಾತ್ರದಲ್ಲಿ ನಟಿಸುತ್ತಿದ್ದಾರೆ..

ಈಗ ಸಿಗುತ್ತಿರುವ ಪಾತ್ರಗಳು ಹಾಗೂ ಆಗಿನ ಪಾತ್ರಗಳ ಬಗ್ಗೆ ಮಾತನಾಡಿರುವ ನಟಿ ಅಂಜಲಿ, “ಸಿನಿಮಾದಲ್ಲಿ ಒಬ್ಬ ಹೀರೋ ನೂರು ಜನಕ್ಕೆ ಹೊಡೆಯಬಹುದು. ನಿಜಜೀವನದಲ್ಲಿ ಅದು ಖಂಡಿತ ಸಾಧ್ಯವಿಲ್ಲ. ಆದೆ ರೀತಿ ಸಿನಿಮಾದಲ್ಲಿ ಒಬ್ಬ ನಟಿ ಸ್ವಿಮ್ಮಿಂಗ್‌ ಡ್ರೆಸ್‌ ಹಾಕಿದ ಮಾತ್ರಕ್ಕೆ ನಿಜಜೀವನದಲ್ಲಿ ಕೂಡ ಆಕೆ ಸ್ವಿಮ್ಮಿಂಗ್‌ ಡ್ರೆಸ್‌ ಹಾಕಿ ಓಡಾಡುತ್ತಾಳೆ ಎಂದುಕೊಳ್ಳುವುದು ತಪ್ಪು ಕಲ್ಪನೆ. ಪಾತ್ರವನ್ನು ಪಾತ್ರವಾಗಿ ಮಾತ್ರ ನೋಡಬೇಕು. ವೈಯಕ್ತಿಕವಾಗಿ ಪರಿಗಣಿಸಬಾರದು ಪಾತ್ರದಿಂದ ಹೊರಬಂದ ನಂತರ ಎಲ್ಲಾ ಕಲವಿದರಲ್ಲೂ ಗೌರವಾನಿತ್ವ ವ್ಯಕ್ತಿತ್ವ ಇರುತ್ತದೆ. ಸಿನಿಮಾ ಆಗಲಿ ಧಾರಾವಾಹಿಯಾಗಲಿ ನೆಗಟಿವ್ ಅಂಶಗಳು ಬೇಗೆ ಸೆಳೆಯುತ್ತವೆ. ಇದನ್ನುಬಿಟ್ಟು ಪಾಸಿಟಿವ್ ಅಂಶಗಳೂ ಇರುತ್ತವೆ. ಅವುಗಳನ್ನು ಸಹ ಪರಿಗಣಿಸಬೇಕು..” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ನಟಿ ಅಂಜಲಿ.

ಅಂಜಲಿ ಅವರು ನಟಿಸುತ್ತಿರುವ ಜಾನಕಿ ಪಾತ್ರಕ್ಕೆ ಅಭಿಮಾನಿಗಳ ಕಡೆಯಿಂದ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆಯಂತೆ. ಇದರಿಂದಾಗಿ ಅಂಜಲಿ ಅವರಿಗೂ ಬಹಳ ಸಂತೋಷವಿದೆ. ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಯ ಧಾರಾವಾಹಿಗಳಲ್ಲಿ ಸಹ ನಟಿಸಲು ಅವಕಾಶ ಸಿಗುತ್ತಿದೆಯಂತೆ. ಗ್ಲಾಮರ್ ಪಾತ್ರದಲ್ಲಿ ನಟಿಸುವ ವಯಸ್ಸು ನನ್ನದಲ್ಲ, ಆದರೆ ನಾನು ನೆಗಟಿವ್ ಶೇಡ್ ಇರುವ ಪಾತ್ರದಿಂದ ಸ್ವಲ್ಪ ದೂರವೇ ಉಳಿದಿದ್ದೇನೆ. ನನಗೆ ಸಿಗುತ್ತಿರುವ ಪಾತ್ರಗಳಲ್ಲಿ ಪಾಸಿಟಿವ್ ಆಗಿರುವಂಥದ್ದನ್ನು ಒಪ್ಪಿಕೊಂಡು ನಟನೆ ಮಾಡುತ್ತಿದ್ದೇನೆ ಎಂದು ಸಂತೋಷದಿಂದ ಹೇಳ್ಡಿದಾರೆ ನಟಿ ಅಂಜಲಿ.