ಫೆಬ್ರವರಿ ತುಂಬೆಲ್ಲಾ ಅನಿರುದ್ಧ್ ಅವರ ಮನೆಯಲ್ಲಿ ಸಂಭ್ರಮ.. ಕಾರಣವೇನು ಗೊತ್ತಾ?

ಕಿರುತೆರೆಯ ಸೆನ್ಸೇಷನ್ ಆರ್ಯವರ್ಧನ್ ಅವರು ತೆರೆ ಮೇಲೆ ಎಷ್ಟು ಪ್ರೀತಿ ಸಂಪಾದಿಸಿದ್ದಾರೋ ಅದೇ ರೀತಿ ನಿಜ ಜೀವನದಲ್ಲಿಯೂ ಅವರ ಸರಳ ವ್ಯಕ್ತಿತ್ವಕ್ಕೆ ಅವರ ಒಳ್ಳೆಯ ಮಾತುಗಳಿಗೆ ಜನರು ಅಭಿಮಾನಿಗಳಾಗಿ ಹೋಗಿದ್ದಾರೆ.

ಇನ್ನು ಅನಿರುದ್ಧ್ ಅವರ ಮನೆಯಲ್ಲಿ ಈ ತಿಂಗಳು ಅಂದರೆ ಫೆಬ್ರವರಿ ತಿಂಗಳು ಪೂರ್ತಿ ಸಂಭ್ರಮ ಮನೆಮಾಡಲಿದೆ.. ಹೌದು ಪ್ರೇಮಿಗಳ ದಿನ ನಮ್ಮ ಸಂಸ್ಕೃತಿ ಅಲ್ಲದಿದ್ದರೂ ಕಾಕತಾಳಿಯವೋ ಏನೋ ಫೆಬ್ರವರಿ ತಿಂಗಳು ಪೂರ್ತಿ ಒಂದು ರೀತಿಯಲ್ಲಿ ಅನಿರುದ್ಧ್ ಅವರಿಗೆ month of love ಎಂದರೂ ತಪ್ಪಿಲ್ಲ..

ಇದಕ್ಕೆ ಕಾರಣ ಫೆಬ್ರವರಿ 17 ರಂದು ಅನಿರುದ್ಧ್ ಹಾಗೂ ಕೀರ್ತಿ ವಿಷ್ಣುವರ್ಧನ್ ಅವರ ಮದುವೆ ವಾರ್ಷಿಕೋತ್ಸವದ ಸಂಭ್ರಮವಾದರೆ..‌ ಫೆಬ್ರವರಿ 27 ಸಹಸಸಿಂಹ ಡಾ.ವಿಷ್ಣುವರ್ಧನ್ ಅವರು ಹಾಗೂ ಭಾರತಿ ಅಮ್ಮನವರ ಮದುವೆ ವಾರ್ಷಿಕೋತ್ಸವದ ದಿನ.. ಇನ್ನೂ ಹೇಳಬೇಕೆಂದರೆ ಇದೇ ತಿಂಗಳು 16 ರಂದು ಅನಿರುದ್ಧ್ ಅವರ ಹುಟ್ಟು ಹಬ್ಬವೂ ಹೌದು..

ಒಂದರ ಹಿಂದೆ ಒಂದರಂತೆ ಸಂಭ್ರಮ ಆಚರಿಸುವ ತಿಂಗಳಿದು.. ಅನಿರುದ್ಧ್ ಅವರ ಬಾಳಲ್ಲಿ ಈ ಸಂಭ್ರಮ ಈ ವರ್ಷ ಇನ್ನೂ ಹೆಚ್ಚಾಗಿದೆ.. ಇದಕ್ಕೆ ಕಾರಣ ಜೊತೆಜೊತೆಯಲಿ ಧಾರಾವಾಹಿಯ ಯಶಸ್ಸು.. ಹೌದು ಈಗಾಗಲೇ ಸಾಕಷ್ಟು ಅಭಿಮಾನಿಗಳು ಮುಂಚಿತವಾಗಿಯೇ ಆರ್ಯವರ್ಧನ್ ರ ಹುಟ್ಟುಹಬ್ಬಕ್ಕೆ ಶುಭಕೋರುತ್ತಿದ್ದಾರೆ..

ಕನ್ನಡ ನಾಡಿನ ಹೆಮ್ಮೆಯ ಮಾಣಿಕ್ಯ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಮನೆ ಮಗ ಅನಿರುದ್ಧ್ ಅವರಿಗೆ ಈ ತಿಂಗಳು ಮಾತ್ರವಲ್ಲ..‌ ಸಂಪೂರ್ಣ ವರ್ಷವೂ ಸಂಭ್ರಮದಿಂದ ಕೂಡಿರಲಿ.. ಯಶಸ್ಸು ಸದಾ ಅನಿರುದ್ಧ್ ಅವರ ಜೊತೆಯಿರಲಿ ಎಂಬುದೇ ಕನ್ನಡಿಗರ ಪ್ರೀತಿಯ ಹಾರೈಕೆ..