ಗಂಡನ ಜೊತೆ ಬಂಡೆ ಏರುವ ಸಾಹಸ ಮಾಡುತ್ತಿರುವ ಸ್ಯಾಂಡಲ್ವುಡ್ ಖ್ಯಾತ ನಟಿ..

ಇತ್ತ ಸಿನಿಮಾಗಳ ಶೂಟಿಂಗ್ ನಡೆಯುತ್ತಿಲ್ಲ.. ಅತ್ತ ಯಾವುದೇ ಸಿನಿಮಾಗಳ‌ ಬಿಡುಗಡೆಯೂ ಇಲ್ಲ.. ಸದ್ಯ ಕಲಾವಿದರು ತಮ್ಮ ಕುಟುಂಬಗಳ ಜೊತೆ ಸಮಯ ಕಳೆಯುತ್ತಿದ್ದಾರೆ.. ಇನ್ನೂ ಕೆಲವರು ಕತೆಗಳನ್ನು ಕೇಳಿ ಓಕೆ ಮಾಡುತ್ತಿದ್ದು, ಚಿತ್ರೀಕರಣ ಶುರುವಾದ ಬಳಿಕ ಬ್ಯುಸಿಯಾಗುವತ್ತ ಚಿಂತನೆ ನಡೆಸಿದ್ದಾರೆ.. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿತುವ ಕಲಾವಿದರು ಅಭಿಮಾನಿಗಳೊಂದಿಗೆ ಫೋಟೋ ವೀಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇನ್ನು ಸ್ಯಾಂಡಲ್ವುಡ್ ನ ತಾರಾ ಜೋಡಿಯೊಂದು ಇದೀಗ ಲಾಕ್ ಡೌನ್ ಸಮಯದಲ್ಲಿ ಸಾಹಸಮಯ ಕೆಲಸಗಳಲ್ಲಿ ತೊಡಗಿಕೊಂಡಿದ್ದು ಅಭಿಮಾನಿಗಳಿಗಾಗಿ ವೀಡಿಯೋ ಹಂಚಿಕೊಂಡಿದ್ದಾರೆ.. ಹೌದು ನಟಿ ಐಂದ್ರಿತಾ ರೈ ಅವರು ಹಾಗೂ ದಿಗಂತ್ ಅವರು ಬೆಟ್ಟ ಏರುವ ಕೆಲಸ ಮಾಡುತ್ತಿದ್ದು ಅಭಿಮಾನಿಗಳ ಜೊತೆ ವೀಡಿಯೋ ಹಂಚಿಕೊಂಡಿದ್ದಾರೆ..

ಮನಸಾರೆ ಸಿನಿಮಾ ಮೂಲಲ ಪರಿಚಯವಾದ ಈ ಜೋಡಿ ಪ್ರೀತಿಸಿ 2018 ಡಿಸೆಂಬರ್ ನಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಮದುವೆಯ ನಂತರವೂ ಸ್ನೇಹಿತರಂತೆ ಜೀವನವನ್ನು ಎಂಜಾಯ್ ಮಾಡುತ್ತಿರುವ ಈ ಜೋಡಿ ಮದುವೆಯ ಬಳಿಕ ಅವರವರ ಸಿನಿಮಾಗಳಲ್ಲಿ ಬ್ಯುಸಿ ಆದರು.. ಸದ್ಯ ಐಂದ್ರಿತಾ ಅವರು ಪ್ರೇಮಂ ಪೂಜ್ಯಂ ಹಾಗೂ ಗರುಡ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದು ಲಾಕ್ ಡೌನ್ ಕಾರಣ ಶೂಟಿಂಗ್ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.. ಈ ಸಮಯದಲ್ಲಿ ಇದೀಗ ತಮ್ಮ ಪತಿ ಜೊತೆ ಫಿಟ್ನೆಸ್ ಕಾಯ್ದುಕೊಳ್ಳುವಂತ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ..

ಕೆಲ ದಿನಗಳ ಹಿಂದಷ್ಟೇ ಕುಟುಂಬದ ಜೊತೆ ಐಂದ್ರಿತಾ ಹಾಗೂ ದಿಗಂತ್ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಫೋಟೋಗಳನ್ನು ಹಂಚಿಕೊಂಡಿದ್ದರು.. ಇದೀಗ ಮತ್ತೆ ಪ್ರವಾಸ ಕೈಗೊಂಡಿದ್ದು ಅದರಲ್ಲೂ ಬೆಟ್ಟ, ಗುಡ್ಡಗಳ ಪ್ರದೇಶಗಳಿಗೆ ಹೋಗುತ್ತಿದ್ದು, ಸಾಹಸಮಯ ಸ್ಟಂಟ್ ಗಳನ್ನು ಮಾಡುತ್ತಿದ್ದಾರೆ. ಕಡಿದಾದ ದೊಡ್ಡ ಬಂಡೆಗಳನ್ನು ಏರುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಐಂದ್ರಿತಾ ರೇ ಈ ಎಲ್ಲದರ ಅಪ್‍ಡೇಟ್‍ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದು, ಇದಕ್ಕೆ ಅಭಿಮಾನಿಗಳು ಸಹ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಈ ಬಗ್ಗೆ ಇನ್ಸ್ಟಾಗ್ರಾಂ ನಲ್ಲಿ ವೀಡಿಯೋ ಹಂಚಿಕೊಂಡಿರುವ ಅವರು “ನಿಜವಾಗಿಯೂ ಇದು ತುಂಬಾ ಕಠಿಣ, ಇದು ನನ್ನ ಮೂರನೇ ಪ್ರಯತ್ನ, ಹಗ್ಗ ಹಾಗೂ ಯಾವುದೇ ಸುರಕ್ಷತಾ ಪರಿಕರಗಳಿಲ್ಲದೆ ಹತ್ತಿದ್ದಕ್ಕೆ ಒಂದು ಕ್ಷಣ ಹೃದಯ ಬಡಿತವೇ ನಿಂತತಾಯಿತು. ಆದರೆ ಇದೆಲ್ಲ ಮಾಡುವುದಕ್ಕೆ ಸಾಧ್ಯವಾಗಿದ್ದು ಇವರಿಂದಲೇ ಎಂದು ಪತಿ ದಿಗಂತ್ ಸೇರಿದಂತೆ ನಾಲ್ವರನ್ನು ಟ್ಯಾಗ್ ಮಾಡಿದ್ದಾರೆ. ಇವರ ಪ್ರೋತ್ಸಾಹದಿಂದಲೇ ಪೂರ್ತಿ ಮೇಲಕ್ಕೆ ಹತ್ತಲು ಸಾಧ್ಯವಾಯಿತು. ಮೇಲೆ ಹೋದಾಗ ಅದ್ಭುತ ಸಂತೋಷವಾಯಿತು ಎಂದು ಬರೆದುಕೊಂಡಿದ್ದಾರೆ.”