ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಕನ್ನಡದ ಮತ್ತೊಬ್ಬ ಸ್ಪರ್ಧಿ..

ಕಿರುತೆರೆ ರಿಯಾಲಿಟಿ ಶೋಗಳ ಪೈಕಿ ಅತಿ ದೊಡ್ಡ ಶೋ ಎನಿಸಿಕೊಂಡಿರುವ ಬಿಗ್ ಬಾಸ್ ಶೋ ನ ಸ್ಪರ್ಧಿಗಳು ಆಗಾಗ ಸುದ್ದಿಯಾಗೋದುಂಟು.. ಅದೇ ರೀತಿ ಮೊನ್ನೆಯಷ್ಟೇ ಮಾಡ್ರನ್ ರೈತ ಶಶಿ ಕುಮಾರ್ ದಾಂಪತ್ಯ್ ಜೀವನಕ್ಕೆ ಕಾಲಿಡುತ್ತಿರುವ ವಿಚಾರ ಸುದ್ದಿಯಾದ ಬೆನ್ನಲ್ಲೇ ಇದೀಗ ಮತ್ತೊಬ್ಬ ಸ್ಪರ್ಧಿ ಅದ್ಧೂರಿಯಾಗಿ ಮದುವೆಯಾಗಿದ್ದು ಬಿಗ್ ಬಾಸ್ ಸ್ನೇಹಿತರು ಹಾಗೂ ಕಿರುತೆರೆ ಮಂದಿ ಮದುವೆಯಲ್ಲಿ ಪಾಲ್ಗೊಂಡು ಶುಭ ಕೋರಿದ್ದಾರೆ.. ಹೌದು ಕನ್ನಡ ಬಿಗ್ ಬಾಸ್ ಕನ್ನಡ ಸೀಸನ್ 6 ಸ್ಪರ್ಧಿ ಆ್ಯಂಡ್ರೂ ಜಯಪಾಲ್ ಅಲಿಯಾಸ್ ಆಂಡಿ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕ್ರಿಶ್ಚಿಯನ್ ಏಂಜೆಲ್ ಅವರೊಟ್ಟಿಗೆ ಬೆಂಗಳೂರಿನ ಚರ್ಚ್‌ವೊಂದರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಆಂಡಿ ಹಾಗೂ ಏಂಜಲ್ ಅವರದ್ದು ಅರೇಂಜ್ ಮ್ಯಾರೇಜ್ ಎನ್ನಲಾಗಿದೆ. ಪಾಲಕರು ಆಂಡಿ ಮದುವೆ ನಿಗದಿ ಮಾಡಿದ್ದಾರೆ. ಬಿಗ್ ಬಾಸ್ ನಂತರದಲ್ಲಿ ಅಷ್ಟಾಗಿ ತೆರೆ ಮೇಲೆ ಕಾಣಿಸಿಕೊಳ್ಳದ ಆಂಡಿ ಈಗ ಇದ್ದಕ್ಕಿದ್ದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮದುವೆಗೆ ಆಂಡಿ ಆತ್ಮೀಯರು, ಎರಡೂ ಕುಟುಂಬಸ್ಥರು ಭಾಗವಹಿಸಿದ್ದಾರೆ.

ಬೆಂಗಳೂರಿನ ಚರ್ಚ್‌ನಲ್ಲಿ ಆಂಡಿ ಮದುವೆ ನಡೆದಿದ್ದು, ಅದೇ ದಿನ ಸಂಜೆ ಆರತಕ್ಷತೆ ಕಾರ್ಯಕ್ರಮ ಕೂಡ ನಡೆದಿದೆ. ಸೆಲೆಬ್ರಿಟಿ ಗಾಯಕ ಆಂಟೋನಿ ದಸ್ಸನ್ ಅವರು ಈ ಮದುವೆಯಲ್ಲಿ ಹಾಜರಿ ಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಕ್ಷತಾ ಅವರು ಆಂಡ್ರ್ಯೂ ಮದುವೆಯ ಫೋಟೋ ಹಂಚಿಕೊಂಡು, ಮದುವೆಯ ಶುಭಾಶಯ ತಿಳಿಸಿದ್ದಾರೆ.

ಬಿಲ್ ನಿಮ್ದು, ದುಡ್ಡು ನಮ್ದು’ ಕಾರ್ಯಕ್ರಮಕ್ಕೆ ನಿರೂಪಕರಾಗಿದ್ದರು. ಬಿಗ್ ಬಾಸ್ ಸ್ಪರ್ಧಿಗಳಾದ ಅಕ್ಷತಾ ಪಾಂಡವಪುರ, ನವೀನ್ ಸಜ್ಜು, ಒಗ್ಗರಣೆ ಮುರಳಿ ಈ ಮದುವೆಯಲ್ಲಿ ಹಾಜರಿ ಹಾಕಿದ್ದರು. 98 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಆಂಡ್ರ್ಯೂ ಇದ್ದರು. ಫಿನಾಲೆ ತಲುಪಿದ ಆಂಡ್ರ್ಯೂ ಅವರು, 4ನೇ ಸ್ಥಾನ ಪಡೆದಿದ್ದರು. ಕವಿತಾ ಜೊತೆ ಆಂಡ್ರ್ಯೂ ಸಾಕಷ್ಟು ಜಗಳ ಆಡಿಕೊಂಡಿದ್ದರು, ದೊಡ್ಮನೆಯಿಂದ ಹೊರಬಂದಮೇಲೂ ಈ ಜಗಳ ಮುಂದುವರೆದಿತ್ತು. ಇನ್ನು ಇವರು ಮಾಡಿಕೊಂಡ ಜಗಳ ಪೊಲೀಸ್ ಠಾಣೆಯಲ್ಲಿ ದೂರು ನೀಡುವವರೆಗೂ ಹೋಗಿತ್ತು.. ಸಧ್ಯ ಇದೀಗ ಆ ಎಲ್ಲಾ ಕಿರಿಕಿರಿಯಿಂದ ಹೊರ ಬಂದು ಹೊಸ ಜೀವನ ಆರಂಭ ಮಾಡಿದ್ದಾರೆ..

ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯಂ.. ಪಂಡಿತ್ ಶ್ರೀನಿವಾಸ್ ಭಟ್ ಗುರೂಜಿ.. 20 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ಸಾಧ್ಯ ಆಗುವ ರೂಪದಲ್ಲಿ ಖಚಿತ ಪರಿಹಾರ, ನೂರಕ್ಕೆ ನೂರರಷ್ಟು ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ.. ಕರೆ ಅಥವಾ ವಾಟ್ಸಪ್ ಮಾಡಿ 9916889622. ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ, ಅನಾರೋಗ್ಯ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. 9916889622