ನನ್ನ ಹೆಂಡತಿ ಹಾಗೂ ಮಗಳ ಒತ್ತಾಯಕ್ಕೆ ಆ ಕೆಲಸ ಮಾಡಿದೆ ಎಂದ ನಟ ಅನಂತ್ ನಾಗ್ ಅವರು.. ಕಾರಣವೇನು ಗೊತ್ತಾ..

ಸ್ಯಾಂಡಲ್ವುಡ್ ನ ಕಟ್ಟಿ ಬೆಳೆಸಿದ ಅನೇಕ ಕೈಗಳು ಇಂದು ನಮ್ಮೊಡನೆ ಇಲ್ಲ.. ಅವರ ಕೊಡುಗೆ ನಿಜಕ್ಕೂ ಹೇಳಲು ಅಸಾಧ್ಯ.. ಅಂದು ಅವರುಗಳು ಭದ್ರ ಬುನಾದಿ ಹಾಕಿದ್ದರಿಂದಲೇ ಇಂದು ಕನ್ನಡ ಚಿತ್ರರಂಗವನ್ನು ಇತರ ಸಿನಿಮಾ ಇಂಡಸ್ಟ್ರಿಗಳು ತಿರುಗಿ ನೋಡುವಂತಹ ಸಿನಿಮಾಗಳು ಕನ್ನಡದಲ್ಲಿ ನಿರ್ಮಾಣವಾಗುತ್ತಿದ್ದು ಕನ್ನಡ ಚಿತ್ರರಂಗವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಿದೆ ಎನ್ನಬಹುದು.. ಇನ್ನು ನಮ್ಮ ನಡುವೆಯೇ ಇರುವ ಸ್ಯಾಂಡಲ್ವುಡ್ ನ ಮೊದಲ ಜನರೇಶನ್ನಿನ ಕೆಲ ಕಲಾವಿದರುಗಳು ಈಗಲೂ ಸಹ ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡಿದ್ದು ಈಗಲೂ ಜನರ ಮನರಂಜಿಸೋದೆ ತಮ್ಮ ಕಾಯಕ ಎನ್ನುತ್ತಿರುವುದು ನಿಜಕ್ಕೂ ಹೆಮ್ಮೆ ಎನಿಸಿತ್ತದೆ.. ಅದೇ ರೀತಿ ಕನ್ನಡ ಚಿತ್ರರಂಗ ಕಂಡ ಅತ್ಯದ್ಭುತ ನಟ ಕಲಾವಿದ ಎವರ್ ಗ್ರೀನ್ ಯಂಗ್ ಹೀರೋ ನಮ್ಮ ಅನಂತ್ ನಾಗ್ ಅವರು ನಲವತ್ತಕ್ಕೂ ಹೆಚ್ಚು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದು ನೂರಾರು ಸಿನಿಮಾಗಳ ಮೂಲಕ ಕನ್ನಡ ಸಿನಿರಸಿಕರನ್ನು ಮನರಂಜಿಸುತ್ತಾ ಬರುತ್ತಿದ್ದಾರೆ..

ಈಗಲೂ ಸಹ ಅನಂತ್ ನಾಗ್ ಅವರು ತೆರೆ ಮೇಲೆ ಬರುವರು ಎಂದೊಡನೆ ಏನೋ ಒಂದು ರೀತಿ ಕುತೂಹಲ ಮನಸ್ಸಿಗೆ ಆನಂದ ಒಂದು ರೀತಿಗ ಪರ್ಫೆಕ್ಢನಿಸ್ಟ್ ಎನ್ನಬಹುದು.. ಇಂತಹ ಮೇರು ನಟ ಇದೀಗ ಸಮಾರಂಭವೊಂದರಲ್ಲಿ ನನ್ನ ಪತ್ನಿ ಹಾಗೂ ಮಗಳು ಒತ್ತಾಯ ಮಾಡಿದ್ದಕ್ಕೆ ನಾನು ಆ ಕೆಲಸ ಮಾಡಿದೆ ಎಂಬ ಹೇಳಿಕೆ ನೀಡಿದ್ದಾರೆ..ಹೌದು ಮೊನ್ನೆ ಮೊನ್ನೆಯಷ್ಟೇ ಹಿರಿಯ ನಟರಾದ ಅನಂತ್ ನಾಗ್ ಅವರಿಗೆ ಅವರ ಚಿತ್ರರಂಗದ ಸೇವೆಯನ್ನು ಗಮನಿಸಿ ಅವರಿಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಲಾಗಿದೆ..

ಇನ್ನು ಡಾಕ್ಟರೇಟ್ ಪದವಿ ಪ್ರದಾನ ಮಾಡುವ ಈ ಕಾರ್ಯಕ್ರಮ ಬೆಂಗಳೂರಿನ ಭಾರತೀಯ ವಿದ್ಯಾ ಭವನದ ಬಿಂಚಾ ಸಭಾಂಗಣದಲ್ಲಿ ನಡೆಯಿತು.. ಉನ್ನತ ಶಿಕ್ಷಣ ಸಚಿವರಾಗಿರುವ ಡಾ.ಸಿ.ಎನ್ ಅಶ್ವತ್ಥನಾರಾಯಣ್ ಅವರ ಸಮ್ಮುಖದಲ್ಲಿ ಅನಂತ್‌ ನಾಗ್‌ ಅವರಿಗೆ ಗೌರವ ಪದವಿಯನ್ನು ಪ್ರದಾನ ಮಾಡಲಾಯಿತು.. ಈ ಕಾರ್ಯಕ್ರಮಲ್ಲಿ ಕರ್ನಾಟಕ ಫಿಲ್ಮಂ ಚೇಂಬರ್‌ ಅಧ್ಯಕ್ಷ ಭಾ.ಮಾ ಹರೀಶ್‌ ಅವರು ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಸದಾಶಿವ ಶೆಣೈ ಅವರು ಭಾರತೀಯ ವಿದ್ಯಾಭವನದ ನಿರ್ದೇಶಕ ಹೆಚ್.ಎನ್. ಸುರೇಶ್ ಅವರು ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಕುಲಪತಿ ನಿರಂಜನ ವಾನಳ್ಳಿ ಅವರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು..

ಇನ್ನು ಕಾರ್ಯಕ್ರಮದಲ್ಲಿ ವಿಶೇಷವಾಗಿ, ಅನಂತ್‌ ನಾಗ್ ಅವರ ಪತ್ನಿ ಗಾಯತ್ರಿ, ಮಗಳು ಅದಿತಿ ಹಾಗೂ, ಅಳಿಯ ವಿವೇಕ್‌ ಭಾಗಿಯಾಗಿದ್ದರು. ಗೌರವ ಡಾಕ್ಟರೇಟ್ ಸ್ವೀಕರಿಸಿದ ಬಳಿಕ ಮಾತನಾಡಿದ ಅನಂತ್‌ ನಾಗ್ ಅವರು, ತಮ್ಮ ಬಾಲ್ಯದ ಜೀವನ, ಚಿತ್ರರಂಗದ ಜೀವನ ಹಾಗೂ ತಮ್ಮ ಅನುಭವಗಳ ಬಗ್ಗೆ ಹಂಚಿಕೊಂಡರು.. ಅವಾರ್ಡ್, ಪ್ರಶಸ್ತಿ ವಿಚಾರವಾಗಿ ಅನೇಕರು ಸಂಪರ್ಕ ಮಾಡಲು ಪ್ರಯತ್ನಿಸಿದ್ದರು. ನನಗೆ ಪ್ರಶಸ್ತಿಗಳಲ್ಲಿ ಒಲವಿಲ್ಲ. ಯಾಕೆಂದರೆ ಈ ದೇಶದಲ್ಲಿ ಮೊದಲೆಲ್ಲಾ, ಈ ಪಕ್ಷ, ಆ ಪಕ್ಷ ಅಂತಿಲ್ಲ, ಎಲ್ಲಾ ಪಕ್ಷದಲ್ಲೂ ಲಾಬಿ, ಸ್ವಜನಪಕ್ಷಪಾತ ನಡೆಯುತ್ತಿತ್ತು. ಒಂದು ಹಂತದಲ್ಲಿ ಎಲ್ಲರೂ ಕೂಡ ಈ ಅವಾರ್ಡ್‌ಗಳು ಬೇಡ ಎಂದು ನಿರ್ಧರಿಸಿದ್ದರು. ಆದರೆ ಈ ಬಾರಿ ನಾನು ವಿದೇಶ ಪ್ರಯಾಣದಲ್ಲಿದ್ದಾಗ, ಈ ಸಂದೇಶ ಬಂದಿತ್ತು. ಜೊತೆಗೆ ಅಶ್ವತ್ಥ್‌ ನಾರಾಯಣ್‌ ಅವರ ಅಭಿನಂದನೆ ನೋಡಿದ ಮೇಲೆ ನನ್ನ ಪತ್ನಿ ಮತ್ತು ಮಗಳ ಒತ್ತಾಯ ಮಾಡಿದರು. ಹೀಗಾಗಿ ನಾನು ಈ ಪ್ರಶಸ್ತಿ ಪಡೆಯಲು ಒಪ್ಪಿಕೊಂಡೆ ಎಂದರು..

ಅಷ್ಟೇ ಅಲ್ಲದೇ ತಮ್ಮ ಬಾಲ್ಯದ ಜೀವನದ ಬಗ್ಗೆ ಮಾತನಾಡಿದ ಅನಂತ್ ನಾಗ್ ಅವರು “ನಾನು 8ನೇ ತರಗತಿಯವರೆಗೂ ಕನ್ನಡ ಮಾಧ್ಯಮದಲ್ಲಿ ಓದಿದೆ. ಹೊನ್ನಾವರ, ಉಡುಪಿ ಭಾಗಗಳಲ್ಲಿ ನಾನು ಕನ್ನಡ ಮಾಧ್ಯಮದಲ್ಲೇ ಓದಿದ್ದು, ಬಳಿಕ ಮುಂಬೈಗೆ ಹೋದೆ. ೮ ವರ್ಷ ಕನ್ನಡದಲ್ಲಿ ಕೇಳಿದ್ದ ವಿಷಯಗಳು ದಿಢೀರ್‌ ಕನ್ನಡದಲ್ಲಿ ಕೇಳಿ ಕಷ್ಟವಾಯಿತು. ಓದಿನಲ್ಲಿ ಹಿಂದೆ ಬಿದ್ದೆ, ಮೊದಲು ಫಸ್ಟ್‌ ಲೈನ್‌ನಲ್ಲಿ ಬರುತ್ತಿದ್ದವನು ಅಲ್ಲಿ ಲಾಸ್ಟ್‌ ಲೈನ್‌ನಲ್ಲಿ ಬರುತ್ತಿದೆ. ಬಳಿಕ ಹೇಗೋ ಅಲ್ಲಿ ಓದು ಮುಗಿಸಿದೆ. ನಮ್ಮ ಬಾಲ್ಯದಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದವರ ಹೆಸರಿತ್ತು. ನಾನು ಮೊದಲು ನೋಡಿದ ಕನ್ನಡ ಚಿತ್ರ ರತ್ನಗಿರಿಯ ರಹಸ್ಯ ಎಂದು ತಮ್ಮ ಬಾಲ್ಯವನ್ನು ನೆನಪಿಸಿಕೊಂಡರು. ಇನ್ನು ನನಗೆ ಇಂಥದ್ದೊಂದು ಗೌರವ ಸಿಗುವುದಕ್ಕೆ ಕಾರಣ ಕನ್ನಡ ಚಿತ್ರರಂಗ. ನನ್ನ ಮೊದಲ ಚಿತ್ರ ಮೈಸೂರಿನಲ್ಲೇ ನಡೆಯಿತು, ಸಿನಿಮಾಗಳನ್ನು ಮಾಡುತ್ತಾ ನನ್ನ ಮುಂದೆ ಸ್ಫೂರ್ತಿಯಾಗಿ ಡಾ.ರಾಜ್‌ಕುಮಾರ್‌ ಅವರು ಇದ್ದರು. ಸಂಪೂರ್ಣ ಕನ್ನಡ ಚಿತ್ರರಂಗವನ್ನು ಸ್ಥಾಪನೆ ಮಾಡುವಲ್ಲಿ ಡಾ.ರಾಜ್‌ಕುಮಾರ್‌ ಅವರ ಪಾತ್ರ ದೊಡ್ಡದು. ಡಾ.ರಾಜ್‌ಕುಮಾರ್‌ ಅವರು ಎಲ್ಲಾ ರೀತಿಯ ಸಿನಿಮಾಗಳನ್ನು ನೀಡಿದ್ದಾರೆ. ನಾನು ವೃತ್ತಿ ಜೀವನದ ಪ್ರತಿಹಂತದಲ್ಲೂ ಡಾ.ರಾಜ್‌ಕುಮಾರ್‌ ಅವನ್ನು ಹಿಂಬಾಲಿಸುತ್ತಿದ್ದೆ ಎಂದು ತಮ್ಮ ಕನ್ನಡ ಚಿತ್ರರಂಗದ ಜೀವನವನ್ನು ನೆನದರು. ಬಳಿಕ ತಮಗೆ ಗೌರವ ಡಾಕ್ಟರೇಟ್‌ ನೀಡಿದವರಿಗೆ ಧನ್ಯವಾದಗಳನ್ನು ತಿಳಿಸಿದರು..

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಭಟ್, ಶ್ರೀ ಅಂಬಾ ಭವಾನಿ ದೈವ ಶಕ್ತಿ ಜ್ಯೋತಿಷ್ಯರು.. ಮೊ.9845642321 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ‌ ಉಲ್ಭಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಡುತ್ತಾರೆ.. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ.. ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ.. 9845642321 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ತೊಂದರೆ ಪ್ರೀತಿಯಲ್ಲಿ ನಂಬಿ ಮೋಸ.. ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ವಿಚಾರ ಜನರ ದೃಷ್ಟಿಯಿಂದ ಮನೆಯಲ್ಲಿ ಆಗುವ ತೊಂದರೆ ಹಣಕಾಸಿನ ತೊಂದರೆ ಸ್ತ್ರೀ ಪುರುಷ ವಶೀಕರಣ ಇನ್ನೂ ಅನೇಕ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಗಳಿಗೆ ಶಾಶ್ವತ ಪರಿಹಾರ ಪಡೆದುಕೊಳ್ಳಿ.. 9845642321